ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾರಾಣಾ ಪ್ರತಾಪ್ ಜಯಂತಿ ಪ್ರಯುಕ್ತ ಪ್ರಧಾನಮಂತ್ರಿಗಳಿಂದ ಗೌರವ ಸಲ್ಲಿಕೆ

प्रविष्टि तिथि: 09 MAY 2025 2:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀರ ಯೋಧ ಮಹಾರಾಣಾ ಪ್ರತಾಪ್ ಅವರ ಜಯಂತಿಯಂದು ಅವರಿಗೆ ಅತ್ಯಂತ ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ.

ಶ್ರೀ  ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ;

ದೇಶದ ಅಮರ ಯೋಧ ಮಹಾರಾಣಾ ಪ್ರತಾಪ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಕೋಟಿ-ಕೋಟಿ ನಮನಗಳು. ಮಾತೃಭೂಮಿಯ ಸ್ವಾಭಿಮಾನವನ್ನು ಕಾಪಾಡಲು ಅವರು ಪ್ರದರ್ಶಿಸಿದ ಧೈರ್ಯ ಮತ್ತು ಶೌರ್ಯ ಇಂದಿಗೂ ನಮ್ಮ ನಾಯಕರು ಮತ್ತು ಯುವಜನತೆಗೆ ಮಾರ್ಗದರ್ಶಕ ಬೆಳಕಾಗಿ ಉಳಿದಿದೆ. ಭಾರತ ಮಾತೆಗೆ ಸಮರ್ಪಿತವಾದ ಅವರ ಧೈರ್ಯದ ಜೀವನವು ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ.

 

 

*****


(रिलीज़ आईडी: 2128309) आगंतुक पटल : 19
इस विज्ञप्ति को इन भाषाओं में पढ़ें: Malayalam , English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu