ಪ್ರಧಾನ ಮಂತ್ರಿಯವರ ಕಛೇರಿ
ಫೆಬ್ರವರಿ 21ರಂದು ದೆಹಲಿಯಲ್ಲಿ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
71 ವರ್ಷಗಳ ನಂತರ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮರಾಠಿ ಸಾಹಿತ್ಯ ಸಮ್ಮೇಳನವು ಮರಾಠಿ ಸಾಹಿತ್ಯದ ಕಾಲಾತೀತ ಪ್ರಸ್ತುತತೆಯನ್ನು ಆಚರಿಸುವುದಲ್ಲದೆ, ಸಮಕಾಲೀನ ಸಂವಾದದಲ್ಲಿ ಮರಾಠಿ ಭಾಷೆಯ ವ್ಯಾಪ್ತಿಯನ್ನು ಒಳಗೊಳ್ಳಲಿದೆ
Posted On:
20 FEB 2025 7:29PM by PIB Bengaluru
ಮರಾಠಿ ಭಾಷೆಯು ಇತ್ತೀಚೆಗೆ ಸರ್ಕಾರದಿಂದ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿದ್ದು, ಇದನ್ನು ಮತ್ತಷ್ಟು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಫೆಬ್ರವರಿ 21ರಂದು ಸಂಜೆ 4:30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣವನ್ನು ಕೂಡಾ ಮಾಡಲಿದ್ದಾರೆ.
ಈ ಸಮ್ಮೇಳನವು ಫೆಬ್ರವರಿ 21ರಿಂದ 23ರವರೆಗೆ ನಡೆಯಲಿದ್ದು, ವೈವಿಧ್ಯಮಯ ಪ್ಯಾನಲ್ ಚರ್ಚೆಗಳು, ಪುಸ್ತಕ ಪ್ರದರ್ಶನಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಪ್ರಸಿದ್ಧ ಸಾಹಿತ್ಯ ವ್ಯಕ್ತಿಗಳೊಂದಿಗೆ ಸಂವಾದಾತ್ಮಕ ಅಧಿವೇಶನಗಳನ್ನು ಈ ಸಮ್ಮೇಳನದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನವು ಮರಾಠಿ ಸಾಹಿತ್ಯದ ಕಾಲಾತೀತ ಪ್ರಸ್ತುತತೆಯನ್ನು ಆಚರಿಸುವುದಲ್ಲದೆ, ಭಾಷಾ ಸಂರಕ್ಷಣೆ, ಅನುವಾದ ಮತ್ತು ಸಾಹಿತ್ಯ ಕೃತಿಗಳ ಮೇಲೆ ಡಿಜಿಟಲೀಕರಣದ ಪ್ರಭಾವ ಸೇರಿದಂತೆ ಸಮಕಾಲೀನ ಸಂವಾದದಲ್ಲಿ ಮರಾಠಿ ಭಾಷೆಯ ಪ್ರಾಮುಖ್ಯತೆಯನ್ನು ಅನ್ವೇಷಿಸುತ್ತದೆ.
71 ವರ್ಷಗಳ ನಂತರ ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ನಡೆಯುತ್ತಿರುವ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪುಣೆಯಿಂದ ದೆಹಲಿಗೆ ಸಾಂಕೇತಿಕ ಸಾಹಿತ್ಯ ರೈಲು ಪ್ರಯಾಣವೂ ಸೇರಿದೆ. ಈ ರೈಲು ಪ್ರಯಾಣದಲ್ಲಿ 1,200 ನಾಗರೀಕರು ಭಾಗವಹಿಸಲಿದ್ದು, ಇದು ಸಾಹಿತ್ಯದ ಏಕೀಕೃತ ಮನೋಭಾವವನ್ನು ಪ್ರದರ್ಶಿಸುತ್ತದೆ. ಇದರಲ್ಲಿ 2,600ಕ್ಕೂ ಹೆಚ್ಚು ಕವನಗಳು, 50 ಪುಸ್ತಕ ಬಿಡುಗಡೆಗಳು ಮತ್ತು 100 ಪುಸ್ತಕ ಮಳಿಗೆಗಳು ಸೇರಿವೆ. ದೇಶದ ವಿವಿಧ ಭಾಗಗಳಿಂದ ಖ್ಯಾತ ವಿದ್ವಾಂಸರು, ಲೇಖಕರು, ಕವಿಗಳು ಮತ್ತು ಸಾಹಿತ್ಯಾಸಕ್ತರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
*****
(Release ID: 2105232)
Visitor Counter : 10
Read this release in:
Bengali
,
Odia
,
Tamil
,
Malayalam
,
English
,
Urdu
,
Marathi
,
Hindi
,
Punjabi
,
Gujarati
,
Telugu