ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಪ್ರಭಾವದ ವ್ಯವಹಾರ: ವೇವ್ಸ್ 2025ರಲ್ಲಿ ಕಥೆಗಳು, ಉತ್ಸಾಹ ಮತ್ತು ಉದ್ದೇಶಗಳ ಸ್ವರಮೇಳ
ಆಯಾ ಕಥೆಗಳ ಮೂಲಕ ಸಂಸ್ಕೃತಿ, ಸಮುದಾಯ ಮತ್ತು ಸಂಭಾಷಣೆಯನ್ನು ರೂಪಿಸುವ ಸೃಜನಶೀಲ ಮನಸ್ಸುಗಳನ್ನು ವೇವ್ಸ್ 2025 ಅನ್ನು ಕೊಂಡಾಡಿದವು
Posted On:
01 MAY 2025 7:21PM
|
Location:
PIB Bengaluru
ವಿಷಯಗಳಿಂದ ತುಂಬಿ ತುಳುಕುತ್ತಿರುವ ಜಗತ್ತಿನಲ್ಲಿ, ಧ್ವನಿಗಳು ಗಣಿತದ ಸಮಸ್ಯೆಯನ್ನು ಬಿಡಿಸುವ ಅಲ್ಗಾರಿದಮ್ ಗಳನ್ನು ಮೀರಿ ನಿಲ್ಲುತ್ತವೆ ಮತ್ತು ಉತ್ಸಾಹವು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ, ವೇವ್ಸ್ 2025ರಲ್ಲಿ "ಪ್ರಭಾವದ ವ್ಯವಹಾರ: ಸೃಜನಶೀಲ ಮನಸ್ಸುಗಳು ಜಾಗತಿಕ ಸಂಸ್ಕೃತಿಯನ್ನು ರೂಪಿಸುತ್ತವೆ" ಎಂಬ ಕಿರುಗೋಷ್ಠಿ ಅಧಿವೇಶನವು ಅಧಿಕೃತತೆ, ಕುತೂಹಲ ಮತ್ತು ಸಮುದಾಯದಿಂದ ಹೆಣೆಯಲ್ಪಟ್ಟ ರೋಮಾಂಚಕ ಚಿತ್ರಪಟದಂತೆ ತೆರೆದುಕೊಂಡಿತು. ಯೂಟ್ಯೂಬ್ ಎಪಿಎಸಿಯ ಉಪಾಧ್ಯಕ್ಷ ಗೌತಮ್ ಆನಂದ್ ನಿರ್ವಹಿಸಿದ ಈ ಅಧಿವೇಶನವು ನಾಲ್ಕು ಅಸಾಧಾರಣ ಸೃಜನಶೀಲ ವ್ಯಕ್ತಿಗಳನ್ನು ಒಟ್ಟುಗೂಡಿಸಿತು, ಅವರ ಪ್ರಯಾಣವು ಉತ್ಸಾಹ ಮತ್ತು ಉದ್ದೇಶದಲ್ಲಿ ಬೇರೂರಿದೆ, ಮತ್ತು ಸದ್ದಿಲ್ಲದೆ ಡಿಜಿಟಲ್ ಪ್ರಪಂಚದ ಮೂಲೆಗಳನ್ನು ಪರಿವರ್ತಿಸಿದೆ.

ಭಾರತದಿಂದ ಶತಕೋಟಿ ಧ್ವನಿಗಳು ಮಾರ್ದನಿಸುವಂತೆ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಪ್ರತಿಧ್ವನಿಸುವ ಮೂಲಕ ಗೌತಮ್ ಆನಂದ್ ಮಾತುಗಳನ್ನು ಪ್ರಾರಂಭಿಸಿದರು. ಅವರು ಸೃಜನಶೀಲ ಮನಸ್ಸುಗಳನ್ನು ಯೂಟ್ಯೂಬ್ನ ಹೃದಯ ಎಂದು ಕರೆದರು, ಅವು ವೈವಿಧ್ಯತೆ ಮತ್ತು ಆಳದಿಂದ ಬಡಿಯುತ್ತಿರುತ್ತವೆ, ಗಡಿಗಳನ್ನು ಮೀರಿ ಅಲೆಗಳನ್ನು ರೂಪಿಸುವ ನಿರೂಪಣೆಗಳನ್ನು ರೂಪಿಸುವ ಸಾಮರ್ಥ್ಯವನ್ನು ಅವು ಹೊಂದಿವೆ ಎಂದರು.
ಪ್ರೇಕ್ಷಕರನ್ನು ವಿಸ್ಮಯಗೊಳಿಸುವಂತಹ ಕ್ಷಣದೊಂದಿಗೆ ಅಧಿವೇಶನ ಪ್ರಾರಂಭವಾಯಿತು, ಜಪಾನಿನ ಸೃಜನಶೀಲ ಕಲಾವಿದೆ, ಜನಪ್ರಿಯ ಚಾನೆಲ್ ಮಾಯೋ ಜಪಾನಿನ ಮಾಯೊ ಮುರಾಸಾಕಿ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಲು ಪ್ರಾರಂಭಿಸಿದರು. ಹಿಂದಿಯಲ್ಲಿ ಅವರ ಅಧ್ಯಯನ, ಭಾರತದಲ್ಲಿ ಕಳೆದ ಒಂದು ವರ್ಷ, ಕಾರ್ಪೊರೇಟ್ ಜೀವನದಿಂದ ಯೂಟ್ಯೂಬ್ ನತ್ತ ಪರಿವರ್ತನೆಗೆ ಕಾರಣವಾಯಿತು. ಜಪಾನಿನ ಪ್ರೇಕ್ಷಕರಿಗಾಗಿ ಭಾರತದ ಬಗ್ಗೆ ವಿಷಯಸಾಮಗ್ರಿಯನ್ನು ರಚಿಸುವುದು ಹೇಗೆ ಸಂತೋಷ ಮತ್ತು ಜವಾಬ್ದಾರಿಯಾಗಿದೆ ಎಂಬುದನ್ನು ಅವರು ವಿವರಿಸಿದರು. "ನಾನು ಎಂದಿಗೂ ಇತರ ದೇಶಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದಿಲ್ಲ" ಎಂದು ಅವರು ಹೇಳಿದರು. "ಮತ್ತು ನಾನು ನನ್ನ ಸಂಶೋಧನೆಯನ್ನು ಚೆನ್ನಾಗಿ ಮಾಡುತ್ತೇನೆ. ವಿದೇಶದಲ್ಲಿ ಆಗಾಗ್ಗೆ ಕಂಡುಬರುವ ಪೋಸ್ಟ್ ಕಾರ್ಡ್ ಆವೃತ್ತಿ ಮಾತ್ರವಲ್ಲ, ಭಾರತವನ್ನು ಅದರ ಪೂರ್ಣ ಆಳದಲ್ಲಿ ತೋರಿಸಲು ನಾನು ಪ್ರಯತ್ನಿಸುತ್ತೇನೆ ಎಂದವರು ಹೇಳಿದರು.
ಪಾಕ ಕಲಾವಿದ ಮತ್ತು ಯೂಟ್ಯೂಬ್ ಸೆನ್ಸೇಷನ್ ಚೆಫ್ ರಣವೀರ್ ಬ್ರಾರ್ ಅಡುಗೆಯಲ್ಲಿ 'ಸತ್ಯದ ಕ್ಷಣ' ಬಗ್ಗೆ ಮಾತನಾಡಿದರು, ಇದು ಅವರು ಪ್ರೇಕ್ಷಕರೊಂದಿಗೆ ಅನುರಣಿಸುವ ಭಾವನಾತ್ಮಕ ಕ್ಷಣಗಳನ್ನು ರೂಪಿಸಿತು. "ಜನರು ತಮ್ಮ ಭಾನುವಾರವನ್ನು ಅಡುಗೆಯಲ್ಲಿ ಹುಡುಕಿಕೊಳ್ಳಬೇಕೆಂದು ನಾನು ಬಯಸುತ್ತೇನೆ" ಎಂದು ಅವರು ಹೇಳಿದರು, ಅವರಿಗೆ, ಯಾವುದೇ ಬ್ರಾಂಡ್ ಸಹಯೋಗಕ್ಕಿಂತ ಅಧಿಕೃತತೆ ಮುಖ್ಯ. "ಸಂಬಂಧ ಮೊದಲು, ವಹಿವಾಟು ನಂತರದ್ದು. ಇದು ನನ್ನ ಧ್ಯೇಯವಾಕ್ಯ” ಎಂದರವರು.

'ಇಂಡಿಯನ್ ಫಾರ್ಮರ್' ನ ಹಿಂದಿನ ಮುಖ ಆಕಾಶ್ ಜಾಧವ್, ಕೃಷಿಯನ್ನು ಸುಲಭ ಮತ್ತು ಸುಸ್ಥಿರವಾಗಿಸುವ ಬಗ್ಗೆ ಮುಕ್ತಮನಸ್ಸಿನಿಂದ, ಬದ್ಧತೆಯಿಂದ ಮಾತನಾಡಿದರು. ಅವರ ಚಾನೆಲ್ ನೀರಾವರಿ ಮತ್ತು ಕೃಷಿಯ ಬಗ್ಗೆ ಪ್ರಾಯೋಗಿಕ ಸಲಹೆಗಳನ್ನು ನೀಡುತ್ತದೆ. "ವ್ಯವಸಾಯವು ನಾವು ಪ್ರೀತಿಸುವ ವಿಷಯವಾಗಿದೆ, ಮಣ್ಣಿನಲ್ಲಿ ಬೇರೂರಿದೆ. ನಾವು ಅದನ್ನು ನಮ್ಮ ಜನರಿಗಾಗಿ ಮಾಡುತ್ತೇವೆ" ಎಂದು ಅವರು ಹೇಳಿದರು. ಅವರ ಗುರಿ ಸರಳವಾಗಿದೆ: ಮೇಜಿನ ಮೇಲೆ ಶುದ್ಧ ಆಹಾರ ಮತ್ತು ರೈತರಿಗೆ ಸಮೃದ್ಧಿ.
'ಚೆಸ್ ಟಾಕ್' ನ ಜೀತೇಂದ್ರ ಅಡ್ವಾಣಿ, ಭಾರತೀಯ ಮನೆಗಳಲ್ಲಿ ಚೆಸ್ ಹೇಗೆ ಸದ್ದಿಲ್ಲದೆ ಮರಳುತ್ತಿದೆ ಎಂಬುದನ್ನು ವಿವರಿಸಿದರು. "ಮಕ್ಕಳು, ಪೋಷಕರು, ಅಜ್ಜ-ಅಜ್ಜಿಯರು, ಎಲ್ಲರೂ ಮತ್ತೆ ಬೋರ್ಡ್ ಅನ್ನು ಎತ್ತಿಕೊಳ್ಳುತ್ತಿದ್ದಾರೆ" ಎಂದು ಹೇಳುತ್ತ ಅವರು ಮುಗುಳ್ನಕ್ಕರು. ಆಟವನ್ನು ಹೆಚ್ಚು ಸಾಪೇಕ್ಷವಾಗಿಸಲು ಕ್ರಿಕೆಟ್ ಮತ್ತು ಸಂಸ್ಕೃತಿಯಿಂದ ಎರವಲು ಪಡೆಯುವ ಅವರ ಬೋಧನಾ ಶೈಲಿಯು ಸರಳತೆಯ ಜೊತೆ ವಿನೋದವನ್ನೂ ಒಳಗೊಂಡಿತ್ತು. "ನಾನು ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತೇನೆ ಮತ್ತು ಮತ್ತು ಪ್ರೀತಿಯಿಂದ ತುಂಬುತ್ತೇನೆ" ಎಂದು ಅವರು ಹೇಳಿದರು.
ಜಾಗತಿಕ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವಿಕೆಯ ವಿಷಯಗಳಲ್ಲಿ ಸಂಭಾಷಣೆಯು ಸಾಗಿತು, ಸೃಜನಶೀಲ ಕಲಾವಿದರು ತಮ್ಮ ಕೃತಿಗಳು ಭಾಷೆ ಮತ್ತು ಭೌಗೋಳಿಕತೆಯನ್ನು ಹೇಗೆ ಮೀರುತ್ತವೆ ಎಂಬುದನ್ನು ಹಂಚಿಕೊಂಡರು. ವಿಷಯ ಸಾಮಗ್ರಿಯು ಹಿಂದಿಯಲ್ಲಿದ್ದರೂ, ತನ್ನ ಪ್ರೇಕ್ಷಕರ ಸಮೂಹದ ಗಮನಾರ್ಹ ಭಾಗವು ಭಾರತದ ಹೊರಗೆ ಇದೆ ಎಂದು ಆಕಾಶ್ ಜಾಧವ್ ಬಹಿರಂಗಪಡಿಸಿದರು - "ಆಹಾರವು ನಮ್ಮೆಲ್ಲರನ್ನೂ ಸಂಪರ್ಕಿಸುತ್ತದೆ" ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದು ಅವರು ಹೇಳಿದರು. ಇದಕ್ಕೆ "ಚೆಸ್ ಮೇಲಿನ ಪ್ರೀತಿ ಜಾಗತಿಕವಾಗಿದೆ" ಎಂದು ಜಿತೇಂದ್ರ ಪ್ರತಿಕ್ರಿಯಿಸಿದರು.
ಬ್ರಾಂಡ್ ಗಳೊಂದಿಗೆ ಸಹಯೋಗ ಮಾಡುವಾಗ ಸೃಜನಶೀಲ ಮನಸ್ಸುಗಳು ಹೇಗೆ ಸತ್ಯಾಸತ್ಯತೆಯನ್ನು/ಅಧಿಕೃತತೆಯನ್ನು ಕಾಪಾಡಿಕೊಳ್ಳುತ್ತವೆ ಎಂದು ಗೌತಮ್ ಆನಂದ್ ಕೇಳಿದಾಗ ಸಂಭಾಷಣೆಯು ಅನೇಕ ವಿಷಯಗಳನ್ನು ಪ್ರತಿಬಿಂಬಿಸಿತು. "ನಾನು ಯಾವಾಗಲೂ ಇಲ್ಲ ಎಂದು ಹೇಳುವ ಮೂಲಕ ಪ್ರಾರಂಭಿಸುತ್ತೇನೆ" ಎಂದು ಬ್ರಾರ್ ಉತ್ತರಿಸಿದರು. "ಬ್ರಾಂಡ್ ನಿಜವಾಗಿಯೂ ನನ್ನ ಮೌಲ್ಯಗಳೊಂದಿಗೆ ಹೊಂದಿಕೆಯಾದರೆ ಮಾತ್ರ ಆಗ ನಾನು ಮುಂದುವರಿಯುತ್ತೇನೆ."ಎಂದವರು ಹೇಳಿದರು.
ಎಐ(ಕೃತಕ ಬುದ್ಧಿಮತ್ತೆ) ಕೂಡ ಚಾಟ್ (ಸಂವಾದದಲ್ಲಿ ಜಾಗ ಪಡೆಯಿತು)ಅನ್ನು ಪ್ರವೇಶಿಸಿತು. ಎಐ ಕಲ್ಪನೆಗೆ ಸಹಾಯ ಮಾಡಬಹುದಾದರೂ, ಕೆಲವೊಮ್ಮೆ ಎಐ ಕೂಡ ಭಯಾನಕವಾಗಬಹುದು ಎಂದು ಮಾಯೊ ಮುರಾಸಾಕಿ ಹೇಳಿದರು. ರಣವೀರ್ ಬ್ರಾರ್, ಜೀತೇಂದ್ರ ಮತ್ತು ಆಕಾಶ್ ಜಾಧವ್ ಅವರಂತಹ ಇತರರು ಎಐ ಉಪಶೀರ್ಷಿಕೆ ಮತ್ತು ಸೃಜನಶೀಲ ಸಾಧನ- ಸಲಕರಣೆಗಳೊಂದಿಗೆ ಪ್ರಯೋಗ ಮಾಡುವ ಬಗ್ಗೆ ಮಾತನಾಡಿದರು, ಆದರೆ ಮಾನವ ಸಂಪರ್ಕವನ್ನು ತಮ್ಮ ಕೆಲಸದ ಕೇಂದ್ರಬಿಂದುವಾಗಿರಿಸಿಕೊಂಡರು.
ಮಹತ್ವಾಕಾಂಕ್ಷಿ ಆಶೋತ್ತರಗಳ ಸೃಜನಶೀಲ ಮನಸ್ಸುಗಳಿಗೆ ಸಂಬಂಧಿಸಿ ಸಲಹೆ ಕೇಳಿದಾಗ, ಪ್ರತಿಕ್ರಿಯೆಗಳು ಭಾವಪೂರ್ಣವಾಗಿದ್ದವು. "ಅಲ್ಗಾರಿದಮ್ಗಳನ್ನು ಬೆನ್ನಟ್ಟಬೇಡಿ, ನಿಮ್ಮ ಕನಸುಗಳನ್ನು ಬೆನ್ನಟ್ಟಿರಿ" ಎಂದು ರಣವೀರ್ ಬ್ರಾರ್ ಹೇಳಿದರು. "ಸ್ಥಿರವಾಗಿ, ಅಧಿಕೃತವಾಗಿರಿ ಮತ್ತು ವಿಷಯವನ್ನು ಮೀರಿ ಯೋಚಿಸಿ" ಎಂದು ಆಕಾಶ್ ಜಾಧವ್ ಆಗ್ರಹಿಸಿದರು. "ನೀವು ಇಷ್ಟಪಡುವ ಸಂಗತಿಗಳಿಂದ ಪ್ರಾರಂಭಿಸಿ," ಎಂದು ಜಿತೇಂದ್ರ ಅಭಿಪ್ರಾಯಪಟ್ಟರು. ಮಾಯೋ ಮುರಾಸಾಕಿ ಪ್ರೀತಿಯಿಂದ ಹೇಳಿದರು- "ನೀವು ನಿಮ್ಮ ಮನಸ್ಸಿಗೆ ನಿಷ್ಠವಾಗಿದ್ದರೆ, ಉಳಿದೆಲ್ಲವೂ ಅನುಸರಿಸುತ್ತವೆ" ಎಂದು.
ಅಧಿವೇಶನವು ಕೊನೆಗೊಳ್ಳುತ್ತಿದ್ದಂತೆ, ಗೌತಮ್ ಆನಂದ್ ಅವರು ಭಾಷಣಕಾರರು ಮತ್ತು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದರು, ಅವರ ಸಾಮೂಹಿಕ ಶಕ್ತಿಯು ಪ್ರಭಾವವನ್ನು ನೆನಪಿಸುತ್ತದೆ ಮತ್ತು, ನಿಜವಾದ ಪ್ರಭಾವವು ತ್ವರಿತವಾಗಿ ಪ್ರಸಾರಗೊಳ್ಳುವ ವೈರಲ್ ಮಾದರಿಯದ್ದು ಅಲ್ಲ ಎಂಬುದನ್ನು ನೆನಪಿಸುತ್ತದೆ. ಪ್ರಭಾವ ಎನ್ನುವುದು ಧ್ವನಿಯ ಬಗ್ಗೆ. ಹೃದಯದ ಬಗ್ಗೆ. ಮತ್ತು ಜಗತ್ತನ್ನು ರೂಪಿಸುವ ಬಗ್ಗೆ, ಒಂದು ಕಾಲಘಟ್ಟದ ಒಂದು ಪ್ರಾಮಾಣಿಕ ಕಥೆಯಂತೆ ಎಂದವರು ಬಣ್ಣಿಸಿದರು.
*****
Release ID:
(Release ID: 2126056)
| Visitor Counter:
9