ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಐತಿಹಾಸಿಕ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್ ಟಿಎ) ಅಂಕಿತ ಹಾಕಿದ್ದಕ್ಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ


ಭಾರತವು ಜಾಗತಿಕ ವ್ಯಾಪಾರದಲ್ಲಿ ಮತ್ತೊಂದು ಹೆಗ್ಗುರುತನ್ನು ಸ್ಥಾಪಿಸಿದೆ, ಇದು ಪ್ರತಿಯೊಬ್ಬ ನಾಗರಿಕರಿಗೆ ಹೆಮ್ಮೆ ಮತ್ತು ನಿರೀಕ್ಷೆಯ ಕ್ಷಣವಾಗಿದೆ

ಈ ಒಪ್ಪಂದವು ಪ್ರಧಾನಮಂತ್ರಿ ಮೋದಿ ಅವರ ಜನ ಕೇಂದ್ರಿತ ವ್ಯಾಪಾರ ರಾಜತಾಂತ್ರಿಕತೆಯಾಗಿ ಎದ್ದು ಕಾಣುತ್ತದೆ, ಇದು 95% ಕೃಷಿ ರಫ್ತುಗಳ ಮೇಲಿನ ಸುಂಕವನ್ನು ಮನ್ನಾ ಮಾಡುವ ಮೂಲಕ ನಮ್ಮ ರೈತರಿಗೆ ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಜೊತೆಗೆ 99% ಸಾಗರ ರಫ್ತುಗಳ ಮೇಲೆ ಶೂನ್ಯ ಸುಂಕದೊಂದಿಗೆ ನಮ್ಮ ಮೀನುಗಾರರಿಗೆ ಪ್ರಯೋಜನವನ್ನು ನೀಡುತ್ತದೆ

ನಮ್ಮ ಕರಕುಶಲ ವಸ್ತುಗಳು, ನೇಯ್ಗೆ ವಸ್ತ್ರ, ಜವಳಿ, ಚರ್ಮ, ಪಾದರಕ್ಷೆಗಳು, ರತ್ನಗಳು ಮತ್ತು ಆಭರಣಗಳು ಹಾಗೂ ಆಟಿಕೆಗಳಿಗೆ ವಿಶಾಲ ಮಾರುಕಟ್ಟೆಗಳನ್ನು ತೆರೆಯುವ ಮೂಲಕ ನಮ್ಮ ಸ್ಥಳೀಯ ಉತ್ಪನ್ನಗಳನ್ನು  ಜಾಗತೀಕರಣಗೊಳಿಸುತ್ತದೆ; 'ಮೇಕ್ ಇನ್ ಇಂಡಿಯಾ' ಸಂಕಲ್ಪಕ್ಕೆ ಉತ್ತೇಜನ ನೀಡುತ್ತದೆ. ಅಲ್ಲದೆ, ಈ ಒಪ್ಪಂದವು ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಏರಿಸುತ್ತದೆ

Posted On: 24 JUL 2025 8:28PM by PIB Bengaluru

ಐತಿಹಾಸಿಕ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್ ಟಿಎ) ಅಂಕಿತ ಹಾಕಿದ್ದಕ್ಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.

''ಎಕ್ಸ್' ವೇದಿಕೆಯ ಪೋಸ್ಟ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರು, "ಭಾರತವು ಜಾಗತಿಕ ವ್ಯಾಪಾರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಇದು ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆ ಮತ್ತು ನಿರೀಕ್ಷೆಯ ಕ್ಷಣವಾಗಿದೆ. ಐತಿಹಾಸಿಕ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಒಪ್ಪಂದವು ಮೋದಿ ಅವರ ಜನ ಕೇಂದ್ರಿತ ವ್ಯಾಪಾರ ರಾಜತಾಂತ್ರಿಕತೆಯಾಗಿ ಎದ್ದು ಕಾಣುತ್ತದೆ, ಇದು 95% ಕೃಷಿ ರಫ್ತುಗಳ ಮೇಲಿನ ಸುಂಕವನ್ನು ಮನ್ನಾ ಮಾಡುವ ಮೂಲಕ ನಮ್ಮ ರೈತರಿಗೆ ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಮತ್ತು 99% ಸಾಗರ ರಫ್ತುಗಳ ಮೇಲೆ ಶೂನ್ಯ ಸುಂಕದೊಂದಿಗೆ ನಮ್ಮ ಮೀನುಗಾರರಿಗೆ ಪ್ರಯೋಜನವನ್ನು ನೀಡುತ್ತದೆ. ನಮ್ಮ ಕರಕುಶಲ ವಸ್ತುಗಳು, ನೇಯ್ಗೆ  ಉತ್ಪನ್ನಗಳು, ಜವಳಿ, ಚರ್ಮ, ಪಾದರಕ್ಷೆಗಳು, ರತ್ನಗಳು ಮತ್ತು ಆಭರಣಗಳು ಮತ್ತು ಆಟಿಕೆಗಳಿಗೆ ವ್ಯಾಪಕ ಮಾರುಕಟ್ಟೆಗಳನ್ನು ತೆರೆಯುವ ಮೂಲಕ  ನಮ್ಮ ಸ್ಥಳೀಯ ಉತ್ಪನ್ನಗಳನ್ನು ಜಾಗತೀಕರಣಗೊಳಿಸುತ್ತದೆ ಮತ್ತು ಮೇಕ್ ಇನ್ ಇಂಡಿಯಾ ಸಂಕಲ್ಪಕ್ಕೆ ಉತ್ತೇಜನ ನೀಡುತ್ತದೆ. ಈ ಒಪ್ಪಂದವು ಈ ಉತ್ಪನ್ನಗಳ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ," ಎಂದು ಹೇಳಿದ್ದಾರೆ.

 

 

*****


(Release ID: 2148133)