ವಾರ್ತಾ ಮತ್ತು ಪ್ರಸಾರ ಸಚಿವಾಲಯ
“ಗತ ಕಾಲದ ಹಂಬಲ ದಾಟಿ : ಶ್ರೇಷ್ಠತೆಯ ಪುನಃಸ್ಥಾಪನೆಯ ಕಾರ್ಯ” – ವೇವ್ಸ್ 2025 ರಲ್ಲಿ ಅರ್ಥಪೂರ್ಣ ಚರ್ಚೆಗಳು
ಕ್ಲಾಸಿಕ್ ಚಲನಚಿತ್ರಗಳು ಮನರಂಜನೆಗೂ ಮೀರಿದವು - ಅವು ನಮ್ಮ ಸಾಮೂಹಿಕ ಸಾಂಸ್ಕೃತಿಕ ಅನನ್ಯತೆ ಮತ್ತು ಪರಂಪರೆಯ ಪ್ರತಿಬಿಂಬ: ಪ್ರಕಾಶ್ ಮಗ್ದುಮ್
ಪುನರುಜ್ಜೀವನಕ್ಕೆ ಹಣ, ಸಮಯ ಮತ್ತು ಕೌಶಲ್ಯಯುತ ಸಂಪನ್ಮೂಲಗಳ ಗಣನೀಯ ಅಗತ್ಯವಿದೆ: ಶೆಹಜಾದ್ ಸಿಪ್ಪಿ
ಹೊಸ ವಿಷಯದ ಪ್ರವಾಹದ ಹೊರತಾಗಿಯೂ, ತನ್ನ ಮೂಲಭೂತ ಕೃತಿಗಳನ್ನು ಸಂರಕ್ಷಿಸಲು ಉದ್ಯಮವು ಕೆಲಸ ಮಾಡಬೇಕು: ಕಮಲ್ ಗಿಯಾನ್‌ಚಂದಾನಿ
Posted On:
03 MAY 2025 6:18PM
|
Location:
PIB Bengaluru
"ಗತ ಕಾಲದ ಹಂಬಲ ದಾಟಿ : ಶ್ರೇಷ್ಠತೆಯ ಪುನಃಸ್ಥಾಪನೆಯ ಕಾರ್ಯ” ಎಂಬ ಶೀರ್ಷಿಕೆಯಡಿ ಅರ್ಥಪೂರ್ಣ ಚರ್ಚೆಯೊಂದಿಗೆ ಭಾರತೀಯ ಸಿನಿಮಾ ವೇವ್ಸ್ 2025 ರಲ್ಲಿ ಕೇಂದ್ರ ಸ್ಥಾನವನ್ನು ಪಡೆದುಕೊಂಡಿತು. ಖ್ಯಾತ ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪರಿಣಿತ ನೇತೃತ್ವದಡಿ ನಿರ್ವಹಿಸಲಾದ ಈ ಅಧಿವೇಶನ, ಸಮಕಾಲೀನ ಪ್ರೇಕ್ಷಕರಿಗೆ ಅತ್ಯದ್ಭುತವಾದ ಸಿನೆಮಾಗಳನ್ನು ಪುನಃರಚಿಸುವ ಮಹತ್ವ, ಸವಾಲುಗಳು ಮತ್ತು ಭವಿಷ್ಯದ ಕುರಿತು ಚರ್ಚಿಸಲು ಉದ್ಯಮದ ದಿಗ್ಗಜರನ್ನು ಒಗ್ಗೂಡುವಂತೆ ಮಾಡಿತು.

ಚಲನಚಿತ್ರ ಪ್ರದರ್ಶನ ಮತ್ತು ವಿತರಣಾ ಕ್ಷೇತ್ರದ ದಿಗ್ಗಜ ಕಮಲ್ ಗಿಯಾನ್‌ಚಂದಾನಿ ಅವರ ಮೂಲಕ ಸಂಭಾಷಣೆ ಪ್ರಾರಂಭವಾಯಿತು, ಅವರು ಕ್ಲಾಸಿಕ್ ಚಲನಚಿತ್ರಗಳು ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರವೇಶಿಸುವಂತೆ ಮಾಡುವ ತುರ್ತು ಅಗತ್ಯತೆ ಕುರಿತು ಒತ್ತಿ ಹೇಳಿದರು. "ನಮ್ಮ ಅನೇಕ ಚಲನಚಿತ್ರಗಳು ಸಾರ್ವಜನಿಕರ ನೆನಪಿನಿಂದ ಮಾಸಿ ಹೋಗುತ್ತಿವೆ ಏಕೆಂದರೆ ಅವು ಸುಲಭವಾಗಿ ಲಭ್ಯವಿಲ್ಲ. ಪ್ರೇಕ್ಷಕರು ನಿರಂತರವಾಗಿ ಕ್ಲಾಸಿಕ್ ಚಲನಚಿತ್ರಗಳನ್ನು ಪುನಃ ವೀಕ್ಷಿಸಲು ಬಯಸುವುದಾಗಿ ನಮಗೆ ಹೇಳುತ್ತಾರೆ" ಎಂದು ಅವರು ತಿಳಿಸಿದರು, ಹೊಸ ಚಿತ್ರಗಳ ಪ್ರವಾಹದ ಹೊರತಾಗಿಯೂ, ಉದ್ಯಮವು ತನ್ನ ಮೂಲ ಕೃತಿಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಐಕಾನಿಕ್ ಸಿನೆಮಾದ ಪರಂಪರೆ ಕುರಿತು ಮಾತನಾಡಿದ ಶೆಹಜಾದ್ ಸಿಪ್ಪಿ, ಚಲನಚಿತ್ರ ನಿರ್ಮಾಣದ ವಿಕಸನ ಮತ್ತು ಕಳೆದ ದಶಕಗಳ ವಿಶಿಷ್ಟ ಕಥೆ ಹೇಳುವ ವಿಧಾನಗಳ ಬಗ್ಗೆ ಬೆಳಕು ಚೆಲ್ಲಿದರು. "ಆಗ ಚಲನಚಿತ್ರ ನಿರ್ಮಾಣವು ವಿಭಿನ್ನ ಕಲೆಯಾಗಿತ್ತು ಮತ್ತು ಇಂದಿನ ಪ್ರೇಕ್ಷಕರು ಆ ಯುಗದ ಅನುಭವವನ್ನು ಸವಿಯಲು ಕುತೂಹಲದಿಂದಿದ್ದಾರೆ. ಆದರೆ ಪುನಃಸ್ಥಾಪನೆಗೆ ಹಣ, ಸಮಯ ಮತ್ತು ಕೌಶಲ್ಯಯುತ ಸಂಪನ್ಮೂಲಗಳ ಗಮನಾರ್ಹ ಅಗತ್ಯತೆಯಿದೆ" ಎಂದು ಅವರು ಹೇಳಿದರು.

ಪ್ರೇಕ್ಷಕರ ಆದ್ಯತೆಗಳ ಅನಿರೀಕ್ಷಿತತೆಯ ಕುರಿತು ಚಲನಚಿತ್ರ ನಿರ್ಮಾಪಕ ಮತ್ತು ನಟ ಜಾಕಿ ಭಗ್ನಾನಿ ಒತ್ತಿ ಹೇಳಿದರು. "ಜನರ ಸಮಯ ಅಮೂಲ್ಯವಾದುದು - ಅವರು ಗುಣಮಟ್ಟದ ಚಿತ್ರಗಳನ್ನು ಬಯಸುತ್ತಾರೆ. ಯಾವುದು ಸರಿಯಾದುದು ಎಂಬುದು ವ್ಯಕ್ತಿನಿಷ್ಠ, ಕಾಲೋಚಿತ ಅಥವಾ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದರೆ ಯುಗ ಯಾವುದೇ ಆಗಿರಲಿ, ನಾವು ಯಾವಾಗಲೂ ಅತ್ಯುತ್ತಮವಾದದ್ದನ್ನೇ ನೀಡಲು ಶ್ರಮಿಸುತ್ತೇವೆ" ಎಂದು ಅವರು ಹೇಳಿದರು.

ನೀತಿ ಮತ್ತು ಪರಂಪರೆಯ ದೃಷ್ಟಿಕೋನದ ಕುರಿತು ಮಾತನಾಡಿದ ಅಹಮದಾಬಾದ್‌ನ ಪಿಐಬಿ ಮತ್ತು ಸಿಬಿಸಿಯ ಹೆಚ್ಚುವರಿ ಮಹಾನಿರ್ದೇಶಕರಾದ ಪ್ರಕಾಶ್ ಮಗ್ದಮ್ ಅವರು, ಭಾರತದ ಸಿನಿಮಾ ಪರಂಪರೆಯನ್ನು ಸಂರಕ್ಷಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಿದರು. “ಭಾರತೀಯರು ತುಂಬಾ ಗತ ಕಾಲದ ಹಂಬಲ ಹೊಂದಿದವರು. ಹಳೆಯ ತಲೆಮಾರಿನವರು ತಮ್ಮ ಯೌವ್ವನವನ್ನು ಮತ್ತೆ ಜೀವಿಸುವ ಹಂಬಲವನ್ನು ಹೊಂದಿದ್ದಾರೆ, ಯುವ ಪೀಳಿಗೆ ತಾವು ಬಹಳಷ್ಟು ಕೇಳಿದ ಕ್ಲಾಸಿಕ್ ಚಿತ್ರಗಳನ್ನು ನೋಡಲು ಉತ್ಸುಕರಾಗಿದ್ದಾರೆ. ಚಲನಚಿತ್ರ ಪುನರುಜ್ಜೀವನಗೊಳಿಸುವುದು ಬಹಳ ಶ್ರಮದಾಯಕ ಕೆಲಸ ಮತ್ತು ಇದು ಹಲವಾರು ವಿಭಾಗದ ಜನರ ಕೆಲಸವನ್ನು ಒಳಗೊಂಡ ಸೂಕ್ಷ್ಮ ಪ್ರಕ್ರಿಯೆಯಾಗಿದೆ, ಆದರೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ, ನಾವು ಮೂಲ ದೃಷ್ಟಿಕೋನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ, ”ಎಂದು ಅವರು ವಿವರಿಸಿದರು.
ಭಾರತ ಸರ್ಕಾರದ ನೇತೃತ್ವದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಚಲನಚಿತ್ರ ಪರಂಪರೆಯ ಮಿಷನ್ ಬಗ್ಗೆ ಅವರು ಮತ್ತಷ್ಟು ವಿವರಿಸಿದರು, ಇದು ಸಿನಿಮೀಯ ಸಂಪತ್ತನ್ನು ಸಂರಕ್ಷಿಸುವ, ಡಿಜಿಟಲೀಕರಣಗೊಳಿಸುವ ಮತ್ತು ಪುಣ್ಯರುಜ್ಜೀವಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. “ಕ್ಲಾಸಿಕ್ ಚಲನಚಿತ್ರಗಳು ಮನರಂಜನೆಗಿಂತಲೂ ಪ್ರಮುಖವಾದವು. ಅವು ನಮ್ಮ ಸಾಮೂಹಿಕ ಸಾಂಸ್ಕೃತಿಕ ಹೆಗ್ಗುರುತಾಗಿದ್ದು ಪರಂಪರೆಯ ಪ್ರತಿಬಿಂಬವಾಗಿವೇ. ವಿಶೇಷವಾಗಿ ತಾಪಮಾನ ಮತ್ತು ತೇವಾಂಶವು ಫಿಲ್ಮ್ ರೀಲ್‌ಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ಡಿಜಿಟಲ್ ಡೇಟಾ ಸಂರಕ್ಷಣೆ ಕ್ಲಿಷ್ಟಕರವಾದುದರಿಂದ ಸವಾಲು ಅಗಾಧವಾಗಿದೆ. ಆದರೂ, ಈ ಜವಾಬ್ದಾರಿಯನ್ನು ತುರ್ತಾಗಿ ಮತ್ತು ಸಮರ್ಪಣೆಯೊಂದಿಗೆ ಪೂರೈಸಬೇಕಿದೆ” ಎಂದು ಶ್ರೀ ಮಗ್ದಮ್ ಹೇಳಿದರು.
ಪುನರುಜ್ಜೀವನ ನೀಡಲಾದ ಕ್ಲಾಸಿಕ್ ಚಲನಚಿತ್ರಗಳು ಕೇವಲ ಭೂತಕಾಲದ ಅವಶೇಷಗಳು ಮಾತ್ರವಲ್ಲ, ಬದಲಾಗಿ ಸಂಸ್ಕೃತಿ, ಭಾವನೆ ಮತ್ತು ಪರಂಪರೆಯ ರೋಮಾಂಚಕ ವಾಹಕಗಳಾಗಿವೆ ಎಂಬುದನ್ನು ಈ ಸಮಿತಿಯು ಪ್ರಬಲವಾಗಿ ಸಾರಿತು. ಪುನರುಜ್ಜೀವನ ಕಾರ್ಯ ವೇಗವನ್ನು ಪಡೆಯುತ್ತಿದ್ದಂತೆ, ಭಾರತದ ಸಿನಿಮೀಯ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ, ಉತ್ಸಾಹ ಮತ್ತು ನೀತಿಯ ಸಮ್ಮಿಲನವು ಪ್ರಮುಖ ಪಾತ್ರವಾಹಿಸಲಿವೆ ಎಂಬುದು ಸ್ಪಷ್ಟವಾಗಿದೆ.
ರಿಯಲ್ ಟೈಮ್ ಅಧಿಕೃತ ನವೀಕರಣಗಳಿಗಾಗಿ, ದಯವಿಟ್ಟು ಫಾಲೋ ಮಾಡಿ:
X ನಲ್ಲಿ :
https://x.com/WAVESummitIndia
https://x.com/MIB_India
https://x.com/PIB_India
https://x.com/PIBmumbai
Instagram ನಲ್ಲಿ:
https://www.instagram.com/wavesummitindia
https://www.instagram.com/mib_india
https://www.instagram.com/pibindia
*****
Release ID:
(Release ID: 2126763)
| Visitor Counter:
6