ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ

Posted On: 30 MAR 2025 11:37AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವರಾತ್ರಿಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಮಾತೃದೇವತೆಯ ಆರಾಧನೆಗೆ ಸಮರ್ಪಿತವಾದ ಪಂಡಿತ್ ಜಸರಾಜ್ ಜೀ ಅವರ ಸ್ತುತಿಗೀತೆಯನ್ನೂ ಅವರು ಹಂಚಿಕೊಂಡರು.

ಈ ಸಂಬಂಧ  ಎಕ್ಸ್ ಖಾತೆಯಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ, ಅವರು ಹೀಗೆ ಬರೆದಿದ್ದಾರೆ:

"ದೇಶವಾಸಿಗಳಿಗೆ ನವರಾತ್ರಿಯ ಶುಭಾಶಯಗಳು. ಶಕ್ತಿ ಸಾಧನೆಯ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನವನ್ನು ಧೈರ್ಯ, ಸಂಯಮ ಮತ್ತು ಶಕ್ತಿಯಿಂದ ತುಂಬಲಿ. ಜೈ ಮಾತಾ ದಿ!"

"ನವರಾತ್ರಿಯ ಪ್ರಾರಂಭವು ಮಾತಾ ಆರಾಧಕರಲ್ಲಿ ಭಕ್ತಿಯ ಹೊಸ ಉಲ್ಲಾಸವನ್ನು ಜಾಗೃತಗೊಳಿಸುತ್ತದೆ. ತಾಯಿ ದೇವಿಯ ಆರಾಧನೆಗೆ ಸಮರ್ಪಿತವಾದ ಪಂಡಿತ್ ಜಸರಾಜ್ ಜೀ ಅವರ ಈ ಸ್ತುತಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ,’’ ಎಂದಿದ್ದಾರೆ.

 

 

*****


(Release ID: 2116854) Visitor Counter : 24