ರಾಷ್ಟ್ರಪತಿಗಳ ಕಾರ್ಯಾಲಯ
ರಾಷ್ಟ್ರಪತಿ ಭವನದಲ್ಲಿ'ಪರ್ಪಲ್ ಫೆಸ್ಟ್' ಆಯೋಜನೆ
Posted On:
21 MAR 2025 8:01PM by PIB Bengaluru
ದಿವ್ಯಾಂಗರ ಪ್ರತಿಭೆ, ಸಾಧನೆಗಳು ಮತ್ತು ಆಕಾಂಕ್ಷೆಗಳನ್ನು ಆಚರಿಸುವ ಒಂದು ದಿನದ ‘ಪರ್ಪಲ್(ನೇರಳೆ) ಫೆಸ್ಟ್’ ಅನ್ನು ಇಂದು (2025ರ ಮಾರ್ಚ್ 21) ಅಮೃತ್ ಉದ್ಯಾನದಲ್ಲಿಆಯೋಜಿಸಲಾಗಿದೆ.
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಉತ್ಸವಕ್ಕೆ ಭೇಟಿ ನೀಡಿದರು ಮತ್ತು ದಿವ್ಯಾಂಗರ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾಕ್ಷಿಯಾದರು. ಶೋಷಿತ ವರ್ಗದ ಬಗ್ಗೆ ಸಂವೇದನಾಶೀಲತೆಯು ದೇಶ ಅಥವಾ ಸಮಾಜದ ಖ್ಯಾತಿಯನ್ನು ನಿರ್ಧರಿಸುತ್ತದೆ ಎಂದು ಅವರು ತಮ್ಮ ಸಂಕ್ಷಿಪ್ತ ಹೇಳಿಕೆಯಲ್ಲಿ ಹೇಳಿದರು. ಸಹಾನುಭೂತಿ, ಅಂತರ್ಗತತೆ ಮತ್ತು ಸಾಮರಸ್ಯ ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಮೌಲ್ಯಗಳಾಗಿವೆ. ನಮ್ಮ ಸಂವಿಧಾನದ ಪೀಠಿಕೆ ಸಾಮಾಜಿಕ ನ್ಯಾಯ, ಸ್ಥಾನಮಾನದ ಸಮಾನತೆ ಮತ್ತು ವ್ಯಕ್ತಿಯ ಘನತೆಯ ಬಗ್ಗೆ ಮಾತನಾಡುತ್ತದೆ. ಭಾರತ ಸರ್ಕಾರವು ಸುಗಮ್ಯ ಭಾರತ ಅಭಿಯಾನದ ಮೂಲಕ ದಿವ್ಯಾಂಗರ ಸಬಲೀಕರಣ ಮತ್ತು ಸಮಾನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿದೆ ಎಂದು ಅವರು ಸಂತೋಷಪಟ್ಟರು.
ಕ್ರೀಡೆಗಳು, ಡಿಜಿಟಲ್ ಸೇರ್ಪಡೆ ಮತ್ತು ಉದ್ಯಮಶೀಲತೆ ಕುರಿತ ಕಾರ್ಯಾಗಾರಗಳು, ಅಬಿಲಿಂಪಿಕ್ಸ್, ಸೃಜನಶೀಲ ವೈಭವ ಮತ್ತು ಸಾಂಸ್ಕೃತಿಕ ಉತ್ಸವದಂತಹ ವಿವಿಧ ಚಟುವಟಿಕೆಗಳನ್ನು ಸಂದರ್ಶಕರಿಗಾಗಿ ಹಗಲಿನಲ್ಲಿ ಆಯೋಜಿಸಲಾಗಿತ್ತು.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆಯೋಜಿಸಿರುವ ‘ಪರ್ಪಲ್ ಫೆಸ್ಟ್’ ವಿವಿಧ ಅಂಗವೈಕಲ್ಯಗಳು ಮತ್ತು ಜನರ ಜೀವನದ ಮೇಲೆ ಅವುಗಳ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಮಾಜದಲ್ಲಿ ಅಂಗವಿಕಲ ವ್ಯಕ್ತಿಗಳ ತಿಳುವಳಿಕೆ, ಸ್ವೀಕಾರ ಮತ್ತು ಸೇರ್ಪಡೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.




*****
(Release ID: 2113919)
Visitor Counter : 31