ರಾಷ್ಟ್ರಪತಿಗಳ ಕಾರ್ಯಾಲಯ
ಮೊಹಾಲಿಯಲ್ಲಿ ನಡೆದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಭಾಗಿ
Posted On:
11 MAR 2025 7:53PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಮಾರ್ಚ್ 11, 2025) ಮೊಹಾಲಿಯಲ್ಲಿ ಪಂಜಾಬ್ ಸರ್ಕಾರವು ಅವರ ಗೌರವಾರ್ಥವಾಗಿ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಗುರುಗಳ ಆಶೀರ್ವಾದ ಮತ್ತು ಸ್ಫೂರ್ತಿಯಿಂದ ಪಂಜಾಬ್ ಭೂಮಿ ಹುತಾತ್ಮರು ಮತ್ತು ಕ್ರಾಂತಿಕಾರಿಗಳಿಗೆ ಜನ್ಮ ನೀಡಿದೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಧ್ಯಾಯಗಳು ಪಂಜಾಬ್ ಮಣ್ಣಿನಲ್ಲಿ ಬರೆಯಲ್ಪಟ್ಟಿವೆ. ಪಂಜಾಬ್ ಜನರು ಸೇವೆ ಮತ್ತು ಸಮರ್ಪಣೆಯ ಅನೇಕ ಉದಾಹರಣೆ ನೀಡಿದ್ದಾರೆ. ಪ್ರಪಂಚದಾದ್ಯಂತದ ಗುರುದ್ವಾರಗಳ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಜನರಿಗೆ ಮುಕ್ತವಾಗಿದೆ. ಪ್ರಪಂಚದಾದ್ಯಂತದ ಜನರು ಪಂಜಾಬ್ ಜನರಿಂದ ಸೇವಾ ಕಲೆಯನ್ನು ಕಲಿತಿದ್ದಾರೆ ಎಂದು ರಾಷ್ಟ್ರಪತಿಗಳು ಹೇಳಿದರು.

ಪಂಜಾಬ್‌ನ ಧೈರ್ಯಶಾಲಿ ಸೈನಿಕರು ನಮ್ಮ ಸಶಸ್ತ್ರ ಪಡೆಗಳಿಗೆ ನೀಡಿದ ಕೊಡುಗೆ ಬಹಳ ಮಹತ್ವದ್ದಾಗಿದೆ. ಪಂಜಾಬ್ ಭೂಮಿ ಸಾಮಾಜಿಕ ಸುಧಾರಣೆ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕೆ, ಕ್ರೀಡೆ, ರಾಜಕೀಯ ಮತ್ತು ಸಾಮಾಜಿಕ ಸೇವೆಯಂತಹ ಹಲವು ಕ್ಷೇತ್ರಗಳಲ್ಲಿ ದೇಶ ಮತ್ತು ಜಗತ್ತಿಗೆ ನೀಡಿದ ಕೊಡುಗೆ ಅಸಾಧಾರಣವಾಗಿದೆ. ಅಸಾಧಾರಣ ವ್ಯಕ್ತಿಗಳಿಗೆ ವ್ಯಕ್ತಿಗಳಿಗೆ ಪಂಜಾಬ್ ಜನ್ಮ ನೀಡಿದೆ. ಪಂಜಾಬ್ ಭಾರತೀಯ ಕೃಷಿ ಅಭಿವೃದ್ಧಿಯಲ್ಲಿಯೂ ಪ್ರವರ್ತಕ ಕೊಡುಗೆ ನೀಡಿದೆ. 1960ರ ದಶಕದಿಂದ, ದೇಶದಲ್ಲಿ ಆಹಾರದ ಕೊರತೆ ಇದ್ದಾಗ, ಪಂಜಾಬ್‌ನ ಪ್ರಗತಿಪರ ರೈತರು ತಮ್ಮ ಕಠಿಣ ಪರಿಶ್ರಮದ ಮೂಲಕ ಹಸಿರು ಕ್ರಾಂತಿಯನ್ನು ಯಶಸ್ವಿಗೊಳಿಸಿದರು ಮತ್ತು ದೇಶಕ್ಕೆ ಆಹಾರ ಭದ್ರತೆಯನ್ನು ಒದಗಿಸಿದರು. ಪಂಜಾಬ್‌ನ ರೈತರು ಮತ್ತು ಕೃಷಿ ವಿಜ್ಞಾನಿಗಳು ಪರಿಸರ ಸ್ನೇಹಿ ಕೃಷಿಯನ್ನು ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಮತ್ತೊಮ್ಮೆ ಇಡೀ ದೇಶಕ್ಕೆ ನಾಯಕತ್ವವನ್ನು ಒದಗಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ದ್ರೌಪದಿ ಮುರ್ಮು ವ್ಯಕ್ತಪಡಿಸಿದರು.

Please click here to see the President's Speech-
*****
(Release ID: 2110552)
Visitor Counter : 15