ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾಗ್ಪುರದ ದೀಕ್ಷಾಭೂಮಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿಯ ಬದ್ಧತೆಯನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು

Posted On: 30 MAR 2025 12:02PM by PIB Bengaluru

ನಾಗ್ಪುರದ ದೀಕ್ಷಾಭೂಮಿ ಸಾಮಾಜಿಕ ನ್ಯಾಯದ ಸಂಕೇತ ಮತ್ತು ದೀನದಲಿತರ ಸಬಲೀಕರಣ ಎಂದು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಭಾರತವನ್ನು ಸಾಕಾರಗೊಳಿಸಲು ಇನ್ನೂ ಹೆಚ್ಚು ಶ್ರಮಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.

ಈ ಸಂಬಂಧ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ, ಅವರು ಹೀಗೆ ಬರೆದಿದ್ದಾರೆ:

"ನಾಗ್ಪುರದ ದೀಕ್ಷಾಭೂಮಿ ಸಾಮಾಜಿಕ ನ್ಯಾಯ ಮತ್ತು ದೀನದಲಿತರ ಸಬಲೀಕರಣದ ಸಂಕೇತವಾಗಿ ಎದ್ದು ನಿಂತಿದೆ.

ನಮ್ಮ ಘನತೆ ಮತ್ತು ಸಮಾನತೆಯನ್ನು ಖಚಿತಪಡಿಸುವ ಸಂವಿಧಾನವನ್ನು ನಮಗೆ ನೀಡಿದ್ದಕ್ಕಾಗಿ ತಲೆಮಾರುಗಳ ಭಾರತೀಯರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೃತಜ್ಞರಾಗಿರುತ್ತಾರೆ.

ನಮ್ಮ ಸರ್ಕಾರ ಯಾವಾಗಲೂ ಪೂಜ್ಯ ಬಾಬಾ ಸಾಹೇಬ್ ಅವರು ತೋರಿಸಿದ ಮಾರ್ಗದಲ್ಲಿ ಸಾಗಿದೆ ಮತ್ತು ಅವರು ಕನಸು ಕಂಡ ಭಾರತವನ್ನು ಸಾಕಾರಗೊಳಿಸಲು ಇನ್ನೂ ಹೆಚ್ಚು ಶ್ರಮಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ," ಎಂದು ಹೇಳಿದರು.

 

 

*****


(Release ID: 2116859) Visitor Counter : 24