ರೈಲ್ವೇ ಸಚಿವಾಲಯ
ಬೃಹತ್ ನೇಮಕಾತಿ ಪ್ರಕ್ರಿಯೆ: ರೈಲ್ವೆಯು ಮೊದಲ ತ್ರೈಮಾಸಿಕದ ಅವಧಿಯಲ್ಲಿ (ಕ್ಯೂ1) 9,000 ಉದ್ಯೋಗಗಳನ್ನು ನೀಡಿದೆ; ಹಣಕಾಸು ವರ್ಷ2025-26ರಲ್ಲಿ 50,000 ಉದ್ಯೋಗಗಳನ್ನು ನೀಡಲಿದೆ
2024 ರಿಂದ 1.08 ಲಕ್ಷ ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗಿದೆ; ಹಣಕಾಸು ವರ್ಷ 2026-27 ರಲ್ಲಿ 50,000 ನೇಮಕಾತಿಯಾಗಲಿದೆ
ನ್ಯಾಯೋಚಿತ ಪರೀಕ್ಷೆಗಳನ್ನು ಖಚಿತಪಡಿಸಿಕೊಳ್ಳಲು, ರೈಲ್ವೆಯು ಅಭ್ಯರ್ಥಿಯ ದೃಢೀಕರಣಕ್ಕಾಗಿ ಆಧಾರ್ ಅನ್ನು ಬಳಸುತ್ತಿದೆ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಮೋಸ ಮಾಡುವ ವ್ಯವಸ್ಥೆಯ ವ್ಯಾಪ್ತಿಯನ್ನು ತೊಡೆದುಹಾಕಲು ಜಾಮರ್ ಗಳ ಬಳಕೆಯನ್ನು ಕೂಡ ಬಳಸುತ್ತಿದೆ
Posted On:
09 JUL 2025 8:33PM by PIB Bengaluru
ರೈಲ್ವೆ ನೇಮಕಾತಿ ಮಂಡಳಿಗಳು (ಆರ್.ಆರ್. ಬಿ.ಗಳು) ನವೆಂಬರ್ 2024 ರಿಂದ 55197 ಖಾಲಿ ಹುದ್ದೆಗಳನ್ನು ಒಳಗೊಂಡಿರುವ ಏಳು ವಿಭಿನ್ನ ಅಧಿಸೂಚನೆಗಳಿಗಾಗಿ ಒಟ್ಟಾರೆ 1.86 ಕೋಟಿಗೂ ಹೆಚ್ಚು ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು (ಸಿಬಿಟಿ) ನಡೆಸಿದೆ. ಇದರ ಜೊತೆಗೆ , 2025-26 ರ ಹಣಕಾಸು ವರ್ಷದಲ್ಲಿ 50,000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿಗಳನ್ನು ನೀಡಲು ಆರ್.ಆರ್. ಬಿ.ಗಳನ್ನು ವ್ಯವಸ್ಥಿತಗೊಳಿಸಿ ಸಕ್ರಿಯಗೊಳಿಸುತ್ತಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್.ಆರ್. ಬಿ.ಗಳು ಈಗಾಗಲೇ 9000ಕ್ಕೂ ಹೆಚ್ಚು ನೇಮಕಾತಿಗಳನ್ನು ಆದೇಶ ಹೊರಡಿಸಿವೆ.
ಆರ್.ಆರ್. ಬಿ.ಗಳು ಪರೀಕ್ಷೆಗಳಿಗೆ ಸಿಬಿಟಿಗಳನ್ನು ನಡೆಸುವುದು ಬೃಹತ್ ಯೋಜನೆ ಮತ್ತು ಸಮನ್ವಯದ ಅಗತ್ಯವಿರುವ ಒಂದು ದೊಡ್ಡ ಕಾರ್ಯಾಚರಣೆಯಾಗಿದೆ. ಆರ್.ಆರ್. ಬಿ. ಗಳು ಇತ್ತೀಚೆಗೆ ಅಭ್ಯರ್ಥಿಗಳ ನಿವಾಸದ ಸ್ಥಳಗಳಿಗೆ ಅತಿ ಸಮೀಪದಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸಲು ಕೂಡ ಸಾಧ್ಯ ಉಪಕ್ರಮವನ್ನು ತೆಗೆದುಕೊಂಡಿವೆ, ಮಹಿಳಾ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದಕ್ಕೆ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ಸೇರಿಸುವುದು ಮತ್ತು ಪರೀಕ್ಷೆಯನ್ನು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ಹೆಚ್ಚಿನ ಮಾನವ ಸಂಪನ್ಮೂಲವನ್ನು ಸಂಗ್ರಹಿಸುವ ಅಗತ್ಯವಿದೆ, ಈ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಆರ್.ಆರ್.ಬಿ. ಗಳು ಪ್ರಕಟಿಸಿದ ವಾರ್ಷಿಕ ವೇಳಾಪಟ್ಟಿ ಪ್ರಕಾರ 2024 ರಿಂದ 108324 ಖಾಲಿ ಹುದ್ದೆಗಳಿಗೆ ಈಗಾಗಲೇ ಹನ್ನೆರಡು ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ 2026-27ರಲ್ಲಿ 50,000ಕ್ಕೂ ಹೆಚ್ಚು ನೇಮಕಾತಿಗಳನ್ನು ನೀಡಲಾಗುವುದು.
ಪರೀಕ್ಷೆಯ ನ್ಯಾಯೋಚಿತತೆಯನ್ನು ಹೆಚ್ಚಿಸಲು, 95% ಕ್ಕಿಂತ ಹೆಚ್ಚಿನ ಯಶಸ್ಸನ್ನು ಸಾಧಿಸುವ ಇಂತಹ ದೊಡ್ಡ ಪ್ರಮಾಣದ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಗುರುತನ್ನು ಮೊದಲ ಬಾರಿಗೆ ದೃಢೀಕರಿಸಲು ಇ-ಕೆವೈಸಿ ಆಧಾರಿತ ಆಧಾರ್ ದೃಢೀಕರಣವನ್ನು ಬಳಸಲಾಗಿದೆ. ಮೋಸ ಮಾಡುವ ವ್ಯಾಪ್ತಿಯನ್ನು ತೊಡೆದುಹಾಕಲು ಆರ್.ಆರ್.ಬಿ. ಗಳ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಈಗ 100% ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಜಾಮರ್‌ಗಳನ್ನು ವ್ಯವಸ್ಥೆಗೊಳಿಸಿ ನಿಯೋಜಿಸಲಾಗಿದೆ.
*****
(Release ID: 2143659)