ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೆವಾಡಿಯಾದ ಏಕತಾ ಪ್ರತಿಮೆಗೆ ಭೇಟಿ ನೀಡಿದ ಶ್ರೀ ಒಮರ್ ಅಬ್ದುಲ್ಲಾ ಅವರಿಗೆ ಮೆಚ್ಚುಗೆ ನೀಡಿದ ಪ್ರಧಾನಮಂತ್ರಿ

Posted On: 31 JUL 2025 11:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಕೆವಾಡಿಯಾದಲ್ಲಿರುವ ಸಬರಮತಿ ನದಿ ದಂಡೆ ಮತ್ತು ಭವ್ಯವಾದ ಏಕತಾ ಪ್ರತಿಮೆಗೆ ಭೇಟಿ ನೀಡಿದ ಶ್ರೀ ಒಮರ್ ಅಬ್ದುಲ್ಲಾ  ಅವರನ್ನು ಸ್ವಾಗತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಶ್ರೀ ಒಮರ್ ಅಬ್ದುಲ್ಲಾ ಅವರ X ಪೋಸ್ಟ್ ಗೆ   ಪ್ರತಿಕ್ರಿಯಿಸಿ, ಪ್ರಧಾನ ಮಂತ್ರಿ ಹೀಗೆ ಹೇಳಿದ್ದಾರೆ:

"ಕಾಶ್ಮೀರದಿಂದ ಕೆವಾಡಿಯಾಕ್ಕೆ!

ಶ್ರೀ ಒಮರ್ ಅಬ್ದುಲ್ಲಾ ಅವರು ಸಬರಮತಿ ನದಿ ದಂಡೆಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿರುವುದು ಹಾಗೂ ಏಕತಾ ಪ್ರತಿಮೆಗೆ ಭೇಟಿ ನೀಡಿರುವುದನ್ನು ನೋಡಿ ಖುಷಿಯಾಗಿದೆ. ಅವರ ಏಕತಾ ಪ್ರತಿಮೆಯ ಭೇಟಿಯು ಏಕತೆಯ ಮಹತ್ವದ ಸಂದೇಶವನ್ನು ಸಾರುತ್ತದೆ ಮತ್ತು ನಮ್ಮ ಭಾರತೀಯರಿಗೆ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಪ್ರೇರೇಪಿಸುತ್ತದೆ.

@OmarAbdullah"

 

 

*****


(Release ID: 2151248) Visitor Counter : 3