ಸಂಪುಟ
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಗ್ರಾಹಕರಿಗೆ 2025-26ನೇ ಸಾಲಿಗೆ 12,000 ಕೋಟಿ ರೂ. ಉದ್ದೇಶಿತ ಸಬ್ಸಿಡಿ ಮುಂದುವರಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆ
Posted On:
08 AUG 2025 4:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2025-26ರ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯ ಫಲಾನುಭವಿಗಳಿಗೆ 14.2 ಕೆಜಿ ಸಿಲಿಂಡರ್‌ಗೆ ವರ್ಷಕ್ಕೆ 9 ಪುನರ್ ಭರ್ತಿಗೊಳಿಸುವಿಕೆ (ಮತ್ತು 5 ಕೆಜಿ ಸಿಲಿಂಡರ್‌ಗೆ ಅನುಗುಣವಾದ ಅನುಪಾತದಲ್ಲಿ) 300 ರೂ. ಉದ್ದೇಶಿತ ಸಬ್ಸಿಡಿ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ, ಇದಕ್ಕಾಗಿ ರೂ. 12,000 ಕೋಟಿ ವೆಚ್ಚ ಮಾಡಲಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ: ದೇಶಾದ್ಯಂತ ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಠೇವಣಿ-ಮುಕ್ತ ಎಲ್‌ಪಿಜಿ ಸಂಪರ್ಕ ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ)ಯನ್ನು 2016 ಮೇ ನಲ್ಲಿ ಆರಂಭಿಸಲಾಯಿತು. 01.07.2025ರ ಹೊತ್ತಿಗೆ, ದೇಶಾದ್ಯಂತ ಸುಮಾರು 10.33 ಕೋಟಿ ಪಿಎಂಯುವೈ ಅನಿಲ ಸಂಪರ್ಕಗಳಿವೆ.
ಎಲ್ಲಾ ಪಿಎಂಯುವೈ ಫಲಾನುಭವಿಗಳು ಠೇವಣಿ-ಮುಕ್ತ ಎಲ್‌ಪಿಜಿ ಸಂಪರ್ಕ ಪಡೆಯುತ್ತಾರೆ, ಇದರಲ್ಲಿ ಸಿಲಿಂಡರ್‌ನ ಭದ್ರತಾ ಠೇವಣಿ(ಎಸ್‌ಡಿ), ಒತ್ತಡ ನಿಯಂತ್ರಕ, ಸುರಕ್ಷಾ ಮೆದುಗೊಳವೆ, ದೇಶೀಯ ಅನಿಲ ಗ್ರಾಹಕ ಕಾರ್ಡ್ (ಡಿಜಿಸಿಸಿ) ಕಿರುಪುಸ್ತಕ ಮತ್ತು ಅನುಸ್ಥಾಪನಾ ಶುಲ್ಕಗಳು ಸೇರಿವೆ. ಉಜ್ವಲ 2.0ರ ಅಸ್ತಿತ್ವದಲ್ಲಿರುವ ವಿಧಾನಗಳ ಪ್ರಕಾರ, ಮೊದಲ ಮರುಪೂರಣ ಮತ್ತು ಸ್ಟೌವ್ ಅನ್ನು ಎಲ್ಲಾ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಪಿಎಂಯುವೈ ಫಲಾನುಭವಿಗಳು ಎಲ್‌ಪಿಜಿ ಸಂಪರ್ಕ ಅಥವಾ ಮೊದಲ ಮರುಪೂರಣ ಅಥವಾ ಸ್ಟೌವ್‌ಗೆ ಯಾವುದೇ ಪಾವತಿ ಮಾಡುವ ಅಗತ್ಯವಿಲ್ಲ, ಏಕೆಂದರೆ ಇವುಗಳ ವೆಚ್ಚವನ್ನು ಭಾರತ ಸರ್ಕಾರ/ತೈಲ ಮಾರುಕಟ್ಟೆ ಕಂಪನಿ(ಒಎಂಸಿ)ಗಳು ಭರಿಸುತ್ತವೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಗ್ರಾಹಕರಿಗೆ ಉದ್ದೇಶಿತ ಸಬ್ಸಿಡಿ: ಭಾರತವು ತನ್ನ ಎಲ್‌ಪಿಜಿ ಅಗತ್ಯದ ಸುಮಾರು 60% ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ. ಪಿಎಂಯುವೈ ಫಲಾನುಭವಿಗಳನ್ನು ಎಲ್‌ಪಿಜಿಯ ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ತೀವ್ರ ಏರಿಳಿತಗಳ ಪರಿಣಾಮದಿಂದ ರಕ್ಷಿಸಲು ಮತ್ತು ಪಿಎಂಯುವೈ ಗ್ರಾಹಕರಿಗೆ ಎಲ್‌ಪಿಜಿಯನ್ನು ಹೆಚ್ಚು ಅನುಕೂಲಕರವಾಗಿಸಲು, ಆ ಮೂಲಕ ಅವರಿಂದ ಎಲ್‌ಪಿಜಿಯ ನಿರಂತರ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು 2022 ಮೇನಲ್ಲಿ ಪಿಎಂಯುವೈ ಗ್ರಾಹಕರಿಗೆ ವಾರ್ಷಿಕ 12 ಮರುಪೂರಣಗಳಿಗೆ(ಮತ್ತು 5 ಕೆಜಿ ಸಂಪರ್ಕಗಳಿಗೆ ಪ್ರಮಾಣಕ್ಕೆ ಅನುಗುಣವಾದ ಅನುಪಾತದಲ್ಲಿ) 14.2 ಕೆಜಿ ಸಿಲಿಂಡರ್‌ಗೆ 200 ರೂ. ಉದ್ದೇಶಿತ ಸಬ್ಸಿಡಿ ಆರಂಭಿಸಿತು. 2023 ಅಕ್ಟೋಬರ್ ನಲ್ಲಿ ಸರ್ಕಾರವು ವಾರ್ಷಿಕ 12 ಮರುಪೂರಣಗಳಿಗೆ(ಮತ್ತು 5 ಕೆಜಿ ಸಂಪರ್ಕಗಳಿಗೆ ಪ್ರಮಾಣಕ್ಕೆ ಅನುಗುಣವಾದ ಅನುಪಾತದಲ್ಲಿ) 14.2 ಕೆಜಿ ಸಿಲಿಂಡರ್‌ಗೆ 300 ರೂ.ಗೆ ಉದ್ದೇಶಿತ ಸಬ್ಸಿಡಿಯನ್ನು ಹೆಚ್ಚಿಸಿತು.
ಪಿಎಂಯುವೈ ಮನೆಗಳ ಎಲ್‌ಪಿಜಿ ಬಳಕೆಯಲ್ಲಿ ಸುಧಾರಣೆ: 2019-20ರಲ್ಲಿ ಕೇವಲ 3 ಮತ್ತು 2022-23ರಲ್ಲಿ 3. 68 ಮರುಪೂರಣಗಳಾಗಿದ್ದ ಪಿಎಂಯುವೈ ಗ್ರಾಹಕರ ಸರಾಸರಿ ತಲಾ ಬಳಕೆ(ಪಿಸಿಸಿ) 2024-25ರ ಹಣಕಾಸು ವರ್ಷದಲ್ಲಿ ಸುಮಾರು 4.47ಕ್ಕೆ ಸುಧಾರಿಸಿದೆ.
*****
(Release ID: 2154150)
Read this release in:
Telugu
,
Malayalam
,
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil