ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ ಅನಿಮೆ ಮತ್ತು ಮಂಗಾ ಸ್ಪರ್ಧೆ
ಭಾರತದಲ್ಲಿ ಅನಿಮೇಷನ್ ಮತ್ತು ಕಾಮಿಕ್ಸ್ ಗಾಗಿ ಹೆಚ್ಚುತ್ತಿರುವ ಉತ್ಸಾಹವನ್ನು ಆಚರಿಸುವುದು
Posted On:
17 FEB 2025 5:23PM by PIB Bengaluru
ಪರಿಚಯ
ವೇವ್ಸ್ ಅನಿಮೆ ಮತ್ತು ಮಂಗಾ ಸ್ಪರ್ಧೆ (WAM!) ಒಂದು ಕ್ರಿಯಾಶೀಲ ಉಪಕ್ರಮವಾಗಿದ್ದು, ಕ್ರಿಯೇಟರ್ಸ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಮೂಲಕ ಭಾರತದಲ್ಲಿ ಅನಿಮೆ ಮತ್ತು ಮಂಗಾದ ಬಗ್ಗೆ ಹೆಚ್ಚುತ್ತಿರುವ ಉತ್ಸಾಹವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಭಾರತೀಯ ಮಾಧ್ಯಮ ಮತ್ತು ಮನರಂಜನಾ ಸಂಘ (ಎಂಇಎಐ) ಸಹಯೋಗದೊಂದಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಆಯೋಜಿಸಿರುವ ವ್ಹಾಮ್! ಭಾರತೀಯ ಮತ್ತು ಜಾಗತಿಕ ಪ್ರೇಕ್ಷಕರಿಗೆ ಜನಪ್ರಿಯ ಜಪಾನೀ ಶೈಲಿಗಳ ಸ್ಥಳೀಯ ರೂಪಾಂತರಗಳನ್ನು ಅಭಿವೃದ್ಧಿಪಡಿಸಲು ಕಲಾವಿದರನ್ನು ಪ್ರೋತ್ಸಾಹಿಸುತ್ತದೆ. ಸ್ಪರ್ಧೆಯು ಪ್ರಕಟಣೆ, ವಿತರಣೆ ಮತ್ತು ಉದ್ಯಮದ ಮಾನ್ಯತೆಗೆ ಅವಕಾಶಗಳೊಂದಿಗೆ ಕಲಾತ್ಮಕ ಅಭಿವ್ಯಕ್ತಿಯನ್ನು ಬೆಳೆಸುತ್ತದೆ ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಪೋಷಿಸುತ್ತದೆ. ಸ್ಪರ್ಧೆಯು 11 ನಗರಗಳಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ, ಇದು ಮುಂಬೈನಲ್ಲಿ ವೇವ್ಸ್ 2025 ರಲ್ಲಿ ನಡೆಯುವ ಭವ್ಯವಾದ ರಾಷ್ಟ್ರೀಯ ಅಂತಿಮ ಸ್ಪರ್ಧೆಯಲ್ಲಿ ಮುಕ್ತಾಯಗೊಳ್ಳುತ್ತದೆ.

ವ್ಹಾಮ್!, ಮೇ 1 ರಿಂದ 4, 2025 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ ನಲ್ಲಿ ನಡೆಯಲಿರುವ ವಿಶ್ವ ಆಡಿಯೋ ವಿಷುಯಲ್ & ಎಂಟರ್‌ಟೈನ್‌ಮೆಂಟ್ ಶೃಂಗಸಭೆ (ವೇವ್ಸ್) ಅಡಿಯಲ್ಲಿ ಪ್ರಮುಖ ಉಪಕ್ರಮವಾದ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ನ ಭಾಗವಾಗಿದೆ. ವೇವ್ಸ್ ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಚರ್ಚೆ, ಸಹಯೋಗ ಮತ್ತು ನಾವೀನ್ಯತೆಗಾಗಿ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಹೊಸ ಅವಕಾಶಗಳನ್ನು ಅನ್ವೇಷಿಸಲು ಮತ್ತು ಕ್ಷೇತ್ರದ ಭವಿಷ್ಯವನ್ನು ರೂಪಿಸಲು ಜಾಗತಿಕ ಪಾಲುದಾರರನ್ನು ಒಟ್ಟುಗೂಡಿಸುತ್ತದೆ. ವೇವ್ಸ್ ನ ಕೇಂದ್ರಬಿಂದುವಾಗಿರುವ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ವಿಶ್ವಾದ್ಯಂತ 70,000 ಕ್ಕೂ ಹೆಚ್ಚು ನೋಂದಣಿಗಳನ್ನು ಕಂಡಿದ್ದು, ಉದಯೋನ್ಮುಖ ಪ್ರತಿಭೆಗಳಿಗೆ ತಮ್ಮ ಕೆಲಸವನ್ನು ಪ್ರದರ್ಶಿಸಲು ಜಾಗತಿಕ ವೇದಿಕೆಯನ್ನು ಒದಗಿಸಿದೆ. ವ್ಹಾಮ್! ನೊಂದಿಗೆ, ಭಾರತವು ಅನಿಮೆ ಮತ್ತು ಮಂಗಾಗೆ ಒಂದು ರೋಮಾಂಚಕ ಕೇಂದ್ರವಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತದೆ, ಕಲಾತ್ಮಕ ಸಂಪ್ರದಾಯಗಳನ್ನು ಸಮಕಾಲೀನ ಕಥೆ ಹೇಳುವಿಕೆಯೊಂದಿಗೆ ಸಂಯೋಜಿಸುತ್ತದೆ.
ಸ್ಪರ್ಧೆಯ ವಿಭಾಗಗಳು ಮತ್ತು ವರ್ಗಗಳು

ಅರ್ಹತೆಯ ಮಾನದಂಡಗಳು

ಕಾರ್ಯಕ್ರಮಗಳ ವೇಳಾಪಟ್ಟಿ
ದಿನಾಂಕ
|
ನಗರ
|
ಸ್ಥಳ
|
ನೋಂದಣಿ
|
22ನೇ ನವೆಂಬರ್, 2024
|
ಗುವಾಹಟಿ
|
NEDFi ಕನ್ವೆನ್ಷನ್ ಸೆಂಟರ್
|
ಮುಕ್ತಾಯವಾಗಿದೆ
|
24ನೇ ನವೆಂಬರ್, 2024
|
ಕೋಲ್ಕತ್ತಾ
|
ಹೆರಿಟೇಜ್ ಶಾಲೆ
|
ಮುಕ್ತಾಯವಾಗಿದೆ
|
26ನೇ ನವೆಂಬರ್, 2024
|
ಭುವನೇಶ್ವರ
|
ಶ್ರೀ ಶ್ರೀ ವಿಶ್ವವಿದ್ಯಾಲಯ
|
ಮುಕ್ತಾಯವಾಗಿದೆ
|
28ನೇ ನವೆಂಬರ್, 2024
|
ವಾರಾಣಸಿ
|
ಸನ್ ಬೀಮ್ ಸನ್ ಸಿಟಿ ಶಾಲೆ
|
ಮುಕ್ತಾಯವಾಗಿದೆ
|
30ನೇ ನವೆಂಬರ್, 2024
|
ದೆಹಲಿ
|
ಐಐಎಂಸಿ, ವಸಂತ್ ಕುಂಜ್
|
ಮುಕ್ತಾಯವಾಗಿದೆ
|
ಟಿಬಿಡಿ
|
ಬೆಂಗಳೂರು
|
ಟಿಬಿಡಿ
|
Click Here
|
ಟಿಬಿಡಿ
|
ಮುಂಬೈ
|
ಟಿಬಿಡಿ
|
Click Here
|
ಟಿಬಿಡಿ
|
ಅಹಮದಾಬಾದ್
|
ಟಿಬಿಡಿ
|
Click Here
|
ಟಿಬಿಡಿ
|
ನಾಗ್ಪುರ
|
ಟಿಬಿಡಿ
|
Click Here
|
ಟಿಬಿಡಿ
|
ಹೈದರಾಬಾದ್
|
ಟಿಬಿಡಿ
|
Click Here
|
ಟಿಬಿಡಿ
|
ಚೆನ್ನೈ
|
ಟಿಬಿಡಿ
|
Click Here
|
ಮೇ 1 - 4, 2025
|
ಅಂತಿಮ ಸ್ಪರ್ಧೆ
|
ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ & ಜಿಯೋ ವರ್ಲ್ಡ್ ಗಾರ್ಡನ್ಸ್
|
ರಾಜ್ಯ ಮಟ್ಟದ ವಿಜೇತರು
|
ಭಾಗವಹಿಸಲು ಮಾರ್ಗಸೂಚಿಗಳು:
- ಎಲ್ಲಾ ವಿಭಾಗಗಳಿಗೂ ಸ್ಕ್ರಿಪ್ಟ್‌ಗಳನ್ನು ಸ್ಥಳದಲ್ಲೇ ಒದಗಿಸಲಾಗುವುದು.
- ಮಂಗಾ ವಿಭಾಗದ ಸಲ್ಲಿಕೆಗಳು ಮಾತ್ರ ಭೌತಿಕ ಸ್ವರೂಪದಲ್ಲಿರಬಹುದು. ಇತರ ಎಲ್ಲಾ ವಿಭಾಗಗಳಿಗೆ ಡಿಜಿಟಲ್ ಸಲ್ಲಿಕೆಗಳು ಬೇಕಾಗುತ್ತವೆ.
- ಭಾಗವಹಿಸುವವರು ನಿರ್ದಿಷ್ಟಪಡಿಸಿದ ಗಡುವು ಮತ್ತು ಸ್ವರೂಪದಲ್ಲಿ ತಮ್ಮ ಕೆಲಸವನ್ನು ರಚಿಸಿ ಸಲ್ಲಿಸಬೇಕು:
- ಮಂಗಾ (ವಿದ್ಯಾರ್ಥಿ ಮತ್ತು ವೃತ್ತಿಪರ): 2 ಪುಟಗಳು, ತಲಾ ಕನಿಷ್ಠ 4 ಫಲಕಗಳು, ಶಾಯಿ ಮತ್ತು ಬಣ್ಣ (ಭೌತಿಕ/ಡಿಜಿಟಲ್).
- ವೆಬ್ ಟೂನ್ (ವಿದ್ಯಾರ್ಥಿ): ಶಾಯಿ ಮತ್ತು ಬಣ್ಣದೊಂದಿಗೆ 7 ಫಲಕಗಳು.
- ವೆಬ್ ಟೂನ್ (ವೃತ್ತಿಪರ): ಶಾಯಿ ಮತ್ತು ಬಣ್ಣದೊಂದಿಗೆ 10 ಫಲಕಗಳು.
- ಅನಿಮೆ (ವಿದ್ಯಾರ್ಥಿ): ಒದಗಿಸಲಾದ ಸ್ಕ್ರಿಪ್ಟ್ ಆಧರಿಸಿ 10 ಸೆಕೆಂಡುಗಳ ಅನಿಮೇಷನ್.
- ಅನಿಮೆ (ವೃತ್ತಿಪರ): ಒದಗಿಸಲಾದ ಸ್ಕ್ರಿಪ್ಟ್ ಆಧರಿಸಿ 15 ಸೆಕೆಂಡುಗಳ ಅನಿಮೇಷನ್.
ಸ್ಪರ್ಧೆಯ ವೇಳಾಪಟ್ಟಿ ಮತ್ತು ಬಹುಮಾನಗಳು
- ಎಲ್ಲಾ ಸ್ಪರ್ಧೆಗಳು ಆಫ್‌ಲೈನ್ ನಲ್ಲಿ ನಡೆಯಲಿವೆ; ಭಾಗವಹಿಸುವವರು ಖುದ್ದಾಗಿ ಹಾಜರಾಗಬೇಕು.
- ನೋಂದಣಿ ಬೆಳಿಗ್ಗೆ 9:00 ಗಂಟೆಗೆ ಪ್ರಾರಂಭವಾಗುತ್ತದೆ, ನಂತರ ಬೆಳಿಗ್ಗೆ 9:30 ಕ್ಕೆ ಸಂಕ್ಷಿಪ್ತ ವಿವರಣೆ ಇರುತ್ತದೆ.
- ಸ್ಪರ್ಧೆಯು ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ನಡೆಯಲಿದೆ.
- ವೇಷಭೂಷಣ ಸ್ಪರ್ಧೆಗಳು ಮತ್ತು ಇತರ ಪ್ರದರ್ಶನಗಳು ಅದೇ ದಿನ ಸಂಜೆ 6:00 ರಿಂದ ರಾತ್ರಿ 8:00 ರವರೆಗೆ ನಡೆಯಲಿವೆ.
- ವ್ಯಾಮ್! ಅಂತಿಮ ಸ್ಪರ್ಧೆಯು ಮೇ 1 ರಿಂದ 4, 2025 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್ ನಲ್ಲಿ ನಡೆಯುವ ವೇವ್ಸ್ ಶೃಂಗಸಭೆಯಲ್ಲಿ ನಡೆಯಲಿದೆ.
- ವಿಜೇತರು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಬೆಂಬಲದೊಂದಿಗೆ ಅನಿಮೆ ಜಪಾನ್ ಮತ್ತು ಇತರ ಅಂತರರಾಷ್ಟ್ರೀಯ ಕಾರ್ಯಕ್ರಮಗಳಿಗೆ ಸಂಪೂರ್ಣ ವೆಚ್ಚ ಪಾವತಿಸಿದ ಪ್ರವಾಸಗಳಿಗೆ ಅವಕಾಶವನ್ನು ಪಡೆಯುತ್ತಾರೆ.
ವ್ಯಾಮ್! ವೇಷಭೂಷಣ (ಕಾಸ್ ಪ್ಲೇ) ಸ್ಪರ್ಧೆ
ವ್ಯಾಮ್! ವೇಷಭೂಷಣ ಸ್ಪರ್ಧೆಯು ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ವಿದೇಶೀ ಭಾಗವಹಿಸುವವರು ಸೇರಿದಂತೆ ಎಲ್ಲ ವ್ಯಕ್ತಿಗಳಿಗೆ ಮುಕ್ತವಾಗಿದೆ, ಇದಕ್ಕೆ ಯಾವುದೇ ನೋಂದಣಿ ಶುಲ್ಕವಿಲ್ಲ. ವೇಷಭೂಷಣ ಸ್ಪರ್ಧೆಯು ಅನಿಮೆ, ಮಂಗಾ, ಗೇಮಿಂಗ್ ಅಥವಾ ಭಾರತೀಯ ಕಾಮಿಕ್ಸ್ ನ ಪಾತ್ರಗಳನ್ನು ಆಧರಿಸಿರಬೇಕು, ಸೃಜನಶೀಲತೆ ಮತ್ತು ಸ್ವಂತಿಕೆಯನ್ನು ಪ್ರೋತ್ಸಾಹಿಸಬೇಕು. ವೇಷಭೂಷಣಗಳು ಮತ್ತು ಪರಿಕರಗಳು ಸ್ವಯಂ ನಿರ್ಮಿತವಾಗಿರಬೇಕು, ನಿರ್ಮಾಣ ಕುಶಲತೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ, ಆದರೆ ಪರಿಕರಗಳು ಮತ್ತು ಆಯುಧಗಳು ಕಾರ್ಯನಿರ್ವಹಿಸದಂತಿರಬೇಕು ಮತ್ತು ಕಾರ್ಯಕ್ರಮ ಪೂರ್ವ ತಪಾಸಣೆಯ ಸಮಯದಲ್ಲಿ ಅನುಮತಿ ಪಡೆಯಬೇಕು. ಭಾಗವಹಿಸುವವರು ಅನರ್ಹತೆಗೆ ಕಾರಣವಾಗುವ ಯಾವುದೇ ಆಕ್ರಮಣಕಾರಿ ನಡವಳಿಕೆಯನ್ನು ತೋರಬಾರದು. ತೀರ್ಪು ವೇಷಭೂಷಣ ನಿಖರತೆ, ನಿರ್ಮಾಣ ಕುಶಲತೆ, ಕಾರ್ಯಕ್ಷಮತೆ, ಸೃಜನಶೀಲತೆ, ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆ ಮತ್ತು ಭಾಗವಹಿಸುವವರು ತಮ್ಮ ಪಾತ್ರ ಅಥವಾ ವೇಷಭೂಷಣದ ಕುರಿತು ಪ್ರಶ್ನೆಗಳಿಗೆ ಉತ್ತರಿಸಬಹುದಾದ ಸಂವಹನವನ್ನು ಆಧರಿಸಿರುತ್ತದೆ. ಪ್ರತಿಯೊಬ್ಬ ಪ್ರದರ್ಶಕನು ಪ್ರದರ್ಶನಕ್ಕಾಗಿ 90 ಸೆಕೆಂಡುಗಳು ಮತ್ತು ಪರಿಚಯ ಮತ್ತು ಸಂವಹನಕ್ಕಾಗಿ 1 ನಿಮಿಷವನ್ನು ಹೊಂದಿರುತ್ತಾನೆ, ತೀರುಗಾರರ ನಿರ್ಧಾರಗಳು ಅಂತಿಮವಾಗಿರುತ್ತವೆ. ಅಗ್ರ ಮೂರು ವೇಷಭೂಷಣ ಸ್ಪರ್ಧಿಗಳು ನಗದು ಬಹುಮಾನಗಳನ್ನು ಪಡೆಯುತ್ತಾರೆ ಮತ್ತು ಎಲ್ಲಾ ಭಾಗವಹಿಸುವವರಿಗೆ ಇ-ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಉಲ್ಲೇಖಗಳು:
*****
(Release ID: 2104217)
Visitor Counter : 28