@font-face { font-family: 'Poppins'; src: url('/fonts/Poppins-Regular.ttf') format('truetype'); font-weight: 400; font-style: normal; } body { font-family: 'Poppins', sans-serif; } .hero { background: linear-gradient(to right, #003973, #e5e5be); color: white; padding: 60px 30px; text-align: center; } .hero h1 { font-size: 2.5rem; font-weight: 700; } .hero h4 { font-weight: 300; } .article-box { background: white; border-radius: 10px; box-shadow: 0 8px 20px rgba(0,0,0,0.1); padding: 40px 30px; margin-top: -40px; position: relative; z-index: 1; } .meta-info { font-size: 1em; color: #6c757d; text-align: center; } .alert-warning { font-weight: bold; font-size: 1.05rem; } .section-footer { margin-top: 40px; padding: 20px 0; font-size: 0.95rem; color: #555; border-top: 1px solid #ddd; } .global-footer { background: #343a40; color: white; padding: 40px 20px 20px; margin-top: 60px; } .social-icons i { font-size: 1.4rem; margin: 0 10px; color: #ccc; } .social-icons a:hover i { color: #fff; } .languages { font-size: 0.9rem; color: #aaa; } footer { background-image: linear-gradient(to right, #7922a7, #3b2d6d, #7922a7, #b12968, #a42776); } body { background: #f5f8fa; } .innner-page-main-about-us-content-right-part { background:#ffffff; border:none; width: 100% !important; float: left; border-radius:10px; box-shadow: 0 8px 20px rgba(0,0,0,0.1); padding: 0px 30px 40px 30px; margin-top: 3px; } .event-heading-background { background: linear-gradient(to right, #7922a7, #3b2d6d, #7922a7, #b12968, #a42776); color: white; padding: 20px 0; margin: 0px -30px 20px; padding: 10px 20px; } .viewsreleaseEvent { background-color: #fff3cd; padding: 20px 10px; box-shadow: 0 .5rem 1rem rgba(0, 0, 0, .15) !important; } } @media print { .hero { padding-top: 20px !important; padding-bottom: 20px !important; } .article-box { padding-top: 20px !important; } }
WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್‌ಶಿಪ್: ಯುವ ಕ್ರಿಯೇಟರ್ಸ್‌ ಗೆ ಸ್ಪರ್ಧೆ ತೀವ್ರಗೊಳ್ಳುತ್ತಿದೆ, ಐವರು ತೀರ್ಪುಗಾರರು ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ 


ವೇವ್ಸ್‌ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲು 10 ಸೆಮಿ-ಫೈನಲಿಸ್ಟ್‌ ಗಳನ್ನು ಆಯ್ಕೆ ಮಾಡಲಾಗಿದೆ

 Posted On: 20 FEB 2025 7:36PM |   Location: PIB Bengaluru

2025ರ ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ನಡೆಯಲಿರುವ ವಿಶ್ವ ಧ್ವನಿ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಭಾಗವಾಗಿ ನಡೆಯುತ್ತಿರುವ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್‌ಶಿಪ್‌‌ ನ ಫೈನಲಿಸ್ಟ್‌ ಗಳನ್ನು ಆಯ್ಕೆ ಮಾಡಲು ಐವರು ಸದಸ್ಯರ ತೀರ್ಪುಗಾರರ ಸಮಿತಿಯನ್ನು ಘೋಷಿಸಲಾಗಿದೆ. ಭಾರತೀಯ ಕಾಮಿಕ್ಸ್ ಅಸೋಸಿಯೇಷನ್ ​​(ಐಸಿಎ) ಮತ್ತು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಜಂಟಿ ಉಪಕ್ರಮವಾದ ವೇವ್ಸ್ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್‌ಶಿಪ್, ಜಾಗತಿಕವಾಗಿ ಭಾರತೀಯ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಭಾರತ ಸರ್ಕಾರದ ಕಾರ್ಯಕ್ರಮವಾದ "ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್" ನ ಭಾಗವಾಗಿದೆ.‌

ಚಾಂಪಿಯನ್‌ಶಿಪ್‌ ನ ಸೆಮಿಫೈನಲಿಸ್ಟ್‌ ಗಳನ್ನು ಈಗಾಗಲೇ ಘೋಷಿಸಲಾಗಿದೆ. ಭಾರತೀಯ ಕಾಮಿಕ್ಸ್ ಜಗತ್ತನ್ನು ರೂಪಿಸಿದ ಉದ್ಯಮದ ದಿಗ್ಗಜರನ್ನು ಒಳಗೊಂಡಿರುವ ತೀರ್ಪುಗಾರರ ಸಮಿತಿಯು ಈಗ ಸೆಮಿಫೈನಲಿಸ್ಟ್‌ ಗಳ ಸಲ್ಲಿಕೆಗಳನ್ನು ಮೌಲ್ಯಮಾಪನ ಮಾಡುವ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ 10 ಅಂತಿಮ ಸ್ಪರ್ಧಿಗಳು ಮುಂಬೈನ ವೇವ್ಸ್‌  ನಲ್ಲಿ ಸ್ಪರ್ಧಿಸುತ್ತಾರೆ.

ತೀರ್ಪುಗಾರರ ಸಮಿತಿಯ ಕುರಿತು ಮಾತನಾಡಿದ ಐಸಿಎ ಅಧ್ಯಕ್ಷ ಅಜಿತೇಶ್ ಶರ್ಮಾ, ಸದಸ್ಯರಿಗೆ ಕಾಮಿಕ್ಸ್ ಬಗ್ಗೆ ಇರುವ ಪರಿಣತಿ ಮತ್ತು ಉತ್ಸಾಹವು ಚಾಂಪಿಯನ್‌ಶಿಪ್ ಭಾರತೀಯ ಕಾಮಿಕ್ಸ್‌ ನಲ್ಲಿ ಶ್ರೇಷ್ಠತೆಗೆ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ಹೇಳಿದರು. "ಇಂತಹ ಪ್ರತಿಷ್ಠಿತ ತೀರ್ಪುಗಾರರ ಸಮಿತಿಯನ್ನು ಹೊಂದಿರುವುದು ನಮಗೆ ಗೌರವ ತಂದಿದೆ" ಎಂದು ಅವರು ಹೇಳಿದರು.

ತೀರ್ಪುಗಾರರ ಸಮಿತಿ ಸದಸ್ಯರು

  1. ದಿಲೀಪ್ ಕದಮ್, ಹೆಸರಾಂತ ಕಾಮಿಕ್ ಕಲಾವಿದ ಮತ್ತು ಚಿತ್ರಕಾರರು. ಇವರು ತಮ್ಮ ಅಪಾರ ಅನುಭವ ಮತ್ತು ಪರಿಣತಿಯನ್ನು ವೇದಿಕೆಗೆ ತರುತ್ತಾರೆ. ಹಲವಾರು ದಶಕಗಳ ವೃತ್ತಿಜೀವನದೊಂದಿಗೆ, ದಿಲೀಪ್ ಕದಮ್ ಅನೇಕ ಪ್ರಮುಖ ಪ್ರಕಾಶಕರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಭೋಕಲ್ ಸೇರಿದಂತೆ ಭಾರತದ ಅತ್ಯಂತ ಪ್ರೀತಿಯ ಕೆಲವು ಕಾಮಿಕ್ ಪಾತ್ರಗಳನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
  2. ನಿಖಿಲ್ ಪ್ರಾಣ್, ಪ್ರಸಿದ್ಧ ವ್ಯಂಗ್ಯಚಿತ್ರಕಾರ ಪ್ರಾಣ್ ಕುಮಾರ್ ಶರ್ಮಾ ಅವರ ಪುತ್ರ ಮತ್ತು ಸ್ವತಃ ಪ್ರಸಿದ್ಧ ಕಾಮಿಕ್ ಸೃಷ್ಟಿಕರ್ತ. ಸಮಿತಿಗೆ ಒಂದು ವಿಶಿಷ್ಟ ದೃಷ್ಟಿಕೋನವನ್ನು ಸೇರಿಸುತ್ತಾರೆ. ಪ್ರಾಣ್ ಅವರ ಕೆಲಸವು ಅವರ ತಂದೆಯ ಸಾಂಪ್ರದಾಯಿಕ ಸೃಷ್ಟಿಗಳಾದ ಚಾಚಾ ಚೌಧರಿ ಮತ್ತು ಸಾಬು ಪಾತ್ರಗಳಿಂದ ಪ್ರಭಾವಿತವಾಗಿದೆ ಮತ್ತು ಅವರು ತಮ್ಮದೇ ಆದ ನವೀನ ಕಥೆ ಹೇಳುವ ಮೂಲಕ ಪರಂಪರೆಯನ್ನು ಮುಂದುವರೆಸಿದ್ದಾರೆ.
  3. ಜಾಜಿಲ್ ಹೋಮವಜಿರ್, ಪ್ರಶಸ್ತಿ ವಿಜೇತ ಅನಿಮೇಷನ್ ವೃತ್ತಿಪರರು ಮತ್ತು ಇತ್ತೀಚೆಗೆ ಆನ್ ಪ್ರಶಸ್ತಿಯನ್ನು ಗೆದ್ದ ಭಾರತದ ಮೊದಲ ಮತ್ತು ದೀರ್ಘಕಾಲದಿಂದ ನಡೆಯುತ್ತಿರುವ ವೆಬ್ ಮಂಗಾ 'ದಿ ಬೀಸ್ಟ್ ಲೀಜನ್' ನ ಸೃಷ್ಟಿಕರ್ತರು. ಸ್ಪರ್ಧೆಗೆ ಹೊಸ ಮತ್ತು ನವೀನ ವಿಧಾನವನ್ನು ತರುತ್ತಾರೆ.
  4. ಸಂಜಯ್ ಗುಪ್ತಾ, ರಾಜ್ ಕಾಮಿಕ್ಸ್‌ ನ ಸ್ಥಾಪಕರು ಮತ್ತು ಭಾರತದ ಅತ್ಯಂತ ಜನಪ್ರಿಯ ಸೂಪರ್‌ ಹೀರೋಗಳಾದ ನಾಗರಾಜ್, ಡೋಗಾ, ಭೋಕಲ್, ಭೇರಿಯಾ ಮತ್ತು ಇತರರ ಸೃಷ್ಟಿಕರ್ತರು. ಉದ್ಯಮದ ಪ್ರವೃತ್ತಿಗಳು ಮತ್ತು ಬೇಡಿಕೆಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತಾರೆ.
  5. ಪ್ರೀತಿ ವ್ಯಾಸ್, ಅಮರ ಚಿತ್ರ ಕಥಾದ ಅಧ್ಯಕ್ಷೆ ಮತ್ತು ಸಿಇಒ. ಪರಿಸರ ವ್ಯವಸ್ಥೆಯಲ್ಲಿ ತಮ್ಮ ವ್ಯಾಪಕ ಜ್ಞಾನ ಮತ್ತು ಅನುಭವದೊಂದಿಗೆ ಸಮಿತಿಗೆ ಪೂರ್ಣತೆ ತಂದಿದ್ದಾರೆ. ವ್ಯಾಸ್ ಅವರ ಕೆಲಸವು ಪುರಾಣಗಳಿಂದ ಹಿಡಿದು ಚಿತ್ರ ಪುಸ್ತಕಗಳು ಮತ್ತು ಆರಂಭಿಕ ಅಧ್ಯಾಯ ಪುಸ್ತಕಗಳವರೆಗೆ ಬಹು ಪ್ರಕಾರಗಳನ್ನು ವ್ಯಾಪಿಸಿದೆ.

ವೇವ್ಸ್ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್ಶಿಪ್

ಮುಂದಿನ ಪೀಳಿಗೆಯ ಭಾರತೀಯ ಕಾಮಿಕ್ ಸೃಷ್ಟಿಕರ್ತರನ್ನು ಕಂಡುಹಿಡಿಯುವ ಮತ್ತು ಪ್ರೋತ್ಸಾಹಿಸುವ ಧ್ಯೇಯದೊಂದಿಗೆ ಆಗಸ್ಟ್ 2024 ರಲ್ಲಿ ಐಸಿಎ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ವೇವ್ಸ್ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್‌ಶಿಪ್ ಅನ್ನು ಪ್ರಾರಂಭಿಸಿತು. ಈ ಚಾಂಪಿಯನ್‌ಶಿಪ್ ನಾವೀನ್ಯತೆ, ಸೃಜನಶೀಲತೆ ಮತ್ತು ಕಥೆ ಹೇಳುವ ಉತ್ಸಾಹವನ್ನು ಪೋಷಿಸುವ ಮೂಲಕ ಭಾರತೀಯ ಕಾಮಿಕ್ಸ್‌ ನಲ್ಲಿ ಹೊಸ ಯುಗವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ವೇವ್ಸ್‌ 2025 ಕುರಿತು

ವೇವ್ಸ್ 2025, ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ ನಲ್ಲಿ ಮೇ 1 ರಿಂದ ಮೇ 4, 2025 ರವರೆಗೆ ನಡೆಯಲಿರುವ ಜಾಗತಿಕ ಶೃಂಗಸಭೆಯಾಗಿದ್ದು, ಮಾಧ್ಯಮ, ಮನರಂಜನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ಸಹಯೋಗವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಅನಿಮೇಷನ್, ಗೇಮಿಂಗ್, ದೃಶ್ಯ ಪರಿಣಾಮಗಳು ಮತ್ತು ಎಕ್ಸ್‌ ಆರ್ (ವಿಸ್ತೃತ ರಿಯಾಲಿಟಿ) ನಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸಲು ಶೃಂಗಸಭೆಯು ಕ್ರಿಯೇಟರ್ಸ್, ಉದ್ಯಮ ನಾಯಕರು ಮತ್ತು ಹೂಡಿಕೆದಾರರನ್ನು ಒಟ್ಟುಗೂಡಿಸುತ್ತದೆ. ಎವಿಜಿಸಿ-ಎಕ್ಸ್‌ ಆರ್‌ ವಲಯದಲ್ಲಿ ಭಾರತವನ್ನು ಜಾಗತಿಕ ಶಕ್ತಿ ಕೇಂದ್ರವಾಗಿ ಸ್ಥಾಪಿಸುವ ದೃಷ್ಟಿಯೊಂದಿಗೆ, ವೇವ್ಸ್ 2025 ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಗಡಿಯಾಚೆಗಿನ ಸಹಯೋಗಗಳನ್ನು ಉತ್ತೇಜಿಸುತ್ತದೆ.

 

*****

 


Release ID: (Release ID: 2105238)   |   Visitor Counter: 32