ರಾಷ್ಟ್ರಪತಿಗಳ ಕಾರ್ಯಾಲಯ
ಅಹಮದಾಬಾದ್ ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಘಟಿಕೋತ್ಸವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಯವರು ಭಾಗವಹಿಸಿದರು
Posted On:
27 FEB 2025 7:24PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಫೆಬ್ರವರಿ 27, 2025) ನಡೆದ ಅಹಮದಾಬಾದ್ ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು.
J2JM.jpg)
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, "ನಮ್ಮ ಸುತ್ತಲೂ ಹಲವಾರು ಸಮಸ್ಯೆಗಳಿವೆ ಮತ್ತು ಅವುಗಳಲ್ಲಿ ಹೆಚ್ಚಿನವುಗಳಿಗೆ ವಿನ್ಯಾಸ ಸುಧಾರಣೆಗಳು ಮತ್ತು ಹೆಚ್ಚಿನ ಸಂಪನ್ಮೂಲಗಳು ಬೇಕಾಗುತ್ತವೆ. ಸೃಜನಾತ್ಮಕ ಚಿಂತನೆಯು ವಿಶೇಷವಾಗಿ ಹಿಂದುಳಿದ ಸಮುದಾಯಗಳಿಗೆ ಜೀವನ ಸೌಕರ್ಯವನ್ನು ಸುಧಾರಿಸುವ ಹಾಗೂ ಸೂಕ್ತ ಪರಿಹಾರಗಳಿಗೆ ಕೂಡ ಕಾರಣವಾಗಬಹುದು. ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ "ವಿನ್ಯಾಸ"ವು ಕಡಿಮೆ ಗಮನಿಸಿರುವ ವಿಷಯವಾಗಿದೆ ಹಾಗೂ, ಅದು ನಿರ್ಣಾಯಕ ಅಂಶವೂ ಕೂಡ ಆಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ 'ಸಮಾಜದ ಒಳಿತಿಗಾಗಿ ಒಂದು ವೃತ್ತಿಪರ ಸೇವೆಯಾಗಿ ಕಂಡು ಈ ವಿನ್ಯಾಸ' ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ "ವಿನ್ಯಾಸದ ಪರಿಕಲ್ಪನೆ"ಯಲ್ಲಿ ಉತ್ತಮ ಸಾಧನೆ ಮಾಡಿದೆ" ಎಂದು ಹೇಳಿದರು.
94A5.jpg)
"ಸಾಂಪ್ರದಾಯಿಕವಾಗಿ, ನಮ್ಮ ದೇಶದಲ್ಲಿ, ಎಲ್ಲಾ ಸಮುದಾಯಗಳಲ್ಲಿ ದೈನಂದಿನ ಜೀವನದಲ್ಲಿ ವಿನ್ಯಾಸವು ಒಂದಲ್ಲ ಒಂದು ರೀತಿಯಲ್ಲಿ ಹೆಣೆದುಕೊಂಡಿದೆ. ನಾವು ಹೆಚ್ಚು ಸಾಂಪ್ರದಾಯಿಕ ಸಮುದಾಯಗಳಲ್ಲಿ ನಾನಾ ವಿನ್ಯಾಸ ವ್ಯವಸ್ಥೆಗಳನ್ನು ಕಾಣಬಹುದು, ಇಂತಹವುಗಳನ್ನು ಒಳಗೊಂಡಂತೆ ಜ್ಞಾನ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ದಾಖಲಿಸಬೇಕಾಗಿದೆ. ಸಮುದಾಯದ ಸಾಂಸ್ಕೃತಿಕ ಆಚರಣೆಗಳು 21ನೇ ಶತಮಾನದಲ್ಲಿ ಜಗತ್ತನ್ನು ಎದುರಿಸುವ ಕೆಲವು ಸವಾಲುಗಳಿಗೆ ಪ್ರಮುಖವಾಗಿವೆ. ಆದ್ದರಿಂದ, ಭಾರತದ ವೈವಿಧ್ಯಮಯ ಸಂಸ್ಕೃತಿಗಳಿಂದ ಪಡೆದ ಐತಿಹಾಸಿಕ ಪರಿಹಾರಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ನಾವೀನ್ಯತೆಗೆ ಅವುಗಳನ್ನು ಬಳಸಿಕೊಳ್ಳುವುದು ರಾಷ್ಟ್ರಕ್ಕೆ ಮಾತ್ರವಲ್ಲದೆ ಜಾಗತಿಕ ಪ್ರಗತಿಗೆ ಕೊಡುಗೆ ನೀಡುತ್ತದೆ" ಎಂದು ರಾಷ್ಟ್ರಪತಿಯವರು ಹೇಳಿದರು
3857.jpg)
"ಸಕಾರಾತ್ಮಕ ಸಾಮಾಜಿಕ ಬದಲಾವಣೆಯನ್ನು ಸೃಷ್ಟಿಸಲು ನಮ್ಮ ವಿನ್ಯಾಸಕರು ವಿನ್ಯಾಸದ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಅವರು ಸಾಮಾಜಿಕ ವಲಯದಲ್ಲಿ ಪರಿಣಾಮಕಾರಿ ವಿನ್ಯಾಸದ ಮಧ್ಯಸ್ಥಿಕೆಗಳನ್ನು ಮಾಡುತ್ತಿದ್ದಾರೆ. ಆರೋಗ್ಯ, ವಸತಿ ಮತ್ತು ನೈರ್ಮಲ್ಯದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತರುತ್ತಿದ್ದಾರೆ. ಅವರು ತಮ್ಮ ಕೌಶಲ್ಯ ಮತ್ತು ಪರಿಣತಿಯನ್ನು ನೈಜ-ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರೀಕರಿಸುತ್ತಿದ್ದಾರೆ, ಇದು ಸಾಮಾನ್ಯವಾಗಿ ಅಂಚಿನಲ್ಲಿರುವ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿಯಾಗಿ, ಅವರು ನಗರ-ಗ್ರಾಮೀಣ ವಿಭಜನೆಯನ್ನು ಸೇತುವೆ ಮಾಡಲು ಸಹಾಯ ಮಾಡುತ್ತಿದ್ದಾರೆ" ಎಂದು ರಾಷ್ಟ್ರಪತಿಯವರು ಹೇಳಿದರು
"ಸುಂದರ ವಸ್ತುಗಳನ್ನು ತಯಾರಿಸುವುದು ಸೃಜನಾತ್ಮಕ ಕೆಲಸವಾಗಿದ್ದು, ಸಂತೋಷ ಹಾಗೂ ಹಣದ ಪ್ರತಿಫಲವನ್ನು ನೀಡುತ್ತದೆ, ಜೊತೆಗೆ ಕ್ರಿಯಾತ್ಮಕ ಅಂಶವನ್ನು ಎಂದಿಗೂ ಮರೆಯಬಾರದು. ಸದಾ ಪರಿಹಾರಕ್ಕಾಗಿ ಕಾಯುತ್ತಿರುವ ಸಮಸ್ಯೆಗಳಿವೆ. ವಿದ್ಯಾರ್ಥಿಗಳ ಸೃಜನಶೀಲ ಸ್ಪೂರ್ತಿ ಜನರ ಜೀವನವನ್ನು ಬದಲಾಯಿಸಬಹುದು. ಇದಕ್ಕಾಗಿ, ಹಳ್ಳಿಗಳಲ್ಲಿ ಮತ್ತು ಸಾಧ್ಯವಾದರೆ ದೂರದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಸ್ವಲ್ಪ ಸಮಯ ಕಳೆಯ ಬೇಕಿದೆ. ಇದು ಜಗತ್ತನ್ನು ನೋಡುವ ಹೊಸ ಮಾರ್ಗಗಳನ್ನು ಪ್ರೇರೇಪಿಸುತ್ತದೆ ಮತ್ತು ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಅಲ್ಲಿನ ಜನರಿಗೆ ಸಹಾಯ ಮಾಡಬಹುದು" ಎಂದು ರಾಷ್ಟ್ರಪತಿಯವರು ವಿದ್ಯಾರ್ಥಿಗಳಿಗೆ ಮಾಹಿತಿ ಜೊತೆಗೆ ಸಲಹೆ ಮಾತು ಹೇಳಿದರು. ವಿನಮ್ರವಾದ 'ಚರಖಾ'ದ ಬಗ್ಗೆ ಯೋಚಿಸುವಂತೆ ರಾಷ್ಟ್ರಪತಿಯವರು ವಿದ್ಯಾರ್ಥಿಗಳನ್ನು ಒತ್ತಾಯಿಸಿದರು ಮತ್ತು ನಂತರ ಅದನ್ನು ಮರುಶೋಧಿಸಿದ ಗಾಂಧೀಜಿಯ ಬಗ್ಗೆ ಯೋಚಿಸಿ ಮತ್ತು ಅದರ ವಿನ್ಯಾಸವನ್ನು ಹೆಚ್ಚಿಸಲು, ಪ್ರಯತ್ನಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. "ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತಗೊಳಿಸುವುದು ಗಾಂಧೀಜಿಯವರ ಏಕೈಕ ಉದ್ದೇಶವಾಗಿತ್ತು. ಗಾಂಧೀಜಿಯವರ ವಿನ್ಯಾಸದ ಕಲ್ಪನೆಯು ತನ್ನದೇ ಆದ ಸೌಂದರ್ಯವನ್ನು ಹೊಂದಿತ್ತು"ಎಂದು ರಾಷ್ಟ್ರಪತಿಯವರು ಹೇಳಿದರು.
ರಾಷ್ಟ್ರಪತಿಯವರ ಸಂಪೂರ್ಣ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -
*****
(Release ID: 2106844)