ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸಮುದಾಯ ರೇಡಿಯೋ ಕಂಟೆಂಟ್‌ ಚಾಲೆಂಜ್


ಸ್ಥಳೀಯವಾಗಿ ಪರಿಣಾಮವನ್ನು ಹೆಚ್ಚಿಸುವುದು

Posted On: 27 FEB 2025 4:34PM by PIB Bengaluru

ಪರಿಚಯ

ಸಮುದಾಯ ರೇಡಿಯೋ ಕಂಟೆಂಟ್‌ ಚಾಲೆಂಜ್‌ ಸಮುದಾಯ ರೇಡಿಯೋ ಕೇಂದ್ರಗಳಿಂದ ಬರುವ ಸೃಜನಶೀಲ, ಪ್ರಭಾವಶಾಲಿ ಮತ್ತು ನವೀನ ವಿಷಯವನ್ನು ಎತ್ತಿ ಹಿಡಿಯುವ ಗುರಿಯನ್ನು ಹೊಂದಿದೆ, ಸ್ಥಳೀಯ ಧ್ವನಿಗಳನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಪ್ರದೇಶ-ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವುಗಳ ಪಾತ್ರವನ್ನು ಒತ್ತಿಹೇಳುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಸಮುದಾಯ ರೇಡಿಯೋ ಸಂಘ (ಸಿ ಆರ್‌ ಎ) ಸಹಯೋಗದೊಂದಿಗೆ, ಈ ವೇದಿಕೆಯು ವೇವ್ಸ್ ನಲ್ಲಿ ಕ್ರಿಯೇಟ್ ಇಂಡಿಯಾ ಚಾಲೆಂಜ್‌ ನ ಮೊದಲ ಸೀಸನ್ ಅಡಿಯಲ್ಲಿ ಕೇಂದ್ರಗಳ ಕೊಡುಗೆಗಳನ್ನು ಗುರುತಿಸುತ್ತದೆ. ಇಲ್ಲಿಯವರೆಗೆ, 14 ಅಂತರರಾಷ್ಟ್ರೀಯ ಸಲ್ಲಿಕೆಗಳು ಸೇರಿದಂತೆ 246 ಭಾಗವಹಿಸುವವರು ಈ ಚಾಲೆಂಜ್‌ ಗೆ ನೋಂದಾಯಿಸಿಕೊಂಡಿದ್ದಾರೆ.

ವಿಶ್ವ ಧ್ವನಿ ದೃಶ್ಯ  ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ತನ್ನ ಮೊದಲ ಆವೃತ್ತಿಯಲ್ಲಿ ಇಡೀ ಮಾಧ್ಯಮ ಮತ್ತು ಮನರಂಜನಾ ವಲಯದ (ಎಂ&ಇ) ಸಮನ್ವಯಕ್ಕೆ ಒಂದು ವಿಶಿಷ್ಟ ವೇದಿಕೆಯಾಗಿದೆ. ಈ ಕಾರ್ಯಕ್ರಮವು ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಗಮನವನ್ನು ಭಾರತದತ್ತ ಸೆಳೆಯುವ ಮತ್ತು ಅದನ್ನು ಭಾರತೀಯ ಮಾಧ್ಯಮ ಮತ್ತು ಮನರಂಜನಾ ವಲಯ ಮತ್ತು ಅದರ ಪ್ರತಿಭೆಯೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿರುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ.

ಈ ಶೃಂಗಸಭೆಯು ಮೇ 1 ರಿಂದ 4, 2025 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಪ್ರಸಾರ ಮತ್ತು ಮಾಹಿತಿ ಮನರಂಜನೆ, ಎವಿಜಿಸಿ-ಎಕ್ಸ್‌ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ), ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಮತ್ತು ಚಲನಚಿತ್ರಗಳು ಎಂಬ ನಾಲ್ಕು ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ, ಭಾರತದ ಮನರಂಜನಾ ಉದ್ಯಮದ ಭವಿಷ್ಯವನ್ನು ಪ್ರದರ್ಶಿಸಲು ನಾಯಕರು, ಸೃಷ್ಟಿಕರ್ತರು ಮತ್ತು ತಂತ್ರಜ್ಞರನ್ನು ಒಟ್ಟುಗೂಡಿಸುತ್ತದೆ.

ಪ್ರಸಾರ ಮತ್ತು ಮಾಹಿತಿ ಮನರಂಜನಾ ಸ್ತಂಭದ ಅಡಿಯಲ್ಲಿ ಸಮುದಾಯ ರೇಡಿಯೋ ಕಂಟೆಂಟ್‌ ಚಾಲೆಂಜ್, ತಿಳುವಳಿಕೆಯ, ತೊಡಗಿಸಿಕೊಂಡ ಮತ್ತು ಸಂಪರ್ಕಿತ ಸಮುದಾಯಗಳನ್ನು ಬೆಳೆಸುವಲ್ಲಿ ಸಮುದಾಯ ರೇಡಿಯೋದ ಪ್ರಮುಖ ಕೊಡುಗೆಯನ್ನು ಆಚರಿಸುತ್ತದೆ.

ಸ್ಪರ್ಧೆಯ ಉದ್ದೇಶಗಳು

ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಮತ್ತು ಸಹಯೋಗವನ್ನು ಬೆಳೆಸುವ ಸಮುದಾಯ ರೇಡಿಯೋ ಕೇಂದ್ರಗಳ ಶಕ್ತಿ ಮತ್ತು ಸಾಮರ್ಥ್ಯವನ್ನು ಆಚರಿಸುವುದು ಈ ಸ್ಪರ್ಧೆಯ ಗುರಿಯಾಗಿದೆ.

ನಮೂದುಗಳನ್ನು ಸಲ್ಲಿಸಬೇಕಾದ ವಿಭಾಗಗಳು

ವೇವ್ಸ್ ಸ್ಪರ್ಧೆಯು ಸಮುದಾಯ ರೇಡಿಯೋ ಕೇಂದ್ರಗಳು ಐದು ವಿಭಿನ್ನ ವಿಭಾಗಗಳಲ್ಲಿ ನಮೂದುಗಳನ್ನು ಸಲ್ಲಿಸಲು ಆಹ್ವಾನಿಸುತ್ತದೆ, ಪ್ರತಿಯೊಂದೂ ಸಮುದಾಯ ಅಭಿವೃದ್ಧಿಯ ನಿರ್ಣಾಯಕ ಅಂಶದ ಮೇಲೆ ಕೇಂದ್ರೀಕರಿಸುತ್ತದೆ. ವೈವಿಧ್ಯಮಯ ವಲಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸಮುದಾಯ ರೇಡಿಯೋ ಕೇಂದ್ರಗಳು ಮಾಡುತ್ತಿರುವ ಪ್ರಭಾವಶಾಲಿ ಕೆಲಸವನ್ನು ಎತ್ತಿ ತೋರಿಸುವ ಗುರಿಯನ್ನು ಈ ವಿಭಾಗಗಳು ಹೊಂದಿವೆ.

  • ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ: ಸಮುದಾಯ ರೇಡಿಯೋ ಕೇಂದ್ರಗಳು ಸಾರ್ವಜನಿಕ ಆರೋಗ್ಯ ಸಮಸ್ಯೆಗಳು, ತುರ್ತು ಸಿದ್ಧತೆ, ರೋಗ ತಡೆಗಟ್ಟುವಿಕೆ, ನೈರ್ಮಲ್ಯ ಅಭ್ಯಾಸಗಳು ಮತ್ತು ಮಾನಸಿಕ ಆರೋಗ್ಯ ಜಾಗೃತಿಯನ್ನು ಮೂಡಿಸುವ ನವೀನ ಕಾರ್ಯಕ್ರಮಗಳನ್ನು ಪ್ರದರ್ಶಿಸಬಹುದು.
  • ಶಿಕ್ಷಣ ಮತ್ತು ಸಾಕ್ಷರತೆ: ಶಿಕ್ಷಣ ಮತ್ತು ಸಾಕ್ಷರತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ವ್ಯಕ್ತಿಗಳನ್ನು ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಬಲೀಕರಣಗೊಳಿಸುವುದು.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ/ಸಾಮಾಜಿಕ ನ್ಯಾಯ ಮತ್ತು ವಕಾಲತ್ತು: ಲಿಂಗ ಸಮಾನತೆ, ಮಕ್ಕಳ ಹಕ್ಕುಗಳು, ಸಬಲೀಕರಣ ಮತ್ತು ಸಾಮಾಜಿಕ ನ್ಯಾಯದ ಮೇಲೆ ಕೇಂದ್ರೀಕರಿಸುವ ಕಾರ್ಯಕ್ರಮಗಳು, ಅಂಚಿನಲ್ಲಿರುವ ಸಮುದಾಯಗಳಿಗಾಗಿ ಪರ ವಕಾಲತ್ತು ವಹಿಸುವುದು ಮತ್ತು ಸಮಾನ ಸಮಾಜವನ್ನು ಬೆಳೆಸುವುದು.
  • ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ: ಸುಸ್ಥಿರ ಕೃಷಿ, ಕೃಷಿ ನಾವೀನ್ಯತೆಗಳು ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಬೆಂಬಲಿಸುವ ಕಾರ್ಯಕ್ರಮಗಳು, ಗ್ರಾಮೀಣ ಸಮುದಾಯಗಳ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.
  • ಸಾಂಸ್ಕೃತಿಕ ಸಂರಕ್ಷಣೆ: ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು, ಭವಿಷ್ಯದ ಪೀಳಿಗೆಗೆ ಸಾಂಪ್ರದಾಯಿಕ ಕಲಾ ಪ್ರಕಾರಗಳು, ಭಾಷೆಗಳು ಮತ್ತು ಅಭ್ಯಾಸಗಳನ್ನು ಆಚರಿಸಲು ಮೀಸಲಾಗಿರುವ ಕಾರ್ಯಕ್ರಮಗಳು.

ನೋಂದಣಿ ಮಾರ್ಗಸೂಚಿಗಳು

ಸ್ಪರ್ಧೆಯ ನೋಂದಣಿ ಫೆಬ್ರವರಿ 28, 2025 ರವರೆಗೆ ತೆರೆದಿರುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅನುಮೋದಿಸಿದ ಮತ್ತು ಮಾನ್ಯ ಅಥವಾ ನವೀಕರಿಸಿದ ಪರವಾನಗಿಯನ್ನು ಹೊಂದಿರುವ ಭಾರತದ ಎಲ್ಲಾ ನೋಂದಾಯಿತ ಸಮುದಾಯ ರೇಡಿಯೋ ಕೇಂದ್ರಗಳಿಗೆ ಇದು ಲಭ್ಯವಿದೆ. ಪ್ರತಿ ಕೇಂದ್ರವು ಐದು ವಿಭಾಗಗಳಲ್ಲಿ ಒಂದರ ಅಡಿಯಲ್ಲಿ ಒಂದು ನಮೂದನ್ನು ಮಾತ್ರ ಸಲ್ಲಿಸಲು ಅನುಮತಿಸಲಾಗಿದೆ. ಒಂದೇ ಅಥವಾ ವಿಭಿನ್ನ ವಿಭಾಗಗಳಲ್ಲಿ ಹಲವು ನಮೂದುಗಳನ್ನು ಸಲ್ಲಿಸುವುದು ಅನರ್ಹತೆಗೆ ಕಾರಣವಾಗುತ್ತದೆ.

ಸಲ್ಲಿಕೆಗೆ ಅಗತ್ಯತೆಗಳು

ಕಾರ್ಯಕ್ರಮದ ಸಲ್ಲಿಕೆಗಳು ಅವುಗಳ ವಿಷಯ ಮತ್ತು ಪ್ರಭಾವವನ್ನು ಎತ್ತಿ ತೋರಿಸುವ ಸ್ವರೂಪ, ಅವಧಿ ಮತ್ತು ಪೂರಕ ಸಾಮಗ್ರಿಗಳನ್ನು ಒಳಗೊಂಡಂತೆ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕು.

  • ಕಾರ್ಯಕ್ರಮದ ಮಾನದಂಡ: ಪ್ರತಿ ಸಲ್ಲಿಕೆ ಅರ್ಧ ಗಂಟೆಯ ಕಾರ್ಯಕ್ರಮ ಅಥವಾ ಸರಣಿಯ ಒಂದು ಸಂಚಿಕೆಯಾಗಿರಬೇಕು.
  • ಕಾರ್ಯಕ್ರಮ ಸ್ವರೂಪಗಳು: ನಮೂದುಗಳು ಚರ್ಚಾ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು, ಸಂಗೀತ ಕಾರ್ಯಕ್ರಮಗಳು, ಶೈಕ್ಷಣಿಕ ವಿಷಯ, ನೇರಪ್ರಸಾರ ಕಾರ್ಯಕ್ರಮಗಳು, ಫೋನ್ ಇನ್ ಕಾರ್ಯಕ್ರಮ ಅಥವಾ ಯಾವುದೇ ಇತರ ಪ್ರಕಾರವನ್ನು ಒಳಗೊಂಡಿರಬಹುದು.
  • ಪೂರಕ ಸಾಮಗ್ರಿಗಳು:
  • ಕಾರ್ಯಕ್ರಮದ ವಿವರಣೆಗಳು: ಕಾರ್ಯಕ್ರಮದ ವಿಷಯ ಮತ್ತು ಉದ್ದೇಶಗಳ ಸಂಕ್ಷಿಪ್ತ ಅವಲೋಕನವನ್ನು ಒದಗಿಸಬೇಕು.
  • ಪರಿಣಾಮ ವರದಿಗಳು: ಸಮುದಾಯದ ಮೇಲೆ ಕಾರ್ಯಕ್ರಮದ ವ್ಯಾಪ್ತಿ ಮತ್ತು ಪ್ರಭಾವವನ್ನು ವಿವರಿಸಬೇಕು.
  • ಕೇಳುಗರ ಪ್ರಶಂಸಾಪತ್ರಗಳು: ಕೇಳುಗರಿಂದ ಬಂದ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಸೇರಿಸಬೇಕು.

ಸಲ್ಲಿಕೆ ಪ್ರಕ್ರಿಯೆ

ಮೌಲ್ಯಮಾಪನ ಮಾನದಂಡಗಳು

ವೇವ್ಸ್ ಸ್ಪರ್ಧೆಗೆ ಸಲ್ಲಿಕೆಗಳ ನ್ಯಾಯಯುತ ಮತ್ತು ಸಮಗ್ರ ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಲು, ಪ್ರತಿಯೊಂದು ಸಮುದಾಯ ರೇಡಿಯೋ ಕಾರ್ಯಕ್ರಮವನ್ನು ಮೌಲ್ಯಮಾಪನ ಮಾಡಲು ಈ ಕೆಳಗಿನ ನಿಯತಾಂಕಗಳನ್ನು ಬಳಸಲಾಗುತ್ತದೆ:

ಅಂತಿಮ ಆಯ್ಕೆ

ವೇವ್ಸ್ ಸ್ಪರ್ಧೆಯನ್ನು ಮಾಧ್ಯಮ ವ್ಯಕ್ತಿಗಳು ಮತ್ತು ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ​​ಆಫ್ ಇಂಡಿಯಾ (ಸಿ ಆರ್‌ ಎ) ಪ್ರತಿನಿಧಿಗಳು ಸೇರಿದಂತೆ ತಜ್ಞರ ಸಮಿತಿಯು ಎರಡು ಹಂತದ ಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ನಿರ್ಣಯಿಸುತ್ತದೆ.

ಅಂತಿಮ ಆಯ್ಕೆ: ವಿಜೇತರನ್ನು ಶಾರ್ಟ್‌ಲಿಸ್ಟ್ ಮಾಡಿದ ನಮೂದುಗಳಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ಅಂತಿಮ ಸುತ್ತಿಗೆ ಹೋಗುತ್ತಾರೆ.

ಮುಕ್ತಾಯ

ವೇವ್ಸ್‌ ಸ್ಪರ್ಧೆಯ ಭಾಗವಾಗಿ ಸಮುದಾಯ ರೇಡಿಯೋ ಕಂಟೆಂಟ್‌ ಚಾಲೆಂಜ್‌ ಭಾರತದಾದ್ಯಂತ ಸಮುದಾಯ ರೇಡಿಯೋ ಕೇಂದ್ರಗಳ ಪ್ರಭಾವಶಾಲಿ ಕೆಲಸವನ್ನು ಗುರುತಿಸಲು ಮತ್ತು ಆಚರಿಸಲು ಒಂದು ಅಮೂಲ್ಯವಾದ ವೇದಿಕೆಯನ್ನು ಒದಗಿಸುತ್ತದೆ. ನಾವೀನ್ಯತೆ ಮತ್ತು ಸಹಯೋಗವನ್ನು ಪ್ರೋತ್ಸಾಹಿಸುವ ಮೂಲಕ, ಈ ಸ್ಪರ್ಧೆಯು ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಮುದಾಯ ರೇಡಿಯೊದ ಪಾತ್ರವನ್ನು ಎತ್ತಿ ತೋರಿಸುತ್ತದೆ.

ಉಲ್ಲೇಖಗಳು

 

Click here to see PDF.

 

*****

 


(Release ID: 2106660) Visitor Counter : 17