ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಬಿಹಾರದಲ್ಲಿ 4 ಪಥದ ಗ್ರೀನ್ ಫೀಲ್ಡ್ ಮತ್ತು ಬ್ರೌನ್ ಫೀಲ್ಡ್ ಪಾಟ್ನಾ-ಅರಾಹ್-ಸಸಾರಾಮ್ ಕಾರಿಡಾರ್ (ಎನ್ ಎಚ್ -119 ಎ) (120.10 ಕಿ.ಮೀ) ರಸ್ತೆಗಾಗಿ ನಿಗದಿತ ಪಾವತಿಯ ಹೈಬ್ರಿಡ್ ಮಾದರಿಯಲ್ಲಿ (ಎಚ್ ಎಎಂ) ನಿರ್ಮಾಣಕ್ಕೆ ಸಂಪುಟದ ಅನುಮೋದನೆ
Posted On:
28 MAR 2025 4:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಪಾಟ್ನಾದಿಂದ ಬಿಹಾರದ ಸಸಾರಾಮ್ ವರೆಗೆ (120.10 ಕಿ.ಮೀ.) 4 ಪಥದ ಪ್ರವೇಶ ನಿಯಂತ್ರಿತ ಗ್ರೀನ್ ಫೀಲ್ಡ್ ಮತ್ತು ಬ್ರೌನ್ ಫೀಲ್ಡ್ ಪಾಟ್ನಾ - ಅರಾಹ್ - ಸಸಾರಾಮ್ ಕಾರಿಡಾರ್ ನಿರ್ಮಾಣಕ್ಕೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಹೈಬ್ರಿಡ್ ನಿಗದಿತ ಪಾವತಿ ಮಾದರಿಯಲ್ಲಿ (ಎಚ್ಎಎಂ) ಒಟ್ಟು 3,712.40 ಕೋಟಿ ರೂ.ಗಳ ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಪ್ರಸ್ತುತ, ಸಸಾರಾಮ್, ಅರಾಹ್ ಮತ್ತು ಪಾಟ್ನಾ ನಡುವಿನ ಸಂಪರ್ಕವು ಅಸ್ತಿತ್ವದಲ್ಲಿರುವ ರಾಜ್ಯ ಹೆದ್ದಾರಿಗಳನ್ನು (ಎಸ್ಎಚ್ -2, ಎಸ್ಎಚ್ -12, ಎಸ್ಎಚ್ -81 ಮತ್ತು ಎಸ್ಎಚ್ -102) ಅವಲಂಬಿಸಿದೆ ಮತ್ತು ಅರಾಹ್ ಪಟ್ಟಣ ಸೇರಿದಂತೆ ಭಾರಿ ವಾಹನ ದಟ್ಟಣೆಯಿಂದಾಗಿ ಪ್ರಯಾಣ 3-4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೆಚ್ಚುತ್ತಿರುವ ದಟ್ಟಣೆಯನ್ನು ಕಡಿಮೆ ಮಾಡಲು ಗ್ರೀನ್ ಫೀಲ್ಡ್ ಕಾರಿಡಾರ್ ಜೊತೆಗೆ ಅಸ್ತಿತ್ವದಲ್ಲಿರುವ ಬ್ರೌನ್ ಫೀಲ್ಡ್ ಹೆದ್ದಾರಿಯ 10.6 ಕಿ.ಮೀ ಯಷ್ಟು ಭಾಗವನ್ನು ಉನ್ನತೀಕರಿಸಿ ಅಭಿವೃದ್ಧಿಪಡಿಸಲಾಗುವುದು, ಅರಾಹ್, ಗ್ರಾಹಿನಿ, ಪಿರೋ, ಬಿಕ್ರಮ್ಗಂಜ್, ಮೊಕರ್ ಮತ್ತು ಸಸಾರಾಮ್ನಂತಹ ಸ್ಥಳಗಳಲ್ಲಿ ಜನನಿಬಿಡ ಪ್ರದೇಶಗಳ ಅಗತ್ಯಗಳನ್ನು ಇದು ಪೂರೈಸಲಿದೆ.
ಈ ಯೋಜನೆಯು ಎನ್ಎಚ್ -19, ಎನ್ಎಚ್ -319, ಎನ್ಎಚ್ -922, ಎನ್ಎಚ್ -131 ಜಿ ಮತ್ತು ಎನ್ಎಚ್ -120 ಸೇರಿದಂತೆ ಪ್ರಮುಖ ಸಾರಿಗೆ ಕಾರಿಡಾರ್ ಗಳನ್ನು ಸಂಯೋಜಿಸುತ್ತದೆ, ಇದು ಔರಂಗಾಬಾದ್, ಕೈಮೂರ್ ಮತ್ತು ಪಾಟ್ನಾಕ್ಕೆ ಅಡೆ-ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಜೊತೆಗೆ, ಈ ಯೋಜನೆಯು 02 ವಿಮಾನ ನಿಲ್ದಾಣಗಳಿಗೆ (ಪಾಟ್ನಾದ ಜಯ ಪ್ರಕಾಶ್ ನಾರಾಯಣ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಭವಿಷ್ಯದಲ್ಲಿ ತಲೆ ಎತ್ತಲಿರುವ ಬಿಹಿತಾ ವಿಮಾನ ನಿಲ್ದಾಣ), 04 ಪ್ರಮುಖ ರೈಲ್ವೆ ನಿಲ್ದಾಣಗಳು (ಸಸಾರಾಮ್, ಅರಾಹ್, ದಾನಾಪುರ, ಪಾಟ್ನಾ) ಮತ್ತು 01 ಒಳನಾಡು ಜಲ ಟರ್ಮಿನಲ್ (ಪಾಟ್ನಾ) ಗೆ ಸಂಪರ್ಕವನ್ನು ಒದಗಿಸುತ್ತದೆ ಹಾಗು ಪಾಟ್ನಾ ವರ್ತುಲ ರಸ್ತೆಗೆ ನೇರ ಪ್ರವೇಶವನ್ನು ಹೆಚ್ಚಿಸುತ್ತದೆ.ಆ ಮೂಲಕ ಸರಕು ಸಾಗಾಣಿಕೆ ಮತ್ತು ಪ್ರಯಾಣಿಕರ ಚಲನವಲನಗಳನ್ನು ತ್ವರಿತಗೊಳಿಸುತ್ತದೆ.
ಪಾಟ್ನಾ-ಅರಾಹ್-ಸಸಾರಾಮ್ ಕಾರಿಡಾರ್ ಪೂರ್ಣಗೊಂಡ ನಂತರ, ಪ್ರಾದೇಶಿಕ ಆರ್ಥಿಕ ಬೆಳವಣಿಗೆಯಲ್ಲಿದು ಪ್ರಮುಖ ಪಾತ್ರ ವಹಿಸುತ್ತದೆ, ಲಕ್ನೋ, ಪಾಟ್ನಾ, ರಾಂಚಿ ಮತ್ತು ವಾರಣಾಸಿ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ. ಈ ಯೋಜನೆಯು ಆತ್ಮನಿರ್ಭರ ಭಾರತಕ್ಕೆ ಸಂಬಂಧಿಸಿದ ಸರ್ಕಾರದ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ, ಉದ್ಯೋಗವನ್ನು ಸೃಷ್ಟಿಸುತ್ತದೆ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಬಿಹಾರದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಈ ಯೋಜನೆಯು 48 ಲಕ್ಷ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಪಾಟ್ನಾ ಹಾಗು ಸುತ್ತಮುತ್ತಲಿನ ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಬೆಳವಣಿಗೆ, ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ.
ಕಾರಿಡಾರ್ ನ ನಕ್ಷೆ

ಯೋಜನೆಯ ವಿವರಗಳು
ವೈಶಿಷ್ಟ್ಯ
|
ವಿವರಗಳು
|
ಯೋಜನೆಯ ಹೆಸರು
|
4 ಪಥಗಳ ಗ್ರೀನ್ ಫೀಲ್ಡ್ ಮತ್ತು ಬ್ರೌನ್ ಫೀಲ್ಡ್ ಪಾಟ್ನಾ-ಅರಾಹ್-ಸಸಾರಾಮ್ ಕಾರಿಡಾರ್
|
ಕಾರಿಡಾರ್
|
ಪಾಟ್ನಾ-ಅರಾಹ್-ಸಸಾರಾಮ್ (ಎನ್.ಎಚ್.-119A)
|
ಉದ್ದ (ಕಿ.ಮೀ.)
|
120.10
|
ಒಟ್ಟು ನಿರ್ಮಾಣ ವೆಚ್ಚ(ಕೋ.ರೂ.ಗಳಲ್ಲಿ.)
|
2,989.08
|
ಭೂ ಸ್ವಾಧೀನ ಖರ್ಚು (ಕೋ.ರೂ.ಗಳಲ್ಲಿ.)
|
718.97
|
ಒಟ್ಟು ಬಂಡವಾಳ ವೆಚ್ಚ (ಕೋ.ರೂ.ಗಳಲ್ಲಿ.)
|
3,712.40
|
ಮಾದರಿ
|
ಹೈಬ್ರಿಡ್ ಪಾವತಿ ಮಾದರಿ (ಎಚ್.ಎ.ಎಂ.)
|
ಸಂಪರ್ಕಿಸಲ್ಪಡುವ ಮುಖ್ಯ ರಸ್ತೆಗಳು
|
ರಾಷ್ಟ್ರೀಯ ಹೆದ್ದಾರಿಗಳು - NH-19, NH-319, NH-922, NH-131G, NH-120
ರಾಜ್ಯ ಹೆದ್ದಾರಿಗಳು - SH-2, SH-81, SH-12, SH-102
|
ಜೋಡಿಸಲ್ಪಡುವ ಆರ್ಥಿಕ/ಸಾಮಾಜಿಕ/ಸಾರಿಗೆ ಸಂಪರ್ಕಗಳು
|
ವಿಮಾನ ನಿಲ್ದಾಣಗಳು: ಜಯ ಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಿಹಿತಾ ವಿಮಾನ ನಿಲ್ದಾಣ (ನಿರ್ಮಾಣ ಹಂತದಲ್ಲಿದೆ)
ರೈಲ್ವೇ ನಿಲ್ದಾಣಗಳು: ಸಸಾರಾಂ, ಅರಾಹ್, ದಾನಾಪುರ, ಪಾಟ್ನಾ
ಒಳನಾಡು ಜಲ ಟರ್ಮಿನಲ್: ಪಾಟ್ನಾ
|
ಸಂಪರ್ಕಿಸಲ್ಪಡುವ ಪ್ರಮುಖ ನಗರಗಳು/ಪಟ್ಟಣಗಳು
|
ಪಾಟ್ನಾ, ಅರಾಹ್, ಸಸಾರಾಂ
|
ಉದ್ಯೋಗ ಸೃಷ್ಟಿ ಸಾಮರ್ಥ್ಯ
|
22 ಲಕ್ಷ ಮಾನವ ದಿನಗಳು (ನೇರ) ಮತ್ತು 26 ಲಕ್ಷ ಮಾನವ ದಿನಗಳು (ಪರೋಕ್ಷ)
|
ಹಣಕಾಸು ವರ್ಷ -25ರಲ್ಲಿ ವಾರ್ಷಿಕ ಸರಾಸರಿ ದೈನಂದಿನ ಸಂಚಾರ ದಟ್ಟಣೆ (ಎ.ಎ..ಡಿ.ಟಿ)
|
17,000-20,000 ಪ್ಯಾಸೆಂಜರ್ ಕಾರ್ ಯೂನಿಟ್ ಗಳು (ಪಿ.ಸಿ.ಯು.) ಎಂದು ಅಂದಾಜಿಸಲಾಗಿದೆ.
|
*****
(Release ID: 2116265)
Visitor Counter : 48
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam