ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ

Posted On: 25 JUL 2025 9:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮ್ಮದ್ ಮುಯಿಝು ಅವರು, ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು.

ಎರಡೂ ದೇಶಗಳ ನಡುವಿನ ಪುರಾತನ ದ್ವಿಪಕ್ಷೀಯ ಬಾಂಧವ್ಯವನ್ನು ಪ್ರತಿಬಿಂಬಿಸುವ ಈ ಸ್ಮರಣಾರ್ಥ ಅಂಚೆ ಚೀಟಿಗಳು, ಕೇರಳದ ಬೇಪೋರ್‌ ನ ಐತಿಹಾಸಿಕ ಹಡಗುಕಟ್ಟೆಗಳಲ್ಲಿ ಕೈಯಿಂದಲೇ ತಯಾರಿಸಲಾದ ಭಾರತದ 'ಉರು' ಎಂಬ ದೊಡ್ಡ ಮರದ ದೋಣಿ ಮತ್ತು ಮಾಲ್ಡೀವ್ಸ್‌ನ ಸಾಂಪ್ರದಾಯಿಕ ಮೀನುಗಾರಿಕಾ ದೋಣಿಯಾದ 'ವಧು ಧೋನಿ'ಯನ್ನು ಒಳಗೊಂಡಿವೆ. ಈ ದೋಣಿಗಳು ಶತಮಾನಗಳಿಂದ ಹಿಂದೂ ಮಹಾಸಾಗರದ ವ್ಯಾಪಾರದ ಭಾಗವಾಗಿವೆ. ಮಾಲ್ಡೀವ್ಸ್‌ ನ ಸಾಂಪ್ರದಾಯಿಕ ಮೀನುಗಾರಿಕಾ ದೋಣಿಯಾದ 'ವಧು ಧೋನಿ'ಯನ್ನು ಹವಳದ ದಿಬ್ಬ ಮತ್ತು ಕರಾವಳಿ ಮೀನುಗಾರಿಕೆಗೆ ಬಳಸಲಾಗುತ್ತದೆ. ಇದು ಮಾಲ್ಡೀವ್ಸ್‌ ನ ಶ್ರೀಮಂತ ಕಡಲ ಪರಂಪರೆಯನ್ನು ಮತ್ತು ದ್ವೀಪ ಜೀವನ ಹಾಗೂ ಸಾಗರದ ನಡುವಿನ ನಿಕಟ ಬಾಂಧವ್ಯವನ್ನು ಬಿಂಬಿಸುತ್ತದೆ.

1965ರಲ್ಲಿ ಮಾಲ್ಡೀವ್ಸ್ ಸ್ವಾತಂತ್ರ್ಯ ಪಡೆದ ನಂತರ, ಅದರೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಸ್ಮರಣಾರ್ಥ ಅಂಚೆ ಚೀಟಿಗಳ ಬಿಡುಗಡೆಯು ಎರಡೂ ದೇಶಗಳ ನಡುವಿನ ನಿಕಟ ಮತ್ತು ಐತಿಹಾಸಿಕ ಬಾಂಧವ್ಯದ ಸಂಕೇತವಾಗಿದೆ.

 

*****


(Release ID: 2148775)