ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ ಅವರು ಭಾವನಗರ-ಅಯೋಧ್ಯೆ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು


ಭಾವನಗರ-ಅಯೋಧ್ಯೆ ಎಕ್ಸ್‌ಪ್ರೆಸ್‌ ಸಂಸ್ಕೃತಿ ಮತ್ತು ನಂಬಿಕೆಯನ್ನು ಒಗ್ಗೂಡಿಸುತ್ತದೆ: ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌

ಆಧುನೀಕರಣದೊಂದಿಗೆ, ಸಮಯೋಚಿತ ಮತ್ತು ಸುಸಜ್ಜಿತ ರೈಲು ಸೇವೆಗಳಿಂದ ದೇಶದ ಜನರು ಪ್ರಯೋಜನ ಪಡೆಯುತ್ತಿದ್ದಾರೆ: ಡಾ. ಮನ್ಸುಖ್‌ ಮಾಂಡವಿಯಾ

ಭಾವನಗರ-ಅಯೋಧ್ಯೆ ಸಾಪ್ತಾಹಿಕ ರೈಲು ಭಾವನಗರದ ಶಕ್ತಿಯನ್ನು ಅಯೋಧ್ಯೆಯ ಭಕ್ತಿಯೊಂದಿಗೆ ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ: ಶ್ರೀಮತಿ ನಿಮುಬೆನ್‌ ಬಂಭಾನಿಯಾ

ಭಾವನಗರದಲ್ಲಿ ಎರಡು ಹೊಸ ರೈಲ್ವೆ ಟರ್ಮಿನಲ್‌ಗಳು ಮತ್ತು ಪೋರ್ಟ್‌ ಕಂಟೇನರ್‌ ಟರ್ಮಿನಲ್‌ ಅಭಿವೃದ್ಧಿಪಡಿಸುವುದಾಗಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ ಘೋಷಿಸಿದ್ದಾರೆ

Posted On: 03 AUG 2025 7:56PM by PIB Bengaluru

ಗೌರವಾನ್ವಿತ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ ಅವರು ಇಂದು ಭಾವನಗರ, ಗುಜರಾತ್‌-ಭಾವನಗರ-ಅಯೋಧ್ಯೆ ಎಕ್ಸ್‌ಪ್ರೆಸ್‌ , ರೇವಾ-ಪುಣೆ (ಹಡಪ್ಸರ್‌) ಎಕ್ಸ್‌ಪ್ರೆಸ್‌ ಮತ್ತು ಜಬಲ್ಪುರ-ರಾಯ್ಪುರ ಎಕ್ಸ್‌ಪ್ರೆಸ್‌ ನಡುವೆ ಮೂರು ಹೊಸ ಎಕ್ಸ್‌ಪ್ರೆಸ್‌ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್‌ ಯಾದವ್‌ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್‌ ಸಾಯಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಾವನಗರ-ಅಯೋಧ್ಯೆ ಸಾಪ್ತಾಹಿಕ ರೈಲಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್‌ ಮಾಂಡವಿಯಾ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವರಾದ ಶ್ರೀಮತಿ ನಿಮುಬೆನ್‌ ಬಂಭಾನಿಯಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ ಅವರು, ಈ ಮೂರು ರೈಲುಗಳು ಬಹಳ ಮಹತ್ವದ್ದಾಗಿವೆ. ಭಾವನಗರ-ಅಯೋಧ್ಯೆ ಎಕ್ಸ್‌ಪ್ರೆಸ್‌ ಸಂಸ್ಕೃತಿ ಮತ್ತು ಭಕ್ತಿಯನ್ನು ಸಂಪರ್ಕಿಸುತ್ತದೆ ಮತ್ತು ಭಾವನಗರದಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ. ಪುಣೆ ಇಂದು ಪ್ರಮುಖ ಕೈಗಾರಿಕಾ ನಗರವಾಗಿದ್ದು, ರೇವಾ, ಜಬಲ್ಪುರ, ಸತ್ನಾ ಮತ್ತು ಮೈಹಾರ್‌ಗಳೊಂದಿಗೆ ಸಂಪರ್ಕ ಹೊಂದಿದೆ.

ಈ ಬುಡಕಟ್ಟು ಪ್ರದೇಶಕ್ಕೂ ಈ ರೈಲು ಅತ್ಯಗತ್ಯವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈಲ್ವೆಯೊಂದಿಗೆ ಭಾವನಾತ್ಮಕ ಬಂಧವನ್ನು ಹೊಂದಿದ್ದಾರೆ ಮತ್ತು ರೈಲ್ವೆಯ ಅಭಿವೃದ್ಧಿಗೆ ಯಾವಾಗಲೂ ಒತ್ತು ನೀಡುತ್ತಾರೆ - ಹೊಸ ತಂತ್ರಜ್ಞಾನಗಳನ್ನು ತರುವುದು ಮತ್ತು ಜಾಲವನ್ನು ವಿಸ್ತರಿಸುವುದು. ಕಳೆದ 11 ವರ್ಷಗಳಲ್ಲಿ, ರೈಲ್ವೆ ಭಾರಿ ಪರಿವರ್ತನೆಗೆ ಒಳಗಾಗಿದೆ. ಈ ಅವಧಿಯಲ್ಲಿ, 34,000 ಕಿ.ಮೀ ಹೊಸ ರೈಲ್ವೆ ಹಳಿಗಳನ್ನು ನಿರ್ಮಿಸಲಾಗಿದೆ - ದಿನಕ್ಕೆ ಸರಾಸರಿ 12 ಕಿ.ಮೀ. 1,300 ನಿಲ್ದಾಣಗಳು ಪ್ರಸ್ತುತ ಪುನರಾಭಿವೃದ್ಧಿಯ ಹಂತದಲ್ಲಿವೆ. ಇದು ವಿಶ್ವದ ಅತಿದೊಡ್ಡ ನಿಲ್ದಾಣ ಆಧುನೀಕರಣ ಕಾರ್ಯಕ್ರಮವನ್ನು ರೂಪಿಸುತ್ತದೆ. ನವೀಕರಣದ ಸಮಯದಲ್ಲಿ ನಿಲ್ದಾಣಗಳು ಮತ್ತು ರೈಲುಗಳನ್ನು ಮುಚ್ಚುವ ವಿದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಈ ಕೆಲಸವು ಯಾವುದೇ ಅಡೆತಡೆಯಿಲ್ಲದೆ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ತಿಳಿಸಿದರು.

ಹೊಸ ಪೋರ್‌ಬಂದರ್‌-ರಾಜ್ಕೋಟ್‌ ರೈಲು ಶೀಘ್ರದಲ್ಲೇ ದೈನಂದಿನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಅವರು ಘೋಷಿಸಿದರು. ರಣವಾವ್‌ ನಿಲ್ದಾಣದಲ್ಲಿ ಹೊಸ ಕೋಚ್‌ ನಿರ್ವಹಣಾ ಸೌಲಭ್ಯ, ಹೊಸ ಸರದಿಯಾ-ವಾಂಜಲಿಯಾ ರೈಲ್ವೆ ಮಾರ್ಗ, ಭದ್ರಕಾಳಿ ಗೇಟ್‌, ಪೋರ್‌ಬಂದರ್‌ ನಗರದಲ್ಲಿ ಹೊಸ ಫ್ಲೈಓವರ್‌, ಎರಡು ಹೊಸ ಗತಿ ಶಕ್ತಿ ಸರಕು ಟರ್ಮಿನಲ್‌ಗಳು ಮತ್ತು ಭಾವನಗರದಲ್ಲಿ ಹೊಸ ಬಂದರು ಟರ್ಮಿನಲ್‌ ಎಲ್ಲವೂ ಪೈಪ್ಲೈನ್‌ನಲ್ಲಿವೆ. ಮುಂಬೈನಿಂದ ಅಹಮದಾಬಾದ್‌ಗೆ ದೇಶದ ಮೊದಲ ಬುಲೆಟ್‌ ರೈಲು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ನಿರ್ಮಾಣವು ವೇಗವಾಗಿ ಪ್ರಗತಿಯಲ್ಲಿದೆ ಮತ್ತು ಒಮ್ಮೆ ಕಾರ್ಯರೂಪಕ್ಕೆ ಬಂದ ನಂತರ, ಮುಂಬೈ ಮತ್ತು ಅಹಮದಾಬಾದ್‌ ನಡುವಿನ ಪ್ರಯಾಣದ ಸಮಯ ಕೇವಲ 2 ಗಂಟೆ 7 ನಿಮಿಷಗಳು. ಹೆಚ್ಚುತ್ತಿರುವ ಪ್ರಯಾಣಿಕರ ಸೌಲಭ್ಯಗಳ ಬಗ್ಗೆ ಚರ್ಚಿಸಿದ ಅವರು, ಹೊಸ ಅಮೃತ್‌ ಭಾರತ್‌ ರೈಲನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಇಲ್ಲಿಯವರೆಗೆ, ಅಂತಹ ಸುಮಾರು ಎಂಟು ರೈಲುಗಳು ಪ್ರಾರಂಭವಾಗಿವೆ. ಅಮೃತ್‌ ಭಾರತ್‌ ರೈಲುಗಳು ವಂದೇ ಭಾರತ್‌ ನಂತೆಯೇ ಸೌಲಭ್ಯಗಳನ್ನು ಹೊಂದಿವೆ ಆದರೆ ಗಮನಾರ್ಹವಾಗಿ ಕಡಿಮೆ ದರದಲ್ಲಿಬರುತ್ತವೆ, ಇದು ಹೆಚ್ಚಿನ ಪ್ರಯಾಣಿಕರಿಗೆ ಕೈಗೆಟುಕುವಂತೆ ಮಾಡುತ್ತದೆ.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ.ಮನ್ಸುಖ್‌ ಮಾಂಡವಿಯಾ ಅವರು ತಮ್ಮ ಹೇಳಿಕೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ ದೇಶವು ಬದಲಾಗುತ್ತಿದೆ ಮತ್ತು ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಹೊಸ ಭಾರತ ಉದಯಿಸುತ್ತಿದೆ, ಮತ್ತು ಪರಿವರ್ತನೆ ಮುಂದುವರೆದಂತೆ, ರೈಲ್ವೆ ಕೂಡ ಕ್ರಾಂತಿಕಾರಿ ಬದಲಾವಣೆಗೆ ಒಳಗಾಗುತ್ತಿದೆ. ಆಧುನೀಕರಣದೊಂದಿಗೆ, ನಾಗರಿಕರು ಈಗ ಸಮಯೋಚಿತ ಮತ್ತು ಸುಸಜ್ಜಿತ ರೈಲು ಸೇವೆಗಳನ್ನು ಪಡೆಯುತ್ತಿದ್ದಾರೆ. ರೈಲ್ವೆ ವಲಯದಲ್ಲಿನ ಬದಲಾವಣೆಯು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಪ್ರಮುಖ ಭಾಗವಾಗಿದೆ. ಸೌರಾಷ್ಟ್ರವು ಸಂತರು, ಋುಷಿಮುನಿಗಳು ಮತ್ತು ಭಕ್ತಿಯ ಭೂಮಿಯಾಗಿದೆ ಎಂದು ಅವರು ಹೇಳಿದರು. ಅಯೋಧ್ಯೆ ರೈಲಿನ ಮೂಲಕ, ಈ ಪ್ರದೇಶದ ಜನರಿಗೆ ಈಗ ರಾಮ್‌ ಲಲ್ಲಾಗೆ ಭೇಟಿ ನೀಡುವ ಆಶೀರ್ವಾದದ ಅವಕಾಶ ಸಿಗಲಿದೆ. ಈ ಉಪಕ್ರಮಕ್ಕಾಗಿ ಅವರು ರೈಲ್ವೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯ ಸಚಿವರಾದ ಶ್ರೀಮತಿ ನಿಮುಬೆನ್‌ ಬಂಭಾನಿಯಾ ಅವರು ರೈಲ್ವೆ ಸಚಿವರನ್ನು ಸ್ವಾಗತಿಸಿದರು ಮತ್ತು ಈ ಹೊಸ ರೈಲಿನ ರೂಪದಲ್ಲಿ ಭಾವನಗರಕ್ಕೆ ಈ ಅಮೂಲ್ಯ ಉಡುಗೊರೆಗಾಗಿ ಕೃತಜ್ಞತೆ ಸಲ್ಲಿಸಿದರು. ಈ ರೈಲು ಭಾವನಗರದ ಶಕ್ತಿಯನ್ನು ಅಯೋಧ್ಯೆಯ ಭಕ್ತಿಯೊಂದಿಗೆ ಸಂಪರ್ಕಿಸುವ ಸೇತುವೆಯಂತಿದೆ ಮತ್ತು ಇದು ಭಾವನಗರದ ಜನರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಶಾಸಕರಾದ ಶ್ರೀ ಅರ್ಜುನ್‌ ಭಾಯ್‌ ಮೊಧ್ವಾಡಿಯಾ, ಶ್ರೀ ಜಿತುಭಾಯ್‌ ವಘಾನಿ, ಶ್ರೀಮತಿ ಸೆಜಲ್ಬೆನ್‌ ಪಾಂಡ್ಯ, ಶ್ರೀ ಗೌತಮ್‌ ಭಾಯ್‌ ಚೌಹಾಣ್, ಶ್ರೀ ಭಿಖಾಭಾಯ್‌ ಬಾರಿಯಾ, ಮಹಂತ್‌ ಶ್ರೀ ಶಂಭುನಾಥ್ಜಿ ತುಂಡಿಯಾ, ಶ್ರೀ ಶಿವಭಾಯಿ ಗೋಹಿಲ್‌, ಮೇಯರ್‌ ಶ್ರೀ ಭರತ್‌ ಭಾಯ್‌ ಬರದ್‌, ಜಿಲ್ಲಾಧಿಕಾರಿ ಡಾ.ಮನೀಶ್‌ ಕುಮಾರ್‌ ಬನ್ಸಾಲ್‌, ಆಯುಕ್ತ ಶ್ರೀ ಎನ್‌.ಕೆ.ಮೀನಾ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶ್ರೀ ಹನುಲ್‌ ಚೌಧರಿ, ಪ್ರಾದೇಶಿಕ ಆಯುಕ್ತ ಶ್ರೀ ಧವಳ್‌ ಪಾಂಡ್ಯ, ಶ್ರೀ ಹರ್ಷದ್‌ ಪಟೇಲ್‌, ಶ್ರೀ ಹರ್ಷದ್‌ ಪಟೇಲ್‌, ಹಿರಿಯ ರೈಲ್ವೆ ಅಧಿಕಾರಿಗಳು, ಸಂತರು, ಸ್ಥಳೀಯ ನಾಯಕರು ಮತ್ತು ಭಾವನಗರದ ಹೆಚ್ಚಿನ ಸಂಖ್ಯೆಯ ನಾಗರಿಕರು ಉಪಸ್ಥಿತರಿದ್ದರು.

 

*****
 


(Release ID: 2152001)