ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಭಾರತದ ನಿರುದ್ಯೋಗ ದರವು ಶೇ. 2 ರಷ್ಟಿದ್ದು, ಇದು ಜಿ20 ರಾಷ್ಟ್ರಗಳಲ್ಲಿ ಅತ್ಯಂತ ಕಡಿಮೆ ಎಂದು ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಹೇಳಿದರು


ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಮತ್ತು ಸುಶ್ರೀ ಶೋಭಾ ಕರಂದ್ಲಾಜೆ ಅವರ ಸಮ್ಮುಖದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು “ಮೆಂಟರ್ ಟುಗೆದರ್” ಮತ್ತು “ಕ್ವಿಕರ್” ಸಂಸ್ಥೆಗಳ ಜೊತೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ

ಯುವ ಉದ್ಯೋಗಾಕಾಂಕ್ಷಿಗಳಿಗೆ ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್.) ಪೋರ್ಟಲ್ (https://www.ncs.gov.in/) ಮೂಲಕ ಉದ್ಯೋಗ ಪ್ರವೇಶ ಮತ್ತು ವೃತ್ತಿ ಮಾರ್ಗದರ್ಶನ ಅವಕಾಶವನ್ನು ಹೆಚ್ಚಿಸಲು ತಿಳುವಳಿಕೆ ಒಪ್ಪಂದ(ಎಂ.ಒ.ಯು.)ಗಳನ್ನು ಮಾಡಲಾಯಿತು

ಆರಂಭದಿಂದಲೂ ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್.) ಪೋರ್ಟಲ್ (https://www.ncs.gov.in/) ನಲ್ಲಿ 7.22 ಕೋಟಿಗೂ ಹೆಚ್ಚು ಖಾಲಿ ಹುದ್ದೆಗಳ ಮಾಹಿಯನ್ನು ಸಂಗ್ರಹಿಸಲಾಗಿದೆ

Posted On: 08 SEP 2025 3:21PM by PIB Bengaluru

ವಿಶ್ವ ಆರ್ಥಿಕ ವೇದಿಕೆಯ 'ಉದ್ಯೋಗಗಳ ಭವಿಷ್ಯ ವರದಿ 2025' ಅನ್ನು ಉಲ್ಲೇಖಿಸಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು “ಭಾರತದ ನಿರುದ್ಯೋಗ ದರವು ಶೇ. 2 ರಷ್ಟಿದ್ದು, ಇದು ಜಿ20 ರಾಷ್ಟ್ರಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಎಂದು ಹೇಳಿದ್ದಾರೆ. ಭಾರತದ ತ್ವರಿತ ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಹೇಗೆ ನಡೆದಿದೆ ಎಂಬುದನ್ನು ಅವರು ವಿವರಿಸಿದರು ಮತ್ತು ಅದಕ್ಕೆ ಕಾರಣವಾದ ಕೇಂದ್ರ ಸರ್ಕಾರದ ಯೋಜನೆಗಳ ಮಹತ್ವವನ್ನು ಈ ಸಂದರ್ಭದಲ್ಲಿ ಎತ್ತಿ ತೋರಿಸಿದರು.

ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್) ಪೋರ್ಟಲ್ (https://www.ncs.gov.in/)ನಲ್ಲಿ ಉದ್ಯೋಗಾವಕಾಶಗಳು ಮತ್ತು ಯುವ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು 'ಮೆಂಟರ್ ಟುಗೆದರ್' ಮತ್ತು 'ಕ್ವಿಕರ್' ನಡುವೆ ತಿಳುವಳಿಕೆ ಒಪ್ಪಂದಗಳಿಗೆ (ಎಂ.ಒ.ಯು) ಸಹಿ ಹಾಕುವ ಸಂದರ್ಭದಲ್ಲಿ ಕೇಂದ್ರ ಸಚಿವರು ಇಂದು ನವದೆಹಲಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರ ಸಮ್ಮುಖದಲ್ಲಿ ಈ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

"ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್) ಪೋರ್ಟಲ್ (https://www.ncs.gov.in/) ವೇದಿಕೆಯು ಸುಮಾರು 52 ಲಕ್ಷ ನೋಂದಾಯಿತ ಉದ್ಯೋಗದಾತರು, 5.79 ಕೋಟಿ ಉದ್ಯೋಗಾಕಾಂಕ್ಷಿಗಳು ಮತ್ತು 7.22 ಕೋಟಿಗೂ ಹೆಚ್ಚು ಖಾಲಿ ಹುದ್ದೆಗಳನ್ನು ಸಜ್ಜುಗೊಳಿಸಿದ್ದು, ಈಗ ಉದ್ಯೋಗ ಪಟ್ಟಿಗಳನ್ನು ಮಾತ್ರವಲ್ಲದೆ ಎಲ್ಲಾ ಉದ್ಯೋಗ ಸಂಬಂಧಿತ ಸೇವೆಗಳಿಗೆ ಒಂದು-ನಿಲುಗಡೆ ಪರಿಹಾರವಾಗಿಯೂ ವಿಕಸನಗೊಳ್ಳುತ್ತಿದೆ. ಪ್ರಸ್ತುತ, ಪೋರ್ಟಲ್ ನಲ್ಲಿ 44 ಲಕ್ಷಕ್ಕೂ ಹೆಚ್ಚು ಸಕ್ರಿಯ ಖಾಲಿ ಹುದ್ದೆಗಳಿವೆ. ಕಳೆದ ವರ್ಷದಲ್ಲಿ, ಸಚಿವಾಲಯವು ಅಮೆಜಾನ್ ಮತ್ತು ಸ್ವಿಗ್ಗಿ ಸೇರಿದಂತೆ ಹತ್ತು ಪ್ರಮುಖ ಸಂಸ್ಥೆಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಪಾಲುದಾರಿಕೆಗಳು ಈಗಾಗಲೇ ಸುಮಾರು ಐದು ಲಕ್ಷ ಖಾಲಿ ಹುದ್ದೆಗಳನ್ನು ಸಜ್ಜುಗೊಳಿಸಿವೆ."

ಯುವಜನರ ಮೇಲೆ ಸರ್ಕಾರದ ನವೀಕೃತ ಹಾಗೂ ಕೇಂದೀಕೃತ ಗಮನವನ್ನು ವಿವರಿಸಿದ ಕೇಂದ್ರ ಸಚಿವರಾದ ಡಾ. ಮಾಂಡವಿಯ ಅವರು , “ತನ್ನ ಮೂರನೇ ಅವಧಿಯ ಆರಂಭದಲ್ಲಿಯೇ, ಪ್ರಧಾನಮಂತ್ರಿ ಶ್ರೀ  ನರೇಂದ್ರ ಮೋದಿ ಅವರು 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಅವಕಾಶಗಳನ್ನು ಬೆಂಬಲಿಸಲು ಒಟ್ಟು ₹2 ಲಕ್ಷ ಕೋಟಿ ಬಜೆಟ್ ನೊಂದಿಗೆ ಐದು ಪ್ರಮುಖ ಯೋಜನೆಗಳ ಪ್ಯಾಕೇಜ್ ಅನ್ನು ಘೋಷಿಸಿದ್ದರು” ಎಂದು ನೆನಪಿಸಿಕೊಂಡರು. ಈ ಪ್ಯಾಕೇಜ್ನ ಪ್ರಮುಖ ಅಂಶವೆಂದರೆ ಪ್ರಧಾನ ಮಂತ್ರಿ ವಿಕಸಿತ  ಭಾರತ ರೋಜ್ಗಾರ್ ಯೋಜನೆ (ಪಿಎಂ-ವಿ.ಬಿ.ಆರ್.ವೈ), ₹99,446 ಕೋಟಿ ಹಂಚಿಕೆಯಾಗಿದ್ದು, ಎರಡು ವರ್ಷಗಳಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ, ಇದರಲ್ಲಿ 1.92 ಕೋಟಿ ಮೊದಲ ಬಾರಿಗೆ ಉದ್ಯೋಗಕ್ಕೆ ಪ್ರವೇಶಿಸುವವರಿಗೆ ಪ್ರಯೋಜನವನ್ನು ನೀಡುತ್ತದೆ  ಎಂದು ಸಚಿವರು ಹೇಳಿದರು.

ಸೇವೆಗಳು, ಉತ್ಪಾದನೆ ಮತ್ತು ಕೃಷಿಯ ಬೆಳವಣಿಗೆಯ ಮೂಲಕ ಉದ್ಯೋಗ ಸೃಷ್ಟಿಯ ಮಹತ್ವವನ್ನು ಸಚಿವರು ಮತ್ತಷ್ಟು ವಿವರಿಸುತ್ತಾ, ಸರ್ಕಾರವು ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಮುದ್ರಾ ಮತ್ತು ಪಿ.ಎಂ. ಸ್ವಾನಿಧಿಯಂತಹ ಪರಿವರ್ತಕ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು.

ಕೇಂದ್ರ ಸಚಿವಾಲಯ ಮತ್ತು ಎರಡು ಸಂಸ್ಥೆಗಳ ನಡುವಿನ ಉದ್ಯೋಗಾವಕಾಶದ ನೂತನ ಸಹಯೋಗವನ್ನು ಸ್ವಾಗತಿಸಿದ ಕೇಂದ್ರ ಸಚಿವರಾದ ಡಾ. ಮಾಂಡವಿಯಾ ಅವರು, “ಈ ಪಾಲುದಾರಿಕೆಗಳು ಸೂಕ್ತವಾದ ಉದ್ಯೋಗಾವಕಾಶಗಳನ್ನು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ರಚನಾತ್ಮಕ ಮಾರ್ಗದರ್ಶನವನ್ನು ಲಭ್ಯವಾಗುವಂತೆ ಮಾಡುತ್ತದೆ, ವಿಶೇಷವಾಗಿ ಈ ವರ್ಷ ಆಗಸ್ಟ್ ನಲ್ಲಿ ಜಾರಿಗೆ ಬರುತ್ತಿರುವ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ ಗಾರ್ ಯೋಜನೆಯಿಂದಾಗಿ. ಈ ಸಹಯೋಗಗಳು ಯುವಜನರಿಗೆ ಮಾತ್ರವಲ್ಲದೆ ರಾಷ್ಟ್ರಕ್ಕೂ ಪ್ರಯೋಜನವನ್ನು ನೀಡುತ್ತವೆ. ಇದು ೊಟ್ಟಾರೆಯಾಗಿ ನಮ್ಮ ದೇಶದ ಮತ್ತು ನಮ್ಮ ಯುವಕರ ಭವಿಷ್ಯವನ್ನು ಉಜ್ವಲವಾಗಿಸುತ್ತದೆ" ಎಂದು ಅವರು ಹೇಳಿದರು.

“ಭಾರತದ ಡಿಜಿಟಲ್ ಉದ್ಯೋಗ ಸೌಲಭ್ಯಕ್ಕಾಗಿ ಪ್ರಮುಖ ವೇದಿಕೆಯಾಗಿ ಎನ್.ಸಿ.ಎಸ್. ಹೊರಹೊಮ್ಮಿದೆ .ಇದು ಒಂದೇ ಸ್ಥಳದಲ್ಲಿ ಉದ್ಯೋಗ ಅವಕಾಶ, ಹೊಂದಾಣಿಕೆ, ಸಮಾಲೋಚನೆ ಮತ್ತು ಕೌಶಲ್ಯವನ್ನು ನೀಡುತ್ತದೆ. ಈ ಪಾಲುದಾರಿಕೆಯು ನಮ್ಮ ಯುವಜನರಿಗೆ ಉದ್ಯೋಗವನ್ನು ಪಡೆಯಲು ಅನುಕೂಲವಾಗುವುದಲ್ಲದೆ, ಅವರಿಗೆ ಸರಿಯಾದ ರೀತಿಯ ಆರ್ಥಿಕ ಪ್ರಯೋಜನ ಲಭ್ಯವಾಗುವಂತೆ ಮಾಡುತ್ತದೆ” ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಹೇಳಿದರು

“ಮೆಂಟರ್ ಟುಗೆದರ್ ಜೊತೆಗಿನ ಪಾಲುದಾರಿಕೆಯು ಮೊದಲ ವರ್ಷದಲ್ಲಿ ಎರಡು ಲಕ್ಷ ಯುವಕರನ್ನು ಉದ್ಯೋಗ ಅವಕಾಶಗಳ ಮಾಹಿತಿ ಜೊತೆಗೆ ತಲುಪುವ ನಿರೀಕ್ಷೆಯಿದೆ, ಇದರಲ್ಲಿ ಎನ್.ಸಿ.ಎಸ್. ನಿಂದ ಒಂದು ಲಕ್ಷ ಮತ್ತು ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ ಗಾರ್ ಯೋಜನೆಗೆ ಪ್ರವೇಶ ಪಡೆದ ಒಂದು ಲಕ್ಷ ಮಂದಿ ಕೂಡಾ ಸೇರಿದ್ದಾರೆ. ನಗರ ಮತ್ತು ಜಿಲ್ಲಾ ಮಟ್ಟದ ಸಂಪರ್ಕದೊಂದಿಗೆ ವೈಯಕ್ತಿಕಗೊಳಿಸಿದ ವೃತ್ತಿ ಮಾರ್ಗದರ್ಶನವನ್ನು ನೀಡುತ್ತಾರೆ, ಇದರಿಂದಾಗಿ ಯಾವುದೇ ಉದ್ಯೋಗಾಕಾಂಕ್ಷಿ ಉದ್ಯೋಗ ಅವಕಾಶದಿಂದ ಹಿಂದೆ ಉಳಿಯುವುದಿಲ್ಲ. ಇದು ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳು, ವಿಶೇಷವಾಗಿ ಸೇವೆ ಸಲ್ಲಿಸದ ಉದ್ಯೋಗ ಅನುಭವ ಇಲ್ಲದ ಹಿನ್ನೆಲೆಯಿಂದ ಬಂದವರು, 24,000 ಕ್ಕೂ ಹೆಚ್ಚು ತರಬೇತಿ ಪಡೆದ ವೃತ್ತಿಪರರಿಂದ ವೈಯಕ್ತಿಕಗೊಳಿಸಿದ ಮಾರ್ಗದರ್ಶನವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.”

ಕ್ವಿಕರ್ ಜೊತೆಗಿನ ಒಪ್ಪಂದ ನವೀಕರಣವು, ಕ್ವಿಕರ್ ಜಾಬ್ಸ್ ನಿಂದ 1200 ಕ್ಕೂ ಹೆಚ್ಚು ನಗರಗಳಲ್ಲಿ 1,200 ಕ್ಕೂ ಹೆಚ್ಚು ದೈನಂದಿನ ಉದ್ಯೋಗ ಪಟ್ಟಿಗಳನ್ನು ಎನ್.ಸಿ.ಎಸ್. ಪೋರ್ಟಲ್ ಗೆ ಸಂಯೋಜಿಸುವ ಮೂಲಕ ಉದ್ಯೋಗ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಸಹಯೋಗವು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ, ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಿಂದ ಉದ್ಯೋಗಾಕಾಂಕ್ಷಿಗಳಿಗೆ ನೈಜ-ಸಮಯದ ಉದ್ಯೋಗಾವಕಾಶಗಳ ಪ್ರವೇಶವನ್ನು ವಿಸ್ತರಿಸುತ್ತದೆ.

ಮೆಂಟರ್ ಟುಗೆದರ್ ಮತ್ತು ಕ್ವಿಕರ್ ಜೊತೆಗಿನ ಒಪ್ಪಂದವು ಉದ್ಯೋಗಾಕಾಂಕ್ಷಿಗಳು ಮತ್ತು ಖಾಸಗಿ ವಲಯದ ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡುವ ಕೇಂದ್ರ ಸಚಿವಾಲಯದ ದೃಷ್ಟಿಕೋನಕ್ಕೆ ಮತ್ತೊಂದು ಆಯಾಮವನ್ನು ಸೇರಿಸಲು ಮತ್ತು ಬಲಪಡಿಸಲು ಪೂರಕವಾಗಿ ಕಲ್ಪಿಸಲಾಗಿದೆ. ಒಟ್ಟಾಗಿ, ಈ ಪಾಲುದಾರಿಕೆಗಳು ಭವಿಷ್ಯಕ್ಕೆ ಸಿದ್ಧವಾಗಿರುವ, ಅದು ಡಿಜಿಟಲ್, ಅಂತರ್ಗತ ಮತ್ತು ಘನತೆಯುತವಾದ ಉದ್ಯೋಗ ಮಾದರಿಯನ್ನು ಪ್ರತಿಬಿಂಬಿಸುತ್ತವೆ.

 

****


(Release ID: 2164768) Visitor Counter : 2