ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಜೀವನದ ಮೊದಲ 1000 ದಿನಗಳು: ಪೋಷಣ್ ಪಖ್ವಾಡಾ 2025ರಲ್ಲಿ ಒಂದು ಪ್ರಮುಖ ವಿಷಯ ಶೀರ್ಷಿಕೆ

Posted On: 09 APR 2025 4:19PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪೌಷ್ಠಿಕಾಂಶದ ಜಾಗೃತಿಯನ್ನು ಉತ್ತೇಜಿಸುವ, ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವ ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಎರಡು ವಾರಗಳ ರಾಷ್ಟ್ರವ್ಯಾಪಿ ಅಭಿಯಾನವಾದ ಪೋಷಣ್ ಪಖ್ವಾಡಾ - 2025 ಆಚರಿಸುತ್ತಿದೆ. ಈ ಉಪಕ್ರಮವು ಮಿಷನ್ ಪೋಷಣ್ 2.0 ರ ಭಾಗವಾಗಿದೆ, ಇದು ಸಮುದಾಯ ತೊಡಗಿಸಿಕೊಳ್ಳುವಿಕೆ ಪ್ರಕ್ರಿಯೆಗಳನ್ನು ಬಲಪಡಿಸುವ ಮತ್ತು ವ್ಯಕ್ತಿಗಳು ಹಾಗು ಸಮುದಾಯಗಳ ಒಟ್ಟಾರೆ ಸಬಲೀಕರಣವನ್ನು ಉತ್ತೇಜಿಸುವತ್ತ ಗಮನ ಹರಿಸುತ್ತದೆ.

ಜೀವನದ/ಬದುಕಿನ  ಮೊದಲ 1000 ದಿನಗಳ ಮೇಲೆ ಗಮನ ಕೇಂದ್ರೀಕರಿಸುವುದು ಪ್ರಸ್ತುತ ನಡೆಯುತ್ತಿರುವ ಪೋಷಣ್ ಪಖ್ವಾಡಾ 2025 ರ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ, ಗರ್ಭಧಾರಣೆಯಿಂದ ಎರಡು ವರ್ಷದವರೆಗೆ ಜೀವನದ ಮೊದಲ 1000 ದಿನಗಳಲ್ಲಿ ಪೌಷ್ಠಿಕಾಂಶದ ಮಹತ್ವವನ್ನು ಇದು ಒತ್ತಿಹೇಳುತ್ತದೆ. ಈ ನಿರ್ಣಾಯಕ ಅವಧಿಯು ಜೀವನಪರ್ಯಂತ ಆರೋಗ್ಯ ಮತ್ತು ಅಭಿವೃದ್ಧಿಗೆ ಅಡಿಪಾಯ ಹಾಕುತ್ತದೆ. ಗರ್ಭಾವಸ್ಥೆಯಲ್ಲಿ ಮತ್ತು ಬಾಲ್ಯದ ಆರಂಭಿಕ ಕಾಲಘಟ್ಟದಲ್ಲಿ ಸಾಕಷ್ಟು ಪೌಷ್ಠಿಕಾಂಶವು ಸುಧಾರಿತ ಆರೋಗ್ಯ ಫಲಿತಾಂಶಗಳು, ಹೆಚ್ಚಿನ ಉತ್ಪಾದಕತೆ ಮತ್ತು ಪ್ರೌಢಾವಸ್ಥೆಯಲ್ಲಿ ಹೆಚ್ಚಿನ ಗಳಿಕೆಯೊಂದಿಗೆ ಸಂಬಂಧ ಹೊಂದಿದೆ. ಈ ಅವಧಿಯಲ್ಲಿ ಪೌಷ್ಠಿಕಾಂಶಕ್ಕೆ ಆದ್ಯತೆ ನೀಡುವ ಮೂಲಕ, ನಾವು ತಲೆಮಾರುಗಳಾದ್ಯಂತ ಅಪೌಷ್ಟಿಕತೆಯ ವರ್ತುಲವನ್ನು ಮುರಿಯಬಹುದು.

2024 ರ ಮಾರ್ಚ್ 9-23, ರವರೆಗೆ  ಆಚರಿಸಲಾದ ಹಿಂದಿನ ಪೋಷಣ್ ಪಖ್ವಾಡಾ, ಪೋಷಣ್ ಭಿ ಪಧೈ ಭಿ (ಪಿಬಿಪಿಬಿ), ಗರ್ಭಿಣಿ ಮಹಿಳೆಯರ ಆರೋಗ್ಯ ಮತ್ತು ಶಿಶು ಹಾಗು ಚಿಕ್ಕ ಮಕ್ಕಳ ಆಹಾರ ಪದ್ಧತಿಗಳಂತಹ (ಐವೈಸಿಎಫ್) ಪ್ರಮುಖ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿತ್ತು. ಪೌಷ್ಠಿಕಾಂಶ ಸಂವೇದನೆಯ ಸುತ್ತ ಯೋಜಿಸಲಾದ ಫಲಿತಾಂಶ ಆಧಾರಿತ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಿ ನಡೆಯುತ್ತಿರುವ ಪೋಷಣ್ ಪಖ್ವಾಡಾ 2025, ಸಮುದಾಯದ  ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ  ಪೌಷ್ಠಿಕಾಂಶ ಸಂಬಂಧಿತ ಸೇವೆಗಳ ಅನುಷ್ಠಾನವನ್ನು ಬಲಪಡಿಸುವ ಮೂಲಕ ಪೌಷ್ಠಿಕಾಂಶದ ಫಲಿತಾಂಶಗಳು ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

 

 

*****


(Release ID: 2120634) Visitor Counter : 22