ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ - III ಗೌರವ ಪ್ರದಾನ
Posted On:
16 JUN 2025 1:33PM by PIB Bengaluru
ಸೈಪ್ರಸ್ ಅಧ್ಯಕ್ಷರಾದ ಮಾನ್ಯ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸೈಪ್ರಸ್ ಗೌರವವಾದ - "ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III" ಅನ್ನು ಪ್ರದಾನ ಮಾಡಿದರು.
1.4 ಶತಕೋಟಿ ಭಾರತೀಯರ ಪರವಾಗಿ ಈ ಗೌರವವನ್ನು ಸ್ವೀಕರಿಸಿದ ಪ್ರಧಾನಮಂತ್ರಿಯವರು, ಅಲ್ಲಿನ ಅಧ್ಯಕ್ಷರು, ಸರ್ಕಾರ ಮತ್ತು ಸೈಪ್ರಸ್ ಜನರಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಮತ್ತು ಸೈಪ್ರಸ್ ನಡುವಿನ ಹಂಚಿತ ಮೌಲ್ಯಗಳು ಮತ್ತು ಪರಸ್ಪರ ನಂಬಿಕೆಯ ಮೇಲೆ ನಿರ್ಮಿಸಲ್ಪಟ್ಟ ದೀರ್ಘಕಾಲೀನ ಆತ್ಮೀಯ ಸಂಬಂಧಗಳಿಗೆ ಅವರು ಈ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ, ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಭಾರತದ ದೃಷ್ಟಿಕೋನವಾದ "ವಸುಧೈವ ಕುಟುಂಬಕಂ" ಅಥವಾ "ಜಗತ್ತು ಒಂದು ಕುಟುಂಬ" ಎಂಬ ಭಾರತದ ಪ್ರಾಚೀನ ತತ್ವಶಾಸ್ತ್ರವನ್ನು ಈ ಪ್ರಶಸ್ತಿಯು ಗುರುತಿಸಿದೆ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಸೈಪ್ರಸ್ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಮತ್ತು ವೈವಿಧ್ಯಮಯ ವಲಯಗಳಿಗೆ ವಿಸ್ತರಿಸುವ ನವ ಬದ್ಧತೆಯಾಗಿ ಪ್ರಧಾನಮಂತ್ರಿ ಅವರು ಗೌರವವನ್ನು ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಯು ಶಾಂತಿ, ಭದ್ರತೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸಮೃದ್ಧಿಗೆ ಉಭಯ ದೇಶಗಳ ಅಚಲ ಬದ್ಧತೆಯ ಸಂಕೇತವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
*****
(Release ID: 2136626)
Read this release in:
English
,
Urdu
,
Marathi
,
Hindi
,
Nepali
,
Manipuri
,
Bengali-TR
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam