ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸಹಭಾಗೀದಾರರು ಮತ್ತು ಸೃಜನಶೀಲ ವಿಷಯ ಸಾಮಗ್ರಿ ತಯಾರಕರಿಗೆ ವೇವ್ಸ್ ಶಕ್ತಿಶಾಲಿ ವೇದಿಕೆ: ಹಿಮೇಶ್ ರೇಶಮಿಯಾ
"ಭಾರತೀಯ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು" ಶೀರ್ಷಿಕೆಯಡಿ ಭಾರತೀಯ ಸಂಗೀತದ ಮೇಲೆ ಬೆಳಕು ಚೆಲ್ಲಿದ ವೇವ್ಸ್ 2025
Posted On:
04 MAY 2025 5:46PM
|
Location:
PIB Bengaluru
ವೇವ್ಸ್ 2025 ಶೃಂಗಸಭೆಯ ಮೂರನೇ ದಿನ "ಭಾರತೀಯ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು" ಎಂಬ ಶೀರ್ಷಿಕೆಯ ಹೆಗ್ಗುರುತು ಅಧಿವೇಶನ ನಡೆಯಿತು. ಭಾರತೀಯ ಸಂಗೀತದ ಜಾಗತಿಕ ವಿಸ್ತರಣೆ ಮತ್ತು ಮುಂದಿನ ಅವಕಾಶಗಳ ಬಗ್ಗೆ ಚರ್ಚಿಸಲು ಒಟ್ಟುಗೂಡಿದ ಈ ಗೋಷ್ಠಿಯಲ್ಲಿ ಉದ್ಯಮದ ದೂರದೃಷ್ಟಿಯ ಚಿಂತನಾಶೀಲ ವ್ಯಕ್ತಿಗಳು ಮತ್ತು ಪರಿವರ್ತನಕಾರರುಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಪಾಲ್ಗೊಂಡಿತ್ತು.
ಈ ಶಕ್ತಿಯುತವಾದ ಅಧಿವೇಶನವು ಭಾರತೀಯ ಮತ್ತು ಅಂತರರಾಷ್ಟ್ರೀಯ ಸಂಗೀತ ಉದ್ಯಮಗಳ ಕೆಲವು ಗೌರವಾನ್ವಿತರನ್ನು ಒಟ್ಟುಗೂಡಿಸಿತು, ಅವರು ಕಲಾವಿದರ ಅಭಿವೃದ್ಧಿ, ಸಂಗೀತ ಪ್ರಚಾರ, ಡಿಜಿಟಲ್ ಬೆಳವಣಿಗೆ, ಅಂತರರಾಷ್ಟ್ರೀಯ ಸಹಯೋಗಗಳು ಮತ್ತು ಉದ್ಯಮದ ನಾವೀನ್ಯತೆಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.

ಖ್ಯಾತ ಬಾಲಿವುಡ್ ಸಂಗೀತ ಸಂಯೋಜಕ ಮತ್ತು ಗಾಯಕ ಹಿಮೇಶ್ ರೇಶಮಿಯಾ ಅವರು ವೇವ್ಸ್ 2025 ನ್ನು ಸಹಯೋಗಗಳು ಮತ್ತು ಸೃಜನಶೀಲ ವಿಷಯ ತಯಾರಕರಿಗೆ ಶಕ್ತಿಯುತ ವೇದಿಕೆ ಎಂದು ಬಣ್ಣಿಸಿದರು. ಹೊಸಬರಿಗೆ ವಿಷಯ ಸಾಮಗ್ರಿ ತಯಾರಿಯ ಮಹತ್ವವನ್ನು ಒತ್ತಿ ಹೇಳಿದ ಅವರು, ತಮ್ಮ ಸಂಗೀತ ಕಲಾ ಸಾಮಗ್ರಿಯನ್ನು ಇತರರಿಗೆ ತೋರಿಸಲು ಸದಾ ಸಿದ್ಧವಾಗಿರುವಂತೆ ಪೋರ್ಟ್ಫೋಲಿಯೊವನ್ನು ತಯಾರಿಸಿಕೊಂಡಿಡುವಂತೆ ಮತ್ತು ಅದನ್ನು ಸದಾ ಸುಧಾರಿಸುತ್ತಿರುವಂತೆ ಸಲಹೆ ನೀಡಿದರು. ತಮ್ಮ ಸ್ವಂತ ಪ್ರಯಾಣದ ಬಗ್ಗೆ ಪ್ರತಿಬಿಂಬಿಸಿದ ಅವರು, ಈ ಹಿಂದೆ ಸೀಮಿತ ಅವಕಾಶಗಳಿದ್ದವು, ಇಂದು ಮಹತ್ವಾಕಾಂಕ್ಷಿ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸ್ವತಂತ್ರ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬಹುದು, ಆ ಅವಕಾಶ ಅವರಿಗಿದೆ ಎಂದರು. ಆದಾಗ್ಯೂ, ಸಂಗೀತದ ಗುಣಮಟ್ಟವು ಅತ್ಯಂತ ನಿರ್ಣಾಯಕ ಅಂಶವಾಗಿರುತ್ತದೆ ಎಂದು ಅವರು ಒತ್ತಿ ಹೇಳಿದರು - ಪ್ರೇಕ್ಷಕರೊಂದಿಗೆ ನಿಜವಾಗಿಯೂ ಸಂಪರ್ಕ ಸಾಧಿಸಲು ಮತ್ತು ಉದ್ಯಮದಲ್ಲಿ ಛಾಪು ಮೂಡಿಸಲು ಇದು ಆಕರ್ಷಕ ಮತ್ತು ಸುಮಧುರವಾಗಿರಬೇಕು ಎಂದವರು ಅಭಿಪ್ರಾಯಪಟ್ಟರು.

ಯುನಿವರ್ಸಲ್ ಮ್ಯೂಸಿಕ್ ನ ಉಪಾಧ್ಯಕ್ಷ ಕ್ವೀ ಟಿಯಾಂಗ್, ಏಷ್ಯಾ ಮತ್ತು ಜಾಗತಿಕ ಸಂಗೀತ ಮಾರುಕಟ್ಟೆಗಳ ವಿಕಸನಗೊಳ್ಳುತ್ತಿರುವ ಚಲನಶಾಸ್ತ್ರದ ಬಗ್ಗೆ ಒಳನೋಟದ ದೃಷ್ಟಿಕೋನಗಳನ್ನು ಹಂಚಿಕೊಂಡರು. ಭಾರತೀಯ ಪ್ರತಿಭೆಗಳನ್ನು ಪೋಷಿಸುವ ಮತ್ತು ಅವರ ಯಶಸ್ಸಿಗೆ ಜಾಗತಿಕ ಮಾರ್ಗಗಳನ್ನು ನಿರ್ಮಿಸುವ ಯುನಿವರ್ಸಲ್ ಮ್ಯೂಸಿಕ್ ನ ಬದ್ಧತೆಯನ್ನು ಅವರು ಪುನರುಚ್ಚರಿಸಿದರು, ಅದೇ ಸಮಯದಲ್ಲಿ ಭಾರತದಲ್ಲಿ ಹೆಚ್ಚು ಸುಸ್ಥಿರ ಮತ್ತು ಮೌಲ್ಯ-ಚಾಲಿತ ಸಂಗೀತ ಬಳಕೆಯ ಸಂಸ್ಕೃತಿಯ ಅಗತ್ಯವನ್ನು ಒತ್ತಿ ಹೇಳಿದರು.
ಸಂಗೀತ ತಂತ್ರಜ್ಞಾನ ಮತ್ತು ಕೃತಿಸ್ವಾಮ್ಯ ರಕ್ಷಣೆಯ ನಾಯಕ, ಐ ಎಫ್ ಪಿ ಐ (ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ದಿ ಫೋನೊಗ್ರಾಫಿಕ್ ಇಂಡಸ್ಟ್ರಿ) ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ.ರಿಚರ್ಡ್ ಗೂಚ್, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಸಂಗೀತವನ್ನು ರಕ್ಷಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ದತ್ತಾಂಶ -ಚಾಲಿತ ತಂತ್ರಗಳು ಮತ್ತು ಜಾಗತಿಕ ಮಾನದಂಡಗಳ ಪಾತ್ರವನ್ನು ಒತ್ತಿ ಹೇಳಿದರು.

ವಿಶ್ವದ ಅತಿದೊಡ್ಡ ಸಂಗೀತ ಪ್ರಕಾಶನ/ಪ್ರಸಾರಕ ಸಂಸ್ಥೆಗಳಲ್ಲಿ ಒಂದನ್ನು ಪ್ರತಿನಿಧಿಸುವ ಸೋನಿ ಮ್ಯೂಸಿಕ್ ಪಬ್ಲಿಷಿಂಗ್ ನ ಕಾರ್ಯನಿರ್ವಾಹಕ ದಿನರಾಜ್ ಶೆಟ್ಟಿ ಅವರು ಸಂಗೀತ ಹಕ್ಕುಗಳ ನಿರ್ವಹಣೆ ಮತ್ತು ಸ್ಟ್ರೀಮಿಂಗ್ ಯುಗದಲ್ಲಿ ಭಾರತೀಯ ಗೀತರಚನೆಕಾರರು ಮತ್ತು ಸಂಯೋಜಕರು ತಮ್ಮ ಕೆಲಸಕ್ಕೆ ಹೇಗೆ ಉತ್ತಮವಾಗಿ ಹಣಗಳಿಸಬಹುದು ಎಂಬುದರ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.

ಸರಿಗಮದ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಮೆಹ್ರಾ, ಕಲಾವಿದರು ಮತ್ತು ಸಂಗೀತ ಲೇಬಲ್ ಗಳ ನಡುವಿನ ಸಹಜೀವನದ ಸಂಬಂಧವನ್ನು ಒತ್ತಿಹೇಳಿದರು, ಉದ್ಯಮವು ಬೆಳೆಯುವಲ್ಲಿ ಇಬ್ಬರೂ ಗೌರವಕ್ಕೆ ಅರ್ಹರು ಎಂದು ಒತ್ತಿ ಹೇಳಿದರು. ಕಲಾವಿದರನ್ನು ಅವರ ಸೃಜನಶೀಲತೆಗೆ ಗೌರವಿಸಬೇಕು, ಆದರೆ ಸಂಗೀತದಲ್ಲಿ ಆರ್ಥಿಕ ಹೂಡಿಕೆಗಾಗಿ ಲೇಬಲ್ ಗಳನ್ನು ಗುರುತಿಸಬೇಕು ಎಂಬುದರತ್ತ ಅವರು ಬೆಟ್ಟು ಮಾಡಿದರು. ದೃಢವಾದ ಚಂದಾದಾರಿಕೆ ಆಧಾರಿತ ಮಾರುಕಟ್ಟೆ, ಸುಗಮ ಸರ್ಕಾರಿ ನೀತಿಗಳು ಮತ್ತು ಪೈರಸಿ ವಿರುದ್ಧ ಕಠಿಣ ಕ್ರಮದ ಅಗತ್ಯವನ್ನು ಮೆಹ್ರಾ ಒತ್ತಿ ಹೇಳಿದರು, ಪೈರಸಿಯು ಸಂಗೀತ ಉದ್ಯಮಕ್ಕೆ ಗಮನಾರ್ಹವಾಗಿ ಹಾನಿ ಮಾಡಿದೆ ಎಂದರು.
ವಾರ್ನರ್ ಮ್ಯೂಸಿಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜಯ್ ಮೆಹ್ತಾ ಅವರು ಭಾರತೀಯ ಸಂಗೀತ ಉದ್ಯಮದ ಭವಿಷ್ಯದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು, ವೇಗವಾಗಿ ಬೆಳೆಯುತ್ತಿರುವ ದೇಶದ ಜಿಡಿಪಿ ಮತ್ತು ಅದಕ್ಕೆ ಹೋಲಿಸಿದಾಗ ಸಂಗೀತ ಕ್ಷೇತ್ರದ ನಿಶ್ಚಲ ಬೆಳವಣಿಗೆಯನ್ನು ಎತ್ತಿ ತೋರಿಸಿದರು. ಆರ್ಥಿಕ ವಿಸ್ತರಣೆಯ ಹೊರತಾಗಿಯೂ, ಸಂಗೀತ ಉದ್ಯಮವು ವೇಗವನ್ನು ಕಾಯ್ದುಕೊಂಡಿಲ್ಲ, ಮುಖ್ಯವಾಗಿ ನಗದೀಕರಣ ಮತ್ತು ಗ್ರಾಹಕರ ನಡವಳಿಕೆಯಲ್ಲಿನ ಸವಾಲುಗಳಿಂದಾಗಿ ಈ ಸ್ಥಿತಿ ಏರ್ಪಟ್ಟಿದೆ ಎಂದರು. ಆದಾಗ್ಯೂ, ಆಶಾವಾದವನ್ನು ವ್ಯಕ್ತಪಡಿಸಿದ ಮೆಹ್ತಾ, ಭಾರತೀಯ ಗ್ರಾಹಕರು ಪಾವತಿಸಲು ಸಿದ್ಧರಿದ್ದಾರೆ ಆದರೆ ಅದು ವಿಷಯ ಸಾಮಗ್ರಿಯು ನಿಜವಾಗಿಯೂ ಬಲವಾಗಿದ್ದಾಗ ಮತ್ತು ಉತ್ತಮ ಗುಣಮಟ್ಟದ್ದಾಗಿದ್ದಾಗ ಮಾತ್ರ ಎಂದು ಹೇಳಿದರು. ಉದ್ಯಮದ ಸಂಪೂರ್ಣ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಹೊಸ ಪ್ರತಿಭೆಗಳನ್ನು ಕಂಡುಹಿಡಿಯುವುದು, ಪ್ರಕಾರದ ವೈವಿಧ್ಯತೆಯನ್ನು ಉತ್ತೇಜಿಸುವುದು ಮತ್ತು ಭಾರತೀಯ ಹಾಗು ಜಾಗತಿಕ ಸಂಗೀತ ದೃಶ್ಯಗಳ ನಡುವೆ ಬಲವಾದ ಸಂಪರ್ಕಗಳನ್ನು ನಿರ್ಮಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ನೀತಿ ಮತ್ತು ನಿಯಂತ್ರಕ ಕ್ಷೇತ್ರದಲ್ಲಿ ಪ್ರಮುಖ ಧ್ವನಿಯಾಗಿರುವ ಫರ್ನಾಂಡಿಸ್ ಅವರು ಭಾರತದ ಸಂಗೀತ ಉದ್ಯಮದ ಸ್ಥೂಲ ಆರ್ಥಿಕ ಅವಲೋಕನವನ್ನು ಒದಗಿಸಿದರು ಮತ್ತು ಬಲವಾದ ಚೌಕಟ್ಟುಗಳು, ಹಕ್ಕುಗಳ ರಕ್ಷಣೆ ಹಾಗು ಡಿಜಿಟಲ್ ನಾವೀನ್ಯತೆಯ ಅಗತ್ಯವನ್ನು ಪ್ರತಿಪಾದಿಸಿದರು.
ಗೌರವಾನ್ವಿತ ಸಂಗೀತ ಉದ್ಯಮಿ ಮತ್ತು ಜಾಗತಿಕ ಸಲಹೆಗಾರ ಸ್ಕಾಟ್ ಡಿ ಮರ್ಕಾಡೊ ಅವರು ಅಧಿವೇಶನವನ್ನು ಕೌಶಲ್ಯಯುಕ್ತವಾಗಿ ನಿರ್ವಹಿಸಿದರು, ಒಳನೋಟದ ಪ್ರಶ್ನೆಗಳೊಂದಿಗೆ ಪ್ರತಿಯೊಬ್ಬ ಭಾಷಣಕಾರರ ವಿಶಿಷ್ಟ ದೃಷ್ಟಿಕೋನಗಳು ಮತ್ತು ಆಲೋಚನೆಗಳನ್ನು ಹೊರತಂದರು. ಸೃಜನಶೀಲತೆಯ ಪ್ರಮುಖ ಪಾತ್ರವನ್ನು ಒತ್ತಿಹೇಳಿದ ಅವರು, ಕಲಾವಿದರು ಉದ್ಯಮದ ನಿಜವಾದ ಹೀರೋಗಳು, ಮತ್ತು ಅವರನ್ನು ಬೆಂಬಲಿಸಲು ಹಾಗು ಸಬಲೀಕರಣಗೊಳಿಸಲು ಪರಿಸರ ವ್ಯವಸ್ಥೆಯನ್ನು ನಿರ್ಮಿಸಬೇಕು ಎಂದು ಹೇಳಿದರು.
ನೈಜ ಸಮಯದ ಅಧಿಕೃತ ಮಾಹಿತಿಗಳಿಗಾಗಿ, ದಯವಿಟ್ಟು ನಮ್ಮನ್ನು ಅನುಸರಿಸಿ:
On X :
https://x.com/WAVESummitIndia
https://x.com/MIB_India
https://x.com/PIB_India
https://x.com/PIBmumbai
On Instagram:
https://www.instagram.com/wavesummitindia
https://www.instagram.com/mib_india
https://www.instagram.com/pibindia
*****
Release ID:
(Release ID: 2126939)
| Visitor Counter:
12