ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಚ್‌ನ ಸೌಂದರ್ಯವನ್ನು ನಿರೂಪಿಸುವ ಮತ್ತು ಅಲ್ಲಿಗೆ ಭೇಟಿ ನೀಡಲು ಮೋಟಾರ್‌ ಸೈಕಲ್ ಸವಾರರನ್ನು ಪ್ರೇರೇಪಿಸುವ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ಲಾಘನೆ

प्रविष्टि तिथि: 20 JUL 2025 8:59AM by PIB Bengaluru

ಟಿ.ವಿ.ಎಸ್ ಮೋಟಾರ್ ಕಂಪೆನಿಯ ಶ್ರೀ ವೇಣು ಶ್ರೀನಿವಾಸನ್ ಮತ್ತು ಶ್ರೀ ಸುದರ್ಶನ್ ವೇಣು ಅವರು ನಿನ್ನೆ ನವ ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಕಚ್‌ನ ಘಟನಾವಳಿಗಳನ್ನು ವಿವರಿಸಿ ಅದರ ಸೌಂದರ್ಯವನ್ನು ನಿರೂಪಿಸುವ ಮತ್ತು ಮೋಟಾರ್‌ಸೈಕಲ್ ಸವಾರರು ಅಲ್ಲಿಗೆ ಹೋಗಲು ಪ್ರೇರೇಪಿಸುವ ಅವರ ಪ್ರಯತ್ನಗಳನ್ನು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ.

ಟಿ.ವಿ.ಎಸ್ ಮೋಟಾರ್ ಕಂಪನಿಯ ಎಕ್ಸ್ ಪೋಸ್ಟ್‌ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ: 

“ಶ್ರೀ ವೇಣು ಶ್ರೀನಿವಾಸನ್ ಮತ್ತು ಶ್ರೀ ಸುದರ್ಶನ್ ವೇಣು ಅವರನ್ನು ಭೇಟಿಯಾಗಿ ಸಂತೋಷವಾಯಿತು. ಕಚ್‌ನ ಸೌಂದರ್ಯವನ್ನು ಸವಿಸ್ತಾರವಾಗಿ  ನಿರೂಪಿಸುವ ಮತ್ತು ಮೋಟಾರ್‌ ಸೈಕಲ್ ಸವಾರರನ್ನು ಅಲ್ಲಿಗೆ ಹೋಗಲು ಹುರಿದುಂಬಿಸುವ ಅವರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ”

 

 

*****

 


(रिलीज़ आईडी: 2146240) आगंतुक पटल : 16
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Manipuri , Bengali , Assamese , Punjabi , Gujarati , Tamil , Telugu , Malayalam