ಕೃಷಿ ಸಚಿವಾಲಯ
azadi ka amrit mahotsav

19 ಕಂತುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪಿಎಂ-ಕಿಸಾನ್


9.8 ಕೋಟಿ ರೈತರಿಗೆ 22,000 ಕೋಟಿ  ರೂಪಾಯಿ ಮೊತ್ತದ ಕಂತು ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

Posted On: 24 FEB 2025 3:33PM by PIB Bengaluru

ಪರಿಚಯ

ಬಿಹಾರದ ಭಗಲ್ಪುರ್ ದಲ್ಲಿ 2025 ರ ಫೆಬ್ರವರಿ 24 ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ [ಪಿಎಂ-ಕಿಸಾನ್] ಯೋಜನೆಯಡಿ 19 ನೇ ಕಂತಿನ ನೆರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ 2.41 ಕೋಟಿ ಮಹಿಳಾ ರೈತರು ಒಳಗೊಂಡಂತೆ 9.8 ಕೋಟಿ ರೈತರಿಗೆ ದೇಶಾದ್ಯಂತ 19 ನೇ ಕಂತಿನ ಮೂಲಕ 22,000 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ನೇರ ಸೌಲಭ್ಯ ವರ್ಗಾವಣೆ [ಡಿಬಿಟಿ] ಮೂಲಕ ಯಾವುದೇ ಮಧ್ಯವರ್ತಿಗಳಿಲ್ಲದೇ ವರ್ಗಾಯಿಸಿದರು. ಈ ಮೂಲಕ ರೈತ ಕಲ್ಯಾಣ ಮತ್ತು ಕೃಷಿ ಸಮೃದ್ಧಿ ವಲಯದಲ್ಲಿ ಸರ್ಕಾರದ ಬದ್ಧತೆಯನ್ನು ಅವರು ಅನಾವರಣಗೊಳಿಸಿದರು. [1] ಕಂತಿನೊಂದಿಗೆ, ಈ ಯೋಜನೆಯು ದೇಶಾದ್ಯಂತ ರೈತರಿಗೆ ಬೆಂಬಲ ನೀಡಲಿದೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಮೃದ್ಧಿಗೆ ಸರ್ಕಾರದ ಬದ್ಧತೆಯನ್ನು ಮತ್ತಷ್ಟು ದೃಢಪಡಿಸಲಿದೆ.

https://pmkisan.gov.in/Creatives.aspx

ಇದಕ್ಕೂ ಮೊದಲು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 18 ನೇ ಕಂತನ್ನು 2024ರ ಅಕ್ಟೋಬರ್ 5 ರಂದು ಮಹಾರಾಷ್ಟ್ರದ ವಾಶಿಮ್‌ನಲ್ಲಿ ಬಿಡುಗಡೆ ಮಾಡಿದರು. ಈ ಮಹತ್ವದ ಬೆಳವಣಿಗೆಯು ದೇಶಾದ್ಯಂತ 9.4 ಕೋಟಿಗೂ ಹೆಚ್ಚು ರೈತರು 20,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ನೇರ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಸಾಕ್ಷಿಯಾಯಿತು.[2]

ಪಿಎಂ-ಕಿಸಾನ್ ಯೋಜನೆಯು ಫೆಬ್ರವರಿ 2019 ರಲ್ಲಿ ಮಾನ್ಯ ಪ್ರಧಾನಮಂತ್ರಿಯವರು ಪ್ರಾರಂಭಿಸಿದ ಕೇಂದ್ರ ವಲಯದ ಯೋಜನೆಯಾಗಿದ್ದು, ಇದು ಭೂ ಹಿಡುವಳಿದಾರ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಿದೆ. ಈ ಯೋಜನೆಯಡಿಯಲ್ಲಿ, ವರ್ಷಕ್ಕೆ 6,000/- ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಮೂರು ಸಮಾನ ಕಂತುಗಳಲ್ಲಿ, ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ವಿಧಾನದ ಮೂಲಕ ರೈತರ ಆಧಾರ್-ಸಂಬಂಧಿತ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. [3]

ರೈತ ಕೇಂದ್ರಿತ ಡಿಜಿಟಲ್ ಮೂಲಸೌಕರ್ಯವು, ಯಾವುದೇ ಮಧ್ಯವರ್ತಿಗಳ ಒಳಗೊಳ್ಳುವಿಕೆ ಇಲ್ಲದೇ, ಯೋಜನೆಯ ಪ್ರಯೋಜನಗಳು ದೇಶಾದ್ಯಂತ ಎಲ್ಲಾ ರೈತರಿಗೆ ತಲುಪುವಂತೆ ಮಾಡಿದೆ. ಫಲಾನುಭವಿಗಳ ನೋಂದಣಿ ಮತ್ತು ಪರಿಶೀಲನೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಮೂಲಕ, ಕೇಂದ್ರ ಸರ್ಕಾರ 2025 ರ ಫೆಬ್ರವರಿ ಹೊತ್ತಿಗೆ 18 ಕಂತುಗಳಲ್ಲಿ 3.46 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಿತರಿಸಿದೆ.[4]

ಉದ್ದೇಶಗಳು

ಸಣ್ಣ ಮತ್ತು ಅತಿ ಸಣ್ಣ ರೈತರ (ಎಸ್.ಎಂ.ಎಫ್) ಆದಾಯ ಹೆಚ್ಚಿಸುವ ಉದ್ದೇಶದಿಂದ,  ಪಿಎಂ-ಕಿಸಾನ್ ಯೋಜನೆಯು ಕೆಳಗಿನ ಗುರಿಗಳನ್ನು ಹೊಂದಿದೆ:

  • ಪ್ರತಿ ಬೆಳೆ ಋತುವಿನ ಕೊನೆಯಲ್ಲಿ ನಿರೀಕ್ಷಿತ ಕೃಷಿ ಆದಾಯಕ್ಕೆ ಅನುಗುಣವಾಗಿ, ಸರಿಯಾದ ಬೆಳೆ ಆರೋಗ್ಯ ಮತ್ತು ಸೂಕ್ತ ಇಳುವರಿಯನ್ನು ಖಚಿತಪಡಿಸಿಕೊಳ್ಳಲು ಸಣ್ಣ, ಮಧ್ಯಮ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸುವುದು.
  • ಇದು ಖರ್ಚುಗಳನ್ನು ಪೂರೈಸಲು ಸಾಲದಾತರ ಹಿಡಿತದಲ್ಲಿ ಬೀಳದಂತೆ ಅವರನ್ನು ರಕ್ಷಿಸುತ್ತದೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಅವರ ನಿರಂತರತೆಯನ್ನು ಖಚಿತಪಡಿಸುತ್ತದೆ. [5]

 ಅತ್ಯಾಧುನಿಕ ತಂತ್ರಜ್ಞಾನ  

ಯೋಜನೆಯನ್ನು ಹೆಚ್ಚು ಸಮರ್ಥ, ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸುವ ಉದ್ದೇಶದಿಂದ, ರೈತ ಕೇಂದ್ರಿತ ಡಿಜಿಟಲ್ ಮೂಲಸೌಕರ್ಯದಲ್ಲಿ ನಿರಂತರ ಸುಧಾರಣೆಗಳನ್ನು ತರಲಾಗಿದ್ದು, ಯೋಜನೆಯ ಪ್ರಯೋಜನಗಳು ಯಾವುದೇ ಮಧ್ಯವರ್ತಿಗಳ ಒಳಗೊಳ್ಳುವಿಕೆ ಇಲ್ಲದೇ ದೇಶಾದ್ಯಂತ ಎಲ್ಲಾ ರೈತರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲಾಗಿದೆ.

ಪಿಎಂ-ಕಿಸಾನ್ ಮೊಬೈಲ್ ಆಪ್ ಅನ್ನು 2020ರ ಫೆಬ್ರವರಿ 24 ರಂದು ಪ್ರಾರಂಭಿಸಲಾಯಿತು. ಹೆಚ್ಚಿನ ಪಾರದರ್ಶಕತೆಗೆ ಒತ್ತು ನೀಡಿ ಮತ್ತು ಅಧಿಕ ರೈತರನ್ನು ತಲುಪುವ ಉದ್ದೇಶದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಪಿಎಂ-ಕಿಸಾನ್ ಮೊಬೈಲ್ ಅಪ್ಲಿಕೇಶನ್ ಪಿಎಂ-ಕಿಸಾನ್ ವೆಬ್ ಪೋರ್ಟಲ್‌ಗೆ ಸರಳ ಮತ್ತು ಪರಿಣಾಮಕಾರಿ ವಿಸ್ತರಣೆಯನ್ನು ಒದಗಿಸುತ್ತದೆ. [6] 2023 ರಲ್ಲಿ, ಅಪ್ಲಿಕೇಶನ್ ಅನ್ನು ಹೆಚ್ಚುವರಿ "ಮುಖ ದೃಢೀಕರಣ ವೈಶಿಷ್ಟ್ಯ"ಗಳೊಂದಿಗೆ ಪ್ರಾರಂಭಿಸಲಾಯಿತು. ಇದು ದೂರದ ರೈತರು ಒಟಿಪಿ ಅಥವಾ ಫಿಂಗರ್‌ಪ್ರಿಂಟ್ ಇಲ್ಲದೇ ತಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಇ-ಕೆವೈಸಿ ಮಾಡಲು ಅನುವು ಮಾಡಿಕೊಟ್ಟಿದೆ.[7]

PMKISAN GoI - Apps on Google Play

ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಸ್ವಯಂ-ನೋಂದಣಿ, ಪ್ರಯೋಜನ, ಸ್ಥಿತಿ-ಗತಿ ಕುರಿತು ಜಾಡುಪತ್ತೆ ಮತ್ತು ಮುಖ ದೃಢೀಕರಣ ಆಧಾರಿತ ಇ-ಕೆವೈಸಿಯಂತಹ ಸೇವೆಗಳನ್ನು ನೀಡುತ್ತವೆ. ದೂರದ ಪ್ರದೇಶಗಳ ರೈತರು ನೆರೆಹೊರೆಯವರಿಗೆ ಸಹಾಯ ಮಾಡಲು ನಿಬಂಧನೆಗಳೊಂದಿಗೆ ಫೇಸ್ ಸ್ಕ್ಯಾನ್‌ ಮೂಲಕ ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು.

ನೋಂದಣಿಗಳನ್ನು ಸುಗಮಗೊಳಿಸಲು ಮತ್ತು ಕಡ್ಡಾಯ ಅವಶ್ಯಕತೆಗಳನ್ನು ಪೂರೈಸಲು 5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿ.ಎಸ್.ಸಿ) ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ, ಪೋರ್ಟಲ್‌ನಲ್ಲಿ ದೃಢವಾದ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ ಮತ್ತು ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭಿಸಲಾದ ಕಿಸಾನ್-ಇಮಿತ್ರ ಎಂಬ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಎಐ ಚಾಟ್‌ಬಾಟ್, ಪಾವತಿಗಳು, ನೋಂದಣಿ ಮತ್ತು ಅರ್ಹತೆಗೆ ಸಂಬಂಧಿಸಿದಂತೆ ಸ್ಥಳೀಯ ಭಾಷೆಗಳಲ್ಲಿ ತ್ವರಿತ ಪ್ರಶ್ನೆ, ಪರಿಹಾರವನ್ನು ಒದಗಿಸುತ್ತದೆ. ರೈತರು ತಮ್ಮ ನೆರೆಹೊರೆಯಲ್ಲಿರುವ ಇತರ 100 ರೈತರು ತಮ್ಮ ಮನೆ ಬಾಗಿಲಿಗೆ ಇ-ಕೆವೈಸಿ ಪೂರ್ಣಗೊಳಿಸಲು ಸಹಾಯ ಮಾಡಬಹುದು. ಇದರ ಜೊತೆಗೆ, ಭಾರತ ಸರ್ಕಾರವು ರೈತರ ಇ-ಕೆವೈಸಿ ಪೂರ್ಣಗೊಳಿಸುವ ಸೌಲಭ್ಯವನ್ನು ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ವಿಸ್ತರಿಸಿದೆ, ಪ್ರತಿಯೊಬ್ಬ ಅಧಿಕಾರಿಯು 500 ರೈತರಿಗೆ ಇ-ಕೆವೈಸಿ ಮಾಡಲು ಅವಕಾಶ ನೀಡುತ್ತದೆ.[8]

ಪಿಎಂ-ಕಿಸಾನ್ ಚಾಟ್ಬಾಟ್

2023ರಲ್ಲಿ, ಪಿಎಂ-ಕಿಸಾನ್ ಯೋಜನೆಗಾಗಿ ಎಐ ಚಾಟ್‌ಬಾಟ್ ಅನ್ನು ಪ್ರಾರಂಭಿಸಲಾಯಿತು, ಇದು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯೊಂದಿಗೆ ಸಂಯೋಜಿಸಲ್ಪಟ್ಟ ಮೊದಲ ಎಐ ಚಾಟ್‌ಬಾಟ್ ಆಯಿತು. ಎಐ ಚಾಟ್‌ಬಾಟ್ ರೈತರಿಗೆ ಅವರ ಪ್ರಶ್ನೆಗಳಿಗೆ ತ್ವರಿತ, ಸ್ಪಷ್ಟ ಮತ್ತು ನಿಖರವಾದ ಪ್ರತಿಕ್ರಿಯೆಗಳನ್ನು ಒದಗಿಸುತ್ತದೆ. ಇದನ್ನು ಏಕ್ ಸ್ಟೆಪ್ ಫೌಂಡೇಶನ್ ಮತ್ತು ಭಾಷಿಣಿಯ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಸುಧಾರಣೆಗೊಳಿಸಲಾಗಿದೆ. ಪಿಎಂ-ಕಿಸಾನ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯಲ್ಲಿ ಎಐ ಚಾಟ್‌ಬಾಟ್ ಅನ್ನು ಪರಿಚಯಿಸುವುದು ರೈತರಿಗೆ ಬಳಕೆದಾರ ಸ್ನೇಹಿ ಮತ್ತು ಪ್ರವೇಶಿಸಬಹುದಾದ ವೇದಿಕೆಯೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.

https://www.instagram.com/pmkisanofficial/p/DAu8QCsiEoH/?hl=en

ಪಿಎಂ-ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದಾದ ಎಐ ಚಾಟ್‌ಬಾಟ್, ಪಿಎಂ-ಕಿಸಾನ್ ಫಲಾನುಭವಿಗಳ ಭಾಷಾ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಪೂರೈಸುವ ಮೂಲಕ ಬಹುಭಾಷಾ ಬೆಂಬಲವನ್ನು ನೀಡುವ ಭಾಷಿಣಿಯೊಂದಿಗೆ ಸಂಯೋಜಿಸಲ್ಪಟ್ಟಿದೆ. 'ಡಿಜಿಟಲ್ ಇಂಡಿಯಾ ಭಾಷಿಣಿ' ಧ್ವನಿ ಆಧಾರಿತ ಪ್ರವೇಶ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಇಂಟರ್ನೆಟ್ ಮತ್ತು ಡಿಜಿಟಲ್ ಸೇವೆಗಳಿಗೆ ಸುಲಭ ಪ್ರವೇಶವನ್ನು ಸಕ್ರಿಯಗೊಳಿಸಲು ಮತ್ತು ಭಾರತೀಯ ಭಾಷೆಗಳಲ್ಲಿ ವಿಷಯವನ್ನು ರಚನೆಗೆ ಸಹಾಯ ಮಾಡಲು ಪ್ರಯತ್ನಿಸುತ್ತದೆ.[9] ಮುಂದುವರಿದ ತಂತ್ರಜ್ಞಾನದ ಸಂಯೋಜನೆಯು ಪಾರದರ್ಶಕತೆಯನ್ನು ಹೆಚ್ಚಿಸುವುದಲ್ಲದೇ, ರೈತರು ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಬಲೀಕರಣಗೊಳಿಸುತ್ತದೆ. [10]

ಹೆಚ್ಚುವರಿಯಾಗಿ, ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುವ ರೈತರಿಗೆ ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವ/ನವೀಕರಿಸುವ ಸೌಲಭ್ಯವನ್ನು ಅಂಚೆ ಇಲಾಖೆ ನೀಡುತ್ತದೆ. ಇದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಇ-ಕೆವೈಸಿಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದೆ.[11]

ಯೋಜನೆಯಡಿ ನೋಂದಣಿಯಾಗಲು ಕಡ್ಡಾಯವಾಗಿ ಬೇಕಾಗಿರುವ ಮಾಹಿತಿ:

• ರೈತ / ಪತ್ನಿಯ ಹೆಸರು

• ರೈತ / ಪತ್ನಿಯ ಜನ್ಮ ದಿನಾಂಕ

• ಬ್ಯಾಂಕ್ ಖಾತೆ ಸಂಖ್ಯೆ

• ಐಎಫ್ಎಸ್ಸಿ/ಎಂಐಸಿಆರ್ ಕೋಡ್

• ಮೊಬೈಲ್ ಸಂಖ್ಯೆ

• ಆಧಾರ್ ಸಂಖ್ಯೆ

• ಪಾಸ್‌ಬುಕ್‌ನಲ್ಲಿ ಲಭ್ಯವಿರುವ ಇತರ ಗ್ರಾಹಕ ಮಾಹಿತಿಯು ಕಡ್ಡಾಯ ನೋಂದಣಿಗೆ ಅಗತ್ಯವಾಗಿರುತ್ತದೆ

[12]

 

ಪರಿಣಾಮಗಳು ಮತ್ತು ಸಾಧನೆಗಳು

  • ಆರಂಭದಿಂದಲೂ, ಭಾರತ ಸರ್ಕಾರವು 18 ಕಂತುಗಳಲ್ಲಿ 3.46 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಿತರಿಸಿದೆ.
  • 2023ರ ನವೆಂಬರ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಡಿಯಲ್ಲಿ ಪ್ರಾರಂಭಿಸಲಾದ ಮಹತ್ವದ ಅಭಿಯಾನದಡಿ 1 ಕೋಟಿಗೂ ಹೆಚ್ಚು ಅರ್ಹ ರೈತರನ್ನು ಯೋಜನೆಗೆ ಸೇರಿಸಿದೆ.
  • 2024ರ ಜೂನ್ ನಲ್ಲಿ ನಂತರದ ಸರ್ಕಾರದ ಮೊದಲ 100 ದಿನಗಳಲ್ಲಿ ಹೆಚ್ಚುವರಿಯಾಗಿ 25 ಲಕ್ಷ ರೈತರನ್ನು ಸೇರ್ಪಡೆ ಮಾಡಲಾಯಿತು. ಇದರ ಪರಿಣಾಮವಾಗಿ, 18 ನೇ ಕಂತು ಪಡೆಯುವ ಫಲಾನುಭವಿಗಳ ಸಂಖ್ಯೆ 9.59 ಕೋಟಿಗೆ ಏರಿಕೆಯಾಗಿದೆ.
  • ಯೋಜನೆಯು ವಿವಿಧ ರಾಜ್ಯಗಳಲ್ಲಿ ವ್ಯಾಪಕ ವ್ಯಾಪ್ತಿಯನ್ನು ಹೊಂದಿದೆ. ಉದಾಹರಣೆಗೆ, 18ನೇ ಕಂತಿನ ಸಮಯದಲ್ಲಿ (ಆಗಸ್ಟ್ 2024 - ನವೆಂಬರ್ 2024), ಉತ್ತರ ಪ್ರದೇಶದಲ್ಲಿ 2,25,78,654 ಫಲಾನುಭವಿಗಳೊಂದಿಗೆ ಅತಿ ಹೆಚ್ಚು ಸಂಖ್ಯೆಯನ್ನು ಹೊಂದಿತ್ತು, ನಂತರ ಬಿಹಾರವು 75,81,009 ಫಲಾನುಭವಿಗಳನ್ನು ಹೊಂದಿತ್ತು. [13]

ಒಂದು ಭರವಸೆಯ ಪಯಣ

2019 ರಲ್ಲಿ ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐ.ಎಫ್.ಪಿ.ಆರ್.ಐ) ನಡೆಸಿದ ಸ್ವತಂತ್ರ ಅಧ್ಯಯನವು, ಪಿಎಂ-ಕಿಸಾನ್ ನಿಧಿಗಳು ಗ್ರಾಮೀಣ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಿವೆ, ರೈತರ ಸಾಲ ನಿರ್ಬಂಧಗಳನ್ನು ಕಡಿಮೆ ಮಾಡಿವೆ ಮತ್ತು ಕೃಷಿ ಸಹಾಯಧನ ಹೂಡಿಕೆಗಳನ್ನು ಹೆಚ್ಚಿಸಿರುವುದನ್ನು ಬಹಿರಂಗಪಡಿಸಿದೆ. ಇದಲ್ಲದೇ, ಈ ಯೋಜನೆಯು ರೈತರ ಅಪಾಯ-ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ, ಇದು ಅವರನ್ನು ಅಪಾಯಕಾರಿ ಆದರೆ ತುಲನಾತ್ಮಕವಾಗಿ ಉತ್ಪಾದಕ ಹೂಡಿಕೆಗಳನ್ನು ಕೈಗೊಳ್ಳಲು ಕಾರಣವಾಗಿದೆ. ಪಿಎಂ-ಕಿಸಾನ್ ಯೋಜನೆಯಡಿ ಸ್ವೀಕರಿಸುವವರು, ಸ್ವೀಕರಿಸುವ ನಿಧಿಗಳು ಅವರ ಕೃಷಿ ಅಗತ್ಯಗಳಿಗೆ ಸಹಾಯ ಮಾಡುವುದಲ್ಲದೇ, ಶಿಕ್ಷಣ, ವೈದ್ಯಕೀಯ, ಮದುವೆ ಇತ್ಯಾದಿಗಳಂತಹ ಅವರ ಇತರ ವೆಚ್ಚಗಳನ್ನು ಸಹ ಪೂರೈಸುತ್ತಿವೆ. ಇವು ದೇಶದ ರೈತರ ಮೇಲೆ ಯೋಜನೆಯ ಸಕಾರಾತ್ಮಕ ಪರಿಣಾಮದ ಸೂಚಕಗಳಾಗಿವೆ. ಪಿಎಂ-ಕಿಸಾನ್ ನಮ್ಮ ದೇಶದ ರೈತ ಸಮುದಾಯಕ್ಕೆ ನಿಜವಾಗಿಯೂ ಒಂದು ಬದಲಾವಣೆ ತಂದಿದೆ. [14]

 ಕೊನೆಯಲ್ಲಿ  

ಕಳೆದ ಐದು ವರ್ಷಗಳಲ್ಲಿ, ಪಿಎಂ-ಕಿಸಾನ್ ಯೋಜನೆಯು ರೈತ ಸಮುದಾಯಕ್ಕೆ ಒಂದು ಪರಿವರ್ತನಾ ಉಪಕ್ರಮವಾಗಿ ವಿಕಸನಗೊಂಡಿದೆ. ಆರ್ಥಿಕ ಸೇರ್ಪಡೆ ಮತ್ತು ಗ್ರಾಮೀಣ ಸಬಲೀಕರಣದಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. ಕೋಟ್ಯಂತರ ರೈತರಿಗೆ ನೇರ ಮತ್ತು ಸಕಾಲಿಕ ನೆರವು ನೀಡುವ ಅದರ ದೃಷ್ಟಿಕೋನವನ್ನು ಗಮನಾರ್ಹ ದಕ್ಷತೆಯೊಂದಿಗೆ ಕಾರ್ಯಗತಗೊಳಿಸಲಾಗಿದೆ. ಫಲಾನುಭವಿಗಳ ಖಾತೆಗಳಿಗೆ ನೇರ ವರ್ಗಾವಣೆಯನ್ನು ಸಕ್ರಿಯಗೊಳಿಸುವ ಯೋಜನೆಯ ತಡೆರಹಿತ ಡಿಜಿಟಲ್ ಮೂಲಸೌಕರ್ಯವು ಪಾರದರ್ಶಕತೆ ಮತ್ತು ಪರಿಣಾಮಕಾರಿ ಆಡಳಿತಕ್ಕೆ ಮಾನದಂಡವನ್ನು ನಿಗದಿಪಡಿಸಿದೆ. ಪಿಎಂ-ಕಿಸಾನ್ ಯೋಜನೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇರುವುದರಿಂದ, ಕೃಷಿ ವಲಯವನ್ನು ಬಲಪಡಿಸುವ ಮತ್ತು ಭಾರತದ ರೈತರ ಜೀವನೋಪಾಯವನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಗೆ ಇದು ಸಾಕ್ಷಿಯಾಗಿದೆ.

ಉಲ್ಲೇಖಗಳು:

· https://pib.gov.in/PressReleasePage.aspx?PRID=2105462

· https://x.com/pmkisanofficial/status/1890710455896670308

· https://pmkisan.gov.in/Creatives.aspx

· https://pib.gov.in/PressReleasePage.aspx?PRID=2061928

· https://pib.gov.in/PressReleasePage.aspx?PRID=2100758

· https://pmkisan.gov.in/Documents/PMKisanSamanNidhi.PDF

· https://pib.gov.in/PressReleaseIframePage.aspx?PRID=1947889

· https://pib.gov.in/PressReleaseIframePage.aspx?PRID=1934517

· https://sansad.in/getFile/annex/266/AU1302_YaVIcH.pdf?source=pqars

· https://static.pib.gov.in/WriteReadData/specificdocs/documents/2022/aug/doc202282696201.pdf

· https://pib.gov.in/PressReleaseIframePage.aspx?PRID=1959461

· https://pib.gov.in/PressReleasePage.aspx?PRID=1869463

· https://pmkisan.gov.in/Documents/Note-on-Modes-and-processes-of-ekyc-13th-Nov-English.pdf

· https://pib.gov.in/PressReleasePage.aspx?PRID=2100758

· https://sansad.in/getFile/loksabhaquestions/annex/1712/AU795.pdf?source=pqals

· https://pib.gov.in/PressReleasePage.aspx?PRID=2080200

Click here to see PDF

 

*****


(Release ID: 2105826) Visitor Counter : 66