ಕೃಷಿ ಸಚಿವಾಲಯ
azadi ka amrit mahotsav

ವಿದೇಶಿ ಒತ್ತಡದ ಹೊರತಾಗಿಯೂ ವ್ಯಾಪಾರ ಒಪ್ಪಂದಗಳಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದ್ದಕ್ಕಾಗಿ ಭಾರತದಾದ್ಯಂತದ ರೈತರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ನಾಯಕತ್ವವನ್ನು ಸಾಟಿಯಿಲ್ಲ ಎಂದು ರೈತರು ಬಣ್ಣಿ ಸಿದರು

ಎಲ್ಲಾ ಪ್ರಮುಖ ರೈತ ಸಂಘಟನೆಗಳ ಮುಖಂಡರು ಪ್ರಧಾನಿಯವರ ದೂರದೃಷ್ಟಿಯ, ರೈತ ಸ್ನೇಹಿ ನಿಲುವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಹೇಳಿದರು

Posted On: 12 AUG 2025 7:49PM by PIB Bengaluru

ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಕೇಂದ್ರ ಸರ್ಕಾರದ ನಿರ್ಣಾಯಕ ಕ್ರಮಕ್ಕೆ ಕೃತಜ್ಞತೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಲು ದೇಶಾದ್ಯಂತದ ರೈತ ಸಂಘಟನೆಗಳ ಮುಖಂಡರು ಮತ್ತು ಕೃಷಿಕರು ಇಂದು ನವದೆಹಲಿಯ ಪೂಸಾ ಕ್ಯಾಂಪಸ್‌ನ ಸುಬ್ರಮಣ್ಯಂ ಹಾಲ್‌ನಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿಯಾದರು. ಸಭೆಯಲ್ಲಿ ಕೇಂದ್ರ ಕೃಷಿ ರಾಜ್ಯ ಸಚಿವರಾದ ಶ್ರೀ ಭಗೀರಥ ಚೌಧರಿ, ಕೃಷಿ ಕಾರ್ಯದರ್ಶಿ ಶ್ರೀ ದೇವೇಶ್‌ ಚತುರ್ವೇದಿ, ಐಸಿಎಆರ್‌ ಮಹಾನಿರ್ದೇಶಕ ಡಾ.ಎಂ.ಎಲ್‌.ಜಾಟ್‌ ಮತ್ತು ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ, ರೈತ ಸಂಘಟನೆಗಳ ಹಲವಾರು ಪ್ರತಿನಿಧಿಗಳು ಒಗ್ಗಟ್ಟಿನಿಂದ ಮಾತನಾಡಿ, ಈ ರೈತ ಸ್ನೇಹಿ ಐತಿಹಾಸಿಕ ನಿರ್ಧಾರಕ್ಕಾಗಿ ಪ್ರಧಾನಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಭಾರತೀಯ ಕಿಸಾನ್‌ ಸಂಘದ ಪ್ರತಿನಿಧಿಗಳಾದ ಶ್ರೀ ಹರ್ಪಾಲ್‌ ಸಿಂಗ್‌ ದಾಗರ್‌, ಶ್ರೀ ಧರ್ಮೇಂದ್ರ ಮಲಿಕ್‌, ಶ್ರೀ ಧರ್ಮೇಂದ್ರ ಚೌಧರಿ, ಶ್ರೀ ವೀರೇಂದ್ರ ಲೋಹನ್‌, ಶ್ರೀ ಕಿರ್ಪಾ ಸಿಂಗ್‌ ನಾಟ್ಟುವಾಲಾ, ಶ್ರೀ ಕುಲದೀಪ್‌ ಸಿಂಗ್‌ ಬಾಜಿದ್ಪುರ್‌, ಶ್ರೀ ಬಾಬಾ ರಾಜೇಂದ್ರ ಸಿಂಗ್‌ ಮಲಿಕ್‌, ಶ್ರೀ ತರುಣೇಶ್‌ ಶರ್ಮಾ, ಶ್ರೀ ಕೆ.ಪಿ.ಸಿಂಗ್‌ ಥೈನುವಾ, ಶ್ರೀ ಆಚಾರ್ಯ ರಾಮ್‌ ಗೋಪಾಲ್‌ ವಾಲಿಯಾ, ಶ್ರೀ ವಿನೋದ್‌ ಆನಂದ್‌, ಶ್ರೀ ರಾಜ್‌ ಕುಮಾರ್‌ ಬಲ್ಯಾನ್‌, ಶ್ರೀ ಅಶೋಕ್‌ ಬಲ್ಯಾನ್‌, ಶ್ರೀ ಬಿಪಿಚಂದ್ರ ಆರ್‌. ಶ್ರೀ ಕೃಷ್ಣವೀರ್‌ ಚೌಧರಿ, ಶ್ರೀ ಭೂಪೇಂದ್ರ ಸಿಂಗ್‌ ಮಾನ್‌ ಮತ್ತು ಶ್ರೀ ಕೆ. ಸಾಯಿ ರೆಡ್ಡಿ ಅವರು ಪ್ರಧಾನಮಂತ್ರಿ ಅವರ ದಿಟ್ಟ ಹೆಜ್ಜೆಗಳಿಗೆ ಧನ್ಯವಾದ ಅರ್ಪಿಸಿದರು.

ಭಾರತೀಯ ರೈತ ಚೌಧರಿ ಚರಣ್‌ ಸಿಂಗ್‌ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ  ಧರ್ಮೇಂದ್ರ ಚೌಧರಿ ಮಾತನಾಡಿ, ‘‘ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರರ ಹಿತದೃಷ್ಟಿಯಿಂದ ಅಚಲ ಹೇಳಿಕೆ ನೀಡಿದ್ದಾರೆ. ಭಾರತವು ಯಾವುದೇ ಕಾರಣಕ್ಕೂ ಅವರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಈ ಘೋಷಣೆಯು ಲಕ್ಷಾಂತರ ಆಹಾರ ಪೂರೈಕೆದಾರರಿಗೆ ಪರಿಹಾರವನ್ನು ತರುವುದಲ್ಲದೆ, ಕೃಷಿ ಮತ್ತು ಗ್ರಾಮೀಣ ಭಾರತದ ಸ್ವಾವಲಂಬನೆಯನ್ನು ಬಲಪಡಿಸುತ್ತದೆ. ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವ ಈ ದೂರದೃಷ್ಟಿಯ ಮತ್ತು ರೈತ ಸ್ನೇಹಿ ದೃಷ್ಟಿಕೋನವನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ,’’ ಎಂದು ಹೇಳಿದರು.

ಛತ್ತೀಸ್‌ಗಢ ಯುವ ಪ್ರಗತಿಪರ ರೈತರ ಸಂಘದ ವೀರೇಂದ್ರ ಲೋಹನ್‌, ‘‘ನಮ್ಮ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿಅಮೆರಿಕದ ಕಂಪನಿಗಳಿಗೆ ಅವಕಾಶ ನೀಡದಿರುವ ಧೈರ್ಯಶಾಲಿ ನಿರ್ಧಾರವು ಪ್ರತಿ ಕ್ಷೇತ್ರ, ಹಳ್ಳಿ ಮತ್ತು ದನದ ಕೊಟ್ಟಿಗೆಗಳಲ್ಲಿ ಪ್ರತಿಧ್ವನಿಸುತ್ತಿದೆ. ಭಾರತೀಯ ರೈತ ಕೇವಲ ಆಹಾರ ಪೂರೈಕೆದಾರನಲ್ಲ, ಆದರೆ ಈ ರಾಷ್ಟ್ರದ ಆತ್ಮ, ಯಾವುದೇ ವಿದೇಶಿ ಶಕ್ತಿ ಎಂದಿಗೂ ನಿಯಂತ್ರಿಸಲಾಗದ ಆತ್ಮ ಎಂದು ನೀವು ತೋರಿಸಿದ್ದೀರಿ. ಪ್ರಸ್ತುತ ನಾಯಕತ್ವ ದೆಹಲಿಯಲ್ಲಿಇರುವವರೆಗೆ, ಯಾವುದೇ ಶಕ್ತಿಯು ಭಾರತದ ರೈತರನ್ನು ಗುಲಾಮರನ್ನಾಗಿ ಮಾಡಲು ಸಾಧ್ಯವಿಲ್ಲಎಂದು ನೀವು ನಮಗೆ ಭರವಸೆ ನೀಡಿದ್ದೀರಿ. ನಕಲಿ ರಸಗೊಬ್ಬರಗಳು, ಬೀಜಗಳು ಮತ್ತು ಕೀಟನಾಶಕಗಳ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಾಗಿ ನಾನು ಕೃಷಿ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ,’’ ಎಂದು ಹೇಳಿದರು.

ಧರ್ಮೇಂದ್ರ ಮಲಿಕ್‌, ‘‘ನಾವು ಪ್ರಧಾನಮಂತ್ರಿ ಮತ್ತು ಕೃಷಿ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇವೆ ಮತ್ತು ನಿಮ್ಮ ನಿಲುವಿನಲ್ಲಿ ದೃಢವಾಗಿ ನಿಲ್ಲುವಂತೆ ಮತ್ತು ಮುಕ್ತ ವ್ಯಾಪಾರದ ಬಗ್ಗೆ ನಮ್ಮ ನೀತಿಗಳನ್ನು ಬದಲಾಯಿಸದಂತೆ ಮನವಿ ಮಾಡುತ್ತೇವೆ. ನಾವು ಯಾವಾಗಲೂ ನಿಮ್ಮೊಂದಿಗೆ ನಿಲ್ಲುತ್ತೇವೆ,’’ ಎಂದರು.

ಕಿರ್ಪಾ ಸಿಂಗ್‌ ನಟ್ಟುವಾಲಾ, ‘‘ಒಪ್ಪಂದದ ಮೇಲೆ ಅಮೆರಿಕದ ಒತ್ತಡದ ಬಗ್ಗೆ ನಾವು ತುಂಬಾ ಚಿಂತಿತರಾಗಿದ್ದೆವು. ಅದು ನಡೆದಿದ್ದರೆ, ರೈತರು ನಾಶವಾಗುತ್ತಿದ್ದರು. ಆದರೆ ಪ್ರಧಾನಮಂತ್ರಿ ಮತ್ತು ಕೃಷಿ ಸಚಿವರು ರೈತರ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಂಡರು. ಇದು ಪಂಜಾಬ್‌ ಮತ್ತು ರಾಷ್ಟ್ರದಾದ್ಯಂತದ ರೈತರನ್ನು ಹೆಮ್ಮೆಯಿಂದ ತುಂಬಿದೆ. ನಾನು ಎಲ್ಲಾ ನಾಗರಿಕರು, ರೈತರು ಮತ್ತು ವ್ಯಾಪಾರಿಗಳಿಗೆ ಹೇಳುತ್ತೇನೆ - ಅಮೆರಿಕ ಏನೇ ಹೇಳಿದರೂ ಅದು ನಮಗೆ ಹಾನಿ ಮಾಡುವುದಿಲ್ಲ. ಕೃಷಿ ಸಚಿವರೇ, ಅಭಿನಂದನೆಗಳು, ರಾಷ್ಟ್ರದ ರೈತರು ನಿಮ್ಮೊಂದಿಗೆ ನಿಲ್ಲುತ್ತಾರೆ,’’ ಎಂದು ಹೇಳಿದರು.

ಪಂಜಾಬ್‌ನ ಕುಲದೀಪ್‌ ಸಿಂಗ್‌ ಬಾಜಿದ್ಪುರ ಅವರು ಪ್ರಧಾನಮಂತ್ರಿ ಮತ್ತು ಕೃಷಿ ಸಚಿವರನ್ನು ಶ್ಲಾಘಿಸಿ, ರೈತರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಇದು ಅವರ ಜೀವನವನ್ನು ಬದಲಾಯಿಸುತ್ತಿದೆ ಎಂದು ಹೇಳಿದರು. ಬಲವಾದ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು, ಆದ್ದರಿಂದ ರೈತರು ಯುಎಸ್‌ನಂತಹ ದೇಶಗಳತ್ತ ನೋಡಬೇಕಾಗಿಲ್ಲ ಎಂದರು.

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ತಮ್ಮ ಭಾಷಣದಲ್ಲಿ, ‘‘ಈ ಸಭೆ ಒಂದು ಸಣ್ಣ ಭಾರತವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ ಆಹಾರವನ್ನು ನೀಡಲು ಹಗಲು ರಾತ್ರಿ ಶ್ರಮಿಸುತ್ತಿರುವ ನಿಮಗೆ - ಇಲ್ಲಿರುವ ನನ್ನ ರೈತ ಸಹೋದರರಿಗೆ ನಾನು ನಮಸ್ಕರಿಸುತ್ತೇನೆ. ಧಾನ್ಯವೇ ಜೀವನ, ಧಾನ್ಯವೇ ದೈವಿಕ. ರೈತನು ಜೀವವನ್ನು ಒದಗಿಸುವವನು ಮತ್ತು ಕೊಡುವವನು ಎರಡೂ ಆಗಿದ್ದಾನೆ. ನನಗೆ, ರೈತರ ಸೇವೆ ದೇವರ ಪೂಜೆಯಾಗಿದೆ ಮತ್ತು ಇದಕ್ಕಿಂತ ದೊಡ್ಡ ಪೂಜೆ ಇನ್ನೊಂದಿಲ್ಲ,’’ ಎಂದು ಹೇಳಿದರು.

ನಕಲಿ ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಉತ್ಪಾದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಶೀಘ್ರದಲ್ಲೇ ಹೊಸ ಕಾನೂನನ್ನು ತರಲಿದೆ ಎಂದು ಶ್ರೀ  ಶಿವರಾಜ್‌ ಸಿಂಗ್‌ ಚೌಹಾಣ್‌ ಪುನರುಚ್ಚರಿಸಿದರು. ರೈತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಆದ್ಯತೆಯ ಮೇರೆಗೆ ಮುಂದಿಡಲಾಗುತ್ತಿದೆ ಎಂದು ಅವರು ಹೇಳಿದರು. ನಿನ್ನೆಯಷ್ಟೇ (ಆಗಸ್ಟ್‌ 11) ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ರಾಜಸ್ಥಾನದ ಜುಂಜುನುವಿನ ರೈತರಿಗೆ ವಿಮಾ ಮೊತ್ತವನ್ನು ಡಿಜಿಟಲ್‌ ಪಾವತಿ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಪ್ರಧಾನಮಂತ್ರಿ ಅವರ ‘ರಾಷ್ಟ್ರ ಮೊದಲು’ ಸಂಕಲ್ಪವನ್ನು ಒತ್ತಿ ಹೇಳಿದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌, ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ರದ್ದುಪಡಿಸಿರುವುದು ಐತಿಹಾಸಿಕ ನಿರ್ಧಾರವಾಗಿದ್ದು, ಇದಕ್ಕಾಗಿ ಇಡೀ ರಾಷ್ಟ್ರವು ಪ್ರಧಾನಿಗೆ ಕೃತಜ್ಞವಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಯಾವಾಗಲೂ ಬಲವಾದ, ದಿಟ್ಟ, ರಾಷ್ಟ್ರ ಕೇಂದ್ರಿತ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದಕ್ಕಾಗಿ ದೇಶವು ಎಂದೆಂದಿಗೂ ಋುಣಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವರು ಒತ್ತಿ ಹೇಳಿದರು.

 

*****


(Release ID: 2155877)