ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು


ದೇಶದ ಎಲ್ಲಾ ನಾಗರಿಕರು ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯುವುದು ನಮ್ಮ ಆದ್ಯತೆಯಾಗಿದೆ: ಪ್ರಧಾನಮಂತ್ರಿ

ಅತ್ಯಂತ ಕಷ್ಟದ ಸಮಯದಲ್ಲಿಯೂ ಸಹ, ಪ್ರಜ್ಞೆಯನ್ನು ಜಾಗೃತಗೊಳಿಸಲು ಭಾರತದಲ್ಲಿ ಹೊಸ ಸಾಮಾಜಿಕ ಚಳವಳಿಗಳು ನಡೆಯುತ್ತಲೇ ಇದ್ದವು: ಪ್ರಧಾನಮಂತ್ರಿ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಅಮರ ಸಂಸ್ಕೃತಿಯ ಆಧುನಿಕ ಅಕ್ಷಯ ವತ್ ಆಗಿದೆ, ಈ ಅಕ್ಷಯ ವತ್ ನಿರಂತರವಾಗಿ ಭಾರತೀಯ ಸಂಸ್ಕೃತಿ ಮತ್ತು ನಮ್ಮ ರಾಷ್ಟ್ರದ ಪ್ರಜ್ಞೆಯನ್ನು ಚೈತನ್ಯಗೊಳಿಸುತ್ತಿದೆ: ಪ್ರಧಾನಮಂತ್ರಿ

ಪ್ರಯತ್ನಗಳ ಸಮಯದಲ್ಲಿ ಗಮನವು ನನ್ನ ಮೇಲೆ ಅಲ್ಲ, ನಮ್ಮ ಮೇಲೆ ಇದ್ದಾಗ, ರಾಷ್ಟ್ರದ ಚೈತನ್ಯವು ಮೊದಲು ಅತ್ಯುನ್ನತವಾಗಿದ್ದಾಗ, ನೀತಿಗಳು ಮತ್ತು ನಿರ್ಧಾರಗಳಲ್ಲಿ ದೇಶದ ಜನರ ಹಿತಾಸಕ್ತಿ ಅತ್ಯಂತ ಪ್ರಮುಖ ಅಂಶವಾಗಿದ್ದಾಗ, ಅದರ ಪರಿಣಾಮ ಎಲ್ಲೆಡೆ ಗೋಚರಿಸುತ್ತದೆ: ಪ್ರಧಾನಮಂತ್ರಿ

ಜಗತ್ತಿನಲ್ಲಿ ಎಲ್ಲೆಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿದರೂ, ಭಾರತವು ಪೂರ್ಣ ಹೃದಯದಿಂದ ಸೇವೆ ಸಲ್ಲಿಸಲು ಎದ್ದು ನಿಲ್ಲುತ್ತದೆ: ಪ್ರಧಾನಮಂತ್ರಿ

ರಾಷ್ಟ್ರ ನಿರ್ಮಾಣದ ಉತ್ಸಾಹದಿಂದ ತುಂಬಿರುವ ನಮ್ಮ ಯುವಕರು 2047ರ ವೇಳೆಗೆ ವಿಕಸಿತ ಭಾರತ ಗುರಿಯತ್ತ ಮುನ್ನಡೆಯುತ್ತಿದ್ದಾರೆ: ಪ್ರಧಾನಮಂತ್ರಿ

Posted On: 30 MAR 2025 2:09PM by PIB Bengaluru

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ಪ್ರಧಾನಮಂತ್ರಿಯವರು ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪವಿತ್ರ ನವರಾತ್ರಿ ಉತ್ಸವದ ಆರಂಭವನ್ನು ಸೂಚಿಸುವ ಚೈತ್ರ ಶುಕ್ಲ ಪ್ರತಿಪದದ ಮಹತ್ವದ ಬಗ್ಗೆ ತಿಳಿಸಿದರು. ದೇಶಾದ್ಯಂತ ಇಂದು ಗುಡಿ ಪಡ್ವಾ, ಯುಗಾದಿ ಮತ್ತು ನವರೇಹ್‌ನಂತಹ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು. ಭಗವಾನ್ ಜುಲೇಲಾಲ್ ಮತ್ತು ಗುರು ಅಂಗದ್ ದೇವ್ ಅವರ ಜನ್ಮ ದಿನಾಚರಣೆಯೊಂದಿಗೆ ಈ ದಿನವು ಹೊಂದಿಕೆಯಾಗುವುದರಿಂದ ಈ ದಿನದ ಮಹತ್ವವನ್ನು ಅವರು ವಿವರಿಸಿದರು. ಈ ಸಂದರ್ಭವನ್ನು ಸ್ಪೂರ್ತಿದಾಯಕ ಡಾ. ಕೆ. ಬಿ. ಹೆಡ್ಗೆವಾರ್ ಅವರ ಜನ್ಮ ವಾರ್ಷಿಕೋತ್ಸವ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶ್ರೇಷ್ಠ ಪ್ರಯಾಣದ ಶತಮಾನೋತ್ಸವ ವರ್ಷವೆಂದು ತಿಳಿಸಿದರು. ಈ ಮಹತ್ವದ ದಿನದಂದು ಡಾ. ಹೆಡ್ಗೆವಾರ್ ಮತ್ತು ಶ್ರೀ ಗೋಲ್ವಾಲ್ಕರ್ ಗುರೂಜಿ ಅವರಿಗೆ ಗೌರವ ಸಲ್ಲಿಸಲು ಸ್ಮೃತಿ ಮಂದಿರಕ್ಕೆ ಭೇಟಿ ನೀಡಿರುವುದು ನನಗೆ ಸಿಕ್ಕ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.

ಈ ಅವಧಿಯಲ್ಲಿ ಭಾರತೀಯ ಸಂವಿಧಾನದ 75 ವರ್ಷಗಳ ಆಚರಣೆ ಮತ್ತು ಮುಂದಿನ ತಿಂಗಳು ನಡೆಯಲಿರುವ ಅದರ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಪ್ರಮುಖವಾಗಿ ಉಲ್ಲೇಖಿಸುತ್ತಾ, ಶ್ರೀ ಮೋದಿ ಅವರು ದೀಕ್ಷಭೂಮಿಯಲ್ಲಿ ಡಾ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಮತ್ತು ಅವರ ಆಶೀರ್ವಾದ ಪಡೆಯುವ ಬಗ್ಗೆ ತಿಳಿಸಿದ ಅವರು, ನವರಾತ್ರಿ ಮತ್ತು ಆಚರಿಸಲಾಗುವ ಎಲ್ಲಾ ಇತರ ಹಬ್ಬಗಳ ಸಂದರ್ಭದಲ್ಲಿ ನಾಗರಿಕರಿಗೆ ಶುಭಾಶಯಗಳನ್ನು ಕೋರುತ್ತೇನೆ ಎಂದರು.

ಪವಿತ್ರ ಸೇವಾ ಕೇಂದ್ರವಾಗಿ ನಾಗ್ಪುರದ ಮಹತ್ವವನ್ನು ತಿಳಿಸಿದ ಪ್ರಧಾನಮಂತ್ರಿಗಳು, ಉದಾತ್ತ ಉಪಕ್ರಮದ ವಿಸ್ತರಣೆ, ಆಧ್ಯಾತ್ಮಿಕತೆ, ಜ್ಞಾನ, ಹೆಮ್ಮೆ ಮತ್ತು ಮಾನವೀಯತೆಯನ್ನು ಪ್ರತಿಬಿಂಬಿಸುವ ಮಾಧವ ನೇತ್ರಾಲಯದ ಸ್ಪೂರ್ತಿದಾಯಕ ಗೀತೆಯ ಬಗ್ಗೆ ವಿವರಿಸಿದರು. ಪೂಜ್ಯ ಗುರೂಜಿಯವರ ಆದರ್ಶಗಳನ್ನು ಅನುಸರಿಸಿ, ದಶಕಗಳಿಂದ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿರುವ ಮತ್ತು ಅಸಂಖ್ಯಾತ ಜೀವನಗಳಿಗೆ ಬೆಳಕನ್ನು ಪುನಃಸ್ಥಾಪಿಸುತ್ತಿರುವ ಸಂಸ್ಥೆಯಾಗಿ ಮಾಧವ ನೇತ್ರಾಲಯ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

ಮಾಧವ ನೇತ್ರಾಲಯದ ಹೊಸ ಕ್ಯಾಂಪಸ್‌ನ ಅಡಿಪಾಯ ಹಾಕುವಿಕೆ ಮತ್ತು ಈ ವಿಸ್ತರಣೆಯು ಅದರ ಸೇವಾ ಚಟುವಟಿಕೆಗಳನ್ನು ವೇಗಗೊಳಿಸುತ್ತದೆ, ಸಾವಿರಾರು ಹೊಸ ಜೀವನಗಳಿಗೆ ಬೆಳಕನ್ನು ತರುತ್ತದೆ ಮತ್ತು ಅವರ ಜೀವನದಿಂದ ಕತ್ತಲೆಯನ್ನು ಹೋಗಲಾಡಿಸುತ್ತದೆ ಎಂಬ ವಿಶ್ವಾಸವಿದೆ. ಮಾಧವ ನೇತ್ರಾಲಯದೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು ಅವರ ನಿರಂತರ ಸೇವೆಗಾಗಿ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಕೆಂಪು ಕೋಟೆಯಿಂದ 'ಸಬ್ ಕೆ ಪ್ರಯಾಸ್‌' ಗೆ ನೀಡಿದ ಮಹತ್ವವನ್ನು ಪುನರುಚ್ಚರಿಸಿದ ಶ್ರೀ ಮೋದಿ, ಆರೋಗ್ಯ ಕ್ಷೇತ್ರದಲ್ಲಿ ದೇಶವು ಮಾಡಿರುವ ಮಹತ್ವದ ಪ್ರಗತಿಯನ್ನು ಎತ್ತಿ ತೋರಿಸಿದರು. ಮಾಧವ ನೇತ್ರಾಲಯವು ಈ ಪ್ರಯತ್ನಗಳಿಗೆ ಪೂರಕವಾಗಿದೆ. "ಎಲ್ಲಾ ನಾಗರಿಕರಿಗೂ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಖಚಿತಪಡಿಸುವುದು ಸರ್ಕಾರದ ಆದ್ಯತೆಯಾಗಿದೆ, ಬಡವರಿಗೂ ಸಹ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ಲಭ್ಯವಾಗಬೇಕು" ಎಂದು ಅವರು ಒತ್ತಿ ಹೇಳಿದರು, ಯಾವುದೇ ನಾಗರಿಕನು ಜೀವನದ ಘನತೆಯಿಂದ ವಂಚಿತನಾಗಬಾರದು ಮತ್ತು ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಿರಿಯ ನಾಗರಿಕರು ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಚಿಂತೆ ಮಾಡಬಾರದು ಎಂದು ಅವರು ಒತ್ತಿ ಹೇಳಿದರು. ಲಕ್ಷಾಂತರ ಜನರಿಗೆ ಉಚಿತ ಚಿಕಿತ್ಸೆಯನ್ನು ಒದಗಿಸಿರುವ ಆಯುಷ್ಮಾನ್ ಭಾರತದ ಪರಿಣಾಮ ಎಲ್ಲೆಡೆ ಇದೆ. ದೇಶಾದ್ಯಂತ ಸಾವಿರಾರು ಜನೌಷಧಿ ಕೇಂದ್ರಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ಔಷಧಿಗಳನ್ನು ನೀಡುತ್ತಿವೆ, ನಾಗರಿಕರಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸಿವೆ. ಕಳೆದ ದಶಕದಲ್ಲಿ ಹಳ್ಳಿಗಳಲ್ಲಿ ಲಕ್ಷಾಂತರ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸುವ ಬಗ್ಗೆ, ಜನರಿಗೆ ಟೆಲಿಮೆಡಿಸಿನ್ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ. ಈ ಸೌಲಭ್ಯಗಳು ನಾಗರಿಕರು ವೈದ್ಯಕೀಯ ಪರೀಕ್ಷೆಗಳಿಗಾಗಿ ನೂರಾರು ಕಿಲೋಮೀಟರ್ ಪ್ರಯಾಣಿಸುವ ಅಗತ್ಯವನ್ನು ನಿವಾರಿಸಿವೆ ಎಂದು ಅವರು ಒತ್ತಿ ಹೇಳಿದರು.

ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದನ್ನು ಮತ್ತು ಏಮ್ಸ್ ಸಂಸ್ಥೆಗಳ ಕಾರ್ಯನಿರ್ವಹಣೆ ಮೂರು ಪಟ್ಟು ಹೆಚ್ಚಾಗುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಭವಿಷ್ಯದಲ್ಲಿ ಜನರಿಗೆ ಸೇವೆ ಸಲ್ಲಿಸಲು ಹೆಚ್ಚು ನುರಿತ ವೈದ್ಯರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಸೀಟುಗಳ ಸಂಖ್ಯೆಯೂ ದ್ವಿಗುಣಗೊಂಡಿದೆ. ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಅವಕಾಶಗಳನ್ನು ಒದಗಿಸುವ ಮೂಲಕ ಅವರು ವೈದ್ಯರಾಗಲು ಅನುವು ಮಾಡಿಕೊಡುವ ಸರ್ಕಾರದ ಪ್ರಯತ್ನಗಳನ್ನು ಅವರು ವಿವರಿಸಿದರು. ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿನ ಪ್ರಗತಿಯ ಜೊತೆಗೆ, ದೇಶವು ತನ್ನ ಸಾಂಪ್ರದಾಯಿಕ ಜ್ಞಾನವನ್ನು ಸಹ ಉತ್ತೇಜಿಸುತ್ತಿದೆ. ವಿಶ್ವ ವೇದಿಕೆಯಲ್ಲಿ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಿರುವ ಭಾರತದ ಯೋಗ ಮತ್ತು ಆಯುರ್ವೇದವು ಸಾಧಿಸುತ್ತಿರುವ ಜಾಗತಿಕ ಮನ್ನಣೆಯ ಬಗ್ಗೆ ಪ್ರಧಾನಮಂತ್ರಿಗಳು ತಿಳಿಸಿದರು.

ಯಾವುದೇ ರಾಷ್ಟ್ರದ ಅಸ್ತಿತ್ವವು ಪೀಳಿಗೆಯಿಂದ ಪೀಳಿಗೆಗೆ ಅದರ ಸಂಸ್ಕೃತಿ ಮತ್ತು ಪ್ರಜ್ಞೆಯ ವಿಸ್ತರಣೆಯ ಮೇಲೆ ಅವಲಂಬಿತವಾಗಿದೆ. ಭಾರತದ ಶತಮಾನಗಳ ಗುಲಾಮಗಿರಿ ಮತ್ತು ಆಕ್ರಮಣಗಳ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದರು. ಅದು ಅದರ ಸಾಮಾಜಿಕ ರಚನೆಯನ್ನು ಕೆಡವಲು ಪ್ರಯತ್ನಿಸಿತು, ಆದರೆ ಭಾರತದ ಪ್ರಜ್ಞೆ ಜೀವಂತ ಮತ್ತು ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಂಡಿತು. "ಕಠಿಣ ಕಾಲದಲ್ಲಿಯೂ ಸಹ, ಭಾರತದಲ್ಲಿನ ಹೊಸ ಸಾಮಾಜಿಕ ಚಳವಳಿಗಳು ಈ ಪ್ರಜ್ಞೆಯನ್ನು ಜಾಗೃತಗೊಳಿಸಿದವು". ಭಕ್ತಿ ಚಳವಳಿಯೂ ಪ್ರಮುಖವಾಗಿದೆ. ಅಲ್ಲಿ ಗುರುನಾನಕ್ ದೇವ್, ಕಬೀರ್ ದಾಸ್, ತುಳಸಿದಾಸ್, ಸೂರದಾಸರು ಮತ್ತು ಮಹಾರಾಷ್ಟ್ರದ ಸಂತ ತುಕಾರಾಂ, ಸಂತ ಏಕನಾಥ, ಸಂತ ನಾಮದೇವ್ ಮತ್ತು ಸಂತ ಜ್ಞಾನೇಶ್ವರರಂತಹ ಸಂತರು ತಮ್ಮ ಮೂಲ ವಿಚಾರಗಳೊಂದಿಗೆ ಭಾರತದ ರಾಷ್ಟ್ರೀಯ ಪ್ರಜ್ಞೆಗೆ ಜೀವ ತುಂಬಿದರು. ಈ ಚಳವಳಿಗಳು ತಾರತಮ್ಯದ ಸರಪಳಿಗಳನ್ನು ಮುರಿದು ಸಮಾಜವನ್ನು ಒಗ್ಗೂಡಿಸಿದವು. ಹತಾಶೆಗೊಂಡ ಸಮಾಜವನ್ನು ಅಲುಗಾಡಿಸಿದ ಸ್ವಾಮಿ ವಿವೇಕಾನಂದರ ಕೊಡುಗೆಗಳನ್ನು ಒತ್ತಿಹೇಳುತ್ತಾ, ಅದರ ನಿಜವಾದ ಸಾರವನ್ನು ನೆನಪಿಸಿದರು, ಆತ್ಮವಿಶ್ವಾಸವನ್ನು ತುಂಬಿದರು ಮತ್ತು ಭಾರತದ ರಾಷ್ಟ್ರೀಯ ಪ್ರಜ್ಞೆ ಕುಂದದಂತೆ ನೋಡಿಕೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದರು, ವಸಾಹತುಶಾಹಿ ಆಳ್ವಿಕೆಯ ಕೊನೆಯ ದಶಕಗಳಲ್ಲಿ ಈ ಪ್ರಜ್ಞೆಯನ್ನು ಚೈತನ್ಯಗೊಳಿಸುವಲ್ಲಿ ಡಾ. ಹೆಡ್ಗೆವಾರ್ ಮತ್ತು ಗುರೂಜಿ ಅವರ ಪಾತ್ರವನ್ನು ಪ್ರಧಾನಿ ಸ್ಮರಿಸಿದರು. ರಾಷ್ಟ್ರೀಯ ಪ್ರಜ್ಞೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ 100 ವರ್ಷಗಳ ಹಿಂದೆ ಬಿತ್ತಿದ ಚಿಂತನೆಯ ಬೀಜದ ಬಗ್ಗೆ ಅವರು ಮಾತನಾಡಿದರು, ಅದು ಈಗ ಒಂದು ದೊಡ್ಡ ವೃಕ್ಷವಾಗಿ ಬೆಳೆದಿದೆ. ಲಕ್ಷಾಂತರ ಸ್ವಯಂಸೇವಕರು ಅದರ ಶಾಖೆಗಳಾಗಿರುವುದರೊಂದಿಗೆ, ತತ್ವಗಳು ಮತ್ತು ಆದರ್ಶಗಳು ಈ ಮಹಾನ್ ವೃಕ್ಷಕ್ಕೆ ಔನ್ನತ್ಯವನ್ನು ನೀಡುತ್ತವೆ ಎಂದು ಅವರು ಎತ್ತಿ ತೋರಿಸಿದರು. "ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಅಮರ ಸಂಸ್ಕೃತಿಯ ಆಧುನಿಕ ಅಕ್ಷಯ ವತ್ ಆಗಿದೆ, ಈ ಅಕ್ಷಯ ವತ್ ನಿರಂತರವಾಗಿ ಭಾರತೀಯ ಸಂಸ್ಕೃತಿ ಮತ್ತು ನಮ್ಮ ರಾಷ್ಟ್ರದ ಪ್ರಜ್ಞೆಯನ್ನು ಚೈತನ್ಯಗೊಳಿಸುತ್ತಿದೆ" ಎಂದು ಅವರು ಹೇಳಿದರು.

ಮಾಧವ ನೇತ್ರಾಲಯದ ಹೊಸ ಕ್ಯಾಂಪಸ್ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಂತೆ ದೃಷ್ಟಿ ಮತ್ತು ನಿರ್ದೇಶನದ ನಡುವಿನ ನೈಸರ್ಗಿಕ ಸಂಪರ್ಕದ ಬಗ್ಗೆ ಮಾತನಾಡಿದ ಶ್ರೀ ಮೋದಿ, "ನಾವು ನೂರು ವರ್ಷಗಳ ಕಾಲ ನೋಡೋಣ. ಜೀವನದಲ್ಲಿ ದೃಷ್ಟಿಗೆ ಮಹತ್ವವಿದೆ. ಬಾಹ್ಯ ದೃಷ್ಟಿ ಮತ್ತು ಆಂತರಿಕ ದೃಷ್ಟಿ ಎರಡರ ಮಹತ್ವವನ್ನು ಒತ್ತಿ ಹೇಳಿದರು. ವಿದರ್ಭದ ಮಹಾನ್ ಸಂತ, "ಪ್ರಜ್ಞಾಚಕ್ಷು" ಎಂದು ಕರೆಯಲ್ಪಡುವ ಶ್ರೀ ಗುಲಾಬ್ರಾವ್ ಮಹಾರಾಜ್ ಅವರನ್ನು ಸ್ಮರಿಸಿದ ಪ್ರಧಾನಿ, "ಚಿಕ್ಕ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರೂ, ಶ್ರೀ ಗುಲಾಬ್ರಾವ್ ಮಹಾರಾಜ್ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ". ಭೌತಿಕ ದೃಷ್ಟಿಯ ಕೊರತೆಯಿದ್ದರೂ, ಅವರು ಆಳವಾದ ದೃಷ್ಟಿಯನ್ನು ಹೊಂದಿದ್ದರು, ಅದು ಬುದ್ಧಿವಂತಿಕೆಯಿಂದ ಹುಟ್ಟುತ್ತದೆ ಮತ್ತು ವಿವೇಚನೆಯ ಮೂಲಕ ಪ್ರಕಟವಾಗುತ್ತದೆ ಎಂದು ಅವರು ಗಮನಿಸಿದರು. ಅಂತಹ ದೃಷ್ಟಿಕೋನವು ವ್ಯಕ್ತಿಗಳು ಮತ್ತು ಸಮಾಜ ಎರಡನ್ನೂ ಸಬಲಗೊಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಆರ್‌ಎಸ್‌ಎಸ್ ಬಾಹ್ಯ ಮತ್ತು ಆಂತರಿಕ ದೃಷ್ಟಿಕೋನಗಳೆರಡರ ಕಡೆಗೆ ಕೆಲಸ ಮಾಡುವ ಪವಿತ್ರ ಪ್ರಯತ್ನವಾಗಿದೆ ಎಂದು ಅವರು ಗಮನಿಸಿದರು. ಮಾಧವ ನೇತ್ರಾಲಯವನ್ನು ಬಾಹ್ಯ ದೃಷ್ಟಿಕೋನದ ಉದಾಹರಣೆಯಾಗಿ ಅವರು ಎತ್ತಿ ತೋರಿಸಿದರು ಮತ್ತು ಆಂತರಿಕ ದೃಷ್ಟಿಕೋನವು ಸಂಘವನ್ನು ಸೇವೆಗೆ ಸಮಾನಾರ್ಥಕವಾಗಿಸಿದೆ ಎಂದು ಹೇಳಿದರು.

ಜೀವನದ ಉದ್ದೇಶ ಸೇವೆ ಮತ್ತು ಪರಹಿತಚಿಂತನೆ ಎಂದು ಒತ್ತಿ ಹೇಳುವ ಮೂಲಕ ಪ್ರಧಾನ ಮಂತ್ರಿಗಳು ಧರ್ಮಗ್ರಂಥಗಳನ್ನು ಉಲ್ಲೇಖಿಸಿದರು. ಸೇವೆಯು ಮೌಲ್ಯಗಳಲ್ಲಿ ಬೇರೂರಿದಾಗ, ಅದು ಭಕ್ತಿಯ ರೂಪವಾಗಿ ರೂಪಾಂತರಗೊಳ್ಳುತ್ತದೆ, ಇದು ಪ್ರತಿಯೊಬ್ಬ ಆರ್‌ಎಸ್‌ಎಸ್ ಸ್ವಯಂಸೇವಕರ ಜೀವನದ ಸಾರವಾಗಿದೆ. ಈ ಸೇವಾ ಮನೋಭಾವವು ಸ್ವಯಂಸೇವಕರನ್ನು ನಿರಂತರವಾಗಿ ಸಕ್ರಿಯವಾಗಿರಿಸುತ್ತದೆ, ಅವರನ್ನು ಎಂದಿಗೂ ಆಯಾಸಗೊಳ್ಳಲು ಅಥವಾ ನಿಲ್ಲಿಸಲು ಬಿಡುವುದಿಲ್ಲ. ಜೀವನದ ಮಹತ್ವವು ಅದರ ಅವಧಿಯಲ್ಲ, ಆದರೆ ಅದರ ಉಪಯುಕ್ತತೆಯಲ್ಲಿದೆ ಎಂಬ ಗುರೂಜಿಯವರ ಮಾತುಗಳನ್ನು ನೆನಪಿಸಿಕೊಂಡ ಶ್ರೀ ಮೋದಿ, "ದೇವ್ ಟು ದೇಶ್" ಮತ್ತು "ರಾಮ್ ಟು ರಾಷ್ಟ್ರ" ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟ ಕರ್ತವ್ಯದ ಬದ್ಧತೆಯ ಬಗ್ಗೆ ವಿವರಿಸಿದರು. ಗಡಿ ಗ್ರಾಮಗಳು, ಗುಡ್ಡಗಾಡು ಪ್ರದೇಶಗಳು ಅಥವಾ ಅರಣ್ಯ ಪ್ರದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸ್ವಯಂಸೇವಕರ ನಿಸ್ವಾರ್ಥ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ವನವಾಸಿ ಕಲ್ಯಾಣ ಆಶ್ರಮಗಳು, ಬುಡಕಟ್ಟು ಮಕ್ಕಳಿಗಾಗಿ ಏಕಲ್ ವಿದ್ಯಾಲಯಗಳು, ಸಾಂಸ್ಕೃತಿಕ ಜಾಗೃತಿ ಕಾರ್ಯಾಚರಣೆಗಳು ಮತ್ತು ಸೇವಾ ಭಾರತಿಯಂತಹ ಉಪಕ್ರಮಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಗಮರ್ನಾಹ ಎಂದರು. ಪ್ರಯಾಗ ಮಹಾಕುಂಭದ ಸಮಯದಲ್ಲಿ ಸ್ವಯಂಸೇವಕರ ಅನುಕರಣೀಯ ಕಾರ್ಯವನ್ನು ಶ್ಲಾಘಿಸಿದ ಅವರು, ನೇತ್ರ ಕುಂಭ ಉಪಕ್ರಮದ ಮೂಲಕ ಲಕ್ಷಾಂತರ ಜನರಿಗೆ ಸಹಾಯ ಮಾಡಿದ ಅವರು, ಸೇವೆಯ ಅಗತ್ಯವಿರುವಲ್ಲೆಲ್ಲಾ ಸ್ವಯಂಸೇವಕರು ಇರುತ್ತಾರೆ. ಪ್ರವಾಹ ಮತ್ತು ಭೂಕಂಪಗಳಂತಹ ವಿಪತ್ತುಗಳ ಸಮಯದಲ್ಲಿ ಸ್ವಯಂಸೇವಕರ ಶಿಸ್ತಿನ ಪ್ರತಿಕ್ರಿಯೆಯ ಬಗ್ಗೆ ಅವರು ಹೇಳಿದರು, ಅವರ ನಿಸ್ವಾರ್ಥತೆ ಮತ್ತು ಸೇವೆಗೆ ಸಮರ್ಪಣೆ ಇದೆ. "ಸೇವೆಯು ಒಂದು ತ್ಯಾಗದ ಬೆಂಕಿ, ಮತ್ತು ನಾವು ಅರ್ಪಣೆಗಳಂತೆ ಸುಡುತ್ತೇವೆ, ಉದ್ದೇಶದ ಸಾಗರದಲ್ಲಿ ವಿಲೀನಗೊಳ್ಳುತ್ತೇವೆ" ಎಂದು ಪ್ರಧಾನಿ ಉಲ್ಲೇಖಿಸಿದರು.

ಸಂಘವನ್ನು ಸರ್ವವ್ಯಾಪಿ ಎಂದು ಏಕೆ ಉಲ್ಲೇಖಿಸಿದ್ದೀರಿ ಎಂದು ಒಮ್ಮೆ ಕೇಳಿದಾಗ ಗುರೂಜಿಯ ಬಗ್ಗೆ ಸ್ಪೂರ್ತಿದಾಯಕ ಉಪಖ್ಯಾನವನ್ನು ಹಂಚಿಕೊಂಡ ಶ್ರೀ ಮೋದಿ, ಗುರೂಜಿ ಸಂಘವನ್ನು ಬೆಳಕಿಗೆ ಹೋಲಿಸಿದರು, ಬೆಳಕು ಪ್ರತಿಯೊಂದು ಕೆಲಸವನ್ನು ಸ್ವತಃ ನಿರ್ವಹಿಸದಿದ್ದರೂ, ಅದು ಕತ್ತಲೆಯನ್ನು ಹೋಗಲಾಡಿಸುತ್ತದೆ ಮತ್ತು ಇತರರಿಗೆ ಮುಂದಿನ ದಾರಿಯನ್ನು ತೋರಿಸುತ್ತದೆ. ಗುರೂಜಿಯವರ ಬೋಧನೆಯು ಜೀವನ ಮಂತ್ರವಾಗಿ ಕಾರ್ಯನಿರ್ವಹಿಸುತ್ತದೆ, ಪ್ರತಿಯೊಬ್ಬರೂ ಬೆಳಕಿನ ಮೂಲವಾಗಲು, ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಪ್ರಗತಿಗೆ ದಾರಿ ಮಾಡಿಕೊಡಲು ಪ್ರೇರೇಪಿಸುತ್ತದೆ. "ನಾನಲ್ಲ, ನೀನಲ್ಲ" ಮತ್ತು "ನನ್ನದಲ್ಲ, ಆದರೆ ರಾಷ್ಟ್ರಕ್ಕಾಗಿ" ಎಂಬ ತತ್ವಗಳೊಂದಿಗೆ ಅವರು ನಿಸ್ವಾರ್ಥತೆಯ ಸಾರವನ್ನು ಎತ್ತಿ ತೋರಿಸಿದರು.

"ನಾನು" ಗಿಂತ "ನಾವು" ಎಂಬುದನ್ನು ಆದ್ಯತೆ ನೀಡುವ ಮತ್ತು ಎಲ್ಲಾ ನೀತಿಗಳು ಮತ್ತು ನಿರ್ಧಾರಗಳಲ್ಲಿ ರಾಷ್ಟ್ರವನ್ನು ಮೊದಲು ಇಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, ಅಂತಹ ವಿಧಾನವು ದೇಶಾದ್ಯಂತ ಗೋಚರಿಸುವ ಸಕಾರಾತ್ಮಕ ಪರಿಣಾಮಗಳನ್ನು ನೀಡುತ್ತದೆ ಎಂದು ಹೇಳಿದರು. ದೇಶವನ್ನು ಹಿಡಿದಿಟ್ಟುಕೊಂಡಿರುವ ಸರಪಳಿಗಳನ್ನು ಮುರಿಯುವ ಅಗತ್ಯದ ಬಗ್ಗೆ ತಿಳಿಸಿದರು. ವಸಾಹತುಶಾಹಿ ಮನಸ್ಥಿತಿಯನ್ನು ಮೀರಿ ಚಲಿಸುವ ಮಹತ್ವವನ್ನು ಒತ್ತಿ ಹೇಳಿದರು. ಭಾರತವು ಈಗ 70 ವರ್ಷಗಳಿಂದ ಕೀಳರಿಮೆಯಿಂದ ಸಾಗಿಸಲ್ಪಟ್ಟ ವಸಾಹತುಶಾಹಿಯ ಅವಶೇಷಗಳನ್ನು ರಾಷ್ಟ್ರೀಯ ಹೆಮ್ಮೆಯ ಹೊಸ ಅಧ್ಯಾಯಗಳೊಂದಿಗೆ ಬದಲಾಯಿಸುತ್ತಿದೆ. ಹೊಸ ಭಾರತೀಯ ನ್ಯಾಯ ಸಂಹಿತದೊಂದಿಗೆ ಭಾರತೀಯರನ್ನು ಕೀಳಾಗಿ ಕಾಣುವಂತೆ ವಿನ್ಯಾಸಗೊಳಿಸಲಾದ ಹಳೆಯ ಬ್ರಿಟಿಷ್ ಕಾನೂನುಗಳನ್ನು ಬದಲಾಯಿಸಲಾಗುತ್ತಿದೆ. ವಸಾಹತುಶಾಹಿ ಪರಂಪರೆಯ ಮೇಲಿನ ಕರ್ತವ್ಯವನ್ನು ಸಂಕೇತಿಸುವ ರಾಜಪಥವನ್ನು ಕರ್ತವ್ಯ ಮಾರ್ಗವಾಗಿ ಪರಿವರ್ತಿಸುವುದನ್ನು ಅವರು ಎತ್ತಿ ತೋರಿಸಿದರು. ಈಗ ಛತ್ರಪತಿ ಶಿವಾಜಿ ಮಹಾರಾಜರ ಲಾಂಛನವನ್ನು ಹೆಮ್ಮೆಯಿಂದ ಹೊಂದಿರುವ ನೌಕಾಪಡೆಯ ಧ್ವಜದಿಂದ ವಸಾಹತುಶಾಹಿ ಚಿಹ್ನೆಗಳನ್ನು ತೆಗೆದುಹಾಕಲಾಗುತ್ತದೆ. ಭಾರತದ ಸ್ವಾತಂತ್ರ್ಯದ ವೀರರನ್ನು ಗೌರವಿಸಲು ವೀರ್ ಸಾವರ್ಕರ್ ರಾಷ್ಟ್ರಕ್ಕಾಗಿ ಕಷ್ಟಗಳನ್ನು ಸಹಿಸಿಕೊಂಡ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಅಂಡಮಾನ್ ಪ್ರದೇಶದಲ್ಲಿನ ದ್ವೀಪಗಳ ಮರುನಾಮಕರಣಗಳ ಬಗ್ಗೆ ಹೇಳಿದರು.

"ವಸುಧೈವ ಕುಟುಂಬಕಂ" ಎಂಬ ಭಾರತದ ಮಾರ್ಗದರ್ಶಿ ತತ್ವವು ಪ್ರಪಂಚದ ಮೂಲೆ ಮೂಲೆಯನ್ನು ತಲುಪುತ್ತಿದೆ ಮತ್ತು ಭಾರತದ ಕಾರ್ಯಗಳಲ್ಲಿ ಪ್ರತಿಫಲಿಸುತ್ತಿದೆ" ಎಂದು ಶ್ರೀ ಮೋದಿ ಉದ್ಗರಿಸಿದರು, COVID-19 ಸಾಂಕ್ರಾಮಿಕ ಸಮಯದಲ್ಲಿ ಭಾರತವು ಕುಟುಂಬವಾಗಿ ಲಸಿಕೆಗಳನ್ನು ಒದಗಿಸುತ್ತಿರುವ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಇತ್ತೀಚೆಗೆ "ಆಪರೇಷನ್ ಬ್ರಹ್ಮ" ಅಡಿಯಲ್ಲಿ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪ, ಟರ್ಕಿ ಮತ್ತು ನೇಪಾಳದಲ್ಲಿ ಸಂಭವಿಸಿದ ಭೂಕಂಪಗಳು ಮತ್ತು ಮಾಲ್ಡೀವ್ಸ್‌ನಲ್ಲಿನ ನೀರಿನ ಬಿಕ್ಕಟ್ಟಿನ ಸಮಯದಲ್ಲಿ ನೆರವು ಸೇರಿದಂತೆ ನೈಸರ್ಗಿಕ ವಿಕೋಪಗಳಿಗೆ ಭಾರತದ ತ್ವರಿತ ಪ್ರತಿಕ್ರಿಯೆಗಳ ಬಗ್ಗೆ ಗಮನಿಸಿದರು. ಸಂಘರ್ಷದ ಸಮಯದಲ್ಲಿ ಇತರ ದೇಶಗಳ ನಾಗರಿಕರನ್ನು ಸ್ಥಳಾಂತರಿಸುವಲ್ಲಿ ಭಾರತದ ಪಾತ್ರವನ್ನು ಅವರು ಒತ್ತಿ ಹೇಳಿದರು ಮತ್ತು ಭಾರತದ ಪ್ರಗತಿಯು ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸುತ್ತಿದೆ. ಜಾಗತಿಕ ಸಹೋದರತ್ವದ ಈ ಮನೋಭಾವವು ಭಾರತದ ಸಾಂಸ್ಕೃತಿಕ ಮೌಲ್ಯಗಳಿಂದ ಹುಟ್ಟಿಕೊಂಡಿದೆ. ಆತ್ಮವಿಶ್ವಾಸ ಮತ್ತು ಅಪಾಯ ತೆಗೆದುಕೊಳ್ಳುವ ವರ್ಧಿತ ಸಾಮರ್ಥ್ಯದಿಂದ ತುಂಬಿರುವ ಭಾರತದ ಯುವಕರನ್ನು ರಾಷ್ಟ್ರದ ಶ್ರೇಷ್ಠ ಆಸ್ತಿ ಎಂದು ತಿಳಿಸಿದ ಶ್ರೀ ಮೋದಿ, ನಾವೀನ್ಯತೆ, ನವೋದ್ಯಮಗಳು ಮತ್ತು ಭಾರತದ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಅವರ ಕೊಡುಗೆಗಳು ಗಮನಾರ್ಹ ಎಂದರು. ಪ್ರಯಾಗ ಮಹಾಕುಂಭದಲ್ಲಿ ಲಕ್ಷಾಂತರ ಯುವಕರು ಭಾಗವಹಿಸುವುದನ್ನು ಭಾರತದ ಶಾಶ್ವತ ಸಂಪ್ರದಾಯಗಳೊಂದಿಗೆ ಅವರ ಸಂಪರ್ಕಕ್ಕೆ ಉದಾಹರಣೆ. ರಾಷ್ಟ್ರೀಯ ಅಗತ್ಯಗಳ ಮೇಲೆ ಯುವಕರ ಗಮನ, "ಮೇಕ್ ಇನ್ ಇಂಡಿಯಾ"ದ ಯಶಸ್ಸಿನಲ್ಲಿ ಅವರ ಪಾತ್ರ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಅವರ ಬೆಂಬಲದ ಬಗ್ಗೆ ವಿವರಿಸಿದರು. ಕ್ರೀಡಾ ಕ್ಷೇತ್ರಗಳಿಂದ ಬಾಹ್ಯಾಕಾಶ ಪರಿಶೋಧನೆಯವರೆಗೆ, ರಾಷ್ಟ್ರ ನಿರ್ಮಾಣದ ಮನೋಭಾವದಿಂದ ಮುನ್ನಡೆಸಲ್ಪಟ್ಟು, ರಾಷ್ಟ್ರಕ್ಕಾಗಿ ಬದುಕುವ ಮತ್ತು ಕೆಲಸ ಮಾಡುವ ಅವರ ದೃಢಸಂಕಲ್ಪವನ್ನು ಅವರು ಒತ್ತಿ ಹೇಳಿದರು. 2047 ರ ವೇಳೆಗೆ ಭಾರತದ ಯುವಕರು ದೇಶವನ್ನು ವಿಕಸಿತ್ ಭಾರತದ ಗುರಿಯತ್ತ ಕೊಂಡೊಯ್ಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಪ್ರಯಾಣದ ಹಿಂದಿನ ಪ್ರೇರಕ ಶಕ್ತಿಯಾಗಿ ಸಂಘಟನೆ, ಸಮರ್ಪಣೆ ಮತ್ತು ಸೇವೆಯ ಸಿನರ್ಜಿಯನ್ನು ಪ್ರಧಾನಿ ಎತ್ತಿ ತೋರಿಸಿದರು. ಆರ್‌ಎಸ್‌ಎಸ್‌ನ ದಶಕಗಳ ಪ್ರಯತ್ನ ಮತ್ತು ಸಮರ್ಪಣೆ ಫಲ ನೀಡುತ್ತಿದೆ, ಭಾರತದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂದು ಅವರು ಹೇಳಿದರು.

ಹೋರಾಟ ಮತ್ತು ಸ್ವಾತಂತ್ರ್ಯದ ಪ್ರಮುಖ ಗುರಿಯಿಂದ ಗುರುತಿಸಲ್ಪಟ್ಟ 1925ರಲ್ಲಿ ಆರ್‌ಎಸ್‌ಎಸ್ ಸ್ಥಾಪನೆಯ ಸಮಯದಲ್ಲಿನ ವ್ಯತಿರಿಕ್ತ ಸಂದರ್ಭಗಳ ಬಗ್ಗೆ ಪ್ರಧಾನಿಯವರು ಹೇಳಿದರು. ಸಂಘದ 100 ವರ್ಷಗಳ ಪ್ರಯಾಣದ ಮಹತ್ವವನ್ನು ಅವರು ಎತ್ತಿ ತೋರಿಸಿದರು ಮತ್ತು 2025 ರಿಂದ 2047 ರವರೆಗಿನ ಅವಧಿಯು ರಾಷ್ಟ್ರಕ್ಕೆ ಹೊಸ, ಮಹತ್ವಾಕಾಂಕ್ಷೆಯ ಗುರಿಗಳನ್ನು ಪ್ರಸ್ತುತಪಡಿಸುತ್ತದೆ ಎಂದು ಗಮನಿಸಿದರು. ಭವ್ಯ ರಾಷ್ಟ್ರೀಯ ಕಟ್ಟಡದ ಅಡಿಪಾಯದಲ್ಲಿ ಸಣ್ಣ ಕಲ್ಲಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುವ ಪತ್ರದಲ್ಲಿನ ಗುರೂಜಿಯವರ ಸ್ಪೂರ್ತಿದಾಯಕ ಮಾತುಗಳನ್ನು ಅವರು ನೆನಪಿಸಿಕೊಂಡರು. ಸೇವೆಗೆ ಬದ್ಧತೆಯನ್ನು ಬೆಳಗಿಸುವ, ನಿರಂತರ ಪ್ರಯತ್ನವನ್ನು ಕಾಯ್ದುಕೊಳ್ಳುವ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅಯೋಧ್ಯೆಯಲ್ಲಿ ಶ್ರೀ ರಾಮನ ದೇವಾಲಯ ನಿರ್ಮಾಣದ ಸಮಯದಲ್ಲಿ ಹಂಚಿಕೊಂಡಂತೆ, ಮುಂದಿನ ಸಾವಿರ ವರ್ಷಗಳ ಕಾಲ ಬಲಿಷ್ಠ ಭಾರತಕ್ಕೆ ಅಡಿಪಾಯ ಹಾಕುವ ತಮ್ಮ ದೃಷ್ಟಿಕೋನವನ್ನು ಅವರು ಪುನರುಚ್ಚರಿಸಿದರು. ಡಾ. ಹೆಡ್ಗೆವಾರ್ ಮತ್ತು ಗುರೂಜಿಯಂತಹ ದಿಗ್ಗಜರ ಮಾರ್ಗದರ್ಶನವು ರಾಷ್ಟ್ರವನ್ನು ಸಬಲೀಕರಣಗೊಳಿಸಲು ಮುಂದುವರಿಯುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಈಡೇರಿಸುವ ಮತ್ತು ಪೀಳಿಗೆಗಳ ತ್ಯಾಗಗಳನ್ನು ಗೌರವಿಸುವ ಸಂಕಲ್ಪವನ್ನು ದೃಢೀಕರಿಸುವ ಮೂಲಕ ಎಲ್ಲರೂ ಇದರಲ್ಲಿ ಕೈ ಜೋಡಿಸಬೇಕು ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ಆರ್‌ಎಸ್‌ಎಸ್ ಸರ ಸಂಘ ಚಾಲಕ್ ಡಾ. ಮೋಹನ್ ಭಾಗವತ್, ಸ್ವಾಮಿ ಗೋವಿಂದ್ ದೇವಗಿರಿ ಮಹಾರಾಜ್, ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್, ಡಾ. ಅವಿನಾಶ್ ಚಂದ್ರ ಅಗ್ನಿಹೋತ್ರಿ ಮತ್ತು ಇತರ ಗಣ್ಯ ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

*****


(Release ID: 2116927) Visitor Counter : 31