ಪ್ರಧಾನ ಮಂತ್ರಿಯವರ ಕಛೇರಿ
ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಪ್ರಧಾನಮಂತ್ರಿಯವರ ಒಳನೋಟದ ಸಂಭಾಷಣೆ
Posted On:
15 MAR 2025 7:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇತ್ತೀಚೆಗೆ ಖ್ಯಾತ ಪಾಡ್ ಕಾಸ್ಟರ್ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧಕರಾದ ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಆಕರ್ಷಕ ಚಿಂತನಶೀಲ ಸಂಭಾಷಣೆ ನಡೆಸಿದರು. ಮೂರು ಗಂಟೆಗಳ ಕಾಲ ನಡೆದ ಈ ಸಂಭಾಷಣೆಯಲ್ಲಿ ಪ್ರಧಾನಿ ಮೋದಿಯವರ ಬಾಲ್ಯ, ಹಿಮಾಲಯದಲ್ಲಿ ಅವರು ಕಳೆದ ರಚನಾತ್ಮಕ ವರ್ಷಗಳು ಮತ್ತು ಸಾರ್ವಜನಿಕ ಜೀವನದಲ್ಲಿ ಅವರ ಪ್ರಯಾಣ ಎಲ್ಲವೂ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು. ಪ್ರಸಿದ್ಧ ಕೃತಕ ಬುದ್ಧಿಮತ್ತೆ ಸಂಶೋಧಕ ಮತ್ತು ಪಾಡ್ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಈ ಬಹುನಿರೀಕ್ಷಿತ ಮೂರು ಗಂಟೆಗಳ ಪಾಡ್ಕಾಸ್ಟ್ ನಾಳೆ, ಮಾರ್ಚ್ 16, 2025 ರಂದು ಬಿಡುಗಡೆಯಾಗಲಿದೆ. ಲೆಕ್ಸ್ ಫ್ರಿಡ್ಮನ್ ಈ ಸಂಭಾಷಣೆಯನ್ನು ತನ್ನ ಜೀವನದ "ಅತ್ಯಂತ ಶಕ್ತಿಯುತ ಸಂಭಾಷಣೆಗಳಲ್ಲಿ ಒಂದು" ಎಂದು ಬಣ್ಣಿಸಿದ್ದಾರೆ.
ಮುಂಬರುವ ಪಾಡ್ಕಾಸ್ಟ್ ಬಗ್ಗೆ ಲೆಕ್ಸ್ ಫ್ರಿಡ್ಮನ್ ಅವರ Xನ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು;
"ಇದು ನಿಜವಾಗಿಯೂ @lexfridman ಅವರೊಂದಿಗಿನ ಆಕರ್ಷಕ ಸಂಭಾಷಣೆಯಾಗಿದ್ದು, ನನ್ನ ಬಾಲ್ಯ, ಹಿಮಾಲಯದಲ್ಲಿನ ವರ್ಷಗಳು ಮತ್ತು ಸಾರ್ವಜನಿಕ ಜೀವನದ ಪ್ರಯಾಣದ ಮೆಲುಕುಹಾಕುವಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಇದನ್ನು ಕೇಳಿ!" ಎಂದು Xನಲ್ಲಿ ಬರೆದಿದ್ದಾರೆ.
*****
(Release ID: 2111579)
Visitor Counter : 9