ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಅಮೆರಿಕಾಗೆ ಅಂಚೆ ಬುಕಿಂಗ್ ಸೇವೆ ಸ್ಥಗಿತದ ಬಗ್ಗೆ ಅಂಚೆ ಇಲಾಖೆ ಘೋಷಣೆ

प्रविष्टि तिथि: 31 AUG 2025 9:15AM by PIB Bengaluru

ಅಂಚೆ ಇಲಾಖೆಯು 2025 ಆಗಸ್ಟ್ 22ರ ಸಾರ್ವಜನಿಕ ಪ್ರಕಟಣೆಯ ಮುಂದುವರಿದ ಭಾಗವಾಗಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯು ಎಸ್ ಎ) ಗೆ ಅಂಚೆ ಬುಕಿಂಗ್ ಸೇವೆ ಸ್ಥಗಿತಗೊಳಿಸುವ ಬಗ್ಗೆ ಪರಿಶೀಲಿಸಿದೆ.

ಅಮೆರಿಕಕ್ಕೆ ತಲುಪಬೇಕಾದ ಅಂಚೆಗಳನ್ನು ಸಾಗಿಸಲು ಪ್ರಸ್ತುತ ವಾಹಕಗಳು ಅಸಮರ್ಥವಾಗಿದ್ದು ನಿರ್ದಿಷ್ಟ ನಿಯಂತ್ರಕ ಕಾರ್ಯವಿಧಾನಗಳಿಲ್ಲದಿರುವ ಕಾರಣ, ಅಮೆರಿಕಾಗೆ ಕಳುಹಿಸಲ್ಪಡುವ 100 ಡಾಲರ್ ವರೆಗಿನ ಮೌಲ್ಯದ ಪತ್ರಗಳು, ದಾಖಲೆಗಳು, ಉಡುಗೊರೆ ವಸ್ತುಗಳು ಸೇರಿದಂತೆ ಎಲ್ಲಾ ವರ್ಗದ ಅಂಚೆ ಬುಕಿಂಗ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಇಲಾಖೆಯು ಪರಿಸ್ಥಿತಿಯ ಸೂಕ್ಷ್ಮ ನಿಗಾ ವಹಿಸಿದ್ದು, ಶೀಘ್ರದಲ್ಲೇ ಎಲ್ಲಾ ಸೇವೆಗಳನ್ನು ಪುನಃಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಅಂಚೆ ಬುಕ್ ಮಾಡಿದ್ದು, ಗ್ರಾಹಕರ ವಸ್ತುಗಳನ್ನು ತಲುಪಿಸಲು ಸಾಧ್ಯವಾಗದೇ ಇರುವ ಅಂಚೆಗಳಿಗೆ ಪಾವತಿ ಮಾಡಿದ ವೆಚ್ಚದ ಮರುಪಾವತಿಯನ್ನು ಪಡೆಯಬಹುದಾಗಿದೆ. 

ಮೌಲ್ಯಯುತ ಗ್ರಾಹಕರಿಗೆ ಉಂಟಾಗಿರುವ ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ.

 

*****
 


(रिलीज़ आईडी: 2162534) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali-TR , Punjabi , Gujarati , Tamil , Telugu , Malayalam