ಹಣಕಾಸು ಸಚಿವಾಲಯ
azadi ka amrit mahotsav

ಹವಾಮಾನ ಬದಲಾವಣೆ ಹೊಂದಾಣಿಕೆ, ಸ್ಥಿತಿಸ್ಥಾಪಕತ್ವ ಬೇಡಿಕೆ ಗುರಿಯಾಧಾರಿತ ನೀತಿ ಕ್ರಮಗಳ ರೂಪಿಸುವಿಕೆ  ಮತ್ತು ಸಾಕಷ್ಟು ಹಣಕಾಸು ಆಯ್ಕೆಗಳು: ಆರ್ಥಿಕ ಸಮೀಕ್ಷೆ 2024-25


2070ರ ವೇಳೆಗೆ ನಿವ್ವಳ ಶೂನ್ಯ: ವ್ಯಾಪಕ ಗ್ರಿಡ್ ಮೂಲಸೌಕರ್ಯ ಮತ್ತು ನಿರ್ಣಾಯಕ ಖನಿಜಗಳ ಸುರಕ್ಷಿತ ಮೂಲಗಳ ಮೇಲೆ  ಹೂಡಿಕೆ ಮಾಡುವುದು ಅನಿವಾರ್ಯ

ವರ್ಟಿಕಲ್ ಗಾರ್ಡನ್ (ಗೋಡೆಗಳ ಮೇಲೆ ಗಾರ್ಡನ್ ನಿರ್ಮಾಣ) ಗಳಂತಹ ಹೊಸ ನಗರ ಉಪಕ್ರಮಗಳ ಮಾರ್ಗಸೂಚಿಗಳನ್ನು ಸೇರಿಸಲು ಇಸಿಎಸ್ ಬಿ ಕೋಡ್ ನಲ್ಲಿ ವರ್ಧನೆಗಳನ್ನು ಆರ್ಥಿಕ ಸಮೀಕ್ಷೆ ಸೂಚಿಸುತ್ತದೆ

ಪರಮಾಣು ಶಕ್ತಿಯು ಪಳೆಯುಳಿಕೆ ಇಂಧನಗಳಿಗೆ ವಿಶ್ವಾಸಾರ್ಹ ಪರ್ಯಾಯವಾಗಿದೆ; ಸುಗಮ ಪರಿವರ್ತನೆಗೆ ಅನುಕೂಲವಾಗುವಂತೆ ಮುಂದಾಲೋಚನೆಯ ದೃಷ್ಟಿಕೋನದ ಅಗತ್ಯವಿದೆ

ಸುಧಾರಿತ ಅಲ್ಟ್ರಾ ಸೂಪರ್ ಕ್ರಿಟಿಕಲ್ ಪವರ್ ಪ್ಲಾಂಟ್ ಗಳಂತಹ ಕಡಿಮೆ-ಮಾಲಿನ್ಯ ಹೊರಸೂಸುವ ಉಷ್ಣ ವಿದ್ಯುತ್ ತಂತ್ರಜ್ಞಾನಗಳು ಇಂಧನ ಪರಿವರ್ತನೆಗೆ ಮುಖ್ಯ

ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳಿಗೆ ಸಂಬಂಧಿಸಿದ ಬ್ಯಾಟರಿ ಸಂಗ್ರಹಣೆ, ಮರುಬಳಕೆ ಮತ್ತು ತ್ಯಾಜ್ಯದ ಸುಸ್ಥಿರ ವಿಲೇವಾರಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಹ ನಿರ್ಣಾಯಕವಾಗಿದೆ

ಸಮಗ್ರ ಜಾಗೃತಿ ಅಭಿಯಾನದ ಮೂಲಕ 'ಮಿಷನ್ ಲೈಫ್' ಅನ್ನು ವ್ಯಾಪಕ ಸಾರ್ವಜನಿಕ ಆಂದೋಲನವನ್ನಾಗಿ ಮಾಡುವ ಅಗತ್ಯವಿದೆ: ಆರ್ಥಿಕ ಸಮೀಕ್ಷೆ 2024-25

Posted On: 31 JAN 2025 1:28PM by PIB Bengaluru

2047 ವೇಳೆಗೆ ವಿಕ್ಷಿತ್ ಭಾರತ್ ಆಗಬೇಕೆಂಬ ಭಾರತದ ಮಹತ್ವಾಕಾಂಕ್ಷೆಯು ಮೂಲಭೂತವಾಗಿ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ನೆಲೆಗೊಂಡಿದೆ. ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2024-25 ಆರ್ಥಿಕ ಸಮೀಕ್ಷೆಯಲ್ಲಿ ಇದು ಪ್ರತಿಬಿಂಬಿತವಾಗಿದೆ.

ಅತ್ಯಂತ ಕಡಿಮೆ ತಲಾ ಇಂಗಾಲದ ಹೊರಸೂಸುವಿಕೆಯನ್ನು ಹೊಂದಿದ್ದರೂ, ಭಾರತವು ಕೈಗೆಟುಕುವ ಇಂಧನ ಭದ್ರತೆಯನ್ನು ಮಾತ್ರವಲ್ಲದೆ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಮತ್ತು ಅಂತಿಮವಾಗಿ ಪರಿಸರ ಸುಸ್ಥಿರತೆಯನ್ನು ಖಾತ್ರಿಪಡಿಸುವ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಸಮೀಕ್ಷೆ ಉಲ್ಲೇಖಿಸಿದೆ.

2070 ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ

2070 ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಸಾಧಿಸಲು, ಭಾರತವು ವ್ಯಾಪಕ ಗ್ರಿಡ್ ಮೂಲಸೌಕರ್ಯ ಸುಧಾರಣೆಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಬೇಕಾಗಿದೆ ಮತ್ತು ಪರಿವರ್ತಕ ಬದಲಾವಣೆಗೆ ಅಗತ್ಯವಾದ ನಿರ್ಣಾಯಕ ಖನಿಜಗಳ ಮೂಲಗಳನ್ನು ಹೊಂದುವುದು ಅಗತ್ಯವಾಗಿದೆಎಂದು ಸಮೀಕ್ಷೆ ಹೇಳುತ್ತದೆ.

ಹವಾಮಾನ ಹಣಕಾಸು ಕುರಿತು ಸಿಒಪಿ 29 ರಲ್ಲಿ ಹೊಸ ಸಾಮೂಹಿಕ ಪರಿಮಾಣಾತ್ಮಕ ಗುರಿ (ಎನ್ಸಿಕ್ಯೂಜಿ) ಇತ್ತೀಚಿನ ಫಲಿತಾಂಶವು ಅಭಿವೃದ್ಧಿಶೀಲ ದೇಶಗಳಿಗೆ ಬೆಂಬಲದ ಸಾಧ್ಯತೆಯ ಬಗ್ಗೆ ಸ್ವಲ್ಪ ಆಶಾವಾದವನ್ನು ಮೂಡಿಸುತ್ತದೆ ಎಂದು ಸಮೀಕ್ಷೆಯ ದಾಖಲೆ ಉಲ್ಲೇಖಿಸಿದೆ. ಎನ್ಸಿಕ್ಯೂಜಿಯಾಗಿ 2035 ವೇಳೆಗೆ ವಾರ್ಷಿಕವಾಗಿ 300 ಬಿಲಿಯನ್ ಯುಎಸ್ಡಿ ಕ್ರೋಢೀಕರಣ ಗುರಿಯು 2030 ವೇಳೆಗೆ ಅಂದಾಜು ಅಗತ್ಯವಿರುವ 5.1-6.8 ಟ್ರಿಲಿಯನ್ ಡಾಲರಿನ ಮೊತ್ತದ  ಒಂದು ಭಾಗವಾಗಿದೆ, ಇದು ಹವಾಮಾನ ಬದಲಾವಣೆಯನ್ನು ಪರಿಹರಿಸುವ ಹೊರೆಯನ್ನು ಐತಿಹಾಸಿಕವಾಗಿ ಬಿಕ್ಕಟ್ಟಿಗೆ ಕೊಡುಗೆ ನೀಡದ ರಾಷ್ಟ್ರಗಳ ಮೇಲೆ ಅಸಮಾನವಾದ ರೀತಿಯಲ್ಲಿ ಹಾಕುತ್ತದೆ.

ಹೊಂದಾಣಿಕೆಯನ್ನು ಮುಂಚೂಣಿಗೆ ತರುವುದು

ಭಾರತಕ್ಕೆ ಹೊಂದಾಣಿಕೆ ಕಾರ್ಯತಂತ್ರಕ್ಕೆ ಆದ್ಯತೆಯ ಪ್ರಕಾರ, ಆರ್ಥಿಕ ಸಮೀಕ್ಷೆ 2024-25 ಭಾರತವು ಪ್ರಾದೇಶಿಕ ನಿರ್ದಿಷ್ಟತೆಗಳಿಗೆ ಅನುಗುಣವಾಗಿ ಬಹುಮುಖಿ ವಿಧಾನವನ್ನು ಅನುಸರಿಸುವ ಅಗತ್ಯವಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಇದು ನೀತಿ ಉಪಕ್ರಮಗಳು, ವಲಯ-ನಿರ್ದಿಷ್ಟ ಕಾರ್ಯತಂತ್ರಗಳು, ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಹೊಂದಾಣಿಕೆ ಪ್ರಯತ್ನಗಳಿಗೆ ಹಣಕಾಸು ಸಂಪನ್ಮೂಲಗಳನ್ನು ಕ್ರೋಢೀಕರಿಸುವುದನ್ನು ಒಳಗೊಂಡಿದೆ.

ಭಾರತದ ರಾಷ್ಟ್ರೀಯ ಹೊಂದಾಣಿಕೆ ಯೋಜನೆ (ಎನ್ಎಪಿ) ತಯಾರಿಕೆಯಲ್ಲಿ ನಡೆಯುತ್ತಿರುವ ಕೆಲಸವು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಿಕೆಯಾಗುವ ಮತ್ತು ಎಲ್ಲಾ ಪ್ರದೇಶಗಳು ಮತ್ತು ಕ್ಷೇತ್ರಗಳಿಗೆ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸುವ ಸಮಗ್ರ ಮತ್ತು ಅಂತರ್ಗತ ಎನ್ಎಪಿಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಎಂದು ಸಮೀಕ್ಷೆ ತಿಳಿಸಿದೆ.

ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ನಗರ ಪರಿಸರಕ್ಕಾಗಿ ಜೀವಂತ ಗೋಡೆಗಳು

ನಗರ ಶಾಖ ದ್ವೀಪ ಪರಿಣಾಮ, ಹೆಚ್ಚುತ್ತಿರುವ ಇಂಗಾಲದ ಹೊರಸೂಸುವಿಕೆ ಮತ್ತು ಹೆಚ್ಚಿದ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿರುವ ತ್ವರಿತ ನಗರೀಕರಣದ ಹಿನ್ನೆಲೆಯಲ್ಲಿ, ಆರ್ಥಿಕ ಸಮೀಕ್ಷೆ 2024-25 ಬಹಳ ಭರವಸೆಯ ಪರಿಹಾರವನ್ನು ಉಲ್ಲೇಖಿಸುತ್ತದೆ, ಮತ್ತು ಅದು ಆಕರ್ಷಣೆಯನ್ನೂ ಪಡೆಯುತ್ತಿದೆ, ಅದೆಂದರೆ ಲಂಬ ಉದ್ಯಾನಗಳು, ಇದನ್ನು ಜೀವಂತ ಗೋಡೆಗಳು ಅಥವಾ ಲಂಬ ಹಸಿರು ವ್ಯವಸ್ಥೆಗಳು (ವಿಜಿಎಸ್) ಎಂದೂ ಕರೆಯಲಾಗುತ್ತದೆ. ನಗರದಲ್ಲಿ ಮುಂಭಾಗಗಳನ್ನು ರೋಮಾಂಚಕ ಹಸಿರು ಭೂದೃಶ್ಯಗಳಾಗಿ ಪರಿವರ್ತಿಸುವ ಮೂಲಕ, ಲಂಬ ಉದ್ಯಾನಗಳು ಕಟ್ಟಡಗಳ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುತ್ತವೆ ಮತ್ತು ಪರಿಸರ ಸುಸ್ಥಿರತೆಗೆ ಕೊಡುಗೆ ನೀಡುತ್ತವೆ. ಮಾತ್ರವಲ್ಲ ಉಷ್ಣ ಕಾರ್ಯಕ್ಷಮತೆಯನ್ನು ಸುಧಾರಿಸುತ್ತವೆ, ಇಂಗಾಲವನ್ನು ಪ್ರತ್ಯೇಕಿಸುತ್ತವೆ ಮತ್ತು ಜನನಿಬಿಡ ನಗರಗಳಲ್ಲಿ ಜೀವವೈವಿಧ್ಯತೆಯನ್ನು ಬೆಳೆಸುತ್ತವೆ.

ಆರ್ಥಿಕ ಸಮೀಕ್ಷೆ 2024-25 ಇಂಧನ ಸಂರಕ್ಷಣೆ ಮತ್ತು ಸುಸ್ಥಿರ ಕಟ್ಟಡ ಸಂಹಿತೆಯಲ್ಲಿ (ಇಸಿಎಸ್ಬಿಸಿ) ಮತ್ತಷ್ಟು ವರ್ಧನೆಗಳ ಅವಕಾಶವನ್ನು ಉಲ್ಲೇಖಿಸುತ್ತದೆ, ಉದಾಹರಣೆಗೆ ನಗರ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಶಾಖ ದ್ವೀಪಗಳನ್ನು ತಗ್ಗಿಸಲು ಲಂಬ ಉದ್ಯಾನಗಳಿಗೆ ಸ್ಪಷ್ಟ ಮಾರ್ಗಸೂಚಿಗಳು.

ಶಕ್ತಿಯ/ಇಂಧನ  ಪರಿವರ್ತನೆ:

ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ನಿರ್ಮಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಮೀಕ್ಷೆಯು ಎತ್ತಿ ತೋರಿಸುತ್ತದೆಯಾದರೂ, ಕಾರ್ಯಸಾಧ್ಯವಾದ ಶೇಖರಣಾ ತಂತ್ರಜ್ಞಾನಗಳ ಕೊರತೆ ಮತ್ತು ಅಗತ್ಯ ಖನಿಜಗಳಿಗೆ ಸೀಮಿತ ಲಭ್ಯತೆಯಿಂದಾಗಿ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಮತ್ತು ಹೆಚ್ಚಳ ಮಾಡುವುದು ಸವಾಲಾಗಿ ಉಳಿದಿದೆ ಎಂದೂ ಅದು ಉಲ್ಲೇಖಿಸುತ್ತದೆ.

2024-25 ಆರ್ಥಿಕ ಸಮೀಕ್ಷೆಯು ಇಂಧನ ಪರಿವರ್ತನೆ ಮತ್ತು ಇಂಧನ ಭದ್ರತೆಯ ನಡುವಿನ ಘರ್ಷಣೆಯ ಬಗ್ಗೆ ಪ್ರಸ್ತಾಪಿಸುತ್ತದೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕ್ರಮಗಳಲ್ಲಿ ಸ್ಪಷ್ಟವಾಗಿ ಇದು ಗೋಚರಿಸುತ್ತದೆ ಎಂಬುದನ್ನೂ ಉಲ್ಲೇಖಿಸುತ್ತದೆ. ಪವನ ಮತ್ತು ಸೌರದಂತಹ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಪರಿವರ್ತನೆಯ ಮಿತಿಗಳನ್ನೂ ಅದು  ಸ್ಪಷ್ಟವಾಗಿ ಗೋಚರಿಸುತ್ತದೆ ಎಂದೂ ಹೇಳುತ್ತದೆ. ಇದು ಪಳೆಯುಳಿಕೆ ಇಂಧನಗಳು ಮತ್ತು ನವೀಕರಿಸಬಹುದಾದ ಇಂಧನಗಳನ್ನು ಒಳಗೊಂಡ ಸಂಕೀರ್ಣ ಇಂಧನ ವ್ಯವಸ್ಥೆಯನ್ನು ನಿರ್ವಹಿಸುವ 'ದಟ್ಟಣೆ ವೆಚ್ಚ' (ಹೆಚ್ಚುವರಿ ಬೇಡಿಕೆ ಇದ್ದಾಗ ಬಳಕೆದಾರರಿಗೆ ಸರ್ಚಾರ್ಜ್ ವಿಧಿಸುವ ವ್ಯವಸ್ಥೆ) ಬಗ್ಗೆ ಮಾತನಾಡುತ್ತದೆ.

ನಿಟ್ಟಿನಲ್ಲಿ, ಸಮೀಕ್ಷೆಯು ಭಾರತದ ಸುಸ್ಥಿರ ಅಭಿವೃದ್ಧಿ ಹಾದಿಯಲ್ಲಿ ಉಷ್ಣ ವಿದ್ಯುತ್ ಶಕ್ತಿಯ ಮಹತ್ವವನ್ನು ಗುರುತಿಸುತ್ತದೆ ಮತ್ತು ಆರ್ಥಿಕತೆಯ ಹೊರಹರಿಯುವಿಕೆಯ ತೀವ್ರತೆಯನ್ನು ಕಡಿಮೆ ಮಾಡಲು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಸೂಪರ್ ಕ್ರಿಟಿಕಲ್ (ಎಸ್ಸಿ), ಅಲ್ಟ್ರಾ-ಸೂಪರ್-ಕ್ರಿಟಿಕಲ್ (ಯುಎಸ್ಸಿ) ಮತ್ತು ಇತ್ತೀಚೆಗೆ ಅಭಿವೃದ್ಧಿಪಡಿಸಿದ ಸುಧಾರಿತ ಅಲ್ಟ್ರಾ ಸೂಪರ್ ಕ್ರಿಟಿಕಲ್ (ಎಯುಎಸ್ಸಿ) ತಂತ್ರಜ್ಞಾನಗಳನ್ನು ಬಳಸುವ ಮೂಲಕ ಕಲ್ಲಿದ್ದಲಿನ ಸಮರ್ಥ ಬಳಕೆಯನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿಹೇಳುತ್ತದೆ.
 

ಪರಮಾಣು ಶಕ್ತಿ: ವಿಶ್ವಾಸಾರ್ಹ ಪರ್ಯಾಯ

ಪರಮಾಣು ಶಕ್ತಿಯು ಪರಿಣಾಮಕಾರಿ ಮತ್ತು ಕಡಿಮೆ ಹಸಿರುಮನೆ ಅನಿಲ ಹೊರಸೂಸುವ ಶಕ್ತಿಯ ಮೂಲವಾಗಿದ್ದು, ಇದು ಪಳೆಯುಳಿಕೆ ಇಂಧನಗಳಿಗೆ ಹೆಚ್ಚು ಉದಯೋನ್ಮುಖ ಮತ್ತು ವಿಶ್ವಾಸಾರ್ಹ ಪರ್ಯಾಯವಾಗಿದೆ ಎಂಬ ಅಂಶವನ್ನು ಸಮೀಕ್ಷೆ ಮುಂದಿಟ್ಟಿದೆ. ಸಂಭಾವ್ಯ ಸವಾಲುಗಳನ್ನು ಮುಂಚಿತವಾಗಿ ಎದುರಿಸಲು ಇದು ಮುಂದಾಲೋಚನೆಯ ದೃಷ್ಟಿಕೋನವನ್ನು ಸೂಚಿಸುತ್ತದೆ ಮತ್ತು ಸುಗಮ ಪರಿವರ್ತನೆಯನ್ನು ಸಾಧಿಸುವುದು ಈ  ಕಾಲಘಟ್ಟದ  ಅಗತ್ಯವಾಗಿದೆ.

ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳನ್ನು, ವಿಶೇಷವಾಗಿ ಸೌರ ಫಲಕಗಳನ್ನು ವಿಲೇವಾರಿ ಮಾಡುವ ಸವಾಲಿನ ಬಗ್ಗೆಯೂ ಇದು ಮಾತನಾಡುತ್ತದೆ, ಪರಿಸರ ನೀತಿಗಳು ಹೇಗೆ ಸಂಕೀರ್ಣ ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ಬಹಿರಂಗಪಡಿಸುತ್ತದೆ. ಪರಿಸರ ವ್ಯವಸ್ಥೆಗಳು ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಸಂಭಾವ್ಯ ನಕಾರಾತ್ಮಕ ಪರಿಣಾಮಗಳನ್ನು ತಗ್ಗಿಸಲು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಉಪ-ಉತ್ಪನ್ನಗಳು ಮತ್ತು ವಸ್ತುಗಳನ್ನು ನಿರ್ವಹಿಸಲು ಪರಿಣಾಮಕಾರಿ ವಿಲೇವಾರಿ ವಿಧಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಇದು ಸೂಚಿಸುತ್ತದೆ.

ಎನ್ ಡಿ ಸಿ ಗುರಿಯತ್ತ ಸಾಗುತ್ತಿರುವ ಭಾರತ

ಭಾರತವು ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ (ಎನ್ ಡಿ ಸಿ) ಗುರಿಗಳಿಗೆ ಹತ್ತಿರವಾಗುತ್ತಿದೆ. 2024 ನವೆಂಬರ್ 30 ಹೊತ್ತಿಗೆ, ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸಾಧಿತವಾದ 2,13,701 ಮೆಗಾವ್ಯಾಟ್ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಒಟ್ಟು ಸಾಮರ್ಥ್ಯದ 46.8% ರಷ್ಟಿದೆ, ಇದು 2030 ವೇಳೆಗೆ 50% ತಲುಪುವ ನವೀಕರಿಸಿದ ಎನ್ಡಿಸಿ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ. 2005 ಮತ್ತು 2023 ನಡುವೆ 2.29 ಬಿಲಿಯನ್ ಟನ್ ಇಂಗಾಲದ ಡೈಆಕ್ಸೈಡಿಗೆ ಸಮಾನವಾದ ಹೆಚ್ಚುವರಿ ಇಂಗಾಲದ ಸಿಂಕ್ ಅನ್ನು ಸಹ ರಚಿಸಲಾಗಿದೆ, 2030 ವೇಳೆಗೆ ಎನ್ಡಿಸಿ ಗುರಿ 2.5 ರಿಂದ 3 ಬಿಲಿಯನ್ ಟನ್ ಗಳು.


 

ನವೀಕರಿಸಬಹುದಾದ ಇಂಧನ ಮತ್ತು ಹಸಿರು ಹೂಡಿಕೆಗಳಿಗೆ ಉತ್ತೇಜನ

ದೇಶದಲ್ಲಿ ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸಲು ಮತ್ತು ಹಸಿರು ಹೂಡಿಕೆಗಳನ್ನು ಹೆಚ್ಚಿಸಲು ಭಾರತ ಸರ್ಕಾರವು ವಿವಿಧ ರೀತಿಯ ಯೋಜನೆಗಳು, ನೀತಿಗಳು, ಹಣಕಾಸು ಪ್ರೋತ್ಸಾಹಕಗಳು ಮತ್ತು ನಿಯಂತ್ರಕ ಕ್ರಮಗಳನ್ನು ಕೈಗೊಂಡಿದೆ.

ಕೆಲವು ಉಪಕ್ರಮಗಳಲ್ಲಿ ಇವು ಸೇರಿವೆ:

ಮಿಷನ್ ಲೈಫ್: ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿಯನ್ನು ಉತ್ತಮಗೊಳಿಸುವುದು

ಆರ್ಥಿಕ ಸಮೀಕ್ಷೆ 2024-25 ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಸಾಧಿಸಲು ಬುದ್ಧಿವಂತಿಕೆಯ/ವಿವೇಚನಾಯುಕ್ತ ಬಳಕೆ ಮತ್ತು ಉತ್ಪಾದನೆಯ ಕಡೆಗೆ ಮನಸ್ಥಿತಿ ಮತ್ತು ನಡವಳಿಕೆಯಲ್ಲಿ ಮೂಲಭೂತ ಬದಲಾವಣೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ದಿಕ್ಕಿನಲ್ಲಿ, ಭಾರತ ನೇತೃತ್ವದ ಜಾಗತಿಕ ಆಂದೋಲನ, ಲೈಫ್ಸ್ಟೈಲ್ ಫಾರ್ ಎನ್ವಿರಾನ್ಮೆಂಟ್ (ಎಲ್ಐಎಫ್ಇ), ತ್ಯಾಜ್ಯ ನಿರ್ವಹಣೆ, ಸಂಪನ್ಮೂಲ ಸಂರಕ್ಷಣೆ ಮತ್ತು ಮರುಬಳಕೆಯಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ಮೂಲಕ ದೇಶದ ಸುಸ್ಥಿರತೆಯ ಪ್ರಯತ್ನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸುವುದು ಮಿಷನ್ ಲೈಫ್ ಅಡಿಯಲ್ಲಿ ಕೇಂದ್ರ ಅಂಶವಾಗಿದೆ. ಬ್ಯಾಟರಿ ಶೇಖರಣಾ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳು, ಜೊತೆಗೆ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳಿಗೆ ಸಂಬಂಧಿಸಿದ ತ್ಯಾಜ್ಯದ ಮರುಬಳಕೆ ಮತ್ತು ಸುಸ್ಥಿರ ವಿಲೇವಾರಿ, ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯ ವಿಶ್ವಾಸಾರ್ಹ ಪೂರೈಕೆ ಮತ್ತು ಅದರ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಅಂಶಗಳಾಗಿವೆ.

ಲೈಫ್ ಕ್ರಮಗಳ ಪೂರ್ವಭಾವಿ ಅನುಷ್ಠಾನವು ಇಂಧನ ಬಳಕೆಯಲ್ಲಿ ಅಸಮಾನತೆಯನ್ನು ಕಡಿಮೆ ಮಾಡುವುದು, ವಾಯುಮಾಲಿನ್ಯವನ್ನು ತಗ್ಗಿಸುವುದು, ವೆಚ್ಚ ಉಳಿತಾಯವನ್ನು ಸಾಧಿಸುವುದು ಮತ್ತು ಒಟ್ಟಾರೆ ಯೋಗಕ್ಷೇಮ ಮತ್ತು ಆರೋಗ್ಯವನ್ನು ಹೆಚ್ಚಿಸುವುದು ಸೇರಿದಂತೆ ಗಣನೀಯ ಉಪ-ಪ್ರಯೋಜನಗಳನ್ನು ನೀಡುತ್ತದೆ. 2030 ವೇಳೆಗೆ, ಕ್ರಮಗಳಾದ ಕಡಿಮೆ ಬಳಕೆ ಮತ್ತು ಕಡಿಮೆ ಬೆಲೆಗಳ ಮೂಲಕ ಗ್ರಾಹಕರು ಜಾಗತಿಕವಾಗಿ ಸುಮಾರು 440 ಬಿಲಿಯನ್ ಡಾಲರ್ ಮೊತ್ತವನ್ನು ಉಳಿಸಬಹುದು ಎಂದು ಅಂದಾಜಿಸಲಾಗಿದೆ.

ಚಿಕ್ಕ ವಯಸ್ಸಿನಿಂದಲೇ ಪರಿಸರ ಪ್ರಜ್ಞೆಯನ್ನು ಬೆಳೆಸಲು ಶಾಲಾ ಮತ್ತು ಕಾಲೇಜು ಪಠ್ಯಕ್ರಮದಲ್ಲಿ ಲೈಫ್ ಮಿಷನ್ನಿನ ತತ್ವಗಳನ್ನು ಸಂಯೋಜಿಸುವ ಮೂಲಕ ಲೈಫ್ ಮಿಷನನ್ನು ವ್ಯಾಪಕ ಸಾರ್ವಜನಿಕ ಆಂದೋಲನವಾಗಿ ಪರಿವರ್ತಿಸಲು ಸಮಗ್ರ ಜಾಗೃತಿ ಅಭಿಯಾನದ ಅಗತ್ಯವನ್ನು ಸಮೀಕ್ಷೆ ಒತ್ತಿಹೇಳುತ್ತದೆ.

ಎಲ್ಐಎಫ್ಇ (ಲೈಫ್)ಗೆ  ಅನುಗುಣವಾಗಿ ಕ್ರಮಗಳನ್ನು ಜಾರಿಗೆ ತರುವ ಮೂಲಕ ಪರಿಸರ ಪರ ಫಲಿತಾಂಶಗಳನ್ನು ಹೆಚ್ಚಿಸಲು ಹಲವಾರು ಪ್ರಮುಖ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪರಿಸರ ಸಂರಕ್ಷಣೆಯ ಕಡೆಗೆ ಸ್ವಯಂಪ್ರೇರಿತ ಪ್ರಯತ್ನಗಳನ್ನು ಉತ್ತೇಜಿಸಲು ಹಸಿರು ಕ್ರೆಡಿಟ್  ನಿಯಮಗಳನ್ನು ಅಳವಡಿಸಿಕೊಳ್ಳುವುದು ಒಂದು ಗಮನಾರ್ಹ ಉದಾಹರಣೆಯಾಗಿದೆ, ಇದರ ಪರಿಣಾಮವಾಗಿ ಹಸಿರು ಕ್ರೆಡಿಟ್ ಗಳ ವಿತರಣೆಯಾಗುತ್ತದೆ. ಇತರ ಉದಾಹರಣೆಗಳೆಂದರೆ, ಪರಿಸರ ಪರ ಚಟುವಟಿಕೆಗಳನ್ನು ಉತ್ತೇಜಿಸಲು ವೈಯಕ್ತಿಕ ನಡವಳಿಕೆಯನ್ನು ಉತ್ತೇಜಿಸಲು ಗಿಡ  ನೆಡುವ ಅಭಿಯಾನ 'ಏಕ್ ಪೆಡ್ ಮಾ ಕೆ ನಾಮ್' ಮತ್ತು ಸಾರ್ವತ್ರಿಕ ನೈರ್ಮಲ್ಯ ಪಾಲನೆ ಉತ್ತೇಜನಕ್ಕಾಗಿ  ಸ್ವಚ್ಛ ಭಾರತ್ ಮಿಷನ್ (ಎಸ್ಬಿಎಂ) ಸೇರಿವೆ.

 

*****


(Release ID: 2098311) Visitor Counter : 13