ಹಣಕಾಸು ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆದ 56ನೇ ಜಿ.ಎಸ್‌.ಟಿ ಮಂಡಳಿಯ ನಿರ್ಧಾರಗಳ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQಗಳು)

Posted On: 03 SEP 2025 11:28PM by PIB Bengaluru

1. ಜಿ.ಎಸ್‌.ಟಿ ದರಗಳಲ್ಲಿನ ಬದಲಾವಣೆಗಳು ಯಾವಾಗ ಜಾರಿಗೆ ಬರುತ್ತವೆ?

ಜಿ.ಎಸ್‌.ಟಿ ಕೌನ್ಸಿಲ್ ತನ್ನ 56ನೇ ಸಭೆಯಲ್ಲಿ ಮಾಡಿದ ಶಿಫಾರಸುಗಳ ಪ್ರಕಾರ, ಸೇವೆಗಳು ಮತ್ತು ಸರಕುಗಳನ್ನು ಹೊರತುಪಡಿಸಿ ಸಿಗರೇಟ್ ಮತ್ತು ಜರ್ದಾದಂತಹ ಜಗಿಯುವ ತಂಬಾಕು ಉತ್ಪನ್ನಗಳು, ಸಂಸ್ಕರಿಸದ ಕಚ್ಚಾ ತಂಬಾಕು ಮತ್ತು ಬೀಡಿ ಮೇಲಿನ ಜಿ.ಎಸ್‌.ಟಿ ದರಗಳಲ್ಲಿನ ಬದಲಾವಣೆಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ನಿರ್ದಿಷ್ಟ ಸರಕುಗಳಾದ ಸಿಗರೇಟ್, ಜರ್ದಾದಂತಹ ಜಗಿಯುವ ತಂಬಾಕು ಉತ್ಪನ್ನಗಳು, ಸಂಸ್ಕರಿಸದ ತಂಬಾಕು ಮತ್ತು ಬೀಡಿಗಳಿಗೆ, ಅಸ್ತಿತ್ವದಲ್ಲಿರುವ ಜಿ.ಎಸ್‌.ಟಿ ಮತ್ತು ಪರಿಹಾರ ಸೆಸ್ ದರಗಳು ಮುಂದುವರಿಯುತ್ತವೆ ಮತ್ತು ಪರಿಹಾರ ಸೆಸ್‌ನ ಕಾರಣದಿಂದಾಗಿ ಸಂಪೂರ್ಣ ಸಾಲ ಮತ್ತು ಬಡ್ಡಿ ಹೊಣೆಗಾರಿಕೆಗಳನ್ನು ಬಿಡುಗಡೆ ಮಾಡುವ ಆಧಾರದ ಮೇಲೆ ಹೊಸ ದರಗಳನ್ನು ನಂತರದ ದಿನಾಂಕದಂದು ಜಾರಿಗೆ ತರಲಾಗುತ್ತದೆ.

2. ಸಿ.ಜಿ.ಎಸ್.ಟಿ. ಕಾಯ್ದೆ, 2017ರ ಅಡಿಯಲ್ಲಿ ಸರಕುಗಳಿಗೆ ಅಗತ್ಯವಿರುವ ನೋಂದಣಿ ಮಿತಿಯಲ್ಲಿ ಯಾವುದೇ ಬದಲಾವಣೆ ಇದೆಯೇ?

ಇಲ್ಲ, ಸಿ.ಜಿ.ಎಸ್.ಟಿ.  ಕಾಯ್ದೆ, 2017ರ ಅಡಿಯಲ್ಲಿ ಸರಕುಗಳಿಗೆ ಅಗತ್ಯವಿರುವ ನೋಂದಣಿ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

3. ಯಾವ ಅಧಿಸೂಚನೆಯ ಮೂಲಕ  ಪರಿಷ್ಕೃತ ದರಗಳಿಗೆ ಅವಕಾಶ ನೀಡಲಾಗುತ್ತದೆ?

ಜಿ.ಎಸ್.ಟಿ. ದರಗಳಲ್ಲಿನ ಬದಲಾವಣೆಗಳನ್ನು ದರ ಅಧಿಸೂಚನೆಯಲ್ಲಿ ತಿಳಿಸಲಾಗುತ್ತದೆ. ಅಧಿಸೂಚನೆಯನ್ನು ಸಿ.ಬಿ.ಐ.ಸಿ. ವೆಬ್‌ಸೈಟ್‌ನಲ್ಲಿ ಇರಿಸಲಾಗುತ್ತದೆ.

4. ಜಿ.ಎಸ್.ಟಿ. ದರಗಳಲ್ಲಿನ ಬದಲಾವಣೆಗಳು ಜಾರಿಗೆ ಬರುವ ಮೊದಲು ನಾನು ಸರಕುಗಳು/ಸೇವೆಗಳು ಅಥವಾ ಎರಡನ್ನೂ ಪೂರೈಸಿದ್ದರೆ ಆದರೆ ಇನ್‌ವಾಯ್ಸ್‌ಗಳನ್ನು ನಂತರ ನೀಡಿದ್ದರೆ, ಅನ್ವಯವಾಗುವ ತೆರಿಗೆ ದರ ಯಾವುದು?

ಸಿ.ಜಿ.ಎಸ್.ಟಿ. ಕಾಯ್ದೆ 2017ರ ಸೆಕ್ಷನ್ 14 (a)(i) ರ ಪ್ರಕಾರ, ತೆರಿಗೆ ದರ ಬದಲಾವಣೆಗೆ ಮುನ್ನ ಸರಕು ಅಥವಾ ಸೇವೆಗಳು ಅಥವಾ ಎರಡನ್ನೂ ಪೂರೈಸಿದ್ದರೆ ಮತ್ತು ತೆರಿಗೆ ದರ ಬದಲಾವಣೆಯ ನಂತರ ಅದಕ್ಕೆ ಇನ್‌ವಾಯ್ಸ್ ನೀಡಿದ್ದರೆ, ಪೂರೈಕೆಯ ಸಮಯ ಅಂದರೆ ಅಂತಹ ಪೂರೈಕೆಯ ಮೇಲೆ ತೆರಿಗೆ ಪಾವತಿಸಬೇಕಾದ ಹೊಣೆಗಾರಿಕೆಯ ದಿನಾಂಕವು ಕೆಳಗಿನಂತಿರುತ್ತದೆ:

i. ತೆರಿಗೆ ದರ ಬದಲಾವಣೆಯ ನಂತರ ಪಾವತಿಯನ್ನು ಸ್ವೀಕರಿಸಿದ್ದರೆ, ಆಗ ಪೂರೈಕೆಯ ಸಮಯವು ಪಾವತಿ ಸ್ವೀಕರಿಸಿದ ದಿನಾಂಕ ಅಥವಾ ಇನ್‌ವಾಯ್ಸ್ ನೀಡಿದ ದಿನಾಂಕ, ಇವುಗಳಲ್ಲಿ ಯಾವುದು ಮೊದಲೋ ಅದು ಆಗಿರುತ್ತದೆ.

ii. ತೆರಿಗೆ ದರ ಬದಲಾವಣೆಯ ಮೊದಲು ಪಾವತಿಯನ್ನು ಸ್ವೀಕರಿಸಿದ್ದರೆ, ಪೂರೈಕೆಯ ಕಾಲ/ಸಮಯವು ಪಾವತಿ ಸ್ವೀಕರಿಸಿದ ದಿನಾಂಕವಾಗಿರುತ್ತದೆ.

5. ಸರಕು/ಸೇವೆಗಳ ಪೂರೈಕೆ ಅಥವಾ ಎರಡಕ್ಕೂ ಮುಂಗಡ ಪಡೆದಿದ್ದರೂ ಪೂರೈಕೆ ಪೂರ್ಣಗೊಳ್ಳದಿದ್ದರೆ ಅಥವಾ ಇನ್‌ವಾಯ್ಸ್ ನೀಡಿರದಿದ್ದರೆ ಅನ್ವಯವಾಗುವ ಜಿ.ಎಸ್.ಟಿ.  ದರ ಎಷ್ಟು?

ಸರಕು ಪೂರೈಕೆಯ ಸಮಯದ ನಿಬಂಧನೆಗಳ ಪ್ರಕಾರ ಜಿ.ಎಸ್.ಟಿ. ದರವನ್ನು ನಿರ್ಧರಿಸಲಾಗುತ್ತದೆ. (ಸಿ.ಜಿ.ಎಸ್.ಟಿ. ಕಾಯ್ದೆ, 2017 ಸೆಕ್ಷನ್ 14 ನೋಡಿ).

6.ಜಿ.ಎಸ್.ಟಿ. ದರಗಳಲ್ಲಿ ಬದಲಾವಣೆಗಳು ಜಾರಿಗೆ ಬರುವ ಮೊದಲು ಮಾಡಿದ ಖರೀದಿಗಳಿಗೆ ಐ.ಟಿ.ಸಿ. ಏನಾಗುತ್ತದೆ? ನನಗೆ  ಈಗ ಕಡಿಮೆ ದರದಲ್ಲಿ ಐ.ಟಿ.ಸಿ. ಲಭಿಸುತ್ತದೆಯೇ?

ಸಿ.ಜಿ.ಎಸ್.ಟಿ. ಕಾಯ್ದೆಯ ಸೆಕ್ಷನ್ 16(1)ರ ಪ್ರಕಾರ ನೋಂದಾಯಿತ ವ್ಯಕ್ತಿಯು ತನ್ನ ವ್ಯವಹಾರದ ಸಂದರ್ಭದಲ್ಲಿ ಅಥವಾ ಮುಂದುವರಿಕೆಯಲ್ಲಿ ಬಳಸುವ ಅಥವಾ ಬಳಸಲು ಉದ್ದೇಶಿಸಿರುವ ಇನ್‌ಪುಟ್ ತೆರಿಗೆಯ ಕ್ರೆಡಿಟ್ (ಪಾವತಿ) ಪಡೆಯಲು ಅರ್ಹತೆ ಪಡೆಯುತ್ತಾನೆ. ಇದು ಸಿ.ಜಿ.ಎಸ್.ಟಿ. ಕಾಯ್ದೆ 2017ರ ಸೆಕ್ಷನ್ 49 ರ ಅಡಿಯಲ್ಲಿ ಒದಗಿಸಲಾದ ರೀತಿಯಲ್ಲಿ ಸೂಚಿಸಬಹುದಾದ ಷರತ್ತುಗಳು ಮತ್ತು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಇದು ಅವರ ಇ-ಕ್ರೆಡಿಟ್ ಲೆಡ್ಜರ್‌ಗೆ ಕ್ರೆಡಿಟ್ ಆಗುತ್ತದೆ.

ಅದರ ಪ್ರಕಾರ, ನೋಂದಾಯಿತ ವ್ಯಕ್ತಿಯು ಇನ್‌ವರ್ಡ್(ಸರಕು/ಸೇವೆ) ಪೂರೈಕೆಯನ್ನು ಸ್ವೀಕರಿಸಿದರೆ ಮತ್ತು ಅದರ ಮೇಲೆ ತೆರಿಗೆಯನ್ನು ಸರಿಯಾಗಿ ವಿಧಿಸಿದ್ದರೆ, ಅಂತಹ ಪೂರೈಕೆಯ ಸಮಯದಲ್ಲಿ ಚಾಲ್ತಿಯಲ್ಲಿರುವ ದರಕ್ಕೆ ಅನುಗುಣವಾಗಿರುವ ದರದಲ್ಲಿ, ಸದರಿ ನೋಂದಾಯಿತ ವ್ಯಕ್ತಿಯು ಸಿ.ಜಿ.ಎಸ್.ಟಿ. ಕಾಯ್ದೆ 2017ರ ಸೆಕ್ಷನ್ 49 ರಲ್ಲಿ ನಿರ್ದಿಷ್ಟಪಡಿಸಿದ ಇತರ ಷರತ್ತುಗಳು/ನಿರ್ಬಂಧಗಳು ಮತ್ತು ವಿಧಾನಕ್ಕೆ ಒಳಪಟ್ಟು ಅಂತಹ ತೆರಿಗೆಯ ಕ್ರೆಡಿಟ್‌ಗೆ ಅರ್ಹನಾಗಿರುತ್ತಾನೆ.

7. ಸರಕುಗಳ ಆಮದಿನ ಮೇಲಿನ ಐ.ಜಿ.ಎಸ್.ಟಿ. ದರದ ಮೇಲೆ ಪರಿಣಾಮ ಏನು?

ಆಮದು ಮಾಡಿಕೊಂಡ ಸರಕುಗಳ ಮೇಲಿನ ಐ.ಜಿ.ಎಸ್.ಟಿ. ದರ ಅಧಿಸೂಚನೆಯಲ್ಲಿ ಐ.ಜಿ.ಎಸ್.ಟಿ ದರಕ್ಕೆ  ಪ್ರತ್ಯೇಕವಾಗಿ ವಿನಾಯಿತಿ ನೀಡಿರದಿದ್ದರೆ ಆಗ ಅಧಿಸೂಚಿಸಿದ ಜಿ.ಎಸ್.ಟಿ.  ದರ ಅನ್ವಯಿಸುತ್ತದೆ. ,

8. ಸೆಪ್ಟೆಂಬರ್ 22, 2025 ರಂದು ಅಥವಾ ನಂತರ ಮಾಡಿದ ಸರಕು/ಸೇವೆಗಳ ನನ್ನ ಹೊರಮುಖ ಪೂರೈಕೆಯ ಮೇಲೆ ಜಿ.ಎಸ್.ಟಿ. ದರವನ್ನು ಕಡಿಮೆ ಮಾಡಲಾಗಿದೆ ಆದರೆ ಅದಾಗಲೇ ಹೆಚ್ಚಿನ ದರದ ಕಾರಣದಿಂದಾಗಿ ನಾನು ಲೆಡ್ಜರ್‌ನಲ್ಲಿ ಜಿ.ಎಸ್.ಟಿ. ಐ.ಟಿ.ಸಿ. ಅನ್ನು ಹೊಂದಿದ್ದೇನೆ. ಅಂತಹ ಕ್ರೆಡಿಟ್ ಅನ್ನು ಬಳಸುವುದನ್ನು ಮುಂದುವರಿಸಬಹುದೇ?

ಇ-ಕ್ರೆಡಿಟ್ ಲೆಡ್ಜರ್‌ನಲ್ಲಿ ಸರಿಯಾಗಿ ಪಡೆದ ಇನ್‌ಪುಟ್ ತೆರಿಗೆ ಕ್ರೆಡಿಟ್ ಅನ್ನು ಸಿ.ಜಿ.ಎಸ್.ಟಿ. ಕಾಯ್ದೆಯ ಸೆಕ್ಷನ್ 49(4) ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ನಿಬಂಧನೆಗಳ ಪ್ರಕಾರ ಯಾವುದೇ ಔಟ್‌ಪುಟ್ ತೆರಿಗೆ ಹೊಣೆಗಾರಿಕೆಯನ್ನು ಬಿಡುಗಡೆ ಮಾಡಲು ಬಳಸಬಹುದು.

9. ನನ್ನ ಹೊರಮುಖ ಪೂರೈಕೆಯು ಹೊಸ ದರ ವೇಳಾಪಟ್ಟಿಯ ಅಡಿಯಲ್ಲಿ ವಿನಾಯಿತಿ ಪಡೆದಿದೆ. ಆದರೆ ನಾನು ಈಗಾಗಲೇ ನನ್ನ ಲೆಡ್ಜರ್‌ನಲ್ಲಿ ಜಿ.ಎಸ್.ಟಿ. ಐ.ಟಿ.ಸಿ. ಪಾವತಿಸಿದ್ದೇನೆ. ನಾನು ಐ.ಟಿ.ಸಿ. ಯನ್ನು ವ್ಯತಿರಿಕ್ತವಾಗಿಸಬೇಕೇ?

ಸೆಪ್ಟೆಂಬರ್ 21, 2025 ರವರೆಗೆ ಮಾಡಿದ ಸರಕು/ಸೇವೆಗಳ ಪೂರೈಕೆಗಳು ಅಥವಾ ಎರಡರ ಪೂರೈಕೆಗಳಿಗೆ ಬಾಹ್ಯ ಹೊಣೆಗಾರಿಕೆಯನ್ನು ಬಿಡುಗಡೆ ಮಾಡಲು ಐ.ಟಿ.ಸಿಯನ್ನು ಬಳಸಬಹುದು. ಆದಾಗ್ಯೂ, ದರ ಬದಲಾವಣೆ ಜಾರಿಗೆ ಬಂದ ನಂತರ ಅಂದರೆ ಸೆಪ್ಟೆಂಬರ್ 22, 2025 ರಂದು ಅಥವಾ ನಂತರ ಮಾಡಿದ ಪೂರೈಕೆಗಳಿಗೆ, ಸಿಜಿ.ಎಸ್‌.ಟಿ ಕಾಯ್ದೆ, 2017ರ ನಿಬಂಧನೆಗಳ ಪ್ರಕಾರ ಐ.ಟಿ.ಸಿಯನ್ನು ವ್ಯತಿರಿಕ್ತವಾಗಿಸಬೇಕಾಗುತ್ತದೆ (ರಿವರ್ಸ್).

10. ಪರಿಷ್ಕೃತ ದರ ಜಾರಿಗೆ ಬಂದ ದಿನಾಂಕದವರೆಗೆ ಮಾಡಿದ ಪೂರೈಕೆಗಳಿಗೆ ತಲೆಕೆಳಗಾದ ಸುಂಕ ರಚನೆಯಿಂದ ಉಂಟಾಗುವ ಸಂಚಿತ ಕ್ರೆಡಿಟ್ ಅನ್ನು ಮರುಪಾವತಿ ಪಡೆಯಲು ನನಗೆ ಅವಕಾಶವಿದೆಯೇ?

ಸಮಸ್ಯೆಯನ್ನು 31.03.2020 ರ  (ತಿದ್ದುಪಡಿ ಮಾಡಿದ) ದಿನಾಂಕದ ಸುತ್ತೋಲೆ ಸಂಖ್ಯೆ 135/05/2020-ಜಿ.ಎಸ್.ಟಿ. ಮೂಲಕ ಸ್ಪಷ್ಟಪಡಿಸಲಾಗಿದೆ, ಇದು ಸಿಜಿ.ಎಸ್‌.ಟಿ ಕಾಯ್ದೆಯ ಸೆಕ್ಷನ್ 54(3) ರ ಮೊದಲ ನಿಬಂಧನೆಯ ಷರತ್ತು (ii) ರ ಪ್ರಕಾರ ಸಂಚಿತ ಐ.ಟಿ.ಸಿಯ ಮರುಪಾವತಿಯು ಇನ್‌ಪುಟ್ ಮೇಲಿನ ತೆರಿಗೆ ದರವು ಔಟ್‌ಪುಟ್ ಪೂರೈಕೆಗಳ ಮೇಲಿನ ತೆರಿಗೆ ದರಕ್ಕಿಂತ ಹೆಚ್ಚಿರುವ ಕಾರಣ ಕ್ರೆಡಿಟ್ ಸಂಗ್ರಹವಾಗಿದ್ದರೆ ಆಗ ಅದು ಲಭ್ಯವಿದೆ. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ಇನ್‌ಪುಟ್ ಮತ್ತು ಔಟ್‌ಪುಟ್ ಒಂದೇ ಆಗಿದ್ದರೂ, ವಿಭಿನ್ನ ಸಮಯಗಳಲ್ಲಿ ವಿಭಿನ್ನ ತೆರಿಗೆ ದರಗಳನ್ನು ವಿಧಿಸಲಾಗಿದ್ದರೂ, ಸಿ.ಜಿ.ಎಸ್.ಟಿ.  ಕಾಯಿದೆಯ ಸೆಕ್ಷನ್ 54 ರ ಉಪ-ವಿಭಾಗ (3) ರ ಮೊದಲ ನಿಬಂಧನೆಯ ಷರತ್ತು (ii) ರ ನಿಬಂಧನೆಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ.

11. ದರ ಬದಲಾವಣೆಗಳು ಜಾರಿಗೆ ಬರುವ ದಿನಾಂಕದಂದು ನನ್ನ ಬಳಿ ಈಗಾಗಲೇ ದಾಸ್ತಾನು/ಸ್ಟಾಕ್ ಇದ್ದರೆ, ನಾನು ಪರಿಷ್ಕೃತ ದರವನ್ನು ಅನ್ವಯಿಸಬೇಕೇ?

ಪೂರೈಕೆಯ ಮೇಲೆ ಜಿ.ಎಸ್.ಟಿ. ವಿಧಿಸಲಾಗುತ್ತದೆ. ಆದ್ದರಿಂದ, ಪರಿಷ್ಕೃತ ಜಿ.ಎಸ್.ಟಿ. ದರಗಳನ್ನು ಸೂಚಿಸಿದ ನಂತರ ಸರಬರಾಜು ಮಾಡಿದ ಸರಕುಗಳ ಮೇಲೆ, ಹೊಸ ಜಿ.ಎಸ್.ಟಿ. ದರಗಳು ಸರಕು/ಸೇವೆಗಳ ಹೊರಮುಖ ಪೂರೈಕೆಗೆ  ಅನ್ವಯಿಸುತ್ತವೆ.

12. ಹೊಸ ದರಗಳು ಜಾರಿಗೆ ಬಂದಾಗ ಸಾಗಣೆಯಲ್ಲಿರುವ ಸರಕುಗಳ ಮೇಲೆ ಇ-ವೇ ಬಿಲ್‌ಗಳನ್ನು ರದ್ದುಗೊಳಿಸಿ ಹೊಸದಾಗಿ ರಚಿಸಬೇಕೇ?

2017ರ ಸಿ.ಜಿ.ಎಸ್.ಟಿ. ನಿಯಮಗಳ ನಿಬಂಧನೆ 138 ರ ಪ್ರಕಾರ ಸರಕುಗಳ ಪೂರೈಕೆ/ಸಾರಿಗೆ ಪ್ರಾರಂಭವಾಗುವ ಮೊದಲು ಇ-ವೇ ಬಿಲ್ ಅನ್ನು ರಚಿಸಬೇಕು. ಹೊಸ ದರಗಳು ಜಾರಿಗೆ ಬಂದಾಗ ಸಾಗಣೆಯಲ್ಲಿರುವ ಸರಕುಗಳಿಗೆ ರದ್ದತಿ ಮತ್ತು ಹೊಸದಾಗಿ ಉತ್ಪಾದಿಸುವ ಅವಶ್ಯಕತೆಯಿಲ್ಲ. ಪ್ರಸ್ತುತ ಸಾಗಣೆಯಲ್ಲಿರುವ ಇ-ವೇ ಬಿಲ್‌ಗಳು ಅವುಗಳ ಮೂಲ ಮಾನ್ಯತೆಯ ಅವಧಿಯ ಪ್ರಕಾರ ಮಾನ್ಯವಾಗಿಯೇ ಮುಂದುವರಿಯುತ್ತವೆ.

13. ಯು.ಎಚ್.ಟಿ. (ಅಲ್ಟ್ರಾ ಹೈ ಟೆಂಪರೇಚರ್) ಹಾಲಿಗೆ ವಿನಾಯಿತಿ ನೀಡಲಾಗಿದೆ. ಯು.ಎಚ್.ಟಿ. ಹಾಲಿಗೆ ನೀಡಿರುವ ವಿನಾಯಿತಿಯಲ್ಲಿ  ಸಸ್ಯ ಆಧಾರಿತ ಹಾಲು  ಸಹ ಒಳಗೊಂಡಿದೆಯೇ?

ಯು.ಎಚ್.ಟಿ. ಹಾಲು ಹೊರತುಪಡಿಸಿ ಎಲ್ಲಾ ಡೈರಿ ಹಾಲಿಗೆ ಈಗಾಗಲೇ ಜಿ.ಎಸ್.ಟಿ. ಯಿಂದ ವಿನಾಯಿತಿ ನೀಡಲಾಗಿದೆ. ಆದ್ದರಿಂದ ಯು.ಎಚ್.ಟಿ. ಹಾಲಿಗೂ ಇದೇ ರೀತಿಯ ಸರಕುಗಳಿಗೆ ನೀಡಲಾಗುವ ಅದೇ ತೆರಿಗೆ ವ್ಯವಸ್ಥೆಯನ್ನು ಒದಗಿಸಲು ವಿನಾಯಿತಿ ನೀಡಲಾಗಿದೆ. ಸೋಯಾ ಹಾಲಿನ ಪಾನೀಯಗಳನ್ನು ಹೊರತುಪಡಿಸಿ ಸಸ್ಯ ಆಧಾರಿತ ಹಾಲಿನ ಪಾನೀಯಗಳು 18% ಜಿ.ಎಸ್.ಟಿ. ಹೊಂದಿದ್ದರೆ, ಸೋಯಾ ಹಾಲಿನ ಪಾನೀಯ  12% ಜಿ.ಎಸ್.ಟಿ. ಹೊಂದಿತ್ತು. ಸಸ್ಯ ಆಧಾರಿತ ಹಾಲಿನ ಪಾನೀಯಗಳು ಮತ್ತು ಸೋಯಾ ಹಾಲಿನ ಪಾನೀಯಗಳ ಮೇಲಿನ ಜಿ.ಎಸ್.ಟಿ. ದರವನ್ನು ಈಗ 5% ಗೆ ಇಳಿಸಲಾಗಿದೆ.

14. 'ಇತರ ಆಲ್ಕೊಹಾಲಿಕ್ ಅಲ್ಲದ  ಪಾನೀಯಗಳ' ಮೇಲೆ 40% ದರಕ್ಕೆ ಕಾರಣವೇನು?

ಇತ್ತೀಚಿನ ದರ ತರ್ಕಬದ್ಧಗೊಳಿಸುವ ಕ್ರಮದ ಹಿಂದಿನ ತತ್ವವೆಂದರೆ ತಪ್ಪು ವರ್ಗೀಕರಣ ಮತ್ತು ವಿವಾದಗಳ ಸಮಸ್ಯೆಗಳನ್ನು ತಪ್ಪಿಸಲು ಒಂದೇ ರೀತಿಯ ಸರಕುಗಳನ್ನು ಒಂದೇ ದರದಲ್ಲಿ ಇಡುವುದು. ಇದನ್ನು 'ಇತರ ಆಲ್ಕೊಹಾಲಿಕ್ ಅಲ್ಲದ  ಪಾನೀಯಗಳಿಗೂ' ಅನ್ವಯಿಸಲಾಗಿದೆ.

15. ಯಾವುದೇ ಶೆಡ್ಯೂಲ್ ಗಳಲ್ಲಿ  ನಿರ್ದಿಷ್ಟಪಡಿಸದ ಆಹಾರ ತಯಾರಿಕೆಗಳ  ಮೇಲಿನ ಜಿ.ಎಸ್.ಟಿ. ದರ ಎಷ್ಟು?

ಬೇರೆಡೆ ನಿರ್ದಿಷ್ಟಪಡಿಸದ ಆಹಾರ ಸಿದ್ಧತೆಗಳು 5% ಜಿ.ಎಸ್.ಟಿ.  ದರವನ್ನು ಆಕರ್ಷಿಸುತ್ತವೆ.

16. ಭಾರತೀಯ ಆಹಾರದ/ ಬ್ರೆಡ್‌ನ ನಿರ್ದಿಷ್ಟ ವಿಧಗಳ ಮೇಲೆ ಮಾತ್ರ ಜಿ.ಎಸ್.ಟಿ. ದರವನ್ನು ಪರಿಷ್ಕರಿಸಲು ಕಾರಣವೇನು?

ಆಹಾರ/ ಬ್ರೆಡ್‌ಗೆ ಈಗಾಗಲೇ ವಿನಾಯಿತಿ ನೀಡಲಾಗಿತ್ತು, ಆದರೆ ಪಿಜ್ಜಾ ಬ್ರೆಡ್, ರೊಟ್ಟಿ, ಪೊರೊಟ್ಟಾ, ಪರಾಠಾ ಇತ್ಯಾದಿಗಳು ವಿಭಿನ್ನ ದರಗಳನ್ನು ಹೊಂದಿದ್ದವು. ಕೆಲವು ಸರಕುಗಳನ್ನು ಮಾತ್ರ ಉದಾಹರಣೆಗಾಗಿ ಉಲ್ಲೇಖಿಸಲಾಗಿದ್ದರೂ, ಯಾವುದೇ ಹೆಸರಿನಿಂದ ಕರೆಯಲ್ಪಡುವ  ಎಲ್ಲಾ ಭಾರತೀಯ ಖಾದ್ಯಗಳಿಗೆ/ ಬ್ರೆಡ್‌ಗಳಿಗೆ ವಿನಾಯಿತಿ ನೀಡಲಾಗಿದೆ.

17. ಹಣ್ಣಿನ ಪಾನೀಯಗಳ ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹಣ್ಣಿನ ರಸದೊಂದಿಗೆ ಕಾರ್ಬೊನೇಟೆಡ್ ಪಾನೀಯಗಳ ದರವನ್ನು ಏಕೆ ಹೆಚ್ಚಿಸಲಾಗಿದೆ?

ಸರಕುಗಳು ಜಿ.ಎಸ್‌.ಟಿ ಜೊತೆಗೆ ಪರಿಹಾರ ಸೆಸ್ ಅನ್ನು ಹೊಂದಿವೆ. ಪರಿಹಾರ ಸೆಸ್ ಲೆವಿಯನ್ನು ಕೊನೆಗೊಳಿಸಲು ನಿರ್ಧರಿಸಿರುವುದರಿಂದ, ಪೂರ್ವ ದರ ತರ್ಕಬದ್ಧಗೊಳಿಸುವ ಮಟ್ಟವನ್ನು ಕಾಯ್ದುಕೊಳ್ಳಲು ತೆರಿಗೆಯನ್ನು ಹೆಚ್ಚಿಸಲಾಗಿದೆ.

18. ಪನೀರ್ ಮತ್ತು ಇತರ ಚೀಸ್ ನಡುವೆ ವಿಭಿನ್ನ ತೆರಿಗೆ ಅನ್ವಯಿಸುವಿಕೆ ಏಕೆ ಇದೆ?

ದರ ತರ್ಕಬದ್ಧಗೊಳಿಸುವ ಮೊದಲು, ಪ್ಯಾಕೇಜ್ ಪೂರ್ವ  ಮತ್ತು ಲೇಬಲ್ ಮಾಡಿದ ರೂಪದಲ್ಲಿ ಮಾರಾಟವಾಗುವ ಪನೀರ್ ಈಗಾಗಲೇ ಶೂನ್ಯ ದರವನ್ನು ಹೊಂದಿದೆ. ಆದ್ದರಿಂದ ಪ್ಯಾಕೇಜ್ ಪೂರ್ವ ಮತ್ತು ಲೇಬಲ್ ಮಾಡಿದ ರೂಪದಲ್ಲಿ ಸರಬರಾಜು ಮಾಡಿದ ಪನೀರ್‌ಗೆ ಸಂಬಂಧಿಸಿದಂತೆ ಮಾತ್ರ ಬದಲಾವಣೆಗಳನ್ನು ಮಾಡಲಾಗಿದೆ. ಪನೀರ್ ಒಂದು ಭಾರತೀಯ ಕಾಟೇಜ್ ಚೀಸ್. ಇದನ್ನು ಹೆಚ್ಚಾಗಿ ಸಣ್ಣ ಪ್ರಮಾಣದ ವಲಯದಲ್ಲಿ ಉತ್ಪಾದಿಸಲಾಗುತ್ತದೆ. ಭಾರತೀಯ ಕಾಟೇಜ್ ಚೀಸ್ ಅನ್ನು ಉತ್ತೇಜಿಸಲು ಕ್ರಮವನ್ನು ಅನುಸರಿಸಲಾಗಿದೆ.

19. ನೈಸರ್ಗಿಕ ಜೇನುತುಪ್ಪ ಮತ್ತು ಕೃತಕ ಜೇನುತುಪ್ಪಕ್ಕೆ ಬೇರೆ ಬೇರೆ ತೆರಿಗೆ ಪದ್ಧತಿ ಏಕೆ?

ಇದು ನೈಸರ್ಗಿಕ ಜೇನುತುಪ್ಪವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

20. ಎಲ್ಲಾ ಕೃಷಿ ಯಂತ್ರೋಪಕರಣಗಳು / ಸಲಕರಣೆಗಳ ಮೇಲಿನ ಜಿ.ಎಸ್‌.ಟಿಯನ್ನು ಕಡಿಮೆ ಮಾಡಲಾಗಿದೆಯೇ?

ಕೃಷಿ ಯಂತ್ರೋಪಕರಣಗಳು/ಸಲಕರಣೆಗಳಾದ ಸ್ಪ್ರಿಂಕ್ಲರ್‌ಗಳು, ಹನಿ ನೀರಾವರಿ ವ್ಯವಸ್ಥೆ, ಮಣ್ಣು ಸಿದ್ದಗೊಳಿಸುವಿಕೆ ಅಥವಾ ಕೃಷಿ, ತೋಟಗಾರಿಕಾ ಅಥವಾ ಅರಣ್ಯ ಯಂತ್ರೋಪಕರಣಗಳು; ಹುಲ್ಲುಹಾಸು ಅಥವಾ ಕ್ರೀಡಾ-ನೆಲದ ರೋಲರ್‌ಗಳು, ಕೊಯ್ಲು ಅಥವಾ ಒಕ್ಕಣೆ ಯಂತ್ರಗಳು, ಒಣಹುಲ್ಲಿನ ಅಥವಾ ಮೇವು ಬೇಲರ್‌ಗಳು ಸೇರಿದಂತೆ; ಹುಲ್ಲು ಅಥವಾ ಹುಲ್ಲು ಕತ್ತರಿಸುವ ಯಂತ್ರಗಳು, ಇತರ ಕೃಷಿ, ತೋಟಗಾರಿಕಾ, ಅರಣ್ಯ, ಕೋಳಿ ಸಾಕಣೆ ಅಥವಾ ಜೇನು ಸಾಕಣೆ ಯಂತ್ರೋಪಕರಣಗಳು, ಕಾಂಪೋಸ್ಟಿಂಗ್ ಯಂತ್ರಗಳು ಇತ್ಯಾದಿಗಳ ಮೇಲಿನ ಜಿ.ಎಸ್.ಟಿ.  ದರವನ್ನು ಮೊದಲು 12% ಗೆ ನಿಗದಿ ಮಾಡಲಾಗಿತ್ತು.  ಈಗ ಅದನ್ನು 5% ಕ್ಕೆ ಇಳಿಸಲಾಗಿದೆ.

21. ಕೃಷಿ ಯಂತ್ರೋಪಕರಣಗಳಿಗೆ ಏಕೆ ಸಂಪೂರ್ಣ  ವಿನಾಯಿತಿ ನೀಡಲಾಗಿಲ್ಲ?

ದರ ತರ್ಕಬದ್ಧಗೊಳಿಸುವಿಕೆಯ ಉದ್ದೇಶವು ಬಳಕೆದಾರರು ಮತ್ತು ಉತ್ಪಾದಕರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು. ರೈತರಿಗೆ ಪರಿಹಾರವನ್ನು ಒದಗಿಸುವಾಗ, ದೇಶೀಯ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರದಿರುವುದು ಮುಖ್ಯ. ಕೃಷಿ ಯಂತ್ರೋಪಕರಣಗಳಿಗೆ  ಸಂಪೂರ್ಣವಾಗಿ ವಿನಾಯಿತಿ ನೀಡಿದರೆ, ಈ ಸರಕುಗಳ ತಯಾರಕರು/ವಿತರಕರು ಕಚ್ಚಾ ವಸ್ತುಗಳ ಮೇಲೆ ಪಾವತಿಸಿದ ಜಿ.ಎಸ್.ಟಿ. ಮೇಲೆ ಇನ್‌ಪುಟ್ ತೆರಿಗೆ ಕ್ರೆಡಿಟ್ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಇನ್‌ಪುಟ್‌ಗಳ ಮೇಲೆ ಪಾವತಿಸಿದ ಐ.ಟಿ.ಸಿ.ಯನ್ನು  ಹಿಮ್ಮರಳಿಸಬೇಕಾಗುತ್ತದೆ. ಇದು ಅವರ ತೆರಿಗೆ ವ್ಯಾಪ್ತಿ ಮತ್ತು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿನ ಬೆಲೆಗಳ ರೂಪದಲ್ಲಿ ರೈತರಿಗೆ ವರ್ಗಾಯಿಸಲ್ಪಡಬಹುದು ಮತ್ತು ಇದು ಪ್ರತಿಕೂಲ ಪರಿಣಾಮ ಬೀರಬಹುದು.

22. ಔಷಧಿಗಳ ಮೇಲಿನ ಜಿ.ಎಸ್.ಟಿ. ದರ ಎಷ್ಟು?

ಶೂನ್ಯ ದರದಲ್ಲಿ ನಿರ್ದಿಷ್ಟಪಡಿಸಿದವುಗಳನ್ನು ಹೊರತುಪಡಿಸಿ, ಎಲ್ಲಾ ಔಷಧಿಗಳಿಗೆ 5% ರಿಯಾಯಿತಿ ಜಿ.ಎಸ್.ಟಿ.  ದರವನ್ನು ನಿಗದಿಪಡಿಸಲಾಗಿದೆ.

23. ಎಲ್ಲಾ ಔಷಧಿಗಳಿಗೆ  ಸಾಮಾನ್ಯವಾಗಿ ಜಿ.ಎಸ್.ಟಿ. ಯಿಂದ ವಿನಾಯಿತಿ ನೀಡಲಾಗಿಲ್ಲ ಏಕೆ. ?

ಔಷಧಿಗಳಿಗೆ ಸಂಪೂರ್ಣವಾಗಿ ವಿನಾಯಿತಿ ನೀಡಿದರೆ, ತಯಾರಕರು/ಡೀಲರ್‌ಗಳು ಕಚ್ಚಾ ವಸ್ತುಗಳ ಮೇಲೆ ಪಾವತಿಸಿದ ಜಿ.ಎಸ್.ಟಿ. ಮೇಲೆ ಇನ್‌ಪುಟ್ ತೆರಿಗೆ ಕ್ರೆಡಿಟ್ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಇನ್‌ಪುಟ್‌ಗಳ ಮೇಲೆ ಪಾವತಿಸಿದ ಐ.ಟಿ.ಸಿ.ಯನ್ನು ಹಿಂತಿರುಗಿಸಬೇಕಾಗುತ್ತದೆ. ಇದು ಅವರ ತೆರಿಗೆ ವ್ಯಾಪ್ತಿ ಮತ್ತು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ. ಇದನ್ನು ಗ್ರಾಹಕರು/ರೋಗಿಗಳಿಗೆ ಹೆಚ್ಚಿನ ಬೆಲೆಗಳ ರೂಪದಲ್ಲಿ ರವಾನಿಸಬಹುದು, ಇದು ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು.

24. 5% ಜಿ.ಎಸ್.ಟಿ.  ದರವು ಎಲ್ಲಾ ವೈದ್ಯಕೀಯ ಸಾಧನಗಳಿಗೆ  ಅನ್ವಯಿಸುತ್ತದೆಯೇ?

ನಿರ್ದಿಷ್ಟವಾಗಿ ವಿನಾಯಿತಿ ನೀಡಲಾಗಿರುವುದವುಗಳನ್ನು ಹೊರತುಪಡಿಸಿ,  5% ಜಿ.ಎಸ್.ಟಿ. ದರವು ವೈದ್ಯಕೀಯ, ಶಸ್ತ್ರಚಿಕಿತ್ಸಾ, ದಂತ ಮತ್ತು ಪಶುವೈದ್ಯಕೀಯದಲ್ಲಿ  ಬಳಸುವ ಎಲ್ಲಾ ವೈದ್ಯಕೀಯ ಸಾಧನಗಳು, ಉಪಕರಣಗಳು, ಸಲಕರಣೆಗಳಿಗೆ  ಅನ್ವಯಿಸುತ್ತದೆ,

25. ವೈದ್ಯಕೀಯ ಸಾಧನಗಳ ಮೇಲಿನ ಜಿ.ಎಸ್.ಟಿ. ದರವನ್ನು ಏಕೆ ಕಡಿಮೆ ಮಾಡಲಾಗಿದೆ? ಇದು ತಲೆಕೆಳಗಾದ ಸುಂಕ ವ್ಯವಸ್ಥೆಗೆ  ಕಾರಣವಾಗುವುದಿಲ್ಲವೇ?

ಕ್ರಮವು ಆರೋಗ್ಯ ಸೇವೆಯ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಮೂಲಕ ರೋಗಿಗಳಿಗೆ, ವಿಶೇಷವಾಗಿ ಬಡವರಿಗೆ ಪ್ರಯೋಜನವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಈ ಕ್ರಮವು ಯಾವುದೇ ಹೊಸ ತಲೆಕೆಳಗಾದ ಸುಂಕ ವ್ಯವಸ್ಥೆಯನ್ನು ರಚಿಸುವುದಿಲ್ಲ ಏಕೆಂದರೆ ಅಸ್ತಿತ್ವದಲ್ಲಿರುವ ರಚನೆಯು ಈಗಾಗಲೇ ತಲೆಕೆಳಗಾದ ಸುಂಕ ವ್ಯವಸ್ಥೆಯನ್ನು ಹೊಂದಿದ್ದು ಕ್ರಮವು ತಲೆಕೆಳಗಾದ ಸುಂಕ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಆದಾಗ್ಯೂ, ಜಿ.ಎಸ್.ಟಿ. ಅಡಿಯಲ್ಲಿ, ತಲೆಕೆಳಗಾದ ಸುಂಕ ವ್ಯವಸ್ಥೆಯಿಂದಾಗಿ ಉಂಟಾಗುವ ಸಂಗ್ರಹವಾದ ಇನ್ಪುಟ್ ತೆರಿಗೆ ಕ್ರೆಡಿಟ್ ಮರುಪಾವತಿ ತಯಾರಕರಿಗೆ ಲಭ್ಯವಿದೆ. ತ್ವರಿತ ಮರುಪಾವತಿಯನ್ನು ಸಕ್ರಿಯಗೊಳಿಸಲು ಜಿ.ಎಸ್.ಟಿ. ಕೌನ್ಸಿಲ್ ಪ್ರಕ್ರಿಯೆ ಸುಧಾರಣೆಗಳನ್ನು ಸಹ ಶಿಫಾರಸು ಮಾಡಿದೆ.

               26. ಸಣ್ಣ ಪೆಟ್ರೋಲ್, ಎಲ್.ಪಿ.ಜಿ, ಸಿ.ಎನ್.ಜಿ ಅಥವಾ ಡೀಸೆಲ್ ಕಾರುಗಳ ಮೇಲೆ ಪರಿಷ್ಕೃತ ಜಿ.ಎಸ್.ಟಿ. ದರ ಎಷ್ಟು? ಸಣ್ಣ ಕಾರುಗಳ ಅಡಿಯಲ್ಲಿ ಏನೇನು ಒಳಗೊಂಡಿದೆ?

ಎಲ್ಲಾ ಸಣ್ಣ ಕಾರುಗಳ ಮೇಲಿನ ಜಿ.ಎಸ್.ಟಿ. ದರವನ್ನು 28% ರಿಂದ 18% ಕ್ಕೆ ಇಳಿಸಲಾಗಿದೆ. ಜಿ.ಎಸ್.ಟಿ. ಉದ್ದೇಶಗಳಿಗಾಗಿ, ಸಣ್ಣ ಕಾರುಗಳು ಎಂದರೆ 1200 ಸಿಸಿ ವರೆಗೆ ಎಂಜಿನ್ ಸಾಮರ್ಥ್ಯ ಮತ್ತು 4000 ಎಂ.ಎಂ ವರೆಗೆ ಉದ್ದವಿರುವ ಪೆಟ್ರೋಲ್, ಎಲ್.ಪಿ.ಜಿ ಅಥವಾ ಸಿ.ಎನ್.ಜಿ ಕಾರುಗಳು ಮತ್ತು 1500 ಸಿಸಿ ವರೆಗೆ ಎಂಜಿನ್ ಸಾಮರ್ಥ್ಯ ಮತ್ತು 4000 ಎಂ.ಎಂ ವರೆಗೆ ಉದ್ದವಿರುವ ಡೀಸೆಲ್ ಕಾರುಗಳು.

27. 1500 ಸಿಸಿ ಮೀರಿದ ಅಥವಾ 4000 ಎಂ.ಎಂ ಮೀರಿದ ವಾಹನಗಳ ಮೇಲಿನ ಹೊಸ ಜಿ.ಎಸ್‌.ಟಿ ದರ ಎಷ್ಟು? ಯುಟಿಲಿಟಿ ವಾಹನಗಳ ಮೇಲಿನ ಜಿ.ಎಸ್.ಟಿ. ದರ ಎಷ್ಟು?

ಎಲ್ಲಾ ಮಧ್ಯಮ ಗಾತ್ರದ ಮತ್ತು ದೊಡ್ಡ ಕಾರುಗಳ ಮೇಲಿನ ಜಿ.ಎಸ್.ಟಿ. ದರವು 40% ಆಗಿದೆ. ಅಂದರೆ 1500 ಸಿ.ಸಿ. ಮೀರಿದ ಅಥವಾ 4000ಎಂ.ಎಂ. ಮೀರಿದ ಉದ್ದದ ವಾಹನಗಳು 40%. ಇದಲ್ಲದೆ, ಯುಟಿಲಿಟಿ ವಾಹನಗಳ ವರ್ಗದಲ್ಲಿ, ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳು (ಎಸ್.ಯು.ವಿ.), ಮಲ್ಟಿ ಯುಟಿಲಿಟಿ ವಾಹನಗಳು (ಎಂ.ಯು.ವಿ.), ಮಲ್ಟಿ-ಪರ್ಪಸ್ ವೆಹಿಕಲ್ಸ್ (ಎಂ.ಪಿ.ವಿ.) ಅಥವಾ ಕ್ರಾಸ್-ಓವರ್ ಯುಟಿಲಿಟಿ ವೆಹಿಕಲ್ಸ್ (ಎಕ್ಸ್.ಯು.ವಿ.) ಸೇರಿದಂತೆ ಅವು ಯಾವುದೇ ಹೆಸರಿನಿಂದ ಕರೆಯಲ್ಪಟ್ಟರೂ, 1500 ಸಿ.ಸಿ. ಮೀರಿದ ಎಂಜಿನ್ ಸಾಮರ್ಥ್ಯ, 4000 ಎಂ.ಎಂ. ಮೀರಿದ ಉದ್ದ ಮತ್ತು 170 ಎಂ.ಎಂ. ಮತ್ತು ಅದಕ್ಕಿಂತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಮೋಟಾರು ವಾಹನಗಳಿಗೆ  ಯಾವುದೇ ಸೆಸ್ ಇಲ್ಲದೆ 40% ಜಿ.ಎಸ್.ಟಿ. ದರವನ್ನು ವಿಧಿಸಲಾಗುತ್ತದೆ.

28. ತ್ರಿ-ಚಕ್ರ ವಾಹನಗಳ ಮೇಲಿನ ಜಿ.ಎಸ್.ಟಿ. ದರ ಎಷ್ಟು?

ಎಚ್.ಎಸ್.ಎನ್. 8703 ಅಡಿಯಲ್ಲಿ ವರ್ಗೀಕರಿಸಲಾದ ತ್ರಿಚಕ್ರ ವಾಹನಗಳ ಮೇಲಿನ ಜಿ.ಎಸ್.ಟಿ. ದರವು 18% ಆಗಿದೆ. ಇದನ್ನು ಮೊದಲಿದ್ದ 28% ನಿಂದ ಕಡಿಮೆ ಮಾಡಲಾಗಿದೆ.

29. ಬಸ್‌ಗಳು ಮತ್ತು ಬಸ್‌ಗಳಂತಹ ಚಾಲಕ ಸೇರಿದಂತೆ 10 ಅಥವಾ ಹೆಚ್ಚಿನ ಜನರನ್ನು ಸಾಗಿಸಲು ಉದ್ದೇಶಿಸಲಾದ ಇತರ ವಾಹನಗಳ ಮೇಲಿನ ಜಿ.ಎಸ್.ಟಿ. ದರ ಎಷ್ಟು?

ಚಾಲಕ ಸೇರಿದಂತೆ ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಮತ್ತು ಎಚ್.ಎಸ್.ಎನ್. 8702 ಅಡಿಯಲ್ಲಿ ವರ್ಗೀಕರಿಸಲಾದ ಎಲ್ಲಾ ಮೋಟಾರು ವಾಹನಗಳು 18% ಜಿ.ಎಸ್.ಟಿ. ದರವನ್ನು ಒಳಗೊಂಡಿರುತ್ತವೆ. ಇದನ್ನು ಮೊದಲಿದ್ದ 28% ರಿಂದ ಕಡಿಮೆ ಮಾಡಲಾಗಿದೆ.

30. ಆಂಬ್ಯುಲೆನ್ಸ್‌ಗಳಾಗಿ ಸರಬರಾಜು ಮಾಡಲಾದ ವಾಹನಗಳ ಮೇಲಿನ ಜಿ.ಎಸ್.ಟಿ. ದರ ಎಷ್ಟು?

ಆಂಬ್ಯುಲೆನ್ಸ್‌ಗಳಾಗಿ ರೂಪುಗೊಳಿಸಲಾದ ಮತ್ತು ಕಾರ್ಖಾನೆಯಿಂದ ಕ್ಲಿಯರೆನ್ಸ್ ಸಮಯದಲ್ಲಿ ಆಂಬ್ಯುಲೆನ್ಸ್‌ಗೆ ಅಗತ್ಯವಿರುವ ಎಲ್ಲಾ ಫಿಟ್‌ಮೆಂಟ್‌ಗಳು, ಪೀಠೋಪಕರಣಗಳು ಮತ್ತು ಪರಿಕರಗಳೊಂದಿಗೆ ಸರಿಯಾಗಿ ಅಳವಡಿಸಲಾದ ಮೋಟಾರು ವಾಹನಗಳು 18% ಜಿ.ಎಸ್.ಟಿ. ದರವನ್ನು ಒಳಗೊಂಡಿರುತ್ತವೆ. ಇದನ್ನು 28% ರಿಂದ ಕಡಿಮೆ ಮಾಡಲಾಗಿದೆ.

31. ಲಾರಿಗಳು ಮತ್ತು ಟ್ರಕ್‌ಗಳಂತಹ ಸರಕು ಸಾಗಣೆ ವಾಹನಗಳ ಮೇಲಿನ ಜಿ.ಎಸ್.ಟಿ.  ದರ ಎಷ್ಟು?

ಎಚ್.ಎಸ್.ಎನ್. 8704 ಅಡಿಯಲ್ಲಿ ವರ್ಗೀಕರಿಸಲಾದ ಲಾರಿಗಳು ಮತ್ತು ಟ್ರಕ್‌ಗಳಂತಹ ಸರಕುಗಳ ಸಾಗಣೆಗಾಗಿ ವಿನ್ಯಾಸಗೊಳಿಸಲಾದ ಮೋಟಾರು ವಾಹನಗಳು 18% ಜಿ.ಎಸ್.ಟಿ. ದರವನ್ನು ಒಳಗೊಂಡಿರುತ್ತವೆ. ಇದನ್ನು 28% ರಿಂದ ಕಡಿಮೆ ಮಾಡಲಾಗಿದೆ.

32. ಸೆಮಿ-ಟ್ರೇಲರ್‌ಗಳು ಮತ್ತು ಟ್ರಾಕ್ಟರ್‌ಗಳ ಮೇಲಿನ ಜಿ.ಎಸ್.ಟಿ.  ದರ ಎಷ್ಟು?

1800 ಸಿ.ಸಿ. ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಸೆಮಿ-ಟ್ರೇಲರ್‌ಗಳಿಗೆ ರಸ್ತೆ ಟ್ರಾಕ್ಟರ್‌ಗಳನ್ನು ಹೊರತುಪಡಿಸಿ ಟ್ರ್ಯಾಕ್ಟರ್‌ಗಳು 5% ಜಿ.ಎಸ್.ಟಿ. ದರವನ್ನು ಒಳಗೊಂಡಿರುತ್ತವೆ. ಆದಾಗ್ಯೂ, 1800 ಸಿ.ಸಿ. ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವಿರುವ ಸೆಮಿ-ಟ್ರೇಲರ್‌ಗಳ  ರಸ್ತೆ ಟ್ರಾಕ್ಟರ್‌ಗಳು 18% ಜಿ.ಎಸ್.ಟಿ. ದರವನ್ನು ಒಳಗೊಂಡಿರುತ್ತವೆ. ಅದನ್ನು 28% ರಿಂದ ಇಳಿಸಲಾಗಿದೆ.

33. ಮೋಟಾರ್ ಸೈಕಲ್‌ಗಳ ಮೇಲಿನ ಜಿ.ಎಸ್‌.ಟಿ ದರ ಎಷ್ಟು?

350 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯದ ಮೋಟಾರ್ ಸೈಕಲ್‌ಗಳಿಗೆ 18% ಜಿ.ಎಸ್‌.ಟಿ ದರ ಮತ್ತು 350 ಸಿಸಿ ಮೀರಿದ ಎಂಜಿನ್ ಸಾಮರ್ಥ್ಯದ ಮೋಟಾರ್ ಸೈಕಲ್‌ಗಳಿಗೆ 40% ಜಿ.ಎಸ್‌.ಟಿ ದರ ವಿಧಿಸಲಾಗುತ್ತದೆ.

34. 350 ಸಿಸಿ ವರೆಗಿನ ಮೋಟಾರ್ ಸೈಕಲ್‌ಗಳಿಗೆ ಜಿ.ಎಸ್‌.ಟಿ ದರ 18%? ಇದರಲ್ಲಿ 350 ಸಿಸಿ ಮೋಟಾರ್ ಸೈಕಲ್‌ಗಳು ಸೇರಿವೆಯೇ?

40% ದರವು 350 ಸಿಸಿ ಮೀರಿದ ಮೋಟಾರ್ ಸೈಕಲ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ 18% ದರವು 350 ಸಿಸಿ ಅಥವಾ 350 ಸಿಸಿಗಿಂತ ಕಡಿಮೆ ಮೋಟಾರ್ ಸೈಕಲ್‌ಗಳಿಗೂ ಅನ್ವಯಿಸುತ್ತದೆ.

35. ಪ್ರಸ್ತುತ ಮಧ್ಯಮ ಗಾತ್ರದ ಮತ್ತು ದೊಡ್ಡ ಕಾರುಗಳು 28% ಜಿ.ಎಸ್‌.ಟಿ ಮತ್ತು ಪರಿಹಾರ ಸೆಸ್ ಅನ್ನು 17-22% ವರೆಗೆ ಆಕರ್ಷಿಸುತ್ತವೆ ಮತ್ತು ಒಟ್ಟಾರೆ ತೆರಿಗೆ ವ್ಯಾಪ್ತಿ 45-50% ವರೆಗೆ ಇರುತ್ತದೆ. ಹೊಸ ದರ ಎಷ್ಟಿರುತ್ತದೆ?

ಮಧ್ಯಮ ಗಾತ್ರದ ಮತ್ತು ದೊಡ್ಡ ಕಾರುಗಳ ಮೇಲಿನ ಹೊಸ ಜಿ.ಎಸ್‌.ಟಿ ದರವು ಯಾವುದೇ ಪರಿಹಾರ ಸೆಸ್ ಇಲ್ಲದೆ 40% ಆಗಿರುತ್ತದೆ.

36. ಸೈಕಲ್‌ಗಳು ಮತ್ತು ಬಿಡಿಭಾಗಗಳ ಮೇಲಿನ ಜಿ.ಎಸ್‌.ಟಿ ದರವನ್ನು ಕಡಿಮೆ ಮಾಡಲಾಗಿದೆಯೇ?

ಸೈಕಲ್‌ಗಳು ಮತ್ತು ಅದರ ಬಿಡಿಭಾಗಗಳ ಮೇಲಿನ ಜಿ.ಎಸ್‌.ಟಿ ದರವನ್ನು 12% ರಿಂದ 5% ಕ್ಕೆ ಇಳಿಸಲಾಗಿದೆ.

37. ಸಣ್ಣ ಕೃಷಿ ಟ್ರಾಕ್ಟರುಗಳಿಗೆ  ಜಿ.ಎಸ್‌.ಟಿಯಿಂದ ಏಕೆ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿಲ್ಲ?

ದೇಶೀಯ ಉತ್ಪಾದಕರನ್ನು ಪ್ರೋತ್ಸಾಹಿಸುತ್ತಲೇ ರೈತರಿಗೆ ಪರಿಹಾರ ನೀಡುವುದು ಇದರ ಉದ್ದೇಶವಾಗಿದೆ. ಸಣ್ಣ ಟ್ರ್ಯಾಕ್ಟರ್‌ಗಳಿಗೆ ಸಂಪೂರ್ಣವಾಗಿ ವಿನಾಯಿತಿ ನೀಡುವುದು ಪ್ರತಿಕೂಲ ಪರಿಣಾಮ ಬೀರುತ್ತದೆ. ಯಾವುದೇ ಸರಕುಗಳ ಮೇಲಿನ ತೆರಿಗೆ ದರ ಶೂನ್ಯವಾಗಿದ್ದಾಗ, ಪೂರೈಕೆದಾರರು ಸರಕುಗಳ ತಯಾರಿಕೆಯಲ್ಲಿ ಬಳಸುವ ಇನ್‌ಪುಟ್‌ಗಳ ಮೇಲೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐ.ಟಿ.ಸಿ) ಪಡೆಯಲು ಸಾಧ್ಯವಿಲ್ಲ ಮತ್ತು ಅದನ್ನು ಹಿಮ್ಮುಖವಾಗಿಸಬೇಕಾಗುತ್ತದೆ. ಇದರರ್ಥ ಉತ್ಪಾದಕರು ವೆಚ್ಚವನ್ನು ಹೀರಿಕೊಳ್ಳಬೇಕಾಗುತ್ತದೆ, ಅದು ಅಂತಿಮವಾಗಿ ಖರೀದಿದಾರರಿಗೆ ವರ್ಗಾಯಿಸಲ್ಪಡುತ್ತದೆ.

38. 40% ದರವನ್ನು 'ವಿಶೇಷ ದರ' ಎಂದು ಏಕೆ ಕರೆಯಲಾಗುತ್ತದೆ? ಸರಕುಗಳನ್ನು ವಿಶೇಷ ದರಕ್ಕೆ ಒಳಪಡಿಸಲು ಆಧಾರವೇನು?

ವಿಶೇಷ ದರವು ಕೆಲವು ಆಯ್ದ ಸರಕುಗಳ ಮೇಲೆ ಮಾತ್ರ ಅನ್ವಯಿಸುತ್ತದೆ, ಇದು ಪ್ರಧಾನವಾಗಿ ಸಮಾಜಕ್ಕೆ ಹಾನಿಕಾರಕವೆಂದು ಭಾವಿಸಲಾದ ’ಪಾಪ ಸರಕುಗಳ” ಅಥವಾ “ಹಾನಿ ಮಾಡುವ ಸರಕುಗಳು”  ಮತ್ತು ಕೆಲವು ಐಷಾರಾಮಿ ಸರಕುಗಳ ಮೇಲೆ ವಿಧಿಸುವ ದರವಾಗಿದೆ,  ಆದ್ದರಿಂದ ಇದು ವಿಶೇಷ ದರವಾಗಿದೆ. ಈ ಸರಕುಗಳಲ್ಲಿ ಹೆಚ್ಚಿನವು ಜಿ.ಎಸ್‌.ಟಿ ಜೊತೆಗೆ ಪರಿಹಾರ ಸೆಸ್ ಅನ್ನು ಆಕರ್ಷಿಸಿವೆ. ಪರಿಹಾರ ಸೆಸ್ ಲೆವಿಯನ್ನು ಕೊನೆಗೊಳಿಸಲು ನಿರ್ಧರಿಸಲಾಗಿರುವುದರಿಂದ, ಹೆಚ್ಚಿನ ಸರಕುಗಳ ಮೇಲಿನ ತೆರಿಗೆ ವ್ಯಾಪ್ತಿಯನ್ನು ಕಾಯ್ದುಕೊಳ್ಳಲು ಪರಿಹಾರ ಸೆಸ್ ದರವನ್ನು ಜಿ.ಎಸ್‌.ಟಿಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಇತರ ಸರಕುಗಳು ಮತ್ತು ಸೇವೆಗಳ ಮೇಲೆ, ಇವುಗಳು ಈಗಾಗಲೇ 28% ನ ಅತ್ಯಧಿಕ ಜಿ.ಎಸ್‌.ಟಿ ದರವನ್ನು ಆಕರ್ಷಿಸುತ್ತಿರುವುದರಿಂದ ವಿಶೇಷ ದರವನ್ನು ಅನ್ವಯಿಸಲಾಗಿದೆ.

39. ಮರದ ತಿರುಳಿನ ಮೇಲಿನ ತೆರಿಗೆ ದರಗಳಲ್ಲಿ ವ್ಯತ್ಯಾಸವಿರುವುದಕ್ಕೆ ಕಾರಣವೇನು?

ಮರದ ತಿರುಳನ್ನು ಕಾಗದ ಮತ್ತು ಜವಳಿ ತಯಾರಿಕೆಗೆ ಬಳಸಲಾಗುತ್ತದೆ. ಕಾಗದದ ಸರಪಳಿ ಮತ್ತು ಜವಳಿ ಸರಪಳಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತವೆ. ಜವಳಿಗಳಿಗೆ, ತೆರಿಗೆಯ ಈ ವಿಧಾನವು ಇತರ ಜವಳಿ ಸರಕುಗಳೊಂದಿಗೆ ಸಮಾನತೆಯನ್ನು ಕಾಯ್ದುಕೊಳ್ಳುವುದಾಗಿದೆ.

40. ಕಚ್ಚಾ ಹತ್ತಿಯ ಮೇಲೆ ಜಿ.ಎಸ್.ಟಿ.ಯನ್ನು  ಏಕೆ ತೆಗೆದುಹಾಕಲಾಗಿಲ್ಲ?

ಪ್ರಸ್ತುತ, ಹತ್ತಿಯು ಹಿಮ್ಮುಖ ಶುಲ್ಕದ ಆಧಾರದ ಮೇಲೆ ಜಿ.ಎಸ್.ಟಿ.ಯನ್ನು ಹೊಂದಿದೆ. ಇದರರ್ಥ ರೈತರು ಕಚ್ಚಾ ಹತ್ತಿಯನ್ನು ಪೂರೈಸುವಾಗ ಜಿ.ಎಸ್.ಟಿ.ಯನ್ನು ಪಾವತಿಸಬೇಕಾಗಿಲ್ಲ. ಜಿ.ಎಸ್.ಟಿ. ಯಲ್ಲಿ ಹತ್ತಿಗೆ ತೆರಿಗೆ ವಿಧಿಸಲು ಕಾರಣವೆಂದರೆ ಇನ್‌ಪುಟ್ ಕ್ರೆಡಿಟ್ ಸರಪಳಿಯಲ್ಲಿನ ವಿಭಜನೆಯನ್ನು ತಪ್ಪಿಸುವುದು ಮತ್ತು ಹತ್ತಿಯ ಮೇಲೆ ಪಾವತಿಸಿದ ಜಿ.ಎಸ್.ಟಿ. ಜವಳಿ ಉದ್ಯಮಕ್ಕೆ ಇನ್‌ಪುಟ್ ತೆರಿಗೆ ಕ್ರೆಡಿಟ್ ಆಗಿ ಲಭ್ಯವಿದೆ. ಇದು ಅಂತಿಮವಾಗಿ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ.

41. ಜವಳಿ ವಲಯಕ್ಕೆ, ರಾಸಾಯನಿಕ ಬಣ್ಣಗಳು, ಪ್ಲಾಸ್ಟಿಕ್‌ಗಳು, ಲೋಹಗಳು, ಲೋಹೀಕರಿಸಿದ ನೂಲಿನಲ್ಲಿ ಬಳಸುವ ರಬ್ಬರ್, ಜಿಪ್ಪರ್‌ಗಳು, ಎಲಾಸ್ಟಿಕ್‌ಗಳು, ರಬ್ಬರೀಕೃತ ನೂಲು, ಸ್ಥಿತಿಸ್ಥಾಪಕತ್ವದ  ಹೊದಿಕೆಯ ನೂಲು, ಅಲಂಕಾರಗಳು ಇತ್ಯಾದಿಗಳ ಮೇಲಿನ ದರವನ್ನು ಏಕೆ ಕಡಿಮೆ ಮಾಡಲಾಗಿಲ್ಲ?

ದರ ತರ್ಕಬದ್ಧಗೊಳಿಸುವ ಕ್ರಮದ ಉದ್ದೇಶವು ಮಾನವ ನಿರ್ಮಿತ ಮೌಲ್ಯ ಸರಪಳಿಯಲ್ಲಿ ವಿಲೋಮವನ್ನು ಸರಿಪಡಿಸುವುದು. ಇದು ಫೈಬರ್ ತಟಸ್ಥ ನೀತಿಗೆ ಅನುಗುಣವಾಗಿದೆ. ಆದಾಗ್ಯೂ, ಪಟ್ಟಿ ಮಾಡಲಾದ ವಸ್ತುಗಳು ಬಹು ಬಳಕೆಯ ಸರಕುಗಳಾಗಿವೆ.

ಸರಕುಗಳ ಮೇಲಿನ ಜಿ.ಎಸ್.ಟಿ.ಯನ್ನು ಕಡಿಮೆ ಮಾಡಲು ಅಂತಿಮ ಬಳಕೆಯ ಆಧಾರಿತ ಕಾರ್ಯವಿಧಾನದ ಅಗತ್ಯವಿರುತ್ತದೆ, ಇದು ಅಂತಿಮ ಬಳಕೆಯ ಆಧಾರಿತ ವಿನಾಯಿತಿಗಳಿಂದ ದೂರ ಸರಿಯುವ ಪ್ರಸ್ತುತ ನೀತಿಗೆ ವಿರುದ್ಧವಾಗಿದೆ.

42. ಜಿಯೋಟೆಕ್ಸ್‌ಟೈಲ್ಸ್ ಮತ್ತು ಕೃಷಿ-ಜವಳಿ ಮುಂತಾದ ತಾಂತ್ರಿಕ ಜವಳಿಗಳಲ್ಲಿ ಪಾಲಿಥಿಲೀನ್ ಮತ್ತು ಪಾಲಿಪ್ರೊಪಿಲೀನ್‌ನಂತಹ ಪ್ಲಾಸ್ಟಿಕ್ ಅಂಶಗಳನ್ನು/ಘಟಕಗಳನ್ನು ಬಳಸುವುದರಿಂದ ಅವು ಆಳವಾದ ವಿಲೋಮತೆಯನ್ನು ಎದುರಿಸುತ್ತವೆಯೇ?

ಭಾರತ ಅಳವಡಿಸಿಕೊಂಡ ವಿಶ್ವ ಕಸ್ಟಮ್ಸ್ ಸಂಸ್ಥೆಯ ಹಾರ್ಮೋನೈಸ್ಡ್ ಸಿಸ್ಟಮ್ ಆಫ್ ವರ್ಗೀಕರಣ/ನಾಮಕರಣದ ಕಾರಣದಿಂದಾಗಿ ಜಿಯೋಟೆಕ್ಸ್‌ಟೈಲ್ಸ್ ಮತ್ತು ಕೃಷಿ-ಜವಳಿ ಮುಂತಾದ ತಾಂತ್ರಿಕ ಜವಳಿಗಳನ್ನು ಜವಳಿ ಎಂದು ವರ್ಗೀಕರಿಸಲಾಗಿದೆ ಮತ್ತು ಪ್ಲಾಸ್ಟಿಕ್ ಅಲ್ಲ. ವಿಲೋಮವು ಆಳವಾಗಬಹುದು, ಆದರೆ ಜಿ.ಎಸ್‌.ಟಿ ಅಡಿಯಲ್ಲಿ, ವಿಲೋಮ ಸುಂಕದ ಕಾರಣದಿಂದಾಗಿ ಸಂಗ್ರಹವಾದ ಕ್ರೆಡಿಟ್‌ನ ಮರುಪಾವತಿ ಲಭ್ಯವಿದೆ. ಆದ್ದರಿಂದ, ಸಂಗ್ರಹವಾದ ಇನ್‌ಪುಟ್ ತೆರಿಗೆ ಕ್ರೆಡಿಟ್ ಮರುಪಾವತಿಯ ಮೂಲಕ ತಟಸ್ಥಗೊಳ್ಳುತ್ತದೆ. ಪ್ರಕ್ರಿಯೆಯ ಸುಧಾರಣೆಯು ಮರುಪಾವತಿಗಳ ತ್ವರಿತ ಅನುಮೋದನೆಯನ್ನು ಖಚಿತಪಡಿಸುತ್ತದೆ.

43. ಪ್ಲಾಸ್ಟಿಕ್ ಅಥವಾ ರಬ್ಬರ್‌ನಿಂದ ತಯಾರಿಸಿದ ಇತರ ಜವಳಿ ಉತ್ಪನ್ನಗಳ ಮರುಪಾವತಿಗೆ ಯಾವುದೇ ನಿರ್ಬಂಧವಿಲ್ಲದಿದ್ದರೂ, ಲೋಹೀಕರಿಸಿದ ಪ್ಲಾಸ್ಟಿಕ್ ಫಿಲ್ಮ್‌ನಿಂದ ಮಾಡಿದ ಅನುಕರಣೆ/ ಕೃತಕ ಜರಿಯ ಮೇಲಿನ ವಿಲೋಮ ಸುಂಕ ರಚನೆಯ ಮರುಪಾವತಿಯನ್ನು ಏಕೆ ನಿರ್ಬಂಧಿಸಲಾಗಿದೆ?

ಅನುಕರಣೆ/ಕೃತಕ ಜರಿಯಲ್ಲಿ ಪ್ಲಾಸ್ಟಿಕ್/ಪಾಲಿಯೆಸ್ಟರ್ ಫಿಲ್ಮ್‌ನ ಮೇಲಿನ ಐ.ಟಿ.ಸಿಯನ್ನು ನಿರ್ಬಂಧಿಸುವ ನಿರ್ಧಾರವನ್ನು 52ನೇ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಈ ಜಿ.ಎಸ್‌.ಟಿ ದರ ತರ್ಕಬದ್ಧಗೊಳಿಸುವ ಕ್ರಮದ  ಗಮನವು ಜಿ.ಎಸ್‌.ಟಿ ದರಗಳನ್ನು ಸುಗಮಗೊಳಿಸುವುದಾಗಿದೆ.

44. ಟಾಯ್ಲೆಟ್ ಸೋಪ್ ಬಾರ್‌ನ ಹೊಸ ಜಿ.ಎಸ್‌.ಟಿ ದರ ಯಾವುದು? ಬಾರ್‌ಗಳಲ್ಲಿ ದ್ರವ ಸೋಪ್ ಮತ್ತು ಬಾರ್ ಸೋಪಿನ ನಡುವೆ ವಿಭಜನೆ/ವ್ಯತ್ಯಾಸವನ್ನು ಏಕೆ ಇಡಲಾಗಿದೆ?

ಟಾಯ್ಲೆಟ್ ಸೋಪ್ ಬಾರ್ ಮೇಲಿನ ಹೊಸ ಜಿ.ಎಸ್‌.ಟಿ ದರ 5%. ಇದರಿಂದ ಕೆಳ ಮಧ್ಯಮ ವರ್ಗ ಮತ್ತು ಸಮಾಜದ ಬಡ ವರ್ಗಗಳ ಮಾಸಿಕ ವೆಚ್ಚವನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ.

45. ಫೇಸ್ ಪೌಡರ್ ಮತ್ತು ಶಾಂಪೂಗಳ ಮೇಲಿನ ಜಿ.ಎಸ್‌.ಟಿಯನ್ನು ಕಡಿಮೆ ಮಾಡಲು ಕಾರಣವೇನು? ಇದು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಐಷಾರಾಮಿ ಬ್ರ್ಯಾಂಡ್‌ಗಳಿಗೆ ಪ್ರಯೋಜನವನ್ನು ನೀಡುವುದಿಲ್ಲವೇ?

ಸರಕುಗಳು ಜನಸಂಖ್ಯೆಯ ಬಹುತೇಕ ಎಲ್ಲಾ ವಿಭಾಗಗಳಿಗೆ ದೈನಂದಿನ ಬಳಕೆಯ ವಸ್ತುಗಳಾಗಿವೆ. ಬಹುರಾಷ್ಟ್ರೀಯ ಕಂಪನಿಗಳು ಅಥವಾ ಐಷಾರಾಮಿ ಬ್ರ್ಯಾಂಡ್‌ಗಳು ಮಾರಾಟ ಮಾಡುವ ದುಬಾರಿ ಫೇಸ್ ಪೌಡರ್ ಮತ್ತು ಶಾಂಪೂಗಳು ಸಹ ಪ್ರಯೋಜನ ಪಡೆಯುತ್ತವೆಯಾದರೂ, ದರ ತರ್ಕಬದ್ಧಗೊಳಿಸುವ ಕ್ರಮದ ಉದ್ದೇಶವು ತೆರಿಗೆ ರಚನೆಯನ್ನು ಮತ್ತಷ್ಟು ಸರಳಗೊಳಿಸುವುದು. ಸೌಂದರ್ಯವರ್ಧಕಗಳ ಬ್ರ್ಯಾಂಡ್ ಅಥವಾ ಮೌಲ್ಯವನ್ನು ಆಧರಿಸಿ ತೆರಿಗೆಯನ್ನು ನಿರ್ವಹಿಸುವುದು ಆಡಳಿತಕ್ಕೆ ಸವಾಲುಗಳನ್ನು ಒಡ್ಡುವುದರ ಜೊತೆಗೆ ತೆರಿಗೆ ರಚನೆಯಲ್ಲಿ ಸಂಕೀರ್ಣತೆಯನ್ನು ಸೃಷ್ಟಿಸುತ್ತದೆ.

46. ಫೇಸ್ ಪೌಡರ್ ಮತ್ತು ಶೇವಿಂಗ್ ಕ್ರೀಮ್‌ನಂತಹ ಆಯ್ದ ವಸ್ತುಗಳ ಮೇಲೆ ಮಾತ್ರ ಜಿ.ಎಸ್‌.ಟಿಯನ್ನು ಏಕೆ ಕಡಿಮೆ ಮಾಡಲಾಗಿದೆ?

ಜನಸಂಖ್ಯೆಯ ಹೆಚ್ಚಿನ ವಿಭಾಗಗಳಿಗೆ ದೈನಂದಿನ ಬಳಕೆಯ ವಸ್ತುಗಳಾಗಿರುವ ಕೆಲವು ಸರಕುಗಳ ಮೇಲೆ ಮಾತ್ರ ಜಿ.ಎಸ್‌.ಟಿ ದರವನ್ನು 5% ಕ್ಕೆ ಇಳಿಸಲಾಗಿದೆ.

47. ದಂತ ಫ್ಲಾಸ್‌ನಂತಹ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮುಖಮಾರ್ಜನ/ ಮೌತ್‌ವಾಶ್‌ನ ಮೇಲೆ ಜಿ.ಎಸ್‌.ಟಿಯನ್ನು ಏಕೆ ಕಡಿಮೆ ಮಾಡಲಾಗಿಲ್ಲ?

ಮೂಲ ದಂತ ನೈರ್ಮಲ್ಯ ವಸ್ತುಗಳಾದ ಟೂತ್‌ಪೇಸ್ಟ್, ಟೂತ್ ಬ್ರಷ್ ಮತ್ತು ಡೆಂಟಲ್ ಫ್ಲಾಸ್ ಮೇಲಿನ ಜಿ.ಎಸ್‌.ಟಿ ದರವನ್ನು 5% ಕ್ಕೆ ಇಳಿಸಲು ಜಿ.ಎಸ್‌.ಟಿ ಕೌನ್ಸಿಲ್ ಶಿಫಾರಸು ಮಾಡಿದೆ.

48. ಕಲ್ಲಿದ್ದಲಿನ ಮೇಲಿನ ಜಿ.ಎಸ್‌.ಟಿ ದರವನ್ನು ಏಕೆ ಹೆಚ್ಚಿಸಲಾಗಿದೆ? ಇದು ವಿದ್ಯುತ್ ವೆಚ್ಚದ ಮೇಲೆ ಪರಿಣಾಮ ಬೀರುವುದಿಲ್ಲವೇ?

ದರ ತರ್ಕಬದ್ಧಗೊಳಿಸುವಿಕೆಗೆ ಮುಂಚಿತವಾಗಿ ಕಲ್ಲಿದ್ದಲು 5% ಜಿ.ಎಸ್‌.ಟಿ + ಟನ್ನಿಗೆ 400 ರೂ. ಪರಿಹಾರ ಸೆಸ್ ಅನ್ನು ಒಳಗೊಂಡಿತ್ತು. ಪರಿಹಾರ ಸೆಸ್ ಅನ್ನು ಕೊನೆಗೊಳಿಸಲು ಕೌನ್ಸಿಲ್ ಶಿಫಾರಸು ಮಾಡಿದೆ ಮತ್ತು ಆದ್ದರಿಂದ ದರವನ್ನು ಜಿ.ಎಸ್‌.ಟಿಯೊಂದಿಗೆ ವಿಲೀನಗೊಳಿಸಲಾಗಿದೆ. ಯಾವುದೇ ಹೆಚ್ಚುವರಿ ಹೊರೆ ಇಲ್ಲ.

49. ಟೆಂಡು ಎಲೆಗಳ ಮೇಲಿನ ಜಿ.ಎಸ್‌.ಟಿ ದರವನ್ನು ಕಡಿಮೆ ಮಾಡಲಾಗಿದೆಯೇ? ದರವನ್ನು ಏಕೆ ಕಡಿಮೆ ಮಾಡಲಾಗಿದೆ?

ತಂಬಾಕು ಎಲೆಗಳ ಮೇಲೆ  ಈಗಾಗಲೇ ಜಿ.ಎಸ್.ಟಿ. 5% ರಷ್ಟಿರುವುದರಿಂದ ಟೆಂಡು ಎಲೆಗಳ ಮೇಲಿನ ಜಿ.ಎಸ್‌.ಟಿ ದರವನ್ನು 5% ಕ್ಕೆ ಇಳಿಸಲಾಗಿದೆ. ಟೆಂಡು ಎಲೆಗಳು ಸಹ ಕಿರು ಅರಣ್ಯ ಉತ್ಪನ್ನಗಳಾಗಿವೆ.

50. ನವೀಕರಿಸಬಹುದಾದ ಇಂಧನ ಉಪಕರಣಗಳು/ಸಾಧನಗಳ ಮೇಲಿನ ಜಿ.ಎಸ್‌.ಟಿ ದರ ಎಷ್ಟು?

12% ರಷ್ಟಿದ್ದ ನವೀಕರಿಸಬಹುದಾದ ಇಂಧನ ಉಪಕರಣಗಳು/ಸಾಧನಗಳ ಮೇಲಿನ ಜಿ.ಎಸ್‌.ಟಿ ದರವನ್ನು 5% ಕ್ಕೆ ಇಳಿಸಲಾಗಿದೆ.

51. ನವೀಕರಿಸಬಹುದಾದ ಇಂಧನ ಉಪಕರಣಗಳು/ಸಾಧನಗಳ ಮೇಲಿನ ಜಿ.ಎಸ್.ಟಿ. ದರವನ್ನು ಏಕೆ ಕಡಿಮೆ ಮಾಡಲಾಗಿದೆ? ಇದು ತಲೆಕೆಳಗಾದ/ವಿಲೋಮ ಸುಂಕ ವ್ಯವಸ್ಥೆಗೆ  ಕಾರಣವಾಗುವುದಿಲ್ಲವೇ?

ಸರಕುಗಳು ಈಗಾಗಲೇ ತಲೆಕೆಳಗಾದ ಸುಂಕ ವ್ಯವಸ್ಥೆಯನ್ನು ಎದುರಿಸುತ್ತಿವೆ. ಜಿ.ಎಸ್.ಟಿ. ದರವನ್ನು 5% ಕ್ಕೆ ಇಳಿಸುವುದರಿಂದ ವಿಲೋಮ ಪರಿಣಾಮ ಹೆಚ್ಚಾಗುತ್ತದೆ, ತಲೆಕೆಳಗಾದ ಸುಂಕ ವ್ಯವಸ್ಥೆಯಿಂದ ಉಂಟಾಗುವ ಮರುಪಾವತಿಗೆ ಕಾರ್ಯವಿಧಾನ ಲಭ್ಯವಿದೆ. ಇದರ ಜೊತೆಗೆ, ಪ್ರಕ್ರಿಯೆಯ ಸುಧಾರಣೆಗಳು ತ್ವರಿತ ಮರುಪಾವತಿಯನ್ನು ಖಚಿತಪಡಿಸುತ್ತವೆ. ನವೀಕರಿಸಬಹುದಾದ ಇಂಧನ ಸರಕುಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

52. ಅಮೃತಶಿಲೆ ಮತ್ತು ಟ್ರಾವರ್ಟೈನ್ ಬ್ಲಾಕ್‌ಗಳು ಮತ್ತು ಗ್ರಾನೈಟ್ ಬ್ಲಾಕ್‌ಗಳ ಮೇಲಿನ ಜಿ.ಎಸ್.ಟಿ. ದರವನ್ನು ಏಕೆ ಕಡಿಮೆ ಮಾಡಲಾಗಿದೆ?

ಹಿಂದೆ, ಅಮೃತಶಿಲೆ ಮತ್ತು ಟ್ರಾವರ್ಟೈನ್ ಬ್ಲಾಕ್‌ಗಳು ಮತ್ತು ಗ್ರಾನೈಟ್ ಬ್ಲಾಕ್‌ಗಳು 12% ಜಿ.ಎಸ್.ಟಿ. ದರವನ್ನು ಹೊಂದಿದ್ದವು. ಇವು ಮಧ್ಯಂತರ ಸರಕುಗಳ ಸ್ವರೂಪದಲ್ಲಿವೆ ಮತ್ತು ಸರಕುಗಳ ಮೇಲಿನ ಜಿ.ಎಸ್.ಟಿ. ದರವನ್ನು 5% ಕ್ಕೆ ಇಳಿಸಲಾಗಿದೆ.

53. ದೃಷ್ಟಿ ಕನ್ನಡಕ ಮತ್ತು ಕನ್ನಡಕಗಳ ಮೇಲಿನ ಜಿ.ಎಸ್‌.ಟಿ ದರ ಎಷ್ಟು (ಶೀರ್ಷಿಕೆ 9004)?

ದೃಷ್ಟಿ ದೋಷ ಸರಿಪಡಿಸುವ ಕನ್ನಡಕ ಮತ್ತು ಕನ್ನಡಕಗಳು ಈಗ 5% ಜಿ.ಎಸ್‌.ಟಿ ಅಡಿಯಲ್ಲಿವೆ. (ಕ್ರಮವಾಗಿ 12% ಮತ್ತು 18% ರಿಂದ ಕಡಿಮೆಯಾಗಿದೆ), ಆದರೆ ದೃಷ್ಟಿ ಸರಿಪಡಿಸುವುದಕ್ಕೆ ಬಳಸದ  ಕನ್ನಡಕ ಮತ್ತು ಇತರ ಕನ್ನಡಕಗಳು 18% ಜಿ.ಎಸ್‌.ಟಿ ದರವನ್ನು ಹೊಂದಿವೆ.

54. ಬ್ಯಾಟರಿಗಳ ಮೇಲಿನ ಜಿ.ಎಸ್‌.ಟಿ ದರ ಎಷ್ಟು (ಶೀರ್ಷಿಕೆ 8507)?

ಹಿಂದೆ, ಲಿಥಿಯಂ-ಐಯಾನ್ ಬ್ಯಾಟರಿಗಳು 18% ಜಿ.ಎಸ್‌.ಟಿಯನ್ನು ಹೊಂದಿದ್ದವು ಮತ್ತು ಇತರ ಬ್ಯಾಟರಿಗಳು 28% ಜಿ.ಎಸ್‌.ಟಿಯನ್ನು ಹೊಂದಿದ್ದವು. ಈಗ, 8507 ಶೀರ್ಷಿಕೆಯಡಿಯಲ್ಲಿರುವ ಎಲ್ಲಾ ಬ್ಯಾಟರಿಗಳಿಗೆ 18% ಜಿ.ಎಸ್‌.ಟಿಯಲ್ಲಿ ಏಕರೂಪವಾಗಿ ತೆರಿಗೆ ವಿಧಿಸಲಾಗುತ್ತದೆ.

55. ಹವಾನಿಯಂತ್ರಣಗಳು, ಟಿವಿಗಳು, ಮಾನಿಟರ್‌ಗಳು ಮತ್ತು ಡಿಶ್‌ವಾಶರ್‌ಗಳ ಮೇಲಿನ ಜಿ.ಎಸ್‌.ಟಿ ದರ ಎಷ್ಟು?

ಹವಾನಿಯಂತ್ರಣಗಳು ಮತ್ತು ಡಿಶ್‌ವಾಶರ್‌ಗಳ ಮೇಲಿನ ಜಿ.ಎಸ್‌.ಟಿಯನ್ನು 28% ರಿಂದ 18% ಕ್ಕೆ ಇಳಿಸಲಾಗಿದೆ. ಹಿಂದಿನ 32 ಇಂಚುಗಳವರೆಗಿನ ಟಿವಿಗಳು ಮತ್ತು ಮಾನಿಟರ್‌ಗಳು 18% ಜಿ.ಎಸ್‌.ಟಿಯನ್ನು ಹೊಂದಿದ್ದವು ಮತ್ತು ದೊಡ್ಡ ಟಿವಿಗಳು ಮತ್ತು ಮಾನಿಟರ್‌ಗಳು 28% ಜಿ.ಎಸ್‌.ಟಿಯನ್ನು ಹೊಂದಿದ್ದವು. ಈಗ ಎಲ್ಲಾ ಟಿವಿಗಳು ಮತ್ತು ಮಾನಿಟರ್‌ಗಳಿಗೆ ಏಕರೂಪವಾಗಿ 18% ತೆರಿಗೆ ವಿಧಿಸಲಾಗುತ್ತದೆ.

56. ಜೀವ ವಿಮೆಯ ಮೇಲೆ ಶಿಫಾರಸು ಮಾಡಲಾದ ಜಿ.ಎಸ್.ಟಿ. ವಿನಾಯಿತಿಯ ವ್ಯಾಪ್ತಿಯಲ್ಲಿ ಯಾವ ಪಾಲಿಸಿಗಳು ಒಳಗೊಳ್ಳುತ್ತವೆ?

ಜೀವ ವಿಮೆಯ ಮೇಲೆ ಶಿಫಾರಸು ಮಾಡಲಾದ ವಿನಾಯಿತಿಯ ಅಡಿಯಲ್ಲಿ ಬರುವ ಪಾಲಿಸಿಗಳು ಅವಧಿ, ಯುಲಿಪ್, ಮತ್ತು ದತ್ತಿ ಯೋಜನೆಗಳು ಹಾಗು ಅವುಗಳ ಮರುವಿಮಾ ಸೇವೆಗಳನ್ನು ಒಳಗೊಂಡಂತೆ ಎಲ್ಲಾ ವೈಯಕ್ತಿಕ ಜೀವ ವಿಮಾ ಪಾಲಿಸಿಗಳಾಗಿವೆ.

57. ಆರೋಗ್ಯ ವಿಮೆಯ ಮೇಲೆ ಶಿಫಾರಸು ಮಾಡಲಾದ ಜಿ.ಎಸ್.ಟಿ. ವಿನಾಯಿತಿಯ ವ್ಯಾಪ್ತಿಯಲ್ಲಿ ಯಾವ ಪಾಲಿಸಿಗಳು ಒಳಗೊಳ್ಳುತ್ತವೆ?

ಆರೋಗ್ಯ ವಿಮೆಯ ಮೇಲೆ ಶಿಫಾರಸು ಮಾಡಲಾದ ವಿನಾಯಿತಿಯ ಅಡಿಯಲ್ಲಿ ಬರುವ ಪಾಲಿಸಿಗಳು ಕುಟುಂಬ ಫ್ಲೋಟರ್ ಯೋಜನೆಗಳು ಮತ್ತು ಹಿರಿಯ ನಾಗರಿಕ ಪಾಲಿಸಿಗಳು ಮತ್ತು ಅವುಗಳ ಮರುವಿಮಾ ಸೇವೆಗಳನ್ನು ಒಳಗೊಂಡಂತೆ ಎಲ್ಲಾ ವೈಯಕ್ತಿಕ ಆರೋಗ್ಯ ವಿಮಾ ಪಾಲಿಸಿಗಳಾಗಿವೆ.

58. ಪ್ರಯಾಣಿಕರ ಸಾರಿಗೆ ಸೇವೆಗಳಿಗೆ 18% ತೆರಿಗೆ ವಿಧಿಸಲಾಗುತ್ತದೆಯೇ?

ಇಲ್ಲ, ಪ್ರಯಾಣಿಕರ ಸಾರಿಗೆ ಸೇವೆಗಳಿಗೆ ಐ.ಟಿ.ಸಿ. ಇಲ್ಲದೆ 5% ಮೆರಿಟ್ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆದಾಗ್ಯೂ, ಸೇವಾ ಪೂರೈಕೆದಾರರು 18% ಪ್ರಮಾಣಿತ ದರವನ್ನು ವಿಧಿಸುವ ಆಯ್ಕೆಯನ್ನು ಹೊಂದಿರುತ್ತಾರೆ, ಅದು ಅವರಿಗೆ ಪೂರ್ಣ ಸಿ.ಟಿ.ಸಿ. ಪಡೆಯಲು ಅನುವು ಮಾಡಿಕೊಡುತ್ತದೆ.

  1. ವಿಮಾನದ ಮೂಲಕ ಪ್ರಯಾಣಿಕರ ಸಾಗಣೆಗೆ ಎರಡು ದರಗಳ ಒಂದೇ ಆಯ್ಕೆ ಲಭ್ಯವಿದೆಯೇ?

ವಿಮಾನದ ಮೂಲಕ ಪ್ರಯಾಣಿಕರ ಸಾಗಣೆಗೆ ಅಂತಹ ಯಾವುದೇ ಆಯ್ಕೆ ಲಭ್ಯವಿಲ್ಲ, ಅಂದರೆ ಪ್ರಯಾಣವು ಆರ್ಥಿಕ ವರ್ಗದ ಮೂಲಕವಾಗಿದ್ದರೆ ಜಿ.ಎಸ್.ಟಿ. ದರ 5% ಇಲ್ಲದಿದ್ದರೆ ಜಿ.ಎಸ್.ಟಿ.  ದರ 18% ಆಗಿರುತ್ತದೆ.

60. ಜಿ.ಟಿ.ಎ. ಮೂಲಕ ಸರಕುಗಳ ಸಾಗಣೆಗೆ 18% ದರ ಅನ್ವಯಿಸುತ್ತದೆಯೇ?

ಜಿ.ಟಿ.ಎ. ಮೂಲಕ ಸರಕುಗಳ ಸಾಗಣೆಗೆ ಐ.ಟಿ.ಸಿ. ಇಲ್ಲದೆ 5% ಮೆರಿಟ್ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆದಾಗ್ಯೂ, ಜಿ.ಟಿ.ಎ. ಪೂರ್ಣ ಐ.ಟಿ.ಸಿ. ಯೊಂದಿಗೆ 18% ಪ್ರಮಾಣಿತ ದರದಲ್ಲಿ ಜಿ.ಎಸ್.ಟಿ. ವಿಧಿಸುವ ಆಯ್ಕೆಯನ್ನು ಹೊಂದಿರುತ್ತದೆ.

61. ಕಂಟೇನರ್ ರೈಲು ನಿರ್ವಾಹಕರ (ಸಿ.ಟಿ.ಒ.) ಮೂಲಕ ಕಂಟೇನರ್‌ಗಳಲ್ಲಿ ಸರಕುಗಳ ಸಾಗಣೆಗೆ 12% ತೆರಿಗೆ ವಿಧಿಸಲಾಗುತ್ತದೆಯೇ?

ಇಲ್ಲ, ಸಿ.ಟಿ.ಒ. ಮೂಲಕ ಕಂಟೇನರ್‌ನಲ್ಲಿ ಸರಕುಗಳ ಸಾಗಣೆ ಸೇವೆಗೆ ಐ.ಟಿ.ಸಿ. ಇಲ್ಲದೆ 5% ದರ ಅಥವಾ ಪೂರ್ಣ ಐ.ಟಿ.ಸಿ.  ಯೊಂದಿಗೆ 18% ದರವನ್ನು ವಿಧಿಸುವ ಆಯ್ಕೆಯನ್ನು ನೀಡಲಾಗುತ್ತದೆ.

  1. ಮಲ್ಟಿಮೋಡಲ್ ಟ್ರಾನ್ಸ್ಪೋರ್ಟರ್ನಿಂದ ಸರಕುಗಳ ಸಾಗಣೆಗೆ ಜಿ.ಎಸ್.ಟಿ. ದರ ಎಷ್ಟು?

ವಿಮಾನದ ಮೂಲಕ ಸರಕುಗಳ ಸಾಗಣೆ ಒಳಗೊಂಡಿರದಿದ್ದರೆ, ಬಹುಮೋಡಲ್ ಸರಕುಗಳ ಸಾಗಣೆಗೆ ನಿರ್ಬಂಧಿತ ಐ.ಟಿ.ಸಿ. ಜೊತೆಗೆ 5% ಜಿ.ಎಸ್.ಟಿ. ತೆರಿಗೆ ವಿಧಿಸಲಾಗುತ್ತದೆ. ಆದಾಗ್ಯೂ, ವಿಮಾನದ ಮೂಲಕ ಸರಕುಗಳ ಸಾಗಣೆ ಒಳಗೊಂಡಿದ್ದರೆ, ಜಿ.ಎಸ್.ಟಿ. ದರವು ಪೂರ್ಣ ಐ.ಟಿ.ಸಿ. ಜೊತೆಗೆ 18% ಆಗಿರುತ್ತದೆ.

63. ಈ ವಲಯದ ಪ್ರಾಮುಖ್ಯತೆಯನ್ನು ಪರಿಗಣಿಸಿ ಜಿ.ಟಿ.ಎ. ಸೇವೆಗಳನ್ನು ಜಿ.ಎಸ್.ಟಿ. ಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡುವುದಿಲ್ಲ ಏಕೆ?

ಸೇವೆಗೆ ವಿನಾಯಿತಿ ನೀಡಿದಾಗ ಸೇವಾ ಪೂರೈಕೆದಾರರು ಐ.ಟಿ.ಸಿ. ಪಡೆಯಲು ಸಾಧ್ಯವಿಲ್ಲ. ಇದು ಅವರ ವೆಚ್ಚಕ್ಕೆ ಸೇರುತ್ತದೆ ಮತ್ತು ಸೇವೆಯನ್ನು ದುಬಾರಿಯನ್ನಾಗಿ ಮಾಡುತ್ತದೆ. ಇದಲ್ಲದೆ, ಕೃಷಿ ಉತ್ಪನ್ನಗಳು, ಹಾಲು ಇತ್ಯಾದಿಗಳಂತಹ ಅಗತ್ಯ ವಸ್ತುಗಳ ಸಾಗಣೆಯಂತಹ (ವ್ಯಾಪಾರೋದ್ಯಮದಿಂದ ಗ್ರಾಹಕರಲ್ಲಿಗೆ-B2C) ಅಗತ್ಯವಿರುವಲ್ಲಿ ನಿರ್ದಿಷ್ಟ ವಿನಾಯಿತಿಗಳನ್ನು ಈಗಾಗಲೇ ಒದಗಿಸಲಾಗಿದೆ.

64. ಔಷಧೀಯ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಉದ್ಯೋಗ ಕಾರ್ಯದ ಮೂಲಕ ಸೇವೆಗಳ ಮೇಲೆ ಶಿಫಾರಸು ಮಾಡಲಾದ ಜಿ.ಎಸ್.ಟಿ. ದರ ಎಷ್ಟು?

ಸೇವೆಗಳು ಈಗ ಐ.ಟಿ.ಸಿ. ಜೊತೆಗೆ 5% ದರವನ್ನು ಆಕರ್ಷಿಸುತ್ತವೆ. ಇದು  ಮೊದಲು 12% ತೆರಿಗೆ ವ್ಯಾಪ್ತಿಯಲ್ಲಿತ್ತು.

65. ಅಧ್ಯಾಯ 41 ರ ಅಡಿಯಲ್ಲಿ ಬರುವ ಚರ್ಮ, ಮತ್ತು ಚರ್ಮದ ಉದ್ಯೋಗದ ಮೂಲಕ ಒದಗಿಸುವ ಸೇವೆಗಳ ಮೇಲೆ ಶಿಫಾರಸು ಮಾಡಲಾದ ಜಿ.ಎಸ್.ಟಿ.  ದರ ಎಷ್ಟು?

ಸೇವೆಗಳು ಈಗ ಐ.ಟಿ.ಸಿಯೊಂದಿಗೆ 5% ದರವನ್ನು ಆಕರ್ಷಿಸುತ್ತವೆ. ಇದನ್ನು ಮೊದಲು 12% ತೆರಿಗೆಗೆ ಒಳಪಡಿಸಲಾಗುತ್ತಿತ್ತು.

66. ಚರ್ಮ, ಮತ್ತು ಚರ್ಮದ ಕೆಲಸಕ್ಕೆ ಸಂಬಂಧಿಸಿದಂತೆ ಶಿಫಾರಸು ಮಾಡಲಾದ 5% ದರವು ಚರ್ಮದ ಸರಕುಗಳ ತಯಾರಿಕೆ ಅಥವಾ ಅಧ್ಯಾಯ 42 ಅಥವಾ 64 ರ ಅಡಿಯಲ್ಲಿ ಬರುವ ಪಾದರಕ್ಷೆಗಳಿಗೆ ಸಂಬಂಧಿಸಿದಂತೆ ಮಾಡುವ ಉದ್ಯೋಗ ಕೆಲಸವನ್ನು ಸಹ ಒಳಗೊಳ್ಳುತ್ತದೆಯೇ?

ಇಲ್ಲ, ಈ ಶಿಫಾರಸು ಚರ್ಮದ ಸರಕುಗಳ ತಯಾರಿಕೆ ಅಥವಾ ಅಧ್ಯಾಯ 42 ಅಥವಾ 64 ರ ಅಡಿಯಲ್ಲಿ ಬರುವ ಪಾದರಕ್ಷೆಗಳಿಗೆ ಸಂಬಂಧಿಸಿದಂತೆ ಉದ್ಯೋಗ ಕೆಲಸವನ್ನು ಒಳಗೊಳ್ಳುವುದಿಲ್ಲ.

67. ಮಾನವ ಬಳಕೆಗಾಗಿ ಆಲ್ಕೋಹಾಲ್ ಮದ್ಯದ ತಯಾರಿಕೆಗೆ ಸಂಬಂಧಿಸಿದ ಉದ್ಯೋಗ ಕಾರ್ಯ ಸೇವೆಗಳನ್ನು ಸಹ 5% ಕಡಿಮೆ ದರದಲ್ಲಿ ವಿಧಿಸಲು ಶಿಫಾರಸು ಮಾಡಲಾಗಿದೆಯೇ?

ಇಲ್ಲ, ಈ ಸೇವೆಗಳು ಐ.ಟಿ.ಸಿಯೊಂದಿಗೆ 18% ದರವನ್ನು ಆಕರ್ಷಿಸುವುದನ್ನು ಮುಂದುವರಿಸುತ್ತವೆ.

68. ಉಳಿದ ಉದ್ಯೋಗ ಕಾರ್ಯ ಸೇವೆಗಳ ಮೇಲಿನ ಜಿ.ಎಸ್‌.ಟಿ ದರ ಎಷ್ಟು?

ಉಳಿಕೆ ಉದ್ಯೋಗ-ಕೆಲಸ ಸೇವೆಗಳು, ಅಂದರೆ ನಿರ್ದಿಷ್ಟ ದರವನ್ನು ಸೂಚಿಸದ ಉದ್ಯೋಗ-ಕೆಲಸ ಸೇವೆಗಳು, ಪ್ರಸ್ತುತ 12% ದರದಲ್ಲಿ ಜಿ.ಎಸ್.ಟಿ.ಯನ್ನು ಒಳಗೊಂಡಿವೆ. ಅಂತಹ ಸೇವೆಗಳು ಈಗ 18% ದರದಲ್ಲಿ ಜಿ.ಎಸ್.ಟಿ. ಯನ್ನು ಒಳಗೊಂಡಿರುತ್ತವೆ.

  1. ಕೇವಲ ದರವನ್ನು ಕಡಿಮೆ ಮಾಡುವ ಬದಲು ಉದ್ಯೋಗ-ಕೆಲಸವನ್ನು ಸಂಪೂರ್ಣವಾಗಿ ತೆರಿಗೆ-ಮುಕ್ತಗೊಳಿಸಬಾರದು ಏಕೆ?

ಉದ್ಯೋಗ-ಕೆಲಸ ಸೇವೆಗಳನ್ನು ವಿನಾಯಿತಿ ನೀಡುವುದರಿಂದ ಅದು ಐ.ಟಿ.ಸಿ. ಸರಪಳಿಯನ್ನು ಮುರಿಯುತ್ತದೆ, ಇದು ವೆಚ್ಚವನ್ನು ಹೆಚ್ಚಿಸುತ್ತದೆ. ಇದು ವಿಶೇಷವಾಗಿ ಬಹು ಹಂತದ ಉದ್ಯೋಗ-ಕೆಲಸಗಾರರು ಒಳಗೊಂಡಿರುವ ವಲಯಗಳಿಗೆ ಪ್ರಸ್ತುತವಾಗಿದೆ. ಐ.ಟಿ.ಸಿ.  ಯೊಂದಿಗೆ 5% ಕಡಿಮೆ ದರವು ವ್ಯವಹಾರಗಳಿಗೆ ಪೂರ್ಣ ಕ್ರೆಡಿಟ್ ಪ್ರಯೋಜನವನ್ನು ನೀಡುತ್ತದೆ, ಇದು  ಯಾವುದೇ ತೆರಿಗೆ ಕ್ಯಾಸ್ಕೇಡಿಂಗ್ (ಶ್ರೇಣೀಕರಣವನ್ನು ) ತಪ್ಪಿಸುತ್ತದೆ.

70. ಕಡಲಾಚೆಯ ಪ್ರದೇಶದಲ್ಲಿ ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಉತ್ಪಾದನೆ (E&P) ಗೆ ಸಂಬಂಧಿಸಿದ ಕೆಲಸದ ಒಪ್ಪಂದ ಸೇವೆಗಳಿಗೆ 18%  ತೆರಿಗೆ ವಿಧಿಸಲಾಗುತ್ತದೆಯೇ?

ಹೌದು, ಕಡಲಾಚೆಯ ಪ್ರದೇಶದಲ್ಲಿ ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಉತ್ಪಾದನೆ (E&P) ಗೆ ಸಂಬಂಧಿಸಿದ ಕೆಲಸದ ಒಪ್ಪಂದ ಸೇವೆಗಳಿಗೆ 18% ಜಿ.ಎಸ್.ಟಿ. ತೆರಿಗೆ ವಿಧಿಸಲಾಗುತ್ತದೆ.

71. ದಿನಕ್ಕೆ ಪ್ರತಿ ಯೂನಿಟ್‌ಗೆ ರೂ. 7500 ಅಥವಾ ಅದಕ್ಕೆ ಸಮಾನವಾದ ಪೂರೈಕೆಯ ಮೌಲ್ಯವಿರುವ ಹೋಟೆಲ್ ವಸತಿ ಸೇವೆಗಳಿಗೆ 18% ತೆರಿಗೆ ವಿಧಿಸಲಾಗುತ್ತದೆಯೇ?

ಇಲ್ಲ, ಈ ಸೇವೆಯು ಐ.ಟಿ.ಸಿ ಇಲ್ಲದೆ 5% ಜಿ.ಎಸ್‌.ಟಿ ದರವನ್ನು ಹೊಂದಿರುತ್ತದೆ.

72. . ಸೌಂದರ್ಯ ಮತ್ತು ದೈಹಿಕ ಯೋಗಕ್ಷೇಮ ಸೇವೆಗಳ ಮೇಲೆ ಶಿಫಾರಸು ಮಾಡಲಾದ ಜಿ.ಎಸ್.ಟಿ. ದರ ಎಷ್ಟು? ಈ ದರದ ಅಡಿಯಲ್ಲಿ ಏನೆಲ್ಲಾ ಒಳಗೊಳ್ಳುತ್ತವೆ?

ಆರೋಗ್ಯ ಕ್ಲಬ್‌ಗಳು, ಸಲೂನ್‌ಗಳು, ಕ್ಷೌರಿಕರು, ಫಿಟ್‌ನೆಸ್ ಕೇಂದ್ರಗಳು, ಯೋಗ ಇತ್ಯಾದಿಗಳ ಸೇವೆಗಳು ಸೇರಿದಂತೆ ಸೌಂದರ್ಯ ಮತ್ತು ದೈಹಿಕ ಯೋಗಕ್ಷೇಮ ಸೇವೆಗಳು ಐ.ಟಿ.ಸಿ. ಇಲ್ಲದೆ 5% ಜಿ.ಎಸ್.ಟಿ. ದರವನ್ನು ಒಳಗೊಂಡಿರುತ್ತವೆ. ಈ ಸೇವೆಗಳು ಮೊದಲು 18% ಜಿ.ಎಸ್.ಟಿ.ಯನ್ನು  ಒಳಗೊಂಡಿದ್ದವು.

73. ಲಾಟರಿ ಟಿಕೆಟ್‌ಗಳು, ಬೆಟ್ಟಿಂಗ್, ಜೂಜು, ಕುದುರೆ ರೇಸಿಂಗ್ ಮತ್ತು ಕ್ಯಾಸಿನೊಗಳು 40% ದರದಲ್ಲಿ ಜಿ.ಎಸ್.ಟಿ. ಯನ್ನು ಒಳಗೊಂಡಿವೆಯೇ?

ಹೌದು, ಬೆಟ್ಟಿಂಗ್, ಕ್ಯಾಸಿನೊಗಳು, ಜೂಜು, ಕುದುರೆ ರೇಸಿಂಗ್, ಲಾಟರಿ ಮತ್ತು ಆನ್‌ಲೈನ್ ಹಣದ ಗೇಮಿಂಗ್ ಸೇರಿದಂತೆ ಎಲ್ಲಾ ನಿರ್ದಿಷ್ಟ ಕಾರ್ಯಸಾಧ್ಯ ಹಕ್ಕುಗಳಿಗೆ, 40% ಜಿ.ಎಸ್.ಟಿ. ದರ ಅನ್ವಯಿಸುತ್ತದೆ.

74. ಐ.ಪಿ.ಎಲ್.ನಂತಹ ಕ್ರೀಡಾಕೂಟಗಳಿಗೆ ಪ್ರವೇಶ ಸೇವೆಗಳ ಮೇಲೆ ಶಿಫಾರಸು ಮಾಡಲಾದ ಜಿ.ಎಸ್.ಟಿ. ದರ ಎಷ್ಟು?

ಐ.ಪಿ.ಎಲ್.  ನಂತಹ ಕ್ರೀಡಾಕೂಟಗಳಿಗೆ ಪ್ರವೇಶವು 40% ಜಿ.ಎಸ್.ಟಿ.ಯನ್ನು ಆಕರ್ಷಿಸುತ್ತದೆ, ಆದಾಗ್ಯೂ, ಈ 40% ದರವು ಮಾನ್ಯತೆ ಪಡೆದ ಕ್ರೀಡಾಕೂಟಗಳ  ಪ್ರವೇಶಕ್ಕೆ ಅನ್ವಯಿಸುವುದಿಲ್ಲ.

75. ಐ.ಪಿ.ಎಲ್. ನಂತಹ ಕ್ರೀಡಾಕೂಟಗಳನ್ನು ಹೊರತುಪಡಿಸಿ ಇತರ ಕ್ರೀಡಾಕೂಟಗಳಿಗೆ ಪ್ರವೇಶ ಸೇವೆಗಳ ಮೇಲೆ ಜಿ.ಎಸ್.ಟಿ.ದರ ಎಷ್ಟು?

ಮಾನ್ಯತೆ ಪಡೆದ ಕ್ರೀಡಾಕೂಟಗಳು ಸೇರಿದಂತೆ ಇತರ ಕ್ರೀಡಾಕೂಟಗಳಿಗೆ ಟಿಕೆಟ್ ಬೆಲೆ ರೂ. 500 ಕ್ಕಿಂತ ಹೆಚ್ಚಿಲ್ಲದ ಪ್ರವೇಶಕ್ಕೆ ವಿನಾಯಿತಿ ಮುಂದುವರಿಯುತ್ತದೆ ಮತ್ತು ಟಿಕೆಟ್ ಬೆಲೆ ರೂ. 500 ಕ್ಕಿಂತ ಹೆಚ್ಚಿದ್ದರೆ, ಅದಕ್ಕೆ 18% ಪ್ರಮಾಣಿತ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.

 

*****


(Release ID: 2163706) Visitor Counter : 19