ಕೃಷಿ ಸಚಿವಾಲಯ
ಎರಡು ದಿನಗಳ ‘ರಾಷ್ಟ್ರೀಯ ಕೃಷಿ ಸಮ್ಮೇಳನ - ಹಿಂಗಾರು ಅಭಿಯಾನ 2025’ ನಾಳೆಯಿಂದ ನವದೆಹಲಿಯಲ್ಲಿ ಪ್ರಾರಂಭವಾಗಲಿದೆ
ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ
ರಾಜ್ಯಗಳ ಕೃಷಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ದೇಶಾದ್ಯಂತದ ವಿಜ್ಞಾನಿಗಳು ಆಳವಾದ ಚರ್ಚೆ ನಡೆಸಲಿದ್ದಾರೆ
Posted On:
14 SEP 2025 3:35PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಸೆಪ್ಟೆಂಬರ್ 2025 ರ 15-16ರಂದು ನವದೆಹಲಿಯ ಪೂಸಾ ಕ್ಯಾಂಪಸ್‌ನ ಭಾರತ ರತ್ನ ಸಿ. ಸುಬ್ರಮಣ್ಯಂ ಸಭಾಂಗಣದಲ್ಲಿ‘ರಾಷ್ಟ್ರೀಯ ಕೃಷಿ ಸಮ್ಮೇಳನ - ಹಿಂಗಾರು ಅಭಿಯಾನ 2025’ ಅನ್ನು ಆಯೋಜಿಸುತ್ತಿದೆ. ಈ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ದೇಶಾದ್ಯಂತದ ಕೃಷಿ ತಜ್ಞರು, ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ರಾಜ್ಯ ಸರ್ಕಾರಗಳ ಹಿರಿಯ ಪ್ರತಿನಿಧಿಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ, ಅಲ್ಲಿ2025-26 ರ ಹಿಂಗಾರು ಬಿತ್ತನೆ ಋುತುವಿನ ಸಿದ್ಧತೆಗಳು, ಉತ್ಪಾದನಾ ಗುರಿಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ವಿವರವಾದ ಚರ್ಚೆಗಳು ನಡೆಯಲಿವೆ.
ಸಮ್ಮೇಳನದ ಅಧ್ಯಕ್ಷತೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ವಿವಿಧ ರಾಜ್ಯಗಳ ಕೃಷಿ ಸಚಿವರು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ, ಡಿಎಆರ್‌ಇ ಕಾರ್ಯದರ್ಶಿ ಮತ್ತು ಐಸಿಎಆರ್ ಮಹಾನಿರ್ದೇಶಕರು, ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಮೊದಲ ಬಾರಿಗೆ, ಕೇಂದ್ರ ಕೃಷಿ ಸಚಿವರಾದ ಶ್ರೀ ಚೌಹಾಣ್ ಅವರ ನಿರ್ದೇಶನದ ಮೇರೆಗೆ ಎರಡು ದಿನಗಳ ಕಾಲ ಹಿಂಗಾರು ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದಲ್ಲಿ ಹಿಂಗಾರು ಬೆಳೆಗಳ ರೈತರಿಗೆ ಅನುಕೂಲವಾಗುವ ಗುರಿಯನ್ನು ಹೊಂದಿರುವ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಮೊದಲ ದಿನ, ಕೇಂದ್ರ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳ ನಡುವೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು, ನಂತರ ಸೆಪ್ಟೆಂಬರ್ 16ರಂದು, ಎಲ್ಲಾ ರಾಜ್ಯಗಳ ಕೃಷಿ ಸಚಿವರು, ಕೇಂದ್ರ ಕೃಷಿ ಸಚಿವರು ಮತ್ತು ಕೇಂದ್ರ ರಾಜ್ಯ ಸಚಿವರ ನಡುವೆ ವಿವರವಾದ ಚರ್ಚೆಗಳು ನಡೆಯಲಿದ್ದು, ಇತ್ತೀಚಿನ ತಂತ್ರಜ್ಞಾನಗಳು ಮತ್ತು ಸುಧಾರಿತ ಬೀಜಗಳನ್ನು ರೈತರಿಗೆ ಹೇಗೆ ಪರಿಣಾಮಕಾರಿಯಾಗಿ ತಲುಪಿಸಬಹುದು ಎಂಬುದರ ಕುರಿತು ಗಮನ ಹರಿಸಲಾಗುವುದು. ಎಲ್ಲಾ ರಾಜ್ಯಗಳ ಹಿರಿಯ ಅಧಿಕಾರಿಗಳು ತಮ್ಮ ತಂಡಗಳೊಂದಿಗೆ ಭಾಗವಹಿಸಲಿದ್ದಾರೆ. ಮೊದಲ ಬಾರಿಗೆ, ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳನ್ನು ತಮ್ಮ ಪ್ರಾದೇಶಿಕ ಅನುಭವ ಮತ್ತು ಸವಾಲುಗಳನ್ನು ಹಂಚಿಕೊಳ್ಳಲು ಮತ್ತು ಭವಿಷ್ಯದ ಕಾರ್ಯತಂತ್ರಗಳನ್ನು ಯೋಜಿಸಲು ಸಹಾಯ ಮಾಡಲು ಆಹ್ವಾನಿಸಲಾಗಿದೆ.
ಸಮ್ಮೇಳನವು ವಿವಿಧ ರಾಜ್ಯಗಳ ಯಶಸ್ಸು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತದೆ. ಇದರಿಂದ ಅವುಗಳನ್ನು ಇತರ ಸ್ಥಳಗಳಲ್ಲಿ ಪುನರಾವರ್ತಿಸಬಹುದು. ಇದಲ್ಲದೆ, ತಜ್ಞರು ಹವಾಮಾನ ಮುನ್ಸೂಚನೆ, ರಸಗೊಬ್ಬರ ನಿರ್ವಹಣೆ, ಕೃಷಿ ಸಂಶೋಧನೆ ಮತ್ತು ತಾಂತ್ರಿಕ ಮಧ್ಯಸ್ಥಿಕೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಈ ಸಮ್ಮೇಳನವು 2025-26ರ ಹಿಂಗಾರು ಋುತುವಿನ ಕ್ರಿಯಾ ಯೋಜನೆ ಮತ್ತು ಉತ್ಪಾದನಾ ಕಾರ್ಯತಂತ್ರಗಳಿಗೆ ನಿರ್ದೇಶನವನ್ನು ಒದಗಿಸುವುದಲ್ಲದೆ, ರೈತರ ಆದಾಯವನ್ನು ಹೆಚ್ಚಿಸುವ, ಸುಸ್ಥಿರ ಕೃಷಿ ವ್ಯವಸ್ಥೆಯನ್ನು ಉತ್ತೇಜಿಸುವ ಮತ್ತು ರಾಷ್ಟ್ರೀಯ ಆಹಾರ ಭದ್ರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ಸಾಬೀತುಪಡಿಸುತ್ತದೆ.
*****
(Release ID: 2166615)
Visitor Counter : 2