ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಮಧ್ಯಮ ವರ್ಗವನ್ನು ಬೆಂಬಲಿಸಲು ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ
Posted On:
04 SEP 2025 8:53PM by PIB Bengaluru
ಭಾರತದ ಮಧ್ಯಮ ವರ್ಗವನ್ನು ಬೆಂಬಲಿಸಲು ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇದು ದೇಶದ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಪರಿವರ್ತನೆಯ ಹಿಂದಿನ ಪ್ರೇರಕ ಶಕ್ತಿಯಾಗಿ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಐತಿಹಾಸಿಕ ಆದಾಯ ತೆರಿಗೆ ಕಡಿತಗಳ ಸರಣಿಯನ್ನು ಆಧರಿಸಿದ, ಇತ್ತೀಚಿನ #NextGenGST ಸುಧಾರಣೆಗಳು ದೂರದರ್ಶನಗಳು, ಹವಾನಿಯಂತ್ರಣಗಳು ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳು ಸೇರಿದಂತೆ ಗೃಹೋಪಯೋಗಿ ಉತ್ಪನ್ನಗಳನ್ನು ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವಂತೆ ಮಾಡುವ ಗುರಿಯನ್ನು ಹೊಂದಿದೆ.
ಎಕ್ಸ ನಲ್ಲಿ ಶ್ರೀ ಸುನಿಲ್ ವಚನಿ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು,
"ಭಾರತದ ಶ್ರಮಶೀಲ ಮಧ್ಯಮ ವರ್ಗವು ನಮ್ಮ ಬೆಳವಣಿಗೆಯ ಪ್ರಮುಖ ಭಾಗವಾಗಿದೆ.
ಐತಿಹಾಸಿಕ ಆದಾಯ ತೆರಿಗೆ ಕಡಿತಗಳು ಮತ್ತು ಈಗ ಟಿ.ವಿಗಳು, ಎ.ಸಿಗಳು ಮತ್ತು ದೈನಂದಿನ ಅಗತ್ಯ ವಸ್ತುಗಳಂತಹ ಉತ್ಪನ್ನಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುವ #NextGenGST ಸುಧಾರಣೆಗಳ ಮೂಲಕ, ನಾವು ಜೀವನ ಸುಲಭತೆಯನ್ನು ಹೆಚ್ಚಿಸಿ ಕೋಟ್ಯಂತರ ಕುಟುಂಬಗಳ ಆಕಾಂಕ್ಷೆಗಳನ್ನು ಬೆಂಬಲಿಸಲು ಬದ್ಧರಾಗಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.
****
(Release ID: 2164143)
Visitor Counter : 2
Read this release in:
Odia
,
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam