ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇತ್ತೀಚಿನ “ಮನ್ ಕಿ ಬಾತ್” ಸಂಚಿಕೆಯಲ್ಲಿ ಬೊಜ್ಜಿನ ವಿರುದ್ಧ ಸಾಮೂಹಿಕ ಕ್ರಮಕ್ಕೆ ಪ್ರಧಾನಮಂತ್ರಿಯವರು ಕರೆ ನೀಡಿದ್ದಾರೆ

Posted On: 24 FEB 2025 9:11AM by PIB Bengaluru

ಹೆಚ್ಚುತ್ತಿರುವ ಬೊಜ್ಜು ಪ್ರಮಾಣವನ್ನು ಎದುರಿಸುವ ತುರ್ತು ಅಗತ್ಯವನ್ನು ವಿವರಿಸುತ್ತಾ, ಖಾದ್ಯ ತೈಲ ಸೇವನೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಪ್ರತಿಪಾದಿಸಲು ಪ್ರಮುಖ ವ್ಯಕ್ತಿಗಳನ್ನು ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಯವರು ನಾಮನಿರ್ದೇಶನ ಮಾಡಿದರು. ಆರೋಗ್ಯದ ಕುರಿತಾದ ಆಂದೋಲನವನ್ನು ಮತ್ತಷ್ಟು ವಿಸ್ತರಿಸಲು ಇನ್ನೂ 10 ಜನರನ್ನು ಪರಸ್ಪರ ನಾಮನಿರ್ದೇಶನ ಮಾಡುವಂತೆ ಪ್ರಧಾನಮಂತ್ರಿಯವರು ಒತ್ತಾಯಿಸಿದರು.

"ಎಕ್ಸ್" ತಾಣದಲ್ಲಿ ಪ್ರಧಾನಮಂತ್ರಿಯವರು ಹೀಗೆ ಬರೆದಿದ್ದಾರೆ:

“ನಿನ್ನೆಯ #MannKiBaat ಕಾರ್ಯಕ್ರಮದಲ್ಲಿ ಉಲ್ಲೇಖಿಸಿದಂತೆ, ಬೊಜ್ಜಿನ ವಿರುದ್ಧದ ಹೋರಾಟವನ್ನು ಬಲಪಡಿಸಲು ಮತ್ತು ಆಹಾರದಲ್ಲಿ ಖಾದ್ಯ ತೈಲ ಸೇವನೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ನಾನು ಈ ಕೆಳಗಿನ ಜನರನ್ನು ನಾಮನಿರ್ದೇಶನ ಮಾಡಲು ಬಯಸುತ್ತೇನೆ. ನಮ್ಮ ಆಂದೋಲನವು ಇನ್ನೂ ಬೃಹತ್ತಾಕಾರ ಪಡೆಯಲು ತಲಾ 10 ಜನರನ್ನು ನಾಮನಿರ್ದೇಶನ ಮಾಡುವಂತೆ ನಾನು ಎಲ್ಲರನ್ನೂ ವಿನಂತಿಸುತ್ತೇನೆ!

@anandmahindra

@nirahua1

@realmanubhaker

@mirabai_chanu

@Mohanlal

@NandanNilekani

@OmarAbdullah

@ActorMadhavan

@shreyaghoshal

@SmtSudhaMurty

ಒಟ್ಟಾರೆಯಾಗಿ, ಭಾರತವನ್ನು ಸದೃಢ ಮತ್ತು ಆರೋಗ್ಯಕರವಾಗಿಸೋಣ. #FightObesity”

 

 

*****


(Release ID: 2105758) Visitor Counter : 9