ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಜಾರ್ಗಸ್ ಯುದ್ಧ ಸ್ಮಾರಕಕ್ಕೆ ಪ್ರಧಾನಮಂತ್ರಿ ಮತ್ತು ಫ್ರಾನ್ಸ್ ಅಧ್ಯಕ್ಷರ ಭೇಟಿ

Posted On: 12 FEB 2025 4:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಬೆಳಗ್ಗೆ ಮಾರ್ಸಿಲ್ಲೆ ನಲ್ಲಿರುವ ಮಜಾರ್ಗಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು ಮತ್ತು ಮೊದಲ ಮತ್ತು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು. ಉಭಯ ನಾಯಕರು ಮಡಿದವರ ತ್ಯಾಗದ ಗೌರವಾರ್ಥವಾಗಿ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು.

ಯುರೋಪ್ ನಲ್ಲಿ ಶಾಂತಿಗಾಗಿ ಹೋರಾಡಿದ ಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗದ ಇತಿಹಾಸವನ್ನು ಮಜಾರ್ಗಸ್ ಯುದ್ಧ ಸ್ಮಾರಕ ಸಂರಕ್ಷಿಸಿದೆ. ಅವರ ಸಾಹಸಗಾಥೆಯು ಅನೇಕರನ್ನು ಪ್ರೇರೇಪಿಸುತ್ತದೆ. ಈ ಸ್ಮಾರಕ ಭಾರತ-ಫ್ರಾನ್ಸ್ ಸಂಬಂಧಗಳನ್ನು ಪೋಷಿಸುವ ಜನರ ನಡುವಿನ ಆಳ ಬಾಂಧವ್ಯದ ಸಂಕೇತವಾಗಿದೆ.

 

*****


(Release ID: 2102391) Visitor Counter : 39