ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

14ನೇ ಭಾರತ-ಫ್ರಾನ್ಸ್ ಸಿಇಒ ಫೋರಂ ಉದ್ದೇಶಿಸಿ ಪ್ರಧಾನಮಂತ್ರಿ ಯವರಿಂದ ಭಾಷಣ

Posted On: 12 FEB 2025 12:16AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಪ್ಯಾರಿಸ್‌ ನಲ್ಲಿ 14ನೇ ಭಾರತ-ಫ್ರಾನ್ಸ್ ಸಿಇಒ ಫೋರಂ ಅನ್ನು ಉದ್ದೇಶಿಸಿ ಜಂಟಿಯಾಗಿ ಮಾತನಾಡಿದರು. ರಕ್ಷಣೆ, ಏರೋಸ್ಪೇಸ್, ​​ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಮೂಲಸೌಕರ್ಯ, ಸುಧಾರಿತ ಉತ್ಪಾದನೆ, ಕೃತಕ ಬುದ್ಧಿಮತ್ತೆ, ಜೀವನ-ವಿಜ್ಞಾನ, ಕ್ಷೇಮ ಮತ್ತು ಜೀವನಶೈಲಿ ಮತ್ತು ಆಹಾರ ಮತ್ತು ಆತಿಥ್ಯ ಮುಂತಾದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ, ಎರಡೂ ಕಡೆಯ ಕಂಪನಿಗಳ ವೈವಿಧ್ಯಮಯ ಗುಂಪಿನ ಸಿಇಒಗಳನ್ನು ಫೋರಂ ಒಟ್ಟುಗೂಡಿಸಿತು.

ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಬೆಳೆಯುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಮತ್ತು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಗೆ ನೀಡಿದ ವೇಗವನ್ನು ಪ್ರಸ್ತಾಪಿಸಿದರು. ಸ್ಥಿರ ರಾಜಕೀಯ ಮತ್ತು ಊಹಿಸಬಹುದಾದ ನೀತಿ ಪರಿಸರ ವ್ಯವಸ್ಥೆಯ ಆಧಾರದ ಮೇಲೆ ಆದ್ಯತೆಯ ಜಾಗತಿಕ ಹೂಡಿಕೆ ತಾಣವಾಗಿ ಭಾರತದ ಆಕರ್ಷಣೆಯನ್ನು ಅವರು ಎತ್ತಿ ತೋರಿಸಿದರು. ಇತ್ತೀಚಿನ ಬಜೆಟ್‌ನಲ್ಲಿ ಘೋಷಿಸಲಾದ ಸುಧಾರಣೆಗಳನ್ನು ಚರ್ಚಿಸಿದ ಪ್ರಧಾನಮಂತ್ರಿಯವರು, ವಿಮಾ ಕ್ಷೇತ್ರವು ಈಗ ಶೇ.100 ಎಫ್‌ ಡಿ ಐ ಗೆ ಮುಕ್ತವಾಗಿದೆ ಮತ್ತು ನಾಗರಿಕ ಪರಮಾಣು ಶಕ್ತಿ ವಲಯವು ಎಸ್‌ ಎಂ ಆರ್ ಮತ್ತು ಎ ಎಂ ಆರ್‌ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿ ಖಾಸಗಿ ಸಹಭಾಗಿತ್ವಕ್ಕೆ ಮುಕ್ತವಾಗಿದೆ ಎಂದು ಹೇಳಿದರು; ಕಸ್ಟಮ್ಸ್ ಸುಂಕದ ದರ ರಚನೆಯನ್ನು ತರ್ಕಬದ್ಧಗೊಳಿಸಲಾಗಿದೆ ಮತ್ತು ಜೀವನವನ್ನು ಸುಲಭಗೊಳಿಸಲು, ಸರಳ ಆದಾಯ ತೆರಿಗೆ ಸಂಹಿತೆಯನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು. ಸುಧಾರಣೆಗಳನ್ನು ಮುಂದುವರಿಸುವ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸಿದ ಅವರು, ನಂಬಿಕೆ ಆಧಾರಿತ ಆರ್ಥಿಕ ಆಡಳಿತವನ್ನು ಸ್ಥಾಪಿಸಲು ನಿಯಂತ್ರಕ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು. ಈ ಉತ್ಸಾಹದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ 40,000 ಕ್ಕೂ ಹೆಚ್ಚು ಅನುಸರಣೆಗಳನ್ನು ತರ್ಕಬದ್ಧಗೊಳಿಸಲಾಗಿದೆ ಎಂದು ಅವರು ಹೇಳಿದರು.

ರಕ್ಷಣೆ, ಇಂಧನ, ಹೆದ್ದಾರಿಗಳು, ನಾಗರಿಕ ವಿಮಾನಯಾನ, ಬಾಹ್ಯಾಕಾಶ, ಆರೋಗ್ಯ ರಕ್ಷಣೆ, ಫಿನ್‌ಟೆಕ್ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತದ ಬೆಳವಣಿಗೆಯ ಕಥೆಯು ನೀಡುವ ಅಪಾರ ಅವಕಾಶಗಳನ್ನು ಪರಿಗಣಿಸಲು ಫ್ರೆಂಚ್ ಕಂಪನಿಗಳನ್ನು ಪ್ರಧಾನಿ ಆಹ್ವಾನಿಸಿದರು. ಭಾರತದ ಕೌಶಲ್ಯಗಳು, ಪ್ರತಿಭೆ ಮತ್ತು ನಾವೀನ್ಯತೆ ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ಎಐ, ಸೆಮಿಕಂಡಕ್ಟರ್, ಕ್ವಾಂಟಮ್, ನಿರ್ಣಾಯಕ ಖನಿಜಗಳು ಮತ್ತು ಹೈಡ್ರೋಜನ್ ಮಿಷನ್‌ ಗಳಲ್ಲಿ ಜಾಗತಿಕ ಮೆಚ್ಚುಗೆ ಮತ್ತು ಆಸಕ್ತಿಯನ್ನು ಗಮನಿಸಿದ ಅವರು ಪರಸ್ಪರ ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಭಾರತದೊಂದಿಗೆ ಪಾಲುದಾರರಾಗಲು ಫ್ರೆಂಚ್ ಉದ್ಯಮಗಳಿಗೆ ಕರೆ ನೀಡಿದರು. ಅವರು ಈ ಕ್ಷೇತ್ರಗಳಲ್ಲಿ ಸಕ್ರಿಯ ತೊಡಗಿಸಿಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ನಾವೀನ್ಯತೆ, ಹೂಡಿಕೆ ಮತ್ತು ತಂತ್ರಜ್ಞಾನ-ಚಾಲಿತ ಪಾಲುದಾರಿಕೆಗಳನ್ನು ಉತ್ತೇಜಿಸಲು ಎರಡೂ ದೇಶಗಳ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಧಾನಿಯವರ ಸಂಪೂರ್ಣ ಮಾತುಗಳನ್ನು ಇಲ್ಲಿ (here) ನೋಡಬಹುದು.

ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರೊಂದಿಗೆ ಫ್ರಾನ್ಸ್‌ ನ ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಜೀನ್-ನೊಯೆಲ್ ಬ್ಯಾರೊಟ್ ಮತ್ತು ಫ್ರಾನ್ಸ್‌ ನ ಆರ್ಥಿಕತೆ, ಹಣಕಾಸು ಮತ್ತು ಕೈಗಾರಿಕೆ ಮತ್ತು ಡಿಜಿಟಲ್ ಸಾರ್ವಭೌಮತ್ವದ ಸಚಿವ ಶ್ರೀ ಎರಿಕ್ ಲೊಂಬಾರ್ಡ್ ಕೂಡ ಫೋರಂ ಉದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಎರಡೂ ಕಡೆಯ ಸಿಇಒಗಳು:

ಭಾರತದ ಪರ:

 

ಕಂಪನಿ ಹೆಸರು (ಕ್ಷೇತ್ರ)

ಹೆಸರು ಮತ್ತು ಹುದ್ದೆ

  1.  

ಜುಬಿಲಂಟ್ ಫುಡ್‌ವರ್ಕ್ಸ್/ಜುಬಿಲಂಟ್ ಲೈಫ್ ಸೈನ್ಸಸ್, ಆಹಾರ ಮತ್ತು ಪಾನೀಯ

ಹರಿ ಭಾರ್ತಿಯಾ, ಸಹ-ಅಧ್ಯಕ್ಷರು ಮತ್ತು ನಿರ್ದೇಶಕರು

  1.  

ಸಿಐಐ

ಚಂದ್ರಜಿತ್ ಬ್ಯಾನರ್ಜಿ, ಮಹಾನಿರ್ದೇಶಕರು

  1.  

ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL), ರೈಲ್ವೇ ಮತ್ತು ಮೂಲಸೌಕರ್ಯ

ಉಮೇಶ್ ಚೌಧರಿ, ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು

  1.  

ಭಾರತ್ ಲೈಟ್ & ಪವರ್ ಪ್ರೈವೇಟ್ ಲಿಮಿಟೆಡ್, (ನವೀಕರಿಸಬಹುದಾದ ಇಂಧನ)

ತೇಜ್‌ಪ್ರೀತ್ ಚೋಪ್ರಾ, ಅಧ್ಯಕ್ಷರು ಮತ್ತು ಸಿಇಒ

  1.  

ಪಿ ಮಫತ್‌ಲಾಲ್ ಗ್ರೂಪ್, ಜವಳಿ ಮತ್ತು ಕೈಗಾರಿಕಾ ಉತ್ಪನ್ನಗಳು

ವಿಶಾದ್ ಮಫತ್‌ಲಾಲ್, ಅಧ್ಯಕ್ಷರು

  1.  

ಬೋಟ್, ಗ್ರಾಹಕ ಎಲೆಕ್ಟ್ರಾನಿಕ್ಸ್ (ವೇರಬಲ್ಸ್)

ಅಮನ್ ಗುಪ್ತಾ, ಸಹ-ಸಂಸ್ಥಾಪಕ‌

  1.  

ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಡಿಐಸಿಸಿಐ), ವ್ಯಾಪಾರ ವಕಾಲತ್ತು ಮತ್ತು ಸೇರ್ಪಡೆ

ಮಿಲಿಂದ್ ಕಾಂಬ್ಳೆ, ಸಂಸ್ಥಾಪಕರು/ಅಧ್ಯಕ್ಷರು

  1.  

ಸ್ಕೈರೂಟ್ ಏರೋಸ್ಪೇಸ್, ​​ಏರೋಸ್ಪೇಸ್ & ಬಾಹ್ಯಾಕಾಶ ಮತ್ತು ತಂತ್ರಜ್ಞಾನ

ಪವನ್ ಕುಮಾರ್ ಚಂದನ, ಸಹ ಸಂಸ್ಥಾಪಕರು

  1.  

ಅಗ್ನಿಕುಲ್, ​​ಏರೋಸ್ಪೇಸ್ & ಬಾಹ್ಯಾಕಾಶ ಮತ್ತು ತಂತ್ರಜ್ಞಾನ

ಶ್ರೀನಾಥ್ ರವಿಚಂದ್ರನ್, ಸಹ-ಸಂಸ್ಥಾಪಕರು ಮತ್ತು ಸಿಇಒ

  1.  

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್, ಏರೋಸ್ಪೇಸ್ ಮತ್ತು ರಕ್ಷಣೆ

ಸುಕರನ್ ಸಿಂಗ್, ವ್ಯವಸ್ಥಾಪಕ ನಿರ್ದೇಶಕರು

  1.  

ಯುಪಿಎಲ್ ಗ್ರೂಪ್, ಅಗ್ರೋಕೆಮಿಕಲ್ ಮತ್ತು ಕೃಷಿ ವ್ಯವಹಾರ

ವಿಕ್ರಮ್ ಶ್ರಾಫ್, ಉಪಾಧ್ಯಕ್ಷರು ಮತ್ತು ಸಹ-ಸಿಇಒ

  1.  

ಸುಲಾವೈನ್‌ ಯಾರ್ಡ್ಸ್‌, ಆಹಾರ ಮತ್ತು ಪಾನೀಯ

ರಾಜೀವ್ ಸಾಮಂತ್, ಸಿಇಒ

  1.  

ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಲಿಮಿಟೆಡ್, ಏರೋಸ್ಪೇಸ್ & ರಕ್ಷಣೆ ಮತ್ತು ಇಂಜಿನಿಯರಿಂಗ್

ಉದಯಂತ್ ಮಲ್ಹೋತ್ರಾ, ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರು

  1.  

ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ (TCE), ಇಂಜಿನಿಯರಿಂಗ್ ಮತ್ತು ಕನ್ಸಲ್ಟಿಂಗ್

ಅಮಿತ್ ಶರ್ಮಾ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ

  1.  

ನೈಕಾ, ಸೌಂದರ್ಯವರ್ಧಕಗಳು ಮತ್ತು ಗ್ರಾಹಕ ಸರಕುಗಳು

ಫಲ್ಗುಣಿ ನಯ್ಯರ್, ಸಿಇಒ

ಫ್ರೆಂಚ್ಪರ

 

ಕಂಪನಿ ಹೆಸರು (ಕ್ಷೇತ್ರ)

ಹೆಸರು ಮತ್ತು ಹುದ್ದೆ

1

ಏರ್ ಬಸ್, ಏರೋಸ್ಪೇಸ್ & ರಕ್ಷಣೆ

ಗಿಲ್ಲೌಮ್ ಫೌರಿ, ಸಿಇಒ

2

ಏರ್ ಲಿಕ್ವಿಡ್, ರಾಸಾಯನಿಕಗಳು, ಆರೋಗ್ಯರಕ್ಷಣೆ, ಇಂಜಿನಿಯರಿಂಗ್

ಫ್ರಾಂಕೋಯಿಸ್ ಜಾಕೋವ್, ಸಿಇಒ & ಏರ್ ಲಿಕ್ವಿಡ್ ಗ್ರೂಪ್‌ನ ನಿರ್ದೇಶಕರ ಮಂಡಳಿಯ ಸದಸ್ಯರು

3

ಬ್ಲಾಬ್ಲಾಕಾರ್, ಸಾರಿಗೆ, ಸೇವೆಗಳು

ನಿಕೋಲಸ್ ಬ್ರೂಸನ್, ಸಿಇಒ ಮತ್ತು ಸಹ-ಸಂಸ್ಥಾಪಕರು

4

ಕ್ಯಾಪ್ ಜೆಮಿನಿ ಗ್ರೂಪ್, ಮಾಹಿತಿ ತಂತ್ರಜ್ಞಾನ, ಇಂಜಿನಿಯರಿಂಗ್

ಐಮನ್‌ ಎಜ್ಜತ್‌, ಸಿಇಒ

5

ಡ್ಯಾನೋನ್, ಆಹಾರ ಮತ್ತು ಪಾನೀಯಗಳು

ಆಂಟೊಯಿನ್ ಡಿ ಸೇಂಟ್-ಆಫ್ರಿಕ್, ಸಿಇಒ

6

ಇಡಿಎಫ್, ಇಂಧನ, ವಿದ್ಯುತ್

ಲುಕ್ ರೆಮಾಂಟ್, ಅಧ್ಯಕ್ಷರು ಮತ್ತು ಸಿಇಒ

7

ಈಜಿಸ್ ಗ್ರೂಪ್, ಆರ್ಕಿಟೆಕ್ಚರ್ ಕನ್ಸ್ಟ್ರಕ್ಷನ್ ಇಂಜಿನಿಯರಿಂಗ್

ಲಾರೆಂಟ್ ಜರ್ಮೈನ್, ಸಿಇಒ

8

ಎನ್‌ ಜೈ ಗುಂಪು, ಇಂಧನ, ನವೀಕರಿಸಬಹುದಾದ ಇಂಧನ

ಕ್ಯಾಥರೀನ್ ಮ್ಯಾಕ್‌ಗ್ರೆಗರ್, ಸಿಇಒ ಮತ್ತು ಎಂಜಿಐಇ ಮಂಡಳಿಯ ಸದಸ್ಯರು

9

ಲೋರಿಯಲ್, ಸೌಂದರ್ಯವರ್ಧಕಗಳು ಮತ್ತು ಗ್ರಾಹಕ ಸರಕುಗಳು

ನಿಕೋಲಸ್ ಹಿರೋನಿಮಸ್, ಸಿಇಒ & ನಿರ್ದೇಶಕರ ಮಂಡಳಿಯ ಸದಸ್ಯರು

10

ಮಿಸ್ಟ್ರಲ್ ಎಐ, ಕೃತಕ ಬುದ್ಧಿಮತ್ತೆ

ಆರ್ಥರ್ ಮೆನ್ಷ್, ಸಿಇಒ ಮತ್ತು ಸಹ-ಸಂಸ್ಥಾಪಕರು

11

ನೇವಲ್ ಗ್ರೂಪ್, ರಕ್ಷಣೆ, ಹಡಗು ನಿರ್ಮಾಣ, ಇಂಜಿನಿಯರಿಂಗ್

ಪಿಯರೆ ಎರಿಕ್ ಪೊಮೆಲೆಟ್, ಅಧ್ಯಕ್ಷರು ಮತ್ತು ಸಿಇಒ

12

ಪೆರ್ನೋಡ್ ರಿಕಾರ್ಡ್, ಆಲ್ಕೋಹಾಲ್ ಪಾನೀಯಗಳು, ಎಫ್ ಎಂ ಸಿ ಜಿ

ಅಲೆಕ್ಸಾಂಡ್ರೆ ರಿಕಾರ್ಡ್, ಅಧ್ಯಕ್ಷರು ಮತ್ತು ಸಿಇಒ

13

ಸಫ್ರಾನ್, ಏರೋಸ್ಪೇಸ್ & ರಕ್ಷಣೆ

ಒಲಿವಿಯರ್ ಆಂಡ್ರೀಸ್, ಸಿಇಒ

14

ಸರ್ವರ್, ಫಾರ್ಮಾಸ್ಯುಟಿಕಲ್ಸ್, ಹೆಲ್ತ್ ಕೇರ್

ಒಲಿವಿಯರ್ ಲಾರೆಯು, ಅಧ್ಯಕ್ಷರು ಮತ್ತು ಸಿಇಒ

15

ಟೋಟಲ್‌ ಎನರ್ಜೀಸ್‌ ಎಸ್‌ ಇ, ಇಂಧನ

ಪ್ಯಾಟ್ರಿಕ್ ಪೌಯಾನ್ನೆ, ಅಧ್ಯಕ್ಷರು ಮತ್ತು ಸಿಇಒ

16

ವಿಕಾಟ್, ನಿರ್ಮಾಣ

ಗೈ ಸಿಡೋಸ್, ಅಧ್ಯಕ್ಷರು ಮತ್ತು ಸಿಇಒ

 

 

*****


(Release ID: 2102285) Visitor Counter : 40