ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ದೆಹಲಿಯಲ್ಲಿ 'ಕರ್ಮಚಾರಿ ಸಂಕಲ್ಪ ಸಮ್ಮೇಳನ' ಉದ್ದೇಶಿಸಿ ಮಾತನಾಡಿದರು


ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದರು

"ಪ್ರತಿದಿನ ಮತ್ತು ಪ್ರತಿ ಕ್ಷಣವನ್ನು ಸಕಾರಾತ್ಮಕವಾಗಿ ಬಳಸಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿ" ಎಂದು ಶ್ರೀ ಚೌಹಾಣ್ ಎರಡೂ ಸಚಿವಾಲಯಗಳ ಉದ್ಯೋಗಿಗಳಿಗೆ ಕರೆ ನೀಡಿದರು

"ಸಂತೋಷದಿಂದ ಕೆಲಸ ಮಾಡಿ, ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ" - ಶ್ರೀ ಶಿವರಾಜ್ ಸಿಂಗ್

"ಸಾಮೂಹಿಕ ಪ್ರಯತ್ನ ಮತ್ತು ತಂಡ ಮನೋಭಾವವು ದೊಡ್ಡ ಬದಲಾವಣೆಗಳಿಗೆ ಅಡಿಪಾಯವಾಗಬಹುದು" - ಶ್ರೀ ಚೌಹಾಣ್

Posted On: 21 AUG 2025 4:54PM by PIB Bengaluru

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಉಪಸ್ಥಿತಿಯಲ್ಲಿ ಇಂದು ನವದೆಹಲಿಯಲ್ಲಿ ಬೃಹತ್ 'ಕರ್ಮಚಾರಿ ಸಂಕಲ್ಪ ಸಮ್ಮೇಳನ' ಆಯೋಜಿಸಲಾಗಿತ್ತು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಭಗೀರಥ ಚೌಧರಿ, ಕೃಷಿ ಕಾರ್ಯದರ್ಶಿ ಶ್ರೀ ದೇವೇಶ್ ಚತುರ್ವೇದಿ, ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಶ್ರೀ ಶೈಲೇಶ್ ಕುಮಾರ್ ಸಿಂಗ್ ಮತ್ತು ಐಸಿಎಆರ್ ಮಹಾನಿರ್ದೇಶಕ ಡಾ. ಎಂ.ಎಲ್. ಜತ್ ಹಾಗೂ  ಎರಡೂ ಸಚಿವಾಲಯಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್, ನಮ್ಮ ಜೀವನದಲ್ಲಿ ಪ್ರತಿ ದಿನ ಮತ್ತು ಪ್ರತಿ ಕ್ಷಣವೂ ಮುಖ್ಯವಾಗಿದೆ ಮತ್ತು ಪ್ರತಿಯೊಬ್ಬರೂ ಜನರ ಜೀವನವನ್ನು ಸುಧಾರಿಸಲು ಕೊಡುಗೆ ನೀಡಬೇಕು ಎಂದು ಹೇಳಿದರು. "ನಮ್ಮ ಕರ್ತವ್ಯ ರಾಷ್ಟ್ರ ನಿರ್ಮಾಣ ಮತ್ತು ತಂಡ ಮನೋಭಾವದಿಂದ ಕೆಲಸ ಮಾಡುವುದು ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಬಲಪಡಿಸುತ್ತದೆ" ಎಂದು ಸಚಿವರು ಹೇಳಿದರು. ಮುಂದಿನ ವರ್ಷದಿಂದ ಸಮ್ಮೇಳನವನ್ನು 'ಕರ್ಮಯೋಗಿ ಸಂಕಲ್ಪ ಸಮ್ಮೇಳನ' ಎಂದು ಮರುನಾಮಕರಣ ಮಾಡುವಂತೆ ಅವರು ಸಲಹೆ ನೀಡಿದರು. ಪ್ರತಿಯೊಬ್ಬ ಉದ್ಯೋಗಿ ಮತ್ತು ಅಧಿಕಾರಿ ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಅವರು ಗೌರವ ಮತ್ತು ಘನತೆಗೆ ಅರ್ಹರು ಎಂದು ಸಚಿವರು ಒತ್ತಿ ಹೇಳಿದರು.

ದೇಶದ ಬೆಳವಣಿಗೆಯಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯಗಳ ನಿರ್ಣಾಯಕ ಪಾತ್ರವನ್ನು ಸಚಿವರು ಒತ್ತಿ ಹೇಳಿದರು. ಖಾರಿಫ್ ಋತುವಿನ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ವನ್ನು ಐತಿಹಾಸಿಕ ಎಂದು ಬಣ್ಣಿಸಿದ ಅವರು, ಕೃಷಿ ಅಭಿವೃದ್ಧಿಯಲ್ಲಿ ಈ ಅಭಿಯಾನವು ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು. ಮೊದಲ ಬಾರಿಗೆ, ಇಂತಹ ಬೃಹತ್ ಅಭಿಯಾನವನ್ನು ಕೈಗೊಳ್ಳಲಾಯಿತು, 2,170 ವಿಜ್ಞಾನಿಗಳ ತಂಡಗಳು ಹಳ್ಳಿಗಳನ್ನು ತಲುಪಿ ರೈತರೊಂದಿಗೆ ಸಂವಾದ ನಡೆಸಿದವು. ಈ ಉಪಕ್ರಮದಿಂದ 500 ಕ್ಕೂ ಹೆಚ್ಚು ಸಂಶೋಧನಾ ವಿಷಯಗಳು ಹೊರಹೊಮ್ಮಿದ್ದು, ಇದು ಒಂದು ಪ್ರಮುಖ ಸಾಧನೆಯಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಆಹಾರ ಧಾನ್ಯಗಳ ದಾಸ್ತಾನುಗಳು ಹೇರಳವಾಗಿದ್ದರೂ, ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಹತ್ತಿಯ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಮತ್ತು ಸಹಜ ಕೃಷಿಯನ್ನು ಉತ್ತೇಜಿಸುವಲ್ಲಿ ಇನ್ನೂ ಸವಾಲುಗಳಿವೆ ಎಂದು ಶ್ರೀ ಚೌಹಾಣ್ ಹೇಳಿದರು. ರಾಜ್ಯ ಸರ್ಕಾರಗಳು ಕೇಂದ್ರದ ಸಹಯೋಗದೊಂದಿಗೆ ಸಮಗ್ರ ಕೃಷಿ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿವೆ ಮತ್ತು ಸಾಮೂಹಿಕ ಪ್ರಯತ್ನಗಳು ಕೃಷಿಯನ್ನು ಬಲಪಡಿಸುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಆಗಿರುವ ಪ್ರಗತಿಯನ್ನು ಒತ್ತಿ ಹೇಳಿದ ಸಚಿವರು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 3 ಕೋಟಿ ಲಕ್ಷಾಧಪತಿ ದೀದಿಯರನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಹೇಳಿದರು. "ನಾವು ಈ ಗುರಿಯನ್ನು ಬಹಳ ಮೊದಲೇ ಸಾಧಿಸುವ ಹಂತಕ್ಕೆ ಹತ್ತಿರವಾಗಿದ್ದೇವೆ ಮತ್ತು ಸುಮಾರು 2.8 ಕೋಟಿ ಮಹಿಳೆಯರು ಈಗಾಗಲೇ ಲಕ್ಷಾದಿಪತಿ ದೀದಿಗಳಾಗಿದ್ದಾರೆ ಎಂದು ತಿಳಿಸಲು ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗುತ್ತಿದೆ" ಎಂದು ಹೇಳಿದರು. ಒಂದು ಕಾಲದಲ್ಲಿ ತಮ್ಮ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಈ ಮಹಿಳೆಯರಲ್ಲಿ ಅನೇಕರು ಈಗ ಸ್ವಾವಲಂಬಿಗಳಾಗಿದ್ದಾರೆ ಮತ್ತು ಕೆಲವರು 'ಕೋಟ್ಯಧಿಪತಿ ದೀದಿ'ಗಳಾಗುವ ಹಾದಿಯಲ್ಲಿದ್ದಾರೆ ಎಂದು ಅವರು ಹೇಳಿದರು.

ಗ್ರಾಮೀಣ ವಸತಿ ವಲಯದಲ್ಲಿ ಆಗಿರುವ ತ್ವರಿತ ಪ್ರಗತಿಯನ್ನು ಸಚಿವರು ಉಲ್ಲೇಖಿಸಿದರು, ಅಲ್ಲಿ ದಾಖಲೆಯ 114 ದಿನಗಳಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಜೀವನವನ್ನು ಪರಿವರ್ತಿಸುತ್ತಿರುವ ಗ್ರಾಮೀಣ ರಸ್ತೆಗಳು ಮತ್ತು ವಸತಿ ವಲಯದಲ್ಲೂ ಸಹ ಪ್ರಗತಿ ಸಾಧಿಸಲಾಗಿದೆ ಎಂದರು. "ಸರ್ಕಾರವನ್ನು ಕೇವಲ ಕಡತಗಳಲ್ಲಿ ಅಲ್ಲ, ಜನರ ಜೀವನದಲ್ಲಿ ಕಾಣಬೇಕು" ಎಂಬ ಪ್ರಧಾನ ಮಂತ್ರಿಯವರ ಸ್ವಾತಂತ್ರ್ಯ ದಿನದ ಸಂದೇಶವನ್ನು ಉಲ್ಲೇಖಿಸಿದ ಶ್ರೀ ಚೌಹಾಣ್, ಇದು ಸಾರ್ವಜನಿಕ ಸೇವೆಗೆ ಪ್ರಾಮಾಣಿಕ ಸಮರ್ಪಣೆಯಿಂದ ಮಾತ್ರ ಸಾಧ್ಯ ಎಂದು ಒತ್ತಿ ಹೇಳಿದರು. ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವುದು ಒಂದು ಸವಲತ್ತು ಎಂದು ಅವರು ಅಧಿಕಾರಿಗಳಿಗೆ ನೆನಪಿಸಿದರು ಮತ್ತು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಒತ್ತಾಯಿಸಿದರು.

ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳನ್ನು ಉಲ್ಲೇಖಿಸಿದ ಅವರು, ಪ್ರಮಾಣೀಕರಿಸದ ಜೈವಿಕ ಉತ್ತೇಜಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಜೈವಿಕ ಉತ್ತೇಜಕಗಳ ಹೆಸರಿನಲ್ಲಿ ಮಾರಾಟವಾಗುವ ಸುಮಾರು 30,000 ಉತ್ಪನ್ನಗಳಲ್ಲಿ, ಐಸಿಎಆರ್ ಮೂರು ಹಂತದ ಪರಿಶೀಲನೆಯ ನಂತರ ಕೇವಲ 600 ಉತ್ಪನ್ನಗಳನ್ನು ಮಾತ್ರ ಪ್ರಮಾಣೀಕರಿಸಿದೆ. ಅದೇ ರೀತಿ, ರೈತರಿಗೆ ತೊಂದರೆ ನೀಡುವ ನಕಲಿ ರಸಗೊಬ್ಬರಗಳು, ಬೀಜಗಳು ಮತ್ತು ಕೀಟನಾಶಕಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

'ರಾಷ್ಟ್ರ ಮೊದಲು' ಎಂಬ ಪ್ರಧಾನಮಂತ್ರಿಯವರ ಧ್ಯೇಯವಾಕ್ಯವನ್ನು ಪುನರುಚ್ಚರಿಸಿದ ಶ್ರೀ ಚೌಹಾಣ್, ಭಾರತವು 'ವಸುಧೈವ ಕುಟುಂಬಕಂ' (ಜಗತ್ತು ಒಂದು ಕುಟುಂಬ) ದಲ್ಲಿ ನಂಬಿಕೆ ಇಟ್ಟಿದೆ ಮತ್ತು ತನ್ನ ಹಿತಾಸಕ್ತಿಗಳನ್ನು ಹೇಗೆ ದೃಢವಾಗಿ ರಕ್ಷಿಸಿಕೊಳ್ಳಬೇಕೆಂದು ಅದಕ್ಕೆ ತಿಳಿದಿದೆ ಎಂದು ಒತ್ತಿ ಹೇಳಿದರು. ಸರ್ಕಾರದ ಇತ್ತೀಚಿನ ನಿರ್ಧಾರಗಳಿಂದಾಗಿ ರೈತರು, ಹೈನುಗಾರರು ಮತ್ತು ಮೀನುಗಾರರು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದರು.

ದೇಶೀಯ ಉತ್ಪನ್ನಗಳನ್ನು ಬಳಸಬೇಕೆಂಬ ಪ್ರಧಾನಮಂತ್ರಿಯವರ ಕರೆಯನ್ನು ಎಲ್ಲಾ ಉದ್ಯೋಗಿಗಳು ಮತ್ತು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು ಮತ್ತು ದೇಶೀಯ ಉತ್ಪನ್ನಗಳನ್ನು ಗರಿಷ್ಠವಾಗಿ ಬಳಸುವುದಾಗಿ ಪ್ರತಿಜ್ಞೆ ಮಾಡಬೇಕೆಂದು ಸಚಿವರು ಒತ್ತಾಯಿಸಿದರು. ಇದು ಅಗತ್ಯವಿರುವವರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ನೌಕರರು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಗಮನ ಹರಿಸಬೇಕೆಂದು ಶ್ರೀ ಚೌಹಾಣ್ ಹೇಳಿದರು. "ನಿಮ್ಮ ಬಿಡುವಿರದ ಕೆಲಸದ ನಡುವೆಯೂ, ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಡಿ. ಸರ್ಕಾರಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ - ಇದು ಉತ್ತಮ ಜೀವನವನ್ನು ನಡೆಸಲು ನಿಜವಾದ ಸೂತ್ರ" ಎಂದು ಅವರು ಹೇಳಿದರು. ಜೀವನವನ್ನು ನಡೆಸಲು ಮೂರು ಮಾರ್ಗಗಳಿವೆ ಎಂದು ಅವರು ಹೇಳಿದರು: ದುಃಖದಿಂದ ಕೆಲಸ ಮಾಡುವುದು, ಕೇವಲ ತೃಪ್ತಿಯಿಂದ ಕೆಲಸ ಮಾಡುವುದು ಮತ್ತು ಸಂತೋಷ, ಶಕ್ತಿ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡುವುದು. ಮೂರನೇ ಮಾರ್ಗವು ನಮ್ಮ ಜೀವನದಲ್ಲಿ ಬದಲಾವಣೆಯ ಹೊಸ ಕಥೆಯನ್ನು ಬರೆಯಬಹುದು ಎಂದು ಸಚಿವರು ಹೇಳಿದರು.

 

*****
 


(Release ID: 2159504)