WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ 2025ರ ವಿಚಾರ ಗೋಷ್ಠಿಗಳಲ್ಲಿ ಕ್ರೀಡೆ ಮತ್ತು ತಂತ್ರಜ್ಞಾನದಲ್ಲಿನ ನಾವೀನ್ಯತೆಗಳ ಅನ್ವೇಷಣೆ


ವೇವ್ಸ್ 2025 ರಲ್ಲಿ ಗಮನಸೆಳೆದ ಸೌದಿ ಅರೇಬಿಯಾದ ಇ-ಸ್ಪೋರ್ಟ್ಸ್ ಮಹತ್ವಾಕಾಂಕ್ಷೆ

ದೃಷ್ಟಿಕೋನ, ಹೂಡಿಕೆ ಮತ್ತು ನಾವೀನ್ಯತೆ ಸೌದಿ ಗೇಮಿಂಗ್ ಬೆಳವಣಿಗೆಯನ್ನು ಚಾಲನೆ ಮಾಡುತ್ತಿದೆ

"ಇಂದು, ಮಾಧ್ಯಮ ಮತ್ತು ತಂತ್ರಜ್ಞಾನವು ನಿಮ್ಮ ಕಿಟ್‌ ನಲ್ಲಿರುವ ಹೆಲ್ಮೆಟ್‌ ನಷ್ಟೇ ಅವಶ್ಯಕವಾಗಿದೆ:" ವೇವ್ಸ್ 2025ರಲ್ಲಿ ರವಿಶಾಸ್ತ್ರಿ

 Posted On: 02 MAY 2025 8:27PM |   Location: PIB Bengaluru

ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್‌ 2025 ರ 2 ನೇ ದಿನದಂದು ಕ್ರೀಡೆ ಮತ್ತು ಇ-ಸ್ಪೋರ್ಟ್‌ ಭವಿಷ್ಯದ ಕುರಿತು ಎರಡು ವಿಚಾರಗೋಷ್ಠಿಗಳು ನಡೆದವು, ನಿರ್ದಿಷ್ಟವಾಗಿ ಮಾಧ್ಯಮ, ತಂತ್ರಜ್ಞಾನ ಮತ್ತು ಕಥೆ ಹೇಳುವಿಕೆಯು ಜಾಗತಿಕ ತೊಡಗಿಸಿಕೊಳ್ಳುವಿಕೆಯನ್ನು ಹೇಗೆ ಮರುರೂಪಿಸುತ್ತಿದೆ ಎಂಬುದರ ಮೇಲೆ ಕೇಂದ್ರೀಕರಿಸಲಾಯಿತು.

ಗೇಮಿಂಗ್ ಕ್ರಾಂತಿ: ಭವಿಷ್ಯಕ್ಕಾಗಿ ಒಂದು ದಿಟ್ಟ ದೃಷ್ಟಿಕೋನ

"ಜಾಗತಿಕ ಶಕ್ತಿ ಕೇಂದ್ರವನ್ನು ನಿರ್ಮಿಸುವುದು: ಗೇಮಿಂಗ್ ಮತ್ತು ಇಸ್ಪೋರ್ಟ್‌ ಗಳಿಗಾಗಿ ಸೌದಿ ಅರೇಬಿಯಾದ ದೃಷ್ಟಿಕೋನ" ಎಂಬ ಶೀರ್ಷಿಕೆಯ ಫೈರ್‌ ಸೈಡ್ ಚಾಟ್‌ ನಲ್ಲಿ, ಸೌದಿ ಇಸ್ಪೋರ್ಟ್ಸ್ ಫೆಡರೇಶನ್‌ ಅಧ್ಯಕ್ಷರಾದ ಘನತೆವೆತ್ತ ಫೈಸಲ್ ಬಿನ್ ಬಂದರ್ ಬಿನ್ ಸುಲ್ತಾನ್ ಅಲ್ ಸೌದ್, ಜಾಗತಿಕ ಇಸ್ಪೋರ್ಟ್ಸ್ ಸನ್ನಿವೇಶವನ್ನು ಮರು ವ್ಯಾಖ್ಯಾನಿಸಲು ಸೌದಿಯ ವ್ಯಾಪಕ ಯೋಜನೆಗಳನ್ನು ಪ್ರಸ್ತುತಪಡಿಸಿದರು. ಜೆಟ್‌ಸಿಂಥೆಸಿಸ್‌ ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಗಿರೀಶ್ ಮೆನನ್ ಅವರು ನಡೆಸಿಕೊಟ್ಟ ಗೋಷ್ಠಿಯು, ಯುವಜನ ಚಾಲಿತ ನೀತಿಗಳು, ಕಾರ್ಯತಂತ್ರದ ಹೂಡಿಕೆಗಳು ಮತ್ತು ಜಾಗತಿಕ ಪಾಲುದಾರಿಕೆಗಳು ಸೌದಿ ಅರೇಬಿಯಾವನ್ನು ಗೇಮಿಂಗ್ ಮತ್ತು ಇಸ್ಪೋರ್ಟ್ಸ್ ನಾವೀನ್ಯತೆಗಾಗಿ ಉದಯೋನ್ಮುಖ ಕೇಂದ್ರವಾಗಿ ಹೇಗೆ ಪರಿವರ್ತಿಸುತ್ತಿದೆ ಎಂಬುದನ್ನು ಪರಿಶೋಧಿಸಿತು.

ತನ್ನ ಜನಸಂಖ್ಯೆಯ ಶೇ.67 ಕ್ಕಿಂತ ಹೆಚ್ಚು ಜನರು ಆಟಗಾರರಾಗಿ ಗುರುತಿಸಿಕೊಳ್ಳುತ್ತಿರುವುದರಿಂದ, ಸೌದಿ ಅರೇಬಿಯಾ ದೀರ್ಘಕಾಲೀನ ಸುಸ್ಥಿರತೆಗಾಗಿ ವಿನ್ಯಾಸಗೊಳಿಸಲಾದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಗೇಮರ್ಸ್ ವಿಥೌಟ್ ಬಾರ್ಡರ್ಸ್‌ ನಂತಹ ಮಹತ್ವದ ಕಾರ್ಯಕ್ರಮಗಳಿಂದ ಹಿಡಿದು ಇಸ್ಪೋರ್ಟ್ಸ್ ವಿಶ್ವಕಪ್‌ ನ ಆತಿಥ್ಯದವರೆಗೆ, ದೇಶವು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ.

ಈ ದೃಷ್ಟಿಕೋನದ ಮೂಲಾಧಾರ ಸೌದಿ ಇಸ್ಪೋರ್ಟ್ಸ್ ಅಕಾಡೆಮಿ, ಇದು ಯುವ ವೃತ್ತಿಪರರಿಗೆ ಅರ್ಥಪೂರ್ಣ ವೃತ್ತಿ ಮಾರ್ಗಗಳನ್ನು ಸೃಷ್ಟಿಸುವ ವಿವಿಧ ಕ್ಷೇತ್ರಗಳಲ್ಲಿ –ಕೋಚಿಂಗ್‌, ಈವೆಂಟ್ ನಿರ್ಮಾಣ, ಆಟದ ಅಭಿವೃದ್ಧಿ - ತರಬೇತಿಯನ್ನು ನೀಡುತ್ತದೆ. ಅಕಾಡೆಮಿಯ ಪ್ರಯತ್ನಗಳು ಕಂಟೆಂಟ್‌ ರಚನೆಕಾರರನ್ನು ಬೆಂಬಲಿಸುತ್ತಿವೆ, ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ಗಡಿಯಾಚೆಗಿನ ಸಹಯೋಗದ ಮೇಲೆ ನಿರ್ಮಿಸಲಾದ ಅಂತರ್ಗತ ಮತ್ತು ಬೆಳಯಬಹುದಾದ ಉದ್ಯಮವನ್ನು ಉತ್ತೇಜಿಸುತ್ತಿವೆ.

ಸೌದಿ ಅರೇಬಿಯಾದ ಗುರಿಗಳು ಕೇವಲ ಸ್ಪರ್ಧೆಗಳಿಗೆ ಸೀಮಿತವಾಗಿಲ್ಲ ಎಂದು ಘನತೆವೆತ್ತ ಫೈಸಲ್ ಹೇಳಿದರು. ಅವಕಾಶಗಳನ್ನು ಸೃಷ್ಟಿಸುವುದು, ಪೂರಕ ವ್ಯವಸ್ಥೆಗಳನ್ನು ನಿರ್ಮಿಸುವುದು ಮತ್ತು ದೇಶವು ಸಂಪನ್ಮೂಲಗಳು, ದೃಷ್ಟಿಕೋನ ಮತ್ತು ಪ್ರತಿಭೆಯನ್ನು ಒಟ್ಟುಗೂಡಿಸಿದಾಗ ಯಾವುದು ಸಾಧ್ಯವಾಗುತ್ತದೆ ಎಂಬುದನ್ನು ಪ್ರದರ್ಶಿಸುವುದು ಇದರ ಗುರಿ ಎಂದು ಅವರು ಹೇಳಿದರು. ಮುಂಬರುವ ದಶಕದಲ್ಲಿ ಸೌದಿಯ ವಿಧಾನವು ಜಾಗತಿಕ ಗೇಮಿಂಗ್ ಪ್ರವೃತ್ತಿಗಳನ್ನು ರೂಪಿಸಬಹುದು ಎಂದು ಗೋಷ್ಠಿಯು ಅಭಿಪ್ರಾಯಪಟ್ಟಿತು.

ಕ್ರೀಡೆಗಳ ಬದಲಾಗುತ್ತಿರುವ ಸ್ವರೂಪ: ಮಾಧ್ಯಮ, ತಂತ್ರಜ್ಞಾನ ಮತ್ತು ಮಾನವ ಸಂಬಂಧಗಳು

ದಿನದ ಆರಂಭದಲ್ಲಿ, 'ಕ್ರೀಡೆ, ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಮಾಧ್ಯಮ - ನಿಜವಾದ ಮೂಲ' ಎಂಬ ವಿಷಯದ ಕುರಿತು ಚರ್ಚೆಯನ್ನು ನಡೆಸಲಾಯಿತು. ಈ ವಿಚಾರ ಸಂಕಿರಣದ ಸಂದರ್ಭದಲ್ಲಿ, ಕ್ರಿಕೆಟ್ ದಂತಕಥೆ ರವಿಶಾಸ್ತ್ರಿ, ಪ್ರಶಾಂತ್ ಖನ್ನಾ (ಜಿಯೋಸ್ಟಾರ್), ನುಲ್ಲಾ ಸರ್ಕಾರ್ (ಕಾಸ್ಮೊಸ್), ವಿಕ್ರಾಂತ್ ಮುದಲಿಯಾರ್ (ಡ್ರೀಮ್ ಸ್ಪೋರ್ಟ್ಸ್) ಮತ್ತು ಧವಲ್ ಪೊಂಡಾ (ಟಾಟಾ ಕಮ್ಯುನಿಕೇಷನ್ಸ್) ಅವರೊಂದಿಗೆ ಕ್ರೀಡಾ ಪರಿಸರ ವ್ಯವಸ್ಥೆಯ ಗಣ್ಯ ವ್ಯಕ್ತಿಗಳು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿದರು, ನಿರ್ಮಾಪಕ ಮತ್ತು ಉದ್ಯಮಿ ಧೀರ್ ಮೊಮಯಾ ಈ ಗೋಷ್ಠಿಯನ್ನು ನಿರ್ವಹಿಸಿದರು.

ಮಾಧ್ಯಮ ಮತ್ತು ತಂತ್ರಜ್ಞಾನದಿಂದಾಗಿ ಕ್ರಿಕೆಟ್‌ ನಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ರವಿಶಾಸ್ತ್ರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇಂದು ಮಾಧ್ಯಮ ಮತ್ತು ತಂತ್ರಜ್ಞಾನವು ಆಟಗಾರರ ಕಿಟ್‌ ನಲ್ಲಿ ಹೆಲ್ಮೆಟ್‌ ನಷ್ಟೇ ಅತ್ಯಗತ್ಯ ಅಂಶವಾಗಿದೆ ಎಂದು ಅವರು ಹೇಳಿದರು. ಅಭಿಮಾನಿಗಳ ತೊಡಗಿಸಿಕೊಳ್ಳುವಿಕೆ ಮತ್ತು ಆಟಗಾರರ ಬ್ರ್ಯಾಂಡಿಂಗ್ ಹೇಗೆ ಹೆಚ್ಚಾಗಿದೆ ಎಂಬುದರ ಕುರಿತು ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಅವರು ತಮ್ಮ ಸ್ವಂತ ಪ್ರಯಾಣವನ್ನು ʼಒಂದು ಅಲೆʼ ಎಂದು ಬಣ್ಣಿಸಿದರು. ಇದು ವೈಯಕ್ತಿಕ ಯಶಸ್ಸಿನ ಶಿಖರ ಮತ್ತು ಕ್ರೀಡಾ ಕ್ಷೇತ್ರದ ವಿಶಾಲ ವಿಕಾಸವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು.

ವಿಚಾರಗೋಷ್ಠಿಯಲ್ಲಿ ಮಾತನಾಡಿದ ಭಾಷಣಕಾರರು ತಲ್ಲೀನಗೊಳಿಸುವ ದೃಶ್ಯಗಳು, ಫ್ಯಾಂಟಸಿ ಗೇಮಿಂಗ್ ಮತ್ತು ಎಐ-ಚಾಲಿತ ಕಂಟೆಂಟ್ ವೈಯಕ್ತೀಕರಣದಂತಹ ತಾಂತ್ರಿಕ ಪ್ರಗತಿಗಳನ್ನು ಎತ್ತಿ ತೋರಿಸಿದರು ಮತ್ತು ಈ ಬೆಳವಣಿಗೆಗಳು ಅಭಿಮಾನಿಗಳು ಕ್ರೀಡೆಗಳೊಂದಿಗೆ ಸಂಪರ್ಕ ಸಾಧಿಸುವ ವಿಧಾನವನ್ನು ಹೇಗೆ ಪರಿವರ್ತಿಸುತ್ತಿವೆ ಎಂಬುದನ್ನು ವಿವರಿಸಿದರು. ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿನ ಫ್ಯಾಂಟಸಿ ವೇದಿಕೆಗಳು ನಿಷ್ಕ್ರಿಯ ವೀಕ್ಷಕರನ್ನು ನೇರ ಭಾಗವಹಿಸುವವರಾಗಿ ಹೇಗೆ ಪರಿವರ್ತಿಸಿವೆ ಎಂಬುದರ ಕುರಿತು ಅವರು ಮಾತನಾಡಿದರು. ಪ್ರಶಾಂತ್ ಖನ್ನಾ ಅವರು ಸಂಕೇತ ಭಾಷಾ ವ್ಯಾಖ್ಯಾನ ಮತ್ತು ಕಸ್ಟಮ್ ದೃಶ್ಯ ಸರಣಿಗಳಂತಹ ಅಂತರ್ಗತ ಸಾಧನಗಳ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸಿದರು.‌

ನುಲ್ಲಾ ಸರ್ಕಾರ್ ನಿರೂಪಣಾ ರಚನೆಯ ಮಹತ್ವದ ಬಗ್ಗೆ ಮಾತನಾಡಿದರು. ಅಭಿಮಾನಿಗಳು ಕೇವಲ ಅಂಕಿಅಂಶಗಳನ್ನು ಅನುಸರಿಸುವುದಿಲ್ಲ, ಅವರು ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ಅವರು ಹೇಳಿದರು. ಧವಲ್ ಪೊಂಡಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಜಾಗತಿಕ ಮಟ್ಟದಲ್ಲಿ ಕ್ರೀಡಾಕೂಟಗಳ ನೇರ ಪ್ರಸಾರವು ಕಂಟೆಂಟ್‌ ಸೃಷ್ಟಿಯ ಬಳಕೆಯ ಮೂಲವಾಗಿದೆ ಎಂದು ಅವರು ಹೇಳಿದರು. ತಂತ್ರಜ್ಞಾನವು ಈಗ ಈ ಸೌಲಭ್ಯವನ್ನು ಬಹಳ ವೈಯಕ್ತಿಕ ಮಟ್ಟದಲ್ಲಿ ಅನುಭವಿಸಲು ಸಾಧ್ಯವಾಗಿಸಿದೆ ಎಂದು ಅವರು ಹೇಳಿದರು.

ಕ್ರೀಡೆ, ತಂತ್ರಜ್ಞಾನ ಮತ್ತು ಮಾಧ್ಯಮದ ಭವಿಷ್ಯಕ್ಕೆ ಯಾವುದೇ ಮಿತಿಗಳಿಲ್ಲ ಮತ್ತು ಅದು ಇದೀಗ ಪ್ರಾರಂಭವಾಗಿದೆ ಎಂಬ ಆಶಾವಾದದೊಂದಿಗೆ ರವಿಶಾಸ್ತ್ರಿ ವಿಚಾರಗೋಷ್ಠಿಯನ್ನು ಮುಕ್ತಾಯಗೊಳಿಸಿದರು.

 

*****


Release ID: (Release ID: 2126930)   |   Visitor Counter: 16