ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತದಾದ್ಯಂತ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳ ಆಧುನೀಕರಣ ನಡೆಯುತ್ತಿದೆ

Posted On: 23 JUL 2025 4:31PM by PIB Bengaluru

ಎಲ್ಲಾ ರಾಜ್ಯಗಳಲ್ಲಿಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳ (ಡಿಡಿಕೆ) ಆಧುನೀಕರಣ ಮತ್ತು ವಿಸ್ತರಣೆಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.

ಕೇಂದ್ರ ವಲಯದ ಯೋಜನೆಯಾದ ಪ್ರಸಾರ ಮೂಲಸೌಕರ್ಯ ಮತ್ತು ನೆಟ್‌ವರ್ಕ್‌ ಅಭಿವೃದ್ಧಿ (ಬಿಐಎನ್‌ಡಿ) ಅಡಿಯಲ್ಲಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಸಾರ್ವಜನಿಕ ಪ್ರಸಾರವನ್ನು ಬಲಪಡಿಸಲು ಬಿಹಾರ ಸೇರಿದಂತೆ ದೇಶಾದ್ಯಂತ ಪ್ರಮುಖ ನವೀಕರಣಗಳನ್ನು ಇದು ಒಳಗೊಂಡಿದೆ.

2021-26ರ ಅವಧಿಗೆ ಒಟ್ಟು 2,539.61 ಕೋಟಿ ರೂ.ಗಳ ವೆಚ್ಚದೊಂದಿಗೆ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಯೋಜನೆಯ ಗಮನವು ಈ ಕೆಳಗಿನವುಗಳ ಮೇಲೆ ಕೇಂದ್ರೀಕೃತವಾಗಿದೆ:

  • ಪ್ರಸಾರ ಸಾಧನಗಳ ಡಿಜಿಟಲೀಕರಣ ಮತ್ತು ಆಧುನೀಕರಣ
  • ಹಳೆ ವ್ಯವಸ್ಥೆಗಳ ಬದಲಾವಣೆ 
  • ಸ್ಟುಡಿಯೋ ಮತ್ತು ಟ್ರಾನ್ಸ್‌ಮಿಟರ್‌ ಮೂಲಸೌಕರ್ಯಗಳ ಉನ್ನತೀಕರಣ
  • ಹೊಸ ತಂತ್ರಜ್ಞಾನಗಳು ಮತ್ತು ಡಿಜಿಟಲ್‌ ಕೆಲಸದ ಹರಿವುಗಳ ಪರಿಚಯ

ಬಿಹಾರದಲ್ಲಿ ಪ್ರಸಾರ ಮೂಲಸೌಕರ್ಯವನ್ನು ಆಧುನೀಕರಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಮಂಜೂರು ಮಾಡಿದೆ. ಇದರಲ್ಲಿಆಕಾಶವಾಣಿ ಕೇಂದ್ರಗಳ ಆಧುನೀಕರಣಕ್ಕೆ 64.56 ಕೋಟಿ ರೂ., ದೂರದರ್ಶನ ಕೇಂದ್ರಗಳ ಆಧುನೀಕರಣಕ್ಕೆ 4.31 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ.ಎಲ್‌.ಮುರುಗನ್‌ ಅವರು ಇಂದು ಲೋಕಸಭೆಯಲ್ಲಿ ಈ ಮಾಹಿತಿಯನ್ನು ಸಲ್ಲಿಸಿದರು.

 

*****
 


(Release ID: 2147561)