ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೆನಡಾದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶ್ರೀ ಮಾರ್ಕ್ ಕಾರ್ನಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

Posted On: 29 APR 2025 2:16PM by PIB Bengaluru

ಕೆನಡಾದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶ್ರೀ ಮಾರ್ಕ್ ಕಾರ್ನಿ ಅವರಿಗೆ ಮತ್ತು ಅವರ ವಿಜಯಕ್ಕಾಗಿ ಲಿಬರಲ್ ಪಕ್ಷಕ್ಕೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆಗಳನ್ನು ಸಲ್ಲಿಸಿದರು. ಅವರು ಹಂಚಿಕೊಂಡ ಪ್ರಜಾಪ್ರಭುತ್ವದ ಮೌಲ್ಯಗಳು, ಕಾನೂನಿನ ಆಳ್ವಿಕೆಗೆ ಅಚಲವಾದ ಬದ್ಧತೆ ಮತ್ತು ಭಾರತ ಹಾಗೂ ಕೆನಡಾವನ್ನು ಒಟ್ಟಿಗೆ ಸೇರಿಸುವ ಉತ್ಸಾಹಭರಿತ ಜನರ-ಜನರ ನಡುವಿನ ಪರಸ್ಪರ ಸಂಬಂಧಗಳನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ವಿವರಿಸಿದರು. 

 ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ:

"ಲಿಬರಲ್ ಪಕ್ಷದ ಜಯಭೇರಿ ‌ಮತ್ತು ಕೆನಡಾದ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಕ್ಕೆ @MarkJCarney ಅವರೇ‌ ನಿಮಗೆ ಅಭಿನಂದನೆಗಳು.

ಭಾರತ ಮತ್ತು ಕೆನಡಾ ಹಂಚಿಕೆಕೊಂಡಿರುವ ಪರಸ್ಪರ ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಾತ್ಮಕ ಆಡಳಿತಕ್ಕೆ ದೃಢವಾದ ಬದ್ಧತೆ ಮತ್ತು ಜನರ - ಜನರ ನಡುವಿನ ಪರಸ್ಪರ ಸಂಬಂಧಗಳಿಗೆ ಎರಡೂ ದೇಶಗಳು ಬದ್ಧವಾಗಿವೆ. ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ನಮ್ಮ ಜನರಿಗೆ ಹೆಚ್ಚಿನ ಅವಕಾಶಗಳನ್ನು ತೆರೆಯಲು ನಾನು ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ."

 

 

*****


(Release ID: 2125182) Visitor Counter : 11