WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವಿಶ್ವ ಶ್ರವಣ - ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಯ ಮೊದಲ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ


ವೇವ್ಸ್ 2025ರ ಆಯೋಜನೆಗೆ ಮುಂಬೈ ಸಜ್ಜಾಗಿದೆ

ಭಾರತ ಮತ್ತು ಜಾಗತಿಕೆ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಪಾಲುದಾರರ ನಡುವೆ ನಾಲ್ಕು ದಿನಗಳ ಜ್ಞಾನ ವಿನಿಮಯ, ಸಂವಾದ ಮತ್ತು ಸಹಯೋಗ

ಭಾರತದ ಸೃಜನಶೀಲ ಆರ್ಥಿಕತೆಯಲ್ಲಿ ಅಲೆಗಳನ್ನು ಸೃಷ್ಟಿಸಲಿರುವ ವೇವ್ಸ್

 Posted On: 30 APR 2025 4:46PM |   Location: PIB Bengaluru

ಮಾಧ್ಯಮ ಮತ್ತು ಮನರಂಜನಾ (ಎಂ&ಇ) ವಲಯದ ಬಹು ನಿರೀಕ್ಷಿತ ಮೈಲಿಗಲ್ಲು ಕಾರ್ಯಕ್ರಮ - ವೇವ್ಸ್ (ವಿಶ್ವ ಶ್ರವಣ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ 2025)ಗೆ ಕ್ಷಣಗಣನೆ ಆರಂಭವಾಗಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ ನಲ್ಲಿ ನಾಳೆಯಿಂದ ಪ್ರಾರಂಭವಾಗುವ ನಾಲ್ಕು ದಿನಗಳ ಈ ಕಾರ್ಯಕ್ರಮವನ್ನು ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ವಿನ್ಯಾಸಗೊಳಿಸಲಾಗಿದೆ.

ಭಾರತದ ಮನರಂಜನಾ ರಾಜಧಾನಿ ಮುಂಬೈ, ಮಾಧ್ಯಮ ಮತ್ತು ಮನರಂಜನಾ ವಲಯದ ಗಣ್ಯರನ್ನು ಸ್ವಾಗತಿಸಲು ಸಜ್ಜಾಗುತ್ತಿದೆ. ಅವರು ಪ್ಯಾನಲ್ ಚರ್ಚೆಗಳು, ಚಿಂತನಾಶೀಲ ಮತ್ತು ಸ್ಪೂರ್ತಿದಾಯಕ ಮಾತುಗಳು, ಜ್ಞಾನ ಹಂಚಿಕೆ ಸಂವಾದಗಳು ಮತ್ತು ಸಂವಾದಾತ್ಮಕ ಅಧಿವೇಶನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಉದ್ಯಮದ ದಿಗ್ಗಜರು ಮಾಸ್ಟರ್-ಕ್ಲಾಸ್‌ ಗಳಲ್ಲಿ ಭಾಗವಹಿಸಲಿದ್ದಾರೆ. ಮುಂಬರುವ ನಾಲ್ಕು ದಿನಗಳಲ್ಲಿ ಪಾಲುದಾರರಿಗೆ ಬಹುಮುಖಿ ಮಾಹಿತಿಗಳು ದೇಶದಲ್ಲಿ ಭವಿಷ್ಯಕ್ಕೆ ಸಿದ್ಧವಾಗಿರುವ ಎಂ & ಇ ವಲಯಕ್ಕೆ ಭರವಸೆಯನ್ನು ನೀಡುತ್ತವೆ.‌

ವೇವ್ಸ್ ಶೃಂಗಸಭೆಯು ಜಾಗತಿಕ ಶಕ್ತಿ ಕೇಂದ್ರವಾಗಿ ಭಾರತದ ಧ್ವನಿಯನ್ನು ವರ್ಧಿಸುವ ಗುರಿಯನ್ನು ಹೊಂದಿದೆ. ತನ್ನ ಚೊಚ್ಚಲ ವರ್ಷದಿಂದಲೇ ವೇವ್ಸ್, ಭಾರತದ ರೋಮಾಂಚಕ ಸೃಜನಶೀಲ ಉದ್ಯಮ ಮತ್ತು ಜಾಗತಿಕ ಎಂ & ಇ ವಲಯದಲ್ಲಿ ಅದರ ಅಗಾಧ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಇದರ ಜೊತೆಗೆ, ವೇವ್ಸ್ ಭಾರತೀಯ ಮತ್ತು ಜಾಗತಿಕ ಪಾಲುದಾರರ ನಡುವೆ ಜ್ಞಾನ ವಿನಿಮಯ, ಸಂವಾದ ಮತ್ತು ಸಹಯೋಗವನ್ನು ಉತ್ತೇಜಿಸುತ್ತದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಈ ಪ್ರವರ್ತಕ ಉಪಕ್ರಮವನ್ನು ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯನ್ನು ಜಾಗತಿಕ ಸಾಮರಸ್ಯಕ್ಕಾಗಿ ಬಳಸಿಕೊಳ್ಳಲು ಮತ್ತು ಸೃಜನಶೀಲ ಆರ್ಥಿಕತೆಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ರೂಪಿಸಲಾಗಿದೆ.

ವೇವ್ಸ್ ನಾಲ್ಕು ಸ್ತಂಭಗಳು

ಎಂ&ಇ ವಲಯದ ಈ ಬೃಹತ್-ಕಾರ್ಯಕ್ರಮವನ್ನು ವಿಶಾಲವಾದ ನಾಲ್ಕು ಸ್ತಂಭಗಳಾಗಿ ವಿಂಗಡಿಸಲಾಗಿದೆ.‌

ಒಂದು: ಪ್ರಸಾರ ಮತ್ತು ಮಾಹಿತಿ ಮನರಂಜನೆ - ಮಾಹಿತಿ ಮತ್ತು ಮನರಂಜನಾ ವಿತರಣೆಯ ಸಾಂಪ್ರದಾಯಿಕ ಮತ್ತು ವಿಕಸನಗೊಳ್ಳುತ್ತಿರುವ ವಲಯವನ್ನು ಒಳಗೊಂಡ ಈ ಕೇಂದ್ರಿತ ಪ್ರದೇಶವು ಮಾಹಿತಿಗೆ ಆದ್ಯತೆ ನೀಡುವುದು, ನಾಗರಿಕರನ್ನು ಸಬಲೀಕರಣಗೊಳಿಸುವುದು ಮತ್ತು 21 ನೇ ಶತಮಾನದ ಸವಾಲುಗಳಿಗೆ ಹೊಂದಿಕೊಳ್ಳುವ ಮೂಲಕ ಜಾಗತಿಕ ಮಟ್ಟಕ್ಕೆ ಏರುವುದು  ಗುರಿಯಾಗಿದೆ. ಇದು ಸೃಜನಶೀಲ ಆರ್ಥಿಕತೆಯ ಈ ಕೆಳಗಿನ ಕ್ಷೇತ್ರಗಳನ್ನು ಒಳಗೊಂಡಿದೆ:

  • ಪ್ರಸಾರ: ದೂರದರ್ಶನ, ರೇಡಿಯೋ, ಪಾಡ್‌ಕ್ಯಾಸ್ಟ್‌ ಗಳು, ಕ್ರೀಡಾ ಪ್ರಸಾರ
  • ಕಂಟೆಂಟ್‌ ರಚನೆ: ಮುದ್ರಣ ಮಾಧ್ಯಮ, ಸಂಗೀತ
  • ವಿತರಣಾ ವೇದಿಕೆಗಳು: ಕ್ಯಾರೇಜ್ (ಕೇಬಲ್ ಮತ್ತು ಉಪಗ್ರಹ), ಡಿಟಿಎಚ್ (ನೇರ-ಮನೆಗೆ)
  • ಜಾಹೀರಾತು ಮತ್ತು ಮಾರ್ಕೆಟಿಂಗ್: ಪ್ರಮುಖ ವೃತ್ತಿಪರರಿಂದ ಎಂ&ಇ ಯಲ್ಲಿ ಬ್ರ್ಯಾಂಡ್ ತಂತ್ರಗಳನ್ನು ರೂಪಿಸುವುದು

ಎರಡು: ಎವಿಜಿಸಿ-ಎಕ್ಸ್ಆರ್‌ - ಈ ವಿಭಾಗವು ಕಲಾತ್ಮಕತೆ, ಮನರಂಜನೆ ಮತ್ತು ತಂತ್ರಜ್ಞಾನದ ಸಂಯೋಜನೆಯಿಂದ ನಡೆಸಲ್ಪಡುವ ತಲ್ಲೀನಗೊಳಿಸುವ ಕಥೆ ಹೇಳುವಿಕೆ ಮತ್ತು ಸಂವಾದಾತ್ಮಕ ಅನುಭವದ ಅತ್ಯಾಧುನಿಕ ಜಗತ್ತನ್ನು ಅನ್ವೇಷಿಸುತ್ತದೆ. ಇದು ಈ ಕೆಳಗಿನ ನಿರ್ದಿಷ್ಟ ಕ್ಷೇತ್ರಗಳನ್ನು ಒಳಗೊಂಡಿದೆ:

  • ಅನಿಮೇಷನ್
  • ದೃಶ್ಯ ಪರಿಣಾಮಗಳು
  • ಇ-ಸ್ಪೋರ್ಟ್ಸ್
  • ಕಾಮಿಕ್ಸ್
  • ವರ್ಧಿತ ರಿಯಾಲಿಟಿ/ ವರ್ಚುವಲ್ ರಿಯಾಲಿಟಿ (ಎಆರ್/ ವಿಆರ್)
  • ಮೆಟಾವರ್ಸ್ ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ ಆರ್)

ಮೂರು: ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ- ಈ ವಿಭಾಗವು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ವಲಯ ಮತ್ತು ಮನರಂಜನೆಯ ಬಳಕೆಯ ಮೇಲೆ ಅದರ ಪ್ರಭಾವವನ್ನು ಪರಿಶೋಧಿಸುತ್ತದೆ. ಅದರಲ್ಲಿ ಇವುಗಳು ಸೇರಿವೆ:

  • ಡಿಜಿಟಲ್ ಮಾಧ್ಯಮ ಮತ್ತು ಅಪ್ಲಿಕೇಶನ್ ಆರ್ಥಿಕತೆ
  • ಒಟಿಟಿ ವೇದಿಕೆಗಳು
  • ಸಾಮಾಜಿಕ ಮಾಧ್ಯಮ ವೇದಿಕೆಗಳು
  • ಜನರೇಟಿವ್ ಎಐ ಮತ್ತು ಉದಯೋನ್ಮುಖ ತಂತ್ರಜ್ಞಾನ
  • ಪ್ರಭಾವಿಗಳು ಮತ್ತು ಕಂಟೆಂಟ್ ರಚನೆಕಾರರು‌

ನಾಲ್ಕು: ಚಲನಚಿತ್ರಗಳು- ಈ ವಿಭಾಗವು ಚಲನಚಿತ್ರ ತಯಾರಿಕೆ, ನಿರ್ಮಾಣ ಮತ್ತು ಜಾಗತೀಕರಣದ ಜಗತ್ತನ್ನು ಪರಿಶೋಧಿಸುತ್ತದೆ.

  • ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ವೀಡಿಯೊಗಳು
  • ಚಲನಚಿತ್ರ ತಂತ್ರಜ್ಞಾನ (ಚಿತ್ರೀಕರಣ, ನಂತರದ ನಿರ್ಮಾಣ)
  • ಭಾರತೀಯ ಸಿನಿಮಾದ ಜಾಗತೀಕರಣ
  • ಸಹ-ನಿರ್ಮಾಣ
  • ಚಲನಚಿತ್ರ ಪ್ರೋತ್ಸಾಹಕಗಳು
  • ಶ್ರವಣ-ದೃಶ್ಯ ಸೇವೆಗಳು

ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಮತ್ತು ಕ್ರಿಯೇಟೋಸ್ಪಿಯರ್: ವೇವ್ಸ್ ನ ಭಾಗವಾಗಿ ಪ್ರಾರಂಭಿಸಲಾದ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ (ಸಿಐಸಿ) ಸೀಸನ್-1, 1,100 ಅಂತರರಾಷ್ಟ್ರೀಯ ಭಾಗವಹಿಸುವವರು ಸೇರಿದಂತೆ 85,000 ನೋಂದಣಿಗಳ ಮೈಲಿಗಲ್ಲನ್ನು ಸಾಧಿಸಿದೆ. 32 ವೈವಿಧ್ಯಮಯ ಸವಾಲುಗಳಿಂದ 750 ಕ್ಕೂ ಹೆಚ್ಚು ಅಂತಿಮ ಸ್ಪರ್ಧಿಗಳನ್ನು ನಿಖರವಾದ ಆಯ್ಕೆ ಪ್ರಕ್ರಿಯೆಯ ನಂತರ ಆಯ್ಕೆ ಮಾಡಲಾಗಿದೆ. ಈ ಪ್ರತಿಭಾನ್ವಿತ ಸೃಜನಶೀಲರು ಕ್ರಿಯೇಟೋಸ್ಪಿಯರ್‌ ನಲ್ಲಿ ತಮ್ಮ ವೈಯಕ್ತಿಕ ಪ್ರತಿಭೆ ಮತ್ತು ಕೌಶಲ್ಯಗಳ ಫಲಿತಾಂಶ ಮತ್ತು ಉತ್ಪನ್ನವನ್ನು ಪ್ರದರ್ಶಿಸಲು ಒಂದು ಅನನ್ಯ ಅವಕಾಶವನ್ನು ಪಡೆಯುತ್ತಾರೆ, ಜೊತೆಗೆ ಪಿಚಿಂಗ್ ಸೆಷನ್‌ಗಳು ಸೇರಿದಂತೆ ಆಯಾ ಕ್ಷೇತ್ರಗಳಲ್ಲಿನ ವ್ಯಾಪಾರ ನಾಯಕರೊಂದಿಗೆ ನೆಟ್‌ವರ್ಕಿಂಗ್ ಅವಕಾಶಗಳು ಮತ್ತು ಮಾಸ್ಟರ್‌ಕ್ಲಾಸ್‌ ಗಳು ಮತ್ತು ಪ್ಯಾನಲ್ ಚರ್ಚೆಗಳ ಮೂಲಕ ಜಾಗತಿಕ ದಿಗ್ಗಜರಿಂದ ಕಲಿಯುವ ಅವಕಾಶವಿರುತ್ತದೆ.

ವೇವ್ಸ್‌ ನ ಕ್ರಿಯೇಟೋಸ್ಫಿಯರ್ ಮಾಸ್ಟರ್‌ಕ್ಲಾಸ್‌ ಗಳು, ಕಾರ್ಯಾಗಾರಗಳು, ಗೇಮಿಂಗ್ ಅರೆನಾ ಮತ್ತು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್‌ ಗಳ ಗ್ರ್ಯಾಂಡ್ ಫಿನಾಲೆಯೊಂದಿಗೆ ತಲ್ಲೀನಗೊಳಿಸುವ ಅನುಭವಗಳನ್ನು ನೀಡುತ್ತದೆ, ಇದು ವೇವ್ಸ್ ಸಿಐಸಿ ಪ್ರಶಸ್ತಿಗಳೊಂದಿಗೆ ಮುಕ್ತಾಯಗೊಳ್ಳುತ್ತದೆ.

ಜಾಗತಿಕ ಮಾಧ್ಯಮ ಸಂವಾದವು 2025 ರ ಮೇ 2 ರಂದು ವೇವ್ಸ್ ನಲ್ಲಿ ನಡೆಯಲಿದೆ. ಇದು ಜಾಗತಿಕ ನಾಯಕರು, ನೀತಿ ನಿರೂಪಕರು, ಉದ್ಯಮದ ಪಾಲುದಾರರು, ಮಾಧ್ಯಮ ವೃತ್ತಿಪರರು ಮತ್ತು ಕಲಾವಿದರನ್ನು ಒಟ್ಟುಗೂಡಿಸಿ ಅಂತರರಾಷ್ಟ್ರೀಯ ಸಹಯೋಗ, ತಾಂತ್ರಿಕ ನಾವೀನ್ಯತೆ ಮತ್ತು ನೈತಿಕ ಅಭ್ಯಾಸಗಳ ಮೇಲೆ ಕೇಂದ್ರೀಕರಿಸಿ ಶ್ರವಣ-ದೃಶ್ಯ ಮತ್ತು ಮನರಂಜನಾ ವಲಯಗಳ ಭವಿಷ್ಯವನ್ನು ರೂಪಿಸುವ ಗುರಿಯನ್ನು ಹೊಂದಿರುವ ರಚನಾತ್ಮಕ ಮತ್ತು ಕ್ರಿಯಾತ್ಮಕ ಸಂವಾದದಲ್ಲಿ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ.‌

ಥಾಟ್ ಲೀಡರ್ಸ್ ಟ್ರ್ಯಾಕ್: ಸಮಗ್ರ ಅಧಿವೇಶನಗಳು, ಸಮ್ಮೇಳನ ಅಧಿವೇಶನಗಳು ಮತ್ತು ಬ್ರೇಕ್ ಔಟ್ ಅಧಿವೇಶನಗಳ ಮೂಲಕ, ಉನ್ನತ ಸಿಇಒಗಳು ಮತ್ತು ಜಾಗತಿಕ ನಾಯಕರು ಒಳನೋಟಗಳು ಮತ್ತು ವೈವಿಧ್ಯಮಯ ದೃಷ್ಟಿಕೋನಗಳನ್ನು ನೀಡುತ್ತಾರೆ ಮತ್ತು ಸಹಯೋಗಗಳಿಗಾಗಿ ಕಾರ್ಯತಂತ್ರದ ಚರ್ಚೆಗಳನ್ನು ಸಹ ನಡೆಸುತ್ತಾರೆ.

ವೇವ್ಆಕ್ಸಿಲರೇಟರ್, ನಾವೀನ್ಯತೆ ಮತ್ತು ಹಣಕಾಸು ಉತ್ತೇಜಿಸಲು ಪಿಚಿಂಗ್ ಅಧಿವೇಶನಗಳ ಮೂಲಕ ಎಂ & ಇ ಸ್ಟಾರ್ಟ್‌ಅಪ್‌ ಗಳನ್ನು ಹೂಡಿಕೆದಾರರು ಮತ್ತು ಮಾರ್ಗದರ್ಶಕರೊಂದಿಗೆ ಸಂಪರ್ಕಿಸುತ್ತದೆ. ಇದು ಭಾರತೀಯ ನವೋದ್ಯಮಗಳಿಗೆ ಈ ಪರಿವರ್ತನೆಯನ್ನು ಮುನ್ನಡೆಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಅವರಿಗೆ ಸರಿಯಾದ ಮಾನ್ಯತೆ ಮತ್ತು ಅವರ ವ್ಯವಹಾರಗಳನ್ನು ಹೆಚ್ಚಿಸಲು ಹೂಡಿಕೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

ವೇವ್ಸ್ ಬಜಾರ್ ಮಾಧ್ಯಮ ಮತ್ತು ಮನರಂಜನಾ ಉದ್ಯಮಕ್ಕೆ ಪ್ರಮುಖ ಜಾಗತಿಕ ಮಾರುಕಟ್ಟೆಯಾಗಿದ್ದು, ಚಲನಚಿತ್ರ ನಿರ್ಮಾತೃಗಳು ಮತ್ತು ಉದ್ಯಮ ವೃತ್ತಿಪರರಿಗೆ ಖರೀದಿದಾರರು, ಮಾರಾಟಗಾರರು ಮತ್ತು ವ್ಯಾಪಕ ಶ್ರೇಣಿಯ ಯೋಜನೆಗಳು ಮತ್ತು ಪ್ರೊಫೈಲ್‌ ಗಳೊಂದಿಗೆ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ವೀಕ್ಷಣಾ ಕೊಠಡಿಯು ವೇವ್ಸ್ ಬಜಾರ್‌ ನಲ್ಲಿ ಸ್ಥಾಪಿಸಲಾದ ಮೀಸಲಾದ ಭೌತಿಕ ವೇದಿಕೆಯಾಗಿದ್ದು, ಮೇ 1 ರಿಂದ 4, 2025 ರವರೆಗೆ ತೆರೆದಿರುತ್ತದೆ. ಮೊಟ್ಟಮೊದಲ ವೇವ್ಸ್ ಬಜಾರ್‌ ಗಾಗಿ, ಭಾರತ, ಶ್ರೀಲಂಕಾ, ಅಮೆರಿಕ, ಸ್ವಿಟ್ಜರ್‌ಲ್ಯಾಂಡ್, ಬಲ್ಗೇರಿಯಾ, ಜರ್ಮನಿ, ಮಾರಿಷಸ್ ಮತ್ತು ಯುಎಇ ಸೇರಿದಂತೆ 8 ದೇಶಗಳ ಒಟ್ಟು 100 ಚಲನಚಿತ್ರಗಳು ವೀಕ್ಷಣಾ ಕೊಠಡಿ ಗ್ರಂಥಾಲಯದಲ್ಲಿ ವೀಕ್ಷಿಸಲು ಲಭ್ಯವಿರುತ್ತವೆ.

ಭಾರತ್ ಪೆವಿಲಿಯನ್: "ಕಲಾ ಟು ಕೋಡ್" ಎಂಬ ಥೀಮ್‌ ನಿಂದ ಮಾರ್ಗದರ್ಶಿಸಲ್ಪಟ್ಟ ಭಾರತ್ ಪೆವಿಲಿಯನ್ ಭಾರತದ ವಸುಧೈವ ಕುಟುಂಬಕಂ - ಜಗತ್ತು ಒಂದು ಕುಟುಂಬ - ಎಂಬ ಮನೋಭಾವವನ್ನು ಆಚರಿಸುತ್ತದೆ ಮತ್ತು ದೇಶದ ಕಲಾತ್ಮಕ ಸಂಪ್ರದಾಯಗಳು ಬಹಳ ಹಿಂದಿನಿಂದಲೂ ಸೃಜನಶೀಲತೆ, ಸಾಮರಸ್ಯ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯ ದಾರಿದೀಪವಾಗಿದೆ ಎಂಬುದನ್ನು ಪ್ರದರ್ಶಿಸುತ್ತದೆ. ಭಾರತ್ ಪೆವಿಲಿಯನ್‌ ನ ಮಧ್ಯಭಾಗದಲ್ಲಿ ಶ್ರುತಿ, ಕೃತಿ, ದೃಷ್ಟಿ ಮತ್ತು ಸೃಜನಶೀಲನ ಜಿಗಿತ ಎಂಬ ಹೆಸರಿನ ಭಾರತದ ಕಥೆ ಹೇಳುವ ಪರಂಪರೆಗಳ ನಿರಂತರತೆಯ ಮೂಲಕ ಸಂದರ್ಶಕರನ್ನು ಕರೆದೊಯ್ಯುವ ನಾಲ್ಕು ತಲ್ಲೀನಗೊಳಿಸುವ ವಲಯಗಳಿವೆ.

ಪ್ರದರ್ಶನ ಪೆವಿಲಿಯನ್: ಅತ್ಯಾಧುನಿಕ ತಂತ್ರಜ್ಞಾನದಿಂದ ಹಿಡಿದು ಭವಿಷ್ಯದ ಪ್ರವೃತ್ತಿಗಳವರೆಗೆ ಕಲ್ಪನೆ ಮತ್ತು ನಾವೀನ್ಯತೆಯ ಕ್ರಿಯಾತ್ಮಕ ಪ್ರದರ್ಶನವಾಗಿರುವ ಈ ಪೆವಿಲಿಯನ್‌ ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಭಾರತ ಮತ್ತು ಜಾಗತಿಕ ಪ್ರಗತಿಗಳನ್ನು ಪ್ರದರ್ಶಿಸುತ್ತದೆ.

ಸಮುದಾಯ ರೇಡಿಯೋದ ರಾಷ್ಟ್ರೀಯ ಸಮ್ಮೇಳನವು ವೇವ್ಸ್ ನ ಭಾಗವಾಗಿ ನಡೆಯಲಿದ್ದು, ಇದು ಸಮುದಾಯ ರೇಡಿಯೋದ ಪ್ರಬಲ ವೇದಿಕೆಯ ಮೂಲಕ ಸ್ಥಳೀಯ ಸಮುದಾಯದೊಂದಿಗೆ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಇತ್ತೀಚಿನ ಪ್ರವೃತ್ತಿಗಳು, ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಗಮನಹರಿಸುತ್ತದೆ.‌

ವೇವ್ಸ್ ಕಲ್ಚರಲ್ಸ್ ವೈವಿಧ್ಯಮಯ ಪ್ರದರ್ಶನಗಳು ಮತ್ತು ಪ್ರಸ್ತುತಿಗಳನ್ನು ಪ್ರದರ್ಶಿಸಲಿದ್ದು, ಭಾರತ ಮತ್ತು ಅಂತರರಾಷ್ಟ್ರೀಯ ಪ್ರತಿಭೆಗಳನ್ನು ಸಂಯೋಜಿಸಲಿದೆ. ಸಾಂಸ್ಕೃತಿಕ ವಿನಿಮಯ ಮತ್ತು ಸಾಮರಸ್ಯವನ್ನು ಬೆಳೆಸುವಲ್ಲಿ ಮಾಧ್ಯಮ ಮತ್ತು ಮನರಂಜನೆಯ ಪರಿವರ್ತನಾತ್ಮಕ ಶಕ್ತಿಯನ್ನು ಗುರುತಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.

ಆದ್ದರಿಂದ, ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅದ್ಭುತವಾದ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ.

 

ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು ಸಜ್ಜಾಗಿದೆ, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮಗಳು ಮತ್ತು ವಲಯಗಳು ಇದು ಗಮನ ಹರಿಸುವ ಕ್ಷೇತ್ರಗಳಾಗಿವೆ.

ಹೆಚ್ಚಿನ ವಿವರಗಳಿಗಾಗಿ https://wavesindia.org/ ಗೆ ಭೇಟಿ ನೀಡಿ.

4 ದಿನಗಳ ಈ ಬೃಹತ್ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಿಳಿದುಕೊಳ್ಳಲು click here

ವೇವ್ಸ್‌  2025 ರ ಬಗ್ಗೆ ಅಪ್‌ ಡೇಟ್‌ ಪಡೆಯಲು PIB ಅನ್ನು ಫಾಲೋ ಮಾಡಿ.

 

*****


Release ID: (Release ID: 2125641)   |   Visitor Counter: 5