ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾರಿಷಸ್ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನಮಂತ್ರಿ ದೂರವಾಣಿ ಸಂಭಾಷಣೆ ನಡೆಸಿದರು


ವಿಶೇಷ ಮತ್ತು ವಿಶಿಷ್ಟ ಭಾರತ ಮಾರಿಷಸ್ ಸಂಬಂಧವನ್ನು ಒತ್ತಿ ಹೇಳುತ್ತಾ, ಹೆಚ್ಚಿದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು ಹಂಚಿಕೆಯ ಬದ್ಧತೆಯನ್ನು ಉಭಯನಾಯಕರು ಪುನರುಚ್ಚರಿಸಿದರು
 
ದ್ವಿಪಕ್ಷೀಯ ಅಭಿವೃದ್ಧಿ ಪಾಲುದಾರಿಕೆ ಮತ್ತು ಇತರ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವ ಕ್ರಮಗಳ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರು

11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಮಂತ್ರಿ ರಾಮಗೂಲಂ ಅವರ ಉತ್ಸಾಹಭರಿತ ಭಾಗವಹಿಸುವಿಕೆಗೆ  ಪ್ರಧಾನಮಂತ್ರಿ ಶ್ಲಾಘನೆ 

ಮಹಾಸಾಗರ್ ಮತ್ತು ನೆರೆಹೊರೆ ಮೊದಲು ಎನ್ನುವ ದೃಷ್ಟಿಕೋನ ನೀತಿಗೆ ಅನುಗುಣವಾಗಿ ಮಾರಿಷಸ್ ನ ಅಭಿವೃದ್ಧಿ ಆದ್ಯತೆಗಳಿಗೆ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ಮೋದಿ ಪುನರುಚ್ಚರಿಸಿದರು

Posted On: 24 JUN 2025 9:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾರಿಷಸ್ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಡಾ. ನವೀನ್ ಚಂದ್ರ ರಾಮಗೂಲಂ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಭಾರತ ಮತ್ತು ಮಾರಿಷಸ್ ನಡುವಿನ ವಿಶೇಷ ಮತ್ತು ವಿಶಿಷ್ಟ ಸಂಬಂಧಗಳನ್ನು ಒತ್ತಿ ಹೇಳುತ್ತಾ, ಎರಡೂ ದೇಶಗಳ ನಡುವಿನ ಹೆಚ್ಚಿದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸುವ ಹಂಚಿಕೆಯ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.

ಅಭಿವೃದ್ಧಿ ಪಾಲುದಾರಿಕೆ, ಸಾಮರ್ಥ್ಯ ವೃದ್ಧಿ, ರಕ್ಷಣೆ, ಕಡಲ ಭದ್ರತೆ, ಡಿಜಿಟಲ್ ಮೂಲಸೌಕರ್ಯ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಹಕಾರದ ಕುರಿತು ಅವರು ಚರ್ಚಿಸಿದರು.

11ನೇ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಮಂತ್ರಿ ರಾಮ್ಗೂಲಂ ಅವರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ಮಹಾಸಾಗರ್ ಮತ್ತು ನೆರೆಹೊರೆ ಮೊದಲು ಎನ್ನುವ ದೃಷ್ಟಿಕೋನ ನೀತಿಗೆ ಅನುಗುಣವಾಗಿ ಮಾರಿಷಸ್ ನ ಅಭಿವೃದ್ಧಿ ಆದ್ಯತೆಗಳಿಗೆ ಭಾರತದ ದೃಢ ಬದ್ಧತೆಯನ್ನು ಪ್ರಧಾನಮಂತ್ರಿ ಮೋದಿಯವರು ಪುನರುಚ್ಚರಿಸಿದರು.

ಭಾರತಕ್ಕೆ ಶೀಘ್ರದಲ್ಲೇ ಭೇಟಿ ನೀಡುವಂತೆ ಪ್ರಧಾನಮಂತ್ರಿ ರಾಮ್ಗೂಲಂ ಅವರಿಗೆ ಮೋದಿಯವರು ಆಹ್ವಾನ ನೀಡಿದರು. ಇಬ್ಬರೂ ನಾಯಕರು ಸಂಪರ್ಕ  ಮುಂದುವರಿಕೆಯನ್ನು   ದೃಢಪಡಿಸಿದರು.

 

*****


(Release ID: 2140644)