ಪ್ರಧಾನ ಮಂತ್ರಿಯವರ ಕಛೇರಿ
ಉಪರಾಷ್ಟ್ರಪತಿಯಾಗಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
Posted On:
12 SEP 2025 12:16PM by PIB Bengaluru
ಭಾರತದ 15ನೇ ಉಪರಾಷ್ಟ್ರಪತಿಯಾಗಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದರು. ಜನಸೇವೆಗೆ ಸಮರ್ಪಿತರಾದ ಶ್ರೀ ರಾಧಾಕೃಷ್ಣನ್ ಅವರ ಉಪರಾಷ್ಟ್ರಪತಿ ಅವಧಿ ಯಶಸ್ವಿಯಾಗಲಿ ಎಂದು ಶ್ರೀ ಮೋದಿ ಅವರು ಶುಭ ಹಾರೈಸಿದರು.
ಎಕ್ಸ್ ಪೋಸ್ಟನಲ್ಲಿ ಶ್ರೀ ಮೋದಿ ಅವರು ಹೇಳಿದ್ದಾರೆ:
“ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದೆ. ಸಮರ್ಪಿತ ಜನಸೇವಕರಾಗಿ ಅವರು ರಾಷ್ಟ್ರ ನಿರ್ಮಾಣ, ಸಮಾಜ ಸೇವೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಬಲವರ್ಧನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಜನಸೇವೆಗೆ ಸಮರ್ಪಿತರಾದ ಅವರ ಉಪರಾಷ್ಟ್ರಪತಿ ಅವಧಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.”
@VPIndia
@CPRGuv”
*****
(Release ID: 2165930)
Visitor Counter : 2
Read this release in:
Tamil
,
English
,
Urdu
,
Hindi
,
Marathi
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam