ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತೀಯ ಭಾಷೆಗಳಲ್ಲಿ ಎಐ-ಚಾಲಿತ ನೈಜ ಸಮಯದ ಅನುವಾದವನ್ನು ಉತ್ತೇಜಿಸಲು 'ಭಾಷಾ ಸೇತು' ಸವಾಲು
ಆರಂಭದಲ್ಲಿ 12 ಭಾಷೆಗಳನ್ನು ಸೇರಿಸಲಾಗಿದೆ; ಸಂಸ್ಕೃತ ಮತ್ತು ಡೋಗ್ರಿ ಸೇರಿದಂತೆ ಇನ್ನೂ 10 ಭಾಷೆಗಳನ್ನು ಸೇರಿಸಲು ಯೋಜಿಸಲಾಗಿದೆ
ಬಹುಭಾಷಾ ಭಾರತಕ್ಕಾಗಿ ಸ್ಥಳೀಯ ಎಐ/ಎಂಎಲ್ ನಾವೀನ್ಯತೆಗಳನ್ನು ಸರ್ಕಾರ ಉತ್ತೇಜಿಸುತ್ತಿದೆ
Posted On:
20 AUG 2025 5:27PM by PIB Bengaluru
'ಭಾಷಾ ಸೇತು' ಸವಾಲು ವಿವಿಧ ಭಾರತೀಯ ಭಾಷೆಗಳಿಗೆ ವಿಷಯವನ್ನು ಭಾಷಾಂತರಿಸಲು ಇತ್ತೀಚಿನ ತಂತ್ರಜ್ಞಾನವನ್ನು ಬಳಸುವ ಗುರಿಯನ್ನು ಹೊಂದಿದೆ. ಭಾರತೀಯ ಭಾಷೆಗಳಿಗೆ ನೈಜ-ಸಮಯದ ಅನುವಾದ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯನ್ನು (ಎಐ/ಎಂಎಲ್) ಬಳಸಿಕೊಳ್ಳುವ ನವೋದ್ಯಮಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಈ ಸವಾಲಿನ ಮೂಲಕ ಅಭಿವೃದ್ಧಿಪಡಿಸಲಾಗುವ ಪ್ರಸ್ತಾವಿತ ತಂತ್ರಜ್ಞಾನವು ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಹಿಂದಿ, ಒಡಿಯಾ, ಪಂಜಾಬಿ, ತೆಲುಗು, ತಮಿಳು ಮತ್ತು ಉರ್ದು ಈ 12 ಭಾಷೆಗಳನ್ನು ಒಳಗೊಂಡಿದೆ.
ಇದನ್ನು ವಿಸ್ತರಿಸಬಹುದಾದ ಮತ್ತು ಮಾಡ್ಯುಲರ್ ಆಗಿ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಕಾಶ್ಮೀರಿ, ಕೊಂಕಣಿ, ಮಣಿಪುರಿ, ನೇಪಾಳಿ, ಸಂಸ್ಕೃತ, ಸಿಂಧಿ, ಬೋಡೋ, ಸಂಥಾಲಿ, ಮೈಥಿಲಿ ಮತ್ತು ಡೋಗ್ರಿ ಸೇರಿದಂತೆ 10 ಹೆಚ್ಚುವರಿ ಭಾಷೆಗಳನ್ನು ಸಂಯೋಜಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಈ ಮಾಹಿತಿಯನ್ನು ಇಂದು ಲೋಕಸಭೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದರು.
*****
(Release ID: 2158504)