ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ಸುಸ್ಥಿರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ನವೀನ ನೀತಿಯ ಕಾರ್ಯಯೋಜನೆಗಳ ಕುರಿತು ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಕಾರ್ಯಾಗಾರ ನಡೆಯಿತು 


“ತಡೆರಹಿತ ನಗರ ಸಂಪರ್ಕಕ್ಕಾಗಿ ವರ್ತುಲ ರಸ್ತೆಗಳು, ಬೈಪಾಸ್‌ ಗಳ ನಿರ್ಮಾಣದ ಮೇಲೆ ಕೇಂದ್ರ ಸರ್ಕಾರ ಗಮನಹರಿಸುತ್ತದೆ”

Posted On: 03 SEP 2025 3:17PM by PIB Bengaluru

ಭಾರತದ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ನಗರದ ಚಲನಶೀಲತೆಯನ್ನು ಸುಧಾರಿಸುವ ಮಹತ್ವದ ಹೆಜ್ಜೆಯಾಗಿ, ಇಂದು ನವದೆಹಲಿಯಲ್ಲಿ ಸಮಾಲೋಚನಾ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ವಹಿಸಿದ್ದರು. 

ಕಾರ್ಯಾಗಾರದಲ್ಲಿ ಕೇಂದ್ರ ರಾಜ್ಯ ಸಚಿವರಾದ ಶ್ರೀ ಅಜಯ್ ತಮ್ತಾ ಜಿ, ಶ್ರೀ ಹರ್ಷ ಮಲ್ಹೋತ್ರಾ ಜಿ, ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಮತ್ತು ಪುರಸಭೆ ಆಯುಕ್ತರುಗಳು ಭಾಗವಹಿಸಿದ್ದರು.

ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಸಾರಿಗೆ ದಟ್ಟಣೆಯನ್ನು ಕಡಿಮೆ ಮಾಡುವತ್ತ ವಿಶೇಷ ಗಮನ ಹರಿಸಿ, ವಿಶ್ವ ದರ್ಜೆಯ, ಸುಸ್ಥಿರ ಮತ್ತು ಭವಿಷ್ಯಕ್ಕೆ ಸಿದ್ಧವಾದ ಆಧುನಿಕ ಸಾರಿಗೆ ಮೂಲಸೌಕರ್ಯವನ್ನು ಸೃಷ್ಟಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಕಾರ್ಯಾಗಾರವು ಸಮರ್ಪಕವಾಗಿ ವಿವರಿಸಿತು. 

ನಗರ ಕೇಂದ್ರಗಳಿಂದ ಸಂಚಾರವನ್ನು ಬೇರೆಡೆಗೆ ತಿರುಗಿಸಲು, ಆ ಮೂಲಕ ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ದಟ್ಟಣೆಯನ್ನು ಕಡಿಮೆ ಮಾಡಲು ರಿಂಗ್ ರಸ್ತೆಗಳು ಮತ್ತು ಬೈಪಾಸ್‌ ಗಳ ನಿರ್ಮಾಣ ಸೇರಿದಂತೆ ಹಲವಾರು ನವೀನ ನೀತಿ ಮಧ್ಯಸ್ಥಿಕೆಗಳ ಕುರಿತು ತಜ್ಞರು ಹಾಗೂ ಗಣ್ಯರು ಚರ್ಚಿಸಿದರು.

ಸುಸ್ಥಿರ ನಿಧಿಯನ್ನು ಖಚಿತಪಡಿಸಿಕೊಳ್ಳಲು ಮೌಲ್ಯದಾಯಕ ಹಣಕಾಸು ಮಾದರಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ತಡೆರಹಿತ ವ್ಯವಸ್ಥೆಗಳ ಏಕೀಕರಣ ರೂಪದಲ್ಲಿ ಅನುಷ್ಠಾನಕ್ಕಾಗಿ ನಗರ ಮಾಸ್ಟರ್ ಪ್ಲಾನ್‌ ಗಳೊಂದಿಗೆ, ಎಲ್ಲಾ ನಗರಗಳ ಮೂಲಸೌಕರ್ಯ ಅಭಿವೃದ್ಧಿಯನ್ನು ಹೊಂದಿಸುವುದರ ಮೇಲೆ ಪ್ರಮುಖ ಚರ್ಚೆಗಳು ಗಮನಹರಿಸಿದವು. ಈ ಕ್ರಮಗಳು, ನಗರಗಳ ಸಾರಿಗೆ ಚಲನಶೀಲತೆಯನ್ನು ಹೆಚ್ಚಿಸುವುದಲ್ಲದೆ, ರಿಂಗ್ ರಸ್ತೆಗಳು ಮತ್ತು ಬೈಪಾಸ್‌ ಗಳ ಪ್ರಭಾವ ವಲಯಗಳಲ್ಲಿ ಯೋಜಿತ ಮತ್ತು ನಿಯಂತ್ರಿತ ಅಭಿವೃದ್ಧಿಯನ್ನು ಉತ್ತೇಜಿಸುವ ನಿರೀಕ್ಷೆಯನ್ನು ಹೊಂದಿರುತ್ತದೆ.

ಈ ಉಪಕ್ರಮಗಳೊಂದಿಗೆ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು, ಸಂಪರ್ಕವನ್ನು ಸುಧಾರಿಸಲು ಮತ್ತು ಸಮಗ್ರ ಮತ್ತು ಪರಿಸರ ಜವಾಬ್ದಾರಿಯುತ ನಗರ ಅಭಿವೃದ್ಧಿಗೆ ಅಡಿಪಾಯ ಹಾಕಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತನ್ನ ಕಾರ್ಯಯೋಜನೆಗಳ ಸಮರ್ಪಣೆಯನ್ನು ಈ ಮೂಲಕ ಪುನರುಚ್ಚರಿಸುತ್ತದೆ.

 

*****


(Release ID: 2163556) Visitor Counter : 2