ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮಹಾಕುಂಭ 2025: ಮೌನಿ ಅಮಾವಾಸ್ಯೆಯಂದು ಭಕ್ತರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಮಹೋತ್ಸವ ಆಡಳಿತ ಮತ್ತು ಪೊಲೀಸರು ವಿಶೇಷ ಸಿದ್ಧತೆಗಳನ್ನು ಮಾಡಿದ್ದಾರೆ


ಭಕ್ತಾದಿಗಳು ಸರದಿ ಶಿಸ್ತನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗಿದೆ, ಮಾರ್ಗ ತಡೆಗಟ್ಟು (ಬ್ಯಾರಿಕೇಡ್‌)ಗಳು ಮತ್ತು ಪಾಂಟೂನ್ ಸೇತುವೆಗಳಲ್ಲಿ ತಾಳ್ಮೆಯನ್ನು ತೋರುವ ಮೂಲಕ ಹೊರದಬ್ಬುವ ಒತ್ತಡವನ್ನು ತಪ್ಪಿಸಿ; ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸಿ, ಸಮಸ್ಯೆಗಳಿದ್ದಲ್ಲಿ ಪೊಲೀಸರ ಸಹಾಯ ಪಡೆಯಿರಿ

Posted On: 28 JAN 2025 6:32PM by PIB Bengaluru

2025ರ ಮಹಾಕುಂಭದಲ್ಲಿ ಅತ್ಯಂತ ಪ್ರಮುಖವಾದ ಮೌನಿ ಅಮವಾಸ್ಯೆಯ ಪವಿತ್ರ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪ್ರಯಾಗರಾಜ್‌ ಗೆ ಆಗಮಿಸುತ್ತಿದ್ದಾರೆ. ಅವರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ, ಮಹೋತ್ಸವ ಆಡಳಿತವು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.  ಭಕ್ತರಿಗೆ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ಮಹೋತ್ಸವದ ಪೊಲೀಸರು, ಸಂಚಾರಿ ಪೊಲೀಸರು ಮತ್ತು ವಿಶೇಷ ವೈದ್ಯರ ತಂಡಗಳು 24/7 ಕಾಲಾವಧಿಯಲ್ಲಿ ಸೇವೆಗೆ ನಿಂತಿವೆ.

ಮೌನಿ ಅಮವಾಸ್ಯೆಯಂದು ಎರಡನೇ ಅಮೃತ ಸ್ನಾನಕ್ಕೆ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಹಾಕುಂಭನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ. ಭಕ್ತಾದಿಗಳು ಜಾಗರೂಕರಾಗಿರಲು ಮತ್ತು ಯಾವುದೇ ವದಂತಿಗಳನ್ನು ತಪ್ಪಿಸಲು ವಿಶೇಷವಾಗಿ ಪ್ರೋತ್ಸಾಹಿಸಲಾಗುತ್ತಿದೆ.  ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸುವಂತೆ ಮತ್ತು ಯಾವುದೇ ಸಮಸ್ಯೆ ಎದುರಾದರೆ ಪೊಲೀಸರ ಸಹಾಯ ಪಡೆಯುವಂತೆ ಮನವಿ ಮಾಡಲಾಗಿದೆ.  ಭಕ್ತಾದಿಗಳ ನೆರವಿಗಾಗಿ ಪೊಲೀಸರು ಮತ್ತು ಮಹೋತ್ಸವದ ಆಡಳಿತವು ಹಗಲಿರುಳು ಲಭ್ಯವಿರುತ್ತದೆ.

 ಜನಸಂದಣಿಯ ನಿರ್ವಹಣೆ:

 ಮಾಡಬೇಕಾದುದು:

  • ಸಂಗಮ್ ಘಾಟ್ ತಲುಪಲು ಗೊತ್ತುಪಡಿಸಿದ ಸರದಿಗಳನ್ನು ಮಾತ್ರ ಬಳಸಿ.
  • ಗಂಗಾ ಸ್ನಾನಕ್ಕೆ ಹೋಗುವಾಗ ನಿಮ್ಮ ಸರದಿಯಲ್ಲಿ ಮಾತ್ರ ಮುಂದುವರಿಯಿರಿ
  • ಸ್ನಾನ ಮತ್ತು ದರ್ಶನದ ನಂತರ ನೇರವಾಗಿ ಪಾರ್ಕಿಂಗ್ ಪ್ರದೇಶಕ್ಕೆ ಹೋಗಿ.
  • ದೇವಾಲಯಗಳಿಗೆ ಭೇಟಿ ನೀಡುವಾಗ, ನಿಮ್ಮ ಸರದಿಯನ್ನು ಕಾಪಾಡಿಕೊಂಡು ಅದರಲ್ಲಿಯೇ ಉಳಿಯಿರಿ ಮತ್ತು ನಿಮ್ಮ ಗಮ್ಯಸ್ಥಾನಕ್ಕೆ ಸರದಿಯಲ್ಲಿ ಮುಂದುವರಿಯಿರಿ.
  • ಅಗತ್ಯವಿದ್ದಾಗ ಪೋಲೀಸರ ನೆರವು ಪಡೆಯಿರಿ.
  • ಆರೋಗ್ಯ ಸಮಸ್ಯೆಗಳಿದ್ದಲ್ಲಿ, ಹತ್ತಿರದ ಸೆಕ್ಟರ್ ಆಸ್ಪತ್ರೆಯಲ್ಲಿ ಪರೀಕ್ಷಿಸಿ.
  • ಧಾವಿಸುವುದನ್ನು ತಪ್ಪಿಸಿ.ಮಾರ್ಗದಲ್ಲಿ ಹಾಕಿದ ತಡೆಗಟ್ಟು (ಬ್ಯಾರಿಕೇಡ್‌) ಗಳು ಮತ್ತು ರಕ್ಷಣಾ ತೇಲುವ ಓಡ /ದೋಣಿ (ಪಾಂಟೂನ್) ಸೇತುವೆಗಳಲ್ಲಿ ತಾಳ್ಮೆಯಿಂದಿರಿ;
  • ಪೇಪರ್, ಸೆಣಬು ಅಥವಾ ಪರಿಸರ ಸ್ನೇಹಿ ಪಾತ್ರೆಗಳು ಮತ್ತು ಕುಲ್ಹಾದ್ ಗಳನ್ನು (ಮಣ್ಣಿನ ಕಪ್ ಗಳು) ಬಳಸಿ.
  • ಎಲ್ಲಾ ಘಾಟ್‌ ಗಳು ಸಂಗಮ್‌ ನ ಭಾಗವಾಗಿದೆ;  ನೀವು ಸರದಿಯಲ್ಲಿ ತಲುಪುವ ಘಾಟ್‌ ನಲ್ಲಿ ಮಾತ್ರ ಸ್ನಾನ ಮಾಡಿ.

ಮಾಡಬಾರದು:

  • ಭಕ್ತರು ದೊಡ್ಡ ಗುಂಪುಗಳಲ್ಲಿ ಯಾವುದೇ ಒಂದು ಸ್ಥಳದಲ್ಲಿ ನಿಲ್ಲಬಾರದು.
  • ಬರುವಾಗ ಅಥವಾ ಹೊರಡುವಾಗ ಭಕ್ತರು ಮುಖಾಮುಖಿಯಾಗುವುದನ್ನು / ಪರಸ್ಪರ ಭೇಟಿಯಾಗುವುದನ್ನು ತಪ್ಪಿಸಿ.
  • ಮಹೋತ್ಸವದಲ್ಲಿ ಹರಡುವ ವದಂತಿಗಳಿಗೆ ಕಿವಿಗೊಡಬೇಡಿ / ಅದನ್ನು ನಂಬಿ ಸುಳಿಯಲ್ಲಿ  ಬೀಳಬೇಡಿ.
  • ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ಯಾವುದೇ ತಪ್ಪು ಮಾಹಿತಿಗಳನ್ನು ನಂಬಬೇಡಿ.
  • ದೇವಸ್ಥಾನಗಳಿಗೆ ಭೇಟಿ ನೀಡುವಾಗ ಅವಸರ ಮಾಡಬೇಡಿ , ಅವಸರದಲ್ಲಿ ವರ್ತಿಸಬೇಡಿ,  ಅಥವಾ ಅವಸರವನ್ನು ಅನ್ಯರಿಗೆ ತೋರಿಸಬೇಡಿ.
  • ಪ್ರದೇಶಗಳನ್ನು ಬಹುಕಾಲ ಹಿಡಿದಿಟ್ಟುಕೊಳ್ಳುವ ಬದಲು ಮಾರ್ಗಗಳಲ್ಲಿ ನಿಲ್ಲಿಸುವುದನ್ನು ತಪ್ಪಿಸಿ;  ಯಾವುದೇ ಮಾರ್ಗಗಳನ್ನು ನಿರ್ಬಂಧಿಸಬೇಡಿ.
  • ವ್ಯವಸ್ಥೆಗಳು ಅಥವಾ ಸೇವೆಗಳ ಬಗ್ಗೆ ತಪ್ಪುದಾರಿಗೆಳೆಯುವ ಸಲಹೆಗಳಿಗೆ ಕಿವಿಗೊಡಬೇಡಿ/ ಅವುಗಳ ಸುಳಿಯಲ್ಲಿ ಬೀಳಬೇಡಿ.
  • ದಾರಿತಪ್ಪಿಸುವ ಸುದ್ದಿಗಳನ್ನು ಹರಡುವುದನ್ನು ತಪ್ಪಿಸಿ.
  • ಪವಿತ್ರ ಸ್ನಾನಕ್ಕಾಗಿ ಹೊರದಬ್ಬಬೇಡಿ.
  • ಪ್ಲಾಸ್ಟಿಕ್ ಚೀಲಗಳು ಮತ್ತು ಪಾತ್ರೆಗಳನ್ನು ಬಳಸುವುದನ್ನು ತಪ್ಪಿಸಿ.

 

*****


(Release ID: 2097233) Visitor Counter : 9