ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸ್ಟಾರ್ಟ್ಅಪ್ ಆಕ್ಸಿಲರೇಟರ್ ವೇವ್‌ಎಕ್ಸ್ ತನ್ನ 'ಭಾಷಾ ಸೇತು' ಸವಾಲಿನ ಗಡುವನ್ನು ಜುಲೈ 30, 2025 ರವರೆಗೆ ವಿಸ್ತರಿಸಿದೆ, ಇದು ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಎಐ ಆಧಾರಿತ ಬಹುಭಾಷಾ ಪರಿಹಾರಗಳನ್ನು ಅನ್ವೇಷಿಸಲು ಉದ್ದೇಶಿಸಿದೆ


ಸರ್ಕಾರರದ ಈ ಉಪಕ್ರಮವು ಸಮಗ್ರ ಮತ್ತು ದೇಶೀಯ ಡಿಜಿಟಲ್ ಆಡಳಿತಕ್ಕಾಗಿ ನೈಜ-ಸಮಯದ ಭಾಷಾ ಅನುವಾದ ಪರಿಹಾರಗಳನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ

Posted On: 22 JUL 2025 6:59PM by PIB Bengaluru

ಭಾರತ ಡಿಜಿಟಲ್ ಆಡಳಿತದಲ್ಲಿ ಮುಂದುವರೆದಂತೆ, ನಾಗರಿಕರು ನೈಜ ಸಮಯದಲ್ಲಿ ತಮ್ಮದೇ ಭಾಷೆಗಳಲ್ಲಿ ಸಂವಹನ ನಡೆಸುವುದು ಅತ್ಯಗತ್ಯವಾಗಿದೆ. ಸಂಪರ್ಕದ ಪ್ರಮಾಣ ಮತ್ತು ವೇಗವನ್ನು ಪೂರೈಸಲು, ಭಾಷಾ ಅಂತರವನ್ನು ನಿವಾರಿಸಲು ಮತ್ತು ಕೊನೆಯ ಮೈಲಿಗೆ ಮಾಹಿತಿಯನ್ನು ಒದಗಿಸಲು ಎಐ-ಆಧಾರಿತ ಪರಿಹಾರಗಳು ಪ್ರಮುಖ ಪಾತ್ರವಹಿಸುತ್ತವೆ.

ಭಾರತದ ಭಾಷಾ ವೈವಿಧ್ಯತೆಗಾಗಿ ಕೃತಕ ಬುದ್ಧಿಮತ್ತೆಯ (ಎಐ) ಶಕ್ತಿಯನ್ನು ಬಳಸಿಕೊಳ್ಳಲು, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ವೇವೆಕ್ಸ್ ಸ್ಟಾರ್ಟ್ಅಪ್ ಆಕ್ಸಿಲರೇಟರ್ ತನ್ನ 'ಭಾಷಾ ಸೇತು' ಸವಾಲಿಗೆ ಮೂಲಮಾದರಿಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ನಮೂದುಗಳನ್ನು ಸಲ್ಲಿಸಲು ಈಗ ಕೊನೆಯ ದಿನಾಂಕ ಜುಲೈ 30, 2025 ಆಗಿದೆ.

'ಭಾಷಾ ಸೇತು ರಿಯಲ್-ಟೈಮ್ ಲ್ಯಾಂಗ್ವೇಜ್ ಟೆಕ್ ಫಾರ್ ಇಂಡಿಯಾ' ಎಂಬ ಶೀರ್ಷಿಕೆಯ ಈ ಸವಾಲು, 12 ಭಾರತೀಯ ಭಾಷೆಗಳಲ್ಲಿ ಯಾವುದಾದರೂ ಒಂದರಲ್ಲಿ ನೈಜ-ಸಮಯದ ಅನುವಾದ, ಲಿಪ್ಯಂತರ ಮತ್ತು ಧ್ವನಿ ಸ್ಥಳೀಕರಣಕ್ಕಾಗಿ ಎಐ-ಚಾಲಿತ ಪರಿಕರಗಳನ್ನು ನಿರ್ಮಿಸಲು ನವೋದ್ಯಮಗಳನ್ನು ಆಹ್ವಾನಿಸುತ್ತದೆ. ಈ ವಿಸ್ತರಣೆಯು ಉದಯೋನ್ಮುಖ ಉದ್ಯಮಗಳು ಮತ್ತು ನಾವೀನ್ಯಕಾರರಿಗೆ ತಮ್ಮ ಪರಿಹಾರಗಳನ್ನು ಪರಿಷ್ಕರಿಸಲು ಮತ್ತು ಪ್ರಸ್ತುತಪಡಿಸಲು ಹೆಚ್ಚುವರಿ ಸಮಯವನ್ನು ಒದಗಿಸುತ್ತದೆ.

ಭಾಷಾ ಸೇತು ಸವಾಲು

ಜೂನ್ 30, 2025 ರಂದು ಪ್ರಾರಂಭವಾದ ಭಾಷಾ ಸೇತು ಸವಾಲು ಈಗಾಗಲೇ ದೇಶಾದ್ಯಂತ ಆರಂಭಿಕ ಹಂತದ ನವೋದ್ಯಮಗಳು ಮತ್ತು ತಂತ್ರಜ್ಞಾನ ಅಭಿವರ್ಧಕರಲ್ಲಿ ತೀವ್ರ ಆಸಕ್ತಿಯನ್ನು ಹುಟ್ಟುಹಾಕಿದೆ. ಈ ಉಪಕ್ರಮವು ಸಮಗ್ರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಓಪನ್‌ ಸೋರ್ಸ್‌ ಅಥವಾ ಕಡಿಮೆ-ವೆಚ್ಚದ ಎಐ ತಂತ್ರಜ್ಞಾನಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ.

ಆಸಕ್ತರು ಅಧಿಕೃತ ವೇವ್‌ಎಕ್ಸ್ ಪೋರ್ಟಲ್ https://wavex.wavesbazaar.com ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ತಮ್ಮ ಮೂಲಮಾದರಿಗಳನ್ನು ಸಲ್ಲಿಸಬಹುದು.

ವೇವ್‌ಎಕ್ಸ್ ಬಗ್ಗೆ

ವೇವ್‌ಎಕ್ಸ್ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೇವ್ಸ್ ಉಪಕ್ರಮದ ಅಡಿಯಲ್ಲಿ ಮೀಸಲಾದ ಸ್ಟಾರ್ಟ್‌ಅಪ್ ಆಕ್ಸಿಲರೇಟರ್ ಪ್ಲಾಟ್‌ಫಾರ್ಮ್ ಆಗಿದ್ದು, ಮಾಧ್ಯಮ, ಮನರಂಜನೆ ಮತ್ತು ಭಾಷಾ ತಂತ್ರಜ್ಞಾನದಲ್ಲಿ ನಾವೀನ್ಯತೆಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಮುಂಬೈನಲ್ಲಿ ನಡೆದ ವೇವ್ಸ್ ಶೃಂಗಸಭೆ 2025 ರಲ್ಲಿ, 30 ಕ್ಕೂ ಹೆಚ್ಚು ನವೋದ್ಯಮಗಳು ಹೂಡಿಕೆದಾರರು, ಸರ್ಕಾರಿ ಸಂಸ್ಥೆಗಳು ಮತ್ತು ತಂತ್ರಜ್ಞಾನ ನಾಯಕರಿಗೆ ನೇರ ಪ್ರಸ್ತಿತಿ ನೀಡಿದವು. ಹ್ಯಾಕಥಾನ್‌ ಗಳು, ಮಾರ್ಗದರ್ಶನ ಮತ್ತು ರಾಷ್ಟ್ರೀಯ ವೇದಿಕೆಗಳ ಮೂಲಕ ವೇವ್‌ಎಕ್ಸ್ ಮುಂದಿನ ಪೀಳಿಗೆಯ ನಾವೀನ್ಯಕಾರರನ್ನು ಸಬಲೀಕರಣಗೊಳಿಸುವುದನ್ನು ಮುಂದುವರೆಸಿದೆ.

ಪ್ರಸ್ತುತ, ವೇವ್‌ಎಕ್ಸ್ ಉಪಕ್ರಮದ ಅಡಿಯಲ್ಲಿ ಭಾಷಾ ಸೇತು (ಎಐ ಆಧಾರಿತ ಭಾಷಾ ಅನುವಾದ) ಮತ್ತು ಕಲಾ ಸೇತು (ಎಐ ಆಧಾರಿತ ಕಂಟೆಂಟ್‌ ರಚನೆ) ಎಂಬ ಎರಡು ಸವಾಲುಗಳನ್ನು ನಡೆಸಲಾಗುತ್ತಿದೆ. ಎರಡೂ ಸವಾಲುಗಳ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಜುಲೈ 30, 2025 ಎಂದು ನಿಗದಿಪಡಿಸಲಾಗಿದೆ.

 

*****

 


(Release ID: 2147158)