ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ 2025ರಲ್ಲಿ ಅನಾವರಣಗೊಳ್ಳಲಿದೆ ಭಾರತ್ ಪೆವಿಲಿಯನ್
ಭಾರತದ ಸಾಂಸ್ಕೃತಿಕ ಪ್ರಭೆ ಮತ್ತು ಮಾಧ್ಯಮ ವಿಕಸನದ ಪ್ರಯಾಣಕ್ಕೆ ಕರೆದೊಯ್ಯಲಿದೆ
Posted On:
22 APR 2025 6:51PM
|
Location:
PIB Bengaluru
ಮುಂಬೈನಲ್ಲಿ ನಡೆಯಲಿರುವ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯಾದ “ವೇವ್ಸ್ 2025” ಕ್ಕಾಗಿ ಜಗತ್ತು ಒಟ್ಟುಗೂಡುತ್ತಿರುವಾಗ, ಭಾರತವು ಹೆಮ್ಮೆಯಿಂದ ಭಾರತ್ ಪೆವಿಲಿಯನ್ ಅನ್ನು ಅನಾವರಣಗೊಳಿಸಲಿದೆ, ಇದು ದೇಶದ ಕಥೆ ಹೇಳುವ ಆಳವಾದ ಪರಂಪರೆ ಮತ್ತು ಜಾಗತಿಕ ಮಾಧ್ಯಮ ಹಾಗು ಮನರಂಜನಾ ಭೂದೃಶ್ಯದಲ್ಲಿ ಅದರ ಹೆಚ್ಚುತ್ತಿರುವ ಪ್ರಭಾವಕ್ಕೆ ಸಲ್ಲುವ ರೋಮಾಂಚಕ ಗೌರವವಾಗಿದೆ.
"ಕಲಾ ಟು ಕೋಡ್" ಎಂಬ ವಿಷಯ ಶೀರ್ಷಿಕೆಯಿಂದ ಪ್ರೇರಣೆ ಪಡೆದ ಪೆವಿಲಿಯನ್ ಭಾರತದ ವಸುದೈವ ಕುಟುಂಬಕಂ - ಜಗತ್ತು ಒಂದು ಕುಟುಂಬ – ಎಂಬ ತತ್ವವನ್ನು ಸಂಭ್ರಮದಿಂದ ಸಾರುತ್ತದೆ. ಮತ್ತು ದೇಶದ ಕಲಾತ್ಮಕ ಸಂಪ್ರದಾಯಗಳು ದೀರ್ಘಕಾಲದಿಂದ ಹೇಗೆ ಸೃಜನಶೀಲತೆ, ಸಾಮರಸ್ಯ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯ ದೀಪವಾಗಿವೆ ಎಂಬುದನ್ನು ತೋರಿಸುತ್ತದೆ.
ಪರಂಪರೆಯಲ್ಲಿ ಬೇರೂರಿದ ಮತ್ತು ನಾವೀನ್ಯತೆಯಿಂದ ಪ್ರೇರಿತವಾಗಿದ ಭಾರತವು ಈಗ ಭವಿಷ್ಯದತ್ತ ನೋಡುತ್ತಿದೆ - ಕಥೆ ಹೇಳುವುದು, ತಂತ್ರಜ್ಞಾನ ಮತ್ತು ಪರಿವರ್ತಕ ಸಾಂಸ್ಕೃತಿಕ ವಿನಿಮಯದಲ್ಲಿ ಜಗತ್ತನ್ನು ಮುನ್ನಡೆಸಲು ಅದು ಸಿದ್ಧವಾಗಿದೆ.
ಭಾರತ್ ಪೆವಿಲಿಯನ್ ನ ಹೃದಯ ಭಾಗದಲ್ಲಿ ನಾಲ್ಕು ತಲ್ಲೀನಗೊಳಿಸುವ ವಲಯಗಳಿವೆ, ಅವು ಸಂದರ್ಶಕರನ್ನು ಭಾರತದ ಕಥೆ ಹೇಳುವ ಸಂಪ್ರದಾಯಗಳ ನಿರಂತರತೆಯಲ್ಲಿ ಪ್ರಯಾಣಿಸುವಂತೆ ಕರೆದೊಯ್ಯುತ್ತವೆ:
- ಶ್ರುತಿ - ವೈದಿಕ ಪಠಣಗಳು ಮತ್ತು ಜಾನಪದ ಲಾವಣಿಗಳಿಂದ ಹಿಡಿದು ಶಾಸ್ತ್ರೀಯ ಸಂಗೀತ, ರೇಡಿಯೋ ಮತ್ತು ಮಾತನಾಡುವ ಪದದವರೆಗೆ ಮೌಖಿಕ ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲುವುದು.
- ಕೃತಿ - ಲಿಖಿತ ಪರಂಪರೆಯನ್ನು ಎತ್ತಿ ತೋರಿಸುವುದು, ಗುಹೆ ಕೆತ್ತನೆಗಳು ಮತ್ತು ತಾಳೆಗರಿ ಹಸ್ತಪ್ರತಿಗಳಿಂದ ಮುದ್ರಣ ಮಾಧ್ಯಮ, ಸಾಹಿತ್ಯ ಮತ್ತು ಆಧುನಿಕ ಪ್ರಕಾಶನದ ವಿಕಾಸದವರೆಗಿನ ಪ್ರಯಾಣವನ್ನು ಪ್ರಮುಖವಾಗಿ ಎತ್ತಿ ತೋರಿಸುವುದು.
- ದೃಷ್ಟಿ - ಪ್ರಾಚೀನ ನೃತ್ಯ ಪ್ರಕಾರಗಳು, ಬೊಂಬೆಯಾಟ ಮತ್ತು ಜಾನಪದ ರಂಗಭೂಮಿಯಿಂದ ಹಿಡಿದು ಭಾರತದ ಅಭಿವೃದ್ಧಿ ಹೊಂದುತ್ತಿರುವ ಸಿನೆಮಾ, ಟೆಲಿವಿಶನ್, ಡಿಜಿಟಲ್ ಮತ್ತು ಆಳವಾದ ಕಥೆ ಹೇಳುವ ಪರಿಸರ ವ್ಯವಸ್ಥೆಗಳವರೆಗೆ ದೃಶ್ಯ ಅಭಿವ್ಯಕ್ತಿಯನ್ನು ಅನ್ವೇಷಿಸುವುದು.
- ಕ್ರಿಯೇಟರ್ಸ್ ಲೀಪ್ - ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಥೆ ಹೇಳುವ ಭವಿಷ್ಯವನ್ನು ಪ್ರದರ್ಶಿಸುವುದು.
ಈ ಅನುಭವಾತ್ಮಕ/ಪ್ರಯೋಗಾತ್ಮಕ ವಲಯಗಳ ಮೂಲಕ, ಭಾರತದ ಕಾಲಾತೀತ ನಿರೂಪಣೆಗಳು ಹೇಗೆ ಪ್ರಬಲ ಆಧುನಿಕ ಮಾಧ್ಯಮ ಸ್ವರೂಪಗಳಾಗಿ ವಿಕಸನಗೊಂಡಿವೆ ಎಂಬುದನ್ನು ವೀಕ್ಷಿಸಲು ಸಂದರ್ಶಕರನ್ನು ಆಹ್ವಾನಿಸಲಾಗುತ್ತದೆ. “ಓಂ” ನ ಪ್ರತಿಧ್ವನಿಯಿಂದ ಹಿಡಿದು ತಬಲಾದ ಬಡಿತದವರೆಗೆ, ಭೀಮ್ ಬೆಟ್ಕಾದ ಕೆತ್ತಲಾದ ಚಿಹ್ನೆಗಳಿಂದ ಇಂದಿನ ಡಿಜಿಟಲ್ ಪರದೆಗಳವರೆಗೆ, ನಟರಾಜನ ನೃತ್ಯದಿಂದ ಸಿನೆಮಾದ ಬ್ಲಾಕ್ ಬಸ್ಟರ್ ಗಳವರೆಗೆ - ಭಾರತವು ಜಾಗತಿಕ ಕಥೆಯ ಭೂದೃಶ್ಯವನ್ನು ಹೇಗೆ ರೂಪಿಸಿತು ಮತ್ತು ರೂಪಿಸುತ್ತಿದೆ ಎಂಬುದರ ಜೀವಂತ ಸಂಗ್ರಹವಾಗಿರಲಿದೆ ಈ ಭಾರತ್ ಪೆವಿಲಿಯನ್.
ಆದರೆ ಇದು ಸಾಂಸ್ಕೃತಿಕ ಪ್ರದರ್ಶನ ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚಿನದಾಗಿದೆ - ಇದು ಭಾರತದ ಸೃಜನಶೀಲ ಪರಾಕ್ರಮ ಮತ್ತು ಭವಿಷ್ಯದ ದೃಷ್ಟಿಕೋನದ ಘೋಷಣೆಯಾಗಿದೆ. ಅನೇಕ ಒಟಿಟಿ ಪ್ಲಾಟ್ಫಾರ್ಮ್ಗಳು, ತಂತ್ರಜ್ಞಾನ-ಆಕರ್ಷಿತ -ಮೊದಲ ಪ್ರೇಕ್ಷಕರು, ವಿಶ್ವದರ್ಜೆಯ ವಿಎಫ್ಎಕ್ಸ್, ಗೇಮಿಂಗ್ ಮತ್ತು ಅನಿಮೇಷನ್ ಸ್ಟುಡಿಯೋಗಳು ಹಾಗು ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಯೊಂದಿಗೆ, ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಮತ್ತು ಮನರಂಜನಾ ಮಾರುಕಟ್ಟೆಗಳಲ್ಲಿ ಒಂದಾಗಿ ರೂಪುಗೊಳ್ಳುತ್ತಿದೆ.
ಭಾರತ್ ಪೆವಿಲಿಯನ್ ಮಾಧ್ಯಮ ಮತ್ತು ಮನರಂಜನಾ ಪರಿಸರ ವ್ಯವಸ್ಥೆಯಾದ್ಯಂತ ಸೃಷ್ಟಿಕರ್ತರು, ಸಹಯೋಗಿಗಳು ಮತ್ತು ಬದಲಾವಣೆ ತರುವವರಿಗೆ ಕ್ರಿಯಾತ್ಮಕ ವೇದಿಕೆಯಾಗಿ ನಿಂತಿದೆ. ಇದು ಭಾರತದ ಅಸಾಧಾರಣ ಪ್ರತಿಭೆ, ಸುಧಾರಿತ ಕಥೆ ಹೇಳುವ ತಂತ್ರಜ್ಞಾನಗಳು ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಮಾರುಕಟ್ಟೆ ಸಾಮರ್ಥ್ಯದೊಂದಿಗೆ ಸಂಪರ್ಕ ಸಾಧಿಸಲು ಮಧ್ಯಸ್ಥಗಾರರಿಗೆ ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತದೆ. ಸಾಂಸ್ಕೃತಿಕ ಪರಂಪರೆಯ ಪ್ರದರ್ಶನಕ್ಕಿಂತ ಹೆಚ್ಚಾಗಿ, ಭಾರತ್ ಪೆವಿಲಿಯನ್ ಅಂತರ್-ಸಾಂಸ್ಕೃತಿಕ ಪಾಲುದಾರಿಕೆ ಮತ್ತು ಹೂಡಿಕೆಯನ್ನು ಬೆಳೆಸುವಲ್ಲಿ ಸರ್ಕಾರದ ಬಲವಾದ ಬೆಂಬಲದ ಪ್ರತಿಬಿಂಬವಾಗಿದೆ – ಅದು ಸೃಜನಶೀಲ ನಾವೀನ್ಯತೆ ಮತ್ತು ಸಹಯೋಗದ ಜಾಗತಿಕ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತದೆ.
ವೇವ್ಸ್ 2025 ರ ಭಾರತ್ ಪೆವಿಲಿಯನ್ ನಲ್ಲಿ ಪ್ರಾಚೀನ ಸ್ಫೂರ್ತಿಯು ಅತ್ಯಾಧುನಿಕ ನಾವೀನ್ಯತೆಗಳನ್ನು ಸಂಧಿಸುತ್ತದೆ. ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಾಟಿಯಿಲ್ಲದ ಸೃಜನಶೀಲ ಪ್ರತಿಭೆ ಮತ್ತು ವಿಶ್ವ ದರ್ಜೆಯ ತಾಂತ್ರಿಕ ಸಾಮರ್ಥ್ಯಗಳೊಂದಿಗೆ; ಭಾರತವು ಮಾಧ್ಯಮ ಮತ್ತು ಮನರಂಜನೆಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಜ್ಜಾಗಿದೆ- ಜಗತ್ತನ್ನು ಆಕರ್ಷಿಸಲು ಮತ್ತು ಪ್ರೇರೇಪಿಸಲೂ ಸಿದ್ಧವಾಗಿದೆ.
*****
Release ID:
(Release ID: 2123781)
| Visitor Counter:
23