ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ತತ್ಸುವೊ ಯಸುನಾಗ ನೇತೃತ್ವದ ಜಪಾನಿನ ವ್ಯಾಪಾರ ನಿಯೋಗವನ್ನು ಪ್ರಧಾನಮಂತ್ರಿಯವರು ಭೇಟಿ ಮಾಡಿದರು
ಪ್ರಕಟಣಾ ದಿನಾಂಕ:
05 MAR 2025 7:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ತತ್ಸುವೊ ಯಸುನಾಗ ನೇತೃತ್ವದ ಜಪಾನಿನ ವ್ಯಾಪಾರ ಪ್ರತಿನಿಧಿಗಳ ನಿಯೋಗವನ್ನು ಭೇಟಿ ಮಾಡಿದರು. ಭಾರತದಲ್ಲಿನ ಅವರ ವಿಸ್ತರಣಾ ಯೋಜನೆಗಳು ಮತ್ತು 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್'ಗೆ ದೃಢವಾದ ಬದ್ಧತೆಯಿಂದ ಉತ್ತಮ ರೀತಿಯಲ್ಲಿ ಉತ್ತೇಜನ ನೀಡಲಾಯಿತು ಎಂದು ಪ್ರಧಾನಮಂತ್ರಿಯವರು ತಿಳಿಸಿದರು.
ತಮ್ಮ ಎಕ್ಸ್ ತಾಣದ ಖಾತೆಯಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಸಂದೇಶ ಬರೆದಿದ್ದಾರೆ:
“ಇಂದು ಶ್ರೀ ತತ್ಸುವೊ ಯಸುನಾಗ ನೇತೃತ್ವದ ಜಪಾನಿನ ವ್ಯಾಪಾರ ನಿಯೋಗವನ್ನು ಭೇಟಿಯಾಗಿ ಸಂತೋಷವಾಯಿತು. ಭಾರತದಲ್ಲಿ ಅವರ ವಿಸ್ತರಣಾ ಯೋಜನೆಗಳು ಮತ್ತು 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ಗೆ ದೃಢವಾದ ಬದ್ಧತೆಯಿಂದ ಅವರು ಬಹಳಷ್ಟು ಉತ್ತೇಜಿತರಾಗಿದ್ದಾರೆ. ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರ ಜಪಾನ್ ನೊಂದಿಗೆ ಆಳವಾದ ಆರ್ಥಿಕ ಸಹಯೋಗವನ್ನು ನಾವು ಎದುರು ನೋಡುತ್ತಿದ್ದೇವೆ.
*****
(ಪ್ರಕಟಣೆ ಐ.ಡಿ.: 2109385)
ವಿಸಿಟರ್ ಕೌಂಟರ್ : 49
ಪ್ರಕಟಣೆಯನ್ನು ಇದರಲ್ಲಿ ಓದಿ:
Telugu
,
Malayalam
,
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil