ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ಯಾರಿಸ್‌ ನಲ್ಲಿ  ನಡೆದ ಎಐ ಆಕ್ಷನ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಮಾರೋಪ ಭಾಷಣ ಮಾಡಿದರು 

प्रविष्टि तिथि: 11 FEB 2025 6:25PM by PIB Bengaluru

"ಇಂದಿನ ಚರ್ಚೆಗಳು ಒಂದು ವಿಷಯವನ್ನು ಏಕತೆಯನ್ನು ಮೂಡಿಸಿವೆ - ಅದೆಂದರೆ, ಭಾಗವಹಿಸಿದ ಎಲ್ಲಾ ಮಧ್ಯಸ್ಥಗಾರರ ದೃಷ್ಟಿಕೋನದಲ್ಲಿ ಏಕತೆ ಮತ್ತು ಉದ್ದೇಶಗಳಲ್ಲಿ ಏಕತೆ ಇತ್ತು.

"ಎಐ ಫೌಂಡೇಶನ್" ಮತ್ತು "ಕೌನ್ಸಿಲ್ ಫಾರ್ ಸಸ್ಟೈನಬಲ್ ಎಐ" ಅನ್ನು ಸ್ಥಾಪಿಸುವ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಈ ಉಪಕ್ರಮಗಳಿಗಾಗಿ ನಾನು ಫ್ರಾನ್ಸ್ ಮತ್ತು ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಶ್ರೀ ಮ್ಯಾಕ್ರನ್ ಅವರನ್ನು ಅಭಿನಂದಿಸುತ್ತೇನೆ ಮತ್ತು ನಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡುತ್ತೇನೆ.

ನಾವು "ಎಐ ಗಾಗಿ ಜಾಗತಿಕ ಸಹಭಾಗಿತ್ವ" ವನ್ನು ನಿಜವಾಗಿಯೂ ಜಾಗತಿಕ ಸ್ವರೂಪದಲ್ಲಿ ಮಾಡಬೇಕು. ಇದು ಜಾಗತಿಕ ದಕ್ಷಿಣ ಮತ್ತು ಅದರ ಆದ್ಯತೆಗಳು, ಕಾಳಜಿಗಳು ಮತ್ತು ಅಗತ್ಯಗಳನ್ನು ಹೆಚ್ಚು ಹೆಚ್ಚು ಒಳಗೊಂಡಿರಬೇಕು.

ಈ ಆಕ್ಷನ್ ಶೃಂಗ ಸಭೆಯು ತೀವ್ರತೆಯ ವೇಗದ ಹಂತವನ್ನು ನಿರ್ಮಿಸಲು, ಮುಂದಿನ ಶೃಂಗಸಭೆಯನ್ನು ಆಯೋಜಿಸಲು ಭಾರತಕ್ಕೆ  ಬಹಳಷ್ಟು ಸಂತೋಷವಾಗುತ್ತದೆ.

ಧನ್ಯವಾದಗಳು." 

 

*****
 


(रिलीज़ आईडी: 2102036) आगंतुक पटल : 56
इस विज्ञप्ति को इन भाषाओं में पढ़ें: Odia , English , Khasi , Urdu , हिन्दी , Marathi , Bengali , Manipuri , Assamese , Punjabi , Gujarati , Tamil , Telugu , Malayalam